AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸೆಲೆಬ್ರಿಟಿಗಳಿಗೆ ಲುಡೋ ಕ್ರೇಜ್; 8 ತಂಡಗಳ ನಡುವೆ ‘ಪ್ರೊ ಲುಡೋ ಸ್ಟಾರ್ ಲೀಗ್’

‘ಪ್ರೊ ಲುಡೋ ಸ್ಟಾರ್ ಲೀಗ್’ ಆಯೋಜನೆಗೆ ಸಕಲ ಸಿದ್ಧತೆ ನಡೆಯುತ್ತಿದೆ. ತುಕಾಲಿ ಸಂತೋಷ್, ಮಾನಸ ಸಂತೋಷ್, ಸುಂದರ್ ರೈ ಮಂದಾರ, ನವೀನ್ ಡಿ. ಪಡೀಲ್, ವಿನುತಾ, ಮಿಮಿಕ್ರಿ ಗೋಪಿ, ಅಶ್ವಿತಿ ಶೆಟ್ಟಿ, ಅದ್ವಿತಿ ಶೆಟ್ಟಿ, ಹುಲಿ ಕಾರ್ತಿಕ್, ಮಂಜು ಪಾವಗಡ, ಚಂದನ ಗೌಡ, ಅಮೃತಾ, ಕೆಂಪೇಗೌಡ, ಮಾನ್ಯ ಗೌಡ, ಸೀತಾರಾಮ್, ಸಾಕ್ಷಿ ಮೇಘನಾ ಆಟ ಆಡಲಿದ್ದಾರೆ.

ಸೆಲೆಬ್ರಿಟಿಗಳಿಗೆ ಲುಡೋ ಕ್ರೇಜ್; 8 ತಂಡಗಳ ನಡುವೆ ‘ಪ್ರೊ ಲುಡೋ ಸ್ಟಾರ್ ಲೀಗ್’
‘ಪ್ರೊ ಲುಡೋ ಸ್ಟಾರ್ ಲೀಗ್’ ಸುದ್ದಿಗೋಷ್ಠಿ
ಮದನ್​ ಕುಮಾರ್​
|

Updated on: Dec 16, 2024 | 9:47 PM

Share

ಸೆಲೆಬ್ರಿಟಿಗಳಿಗೆ ಕ್ರೀಡೆಯ ಬಗ್ಗೆ ಆಸಕ್ತಿ ಇರುತ್ತದೆ. ಸಿನಿಮಾ ಮತ್ತು ಸೀರಿಯಲ್​ ಮಂದಿಯ ಬ್ಯಾಡ್ಮಿಂಟನ್, ಕ್ರಿಕೆಟ್​ ಪಂದ್ಯಾವಳಿಗಳು ನಡೆಯುತ್ತಲೇ ಇರುತ್ತವೆ. ಆದರೆ ವಿಶೇಷ ಎಂಬಂತೆ ಲುಡೋ ಆಟ ಆಯೋಜಿಸಲಾಗುತ್ತಿದೆ. ಇದರಲ್ಲಿ ಅನೇಕ ಸೆಲೆಬ್ರಿಟಿಗಳು ಭಾಗಿ ಆಗಲಿದ್ದಾರೆ. ಹಿರಿತೆರೆ ಮತ್ತು ಕಿರುತೆರೆಯಲ್ಲಿ ಗುರುತಿಸಿಕೊಂಡ ಅನೇಕ ಸೆಲೆಬ್ರಿಟಿಗಳಿಗಾಗಿ ‘ಪ್ರೊ ಲುಡೋ ಸ್ಟಾರ್ ಲೀಗ್’ ಆಯೋಜಿಸಲಾಗುತ್ತಿದೆ. ಜನವರಿಯಲ್ಲಿ ಈ ಲೀಗ್ ನಡೆಯಲಿದೆ. ಈ ಬಗ್ಗೆ ಮಾಹಿತಿ ನೀಡಲು ಇತ್ತೀಚೆಗೆ ಸುದ್ದಿಗೋಷ್ಠಿ ನಡೆಯಿತು.

‘ಪ್ರೊ ಲುಡೋ ಸ್ಟಾರ್ ಲೀಗ್’ನಲ್ಲಿ ಧಾರಾವಾಹಿ, ರಿಯಾಲಿಟಿ ಶೋ, ಸಿನಿಮಾಗಳಲ್ಲಿ ಖ್ಯಾತಿ ಪಡೆದಿರುವ ಹಲವು ಕಲಾವಿದರು ಪಾಲ್ಗೊಳ್ಳಲಿದ್ದಾರೆ. ಇದು ಒಂದು ವಿಶೇಷ ಮನರಂಜನಾ ಕ್ರೀಡೆಯಾಗಿ ಹೊರಹೊಮ್ಮುಲಿದೆ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ. ಆಸ್ತ್ರ ಪ್ರೊಡಕ್ಷನ್ಸ್ ಲಂಚು ಲಾಲ್ ಅವರು ಈ ಲೀಗ್​ನ ಆಯೋಜಕರಾಗಿದ್ದಾರೆ. ಸುದೇಶ್ ಭಂಡಾರಿ ನಿರ್ದೇಶಕರಾಗಿ, ಅಜ್ಫರ್ ರಜಾಕ್ ಕಾರ್ಯನಿರ್ವಾಹಕ ನಿರ್ಮಾಪಕರಾಗಿ ಕೆಲಸ ಮಾಡುತ್ತಿದ್ದಾರೆ.

40×40 ಚದರ ಅಡಿ ವಿಸ್ತೀರ್ಣ ಇರುವ ವರ್ಣರಂಜಿತ ಒಳಾಂಗಣ ಅಖಾಡದಲ್ಲಿ ಇದೇ ಮೊದಲ ಬಾರಿಗೆ ಲುಡೋ ಆಟ ಆಯೋಜನೆಗೊಳ್ಳುತ್ತಿದೆ. ಇದರಲ್ಲಿ ಒಂದಷ್ಟು ವಿಶೇಷತೆಗಳು ಕೂಡ ಇರಲಿವೆ. ಈ ಲೀಗ್​ನಲ್ಲಿ ಒಟ್ಟು 8 ಟೀಮ್​ಗಳು ಇರಲಿವೆ. 16 ತಾರೆಯರು ಈ 8 ತಂಡಗಳಲ್ಲಿ ಜೋಡಿಯಾಗಿ ಇರುತ್ತಾರೆ. ಅವರಲ್ಲದೇ 16 ಮಾಡಲ್​ಗಳು ಇರಲಿದ್ದಾರೆ. ಅವರು ಕೂಡ ಈ ಆಟದಲ್ಲಿ ಭಾಗಿಯಾಗುತ್ತಾರೆ.

ಇದನ್ನೂ ಓದಿ: ಬಿಗ್ ಬಾಸ್ ನಿರೂಪಣೆ ಬಿಟ್ಟಿದ್ದಕ್ಕೆ ನಿಜವಾದ ಕಾರಣ ತಿಳಿಸಿದ ಕಿಚ್ಚ ಸುದೀಪ್

‘ಪ್ರೊ ಲುಡೋ ಸ್ಟಾರ್ ಲೀಗ್’ ನಿರೂಪಕರಾಗಿ ಅರುಣ್ ಹರಿಹರನ್ ಹಾಗೂ ಜಾಹ್ನವಿ ಇರಲಿದ್ದಾರೆ. ಪ್ರತಿ ಪಂದ್ಯಕ್ಕೂ ಮುನ್ನ ಹಾಗೂ ನಂತರದಲ್ಲಿ ಆಟಗಾರರ ಜೊತೆ ಆಕರ್ಷಕ ಕಾಮೆಂಟರಿ, ಸಂವಾದಗಳು ಇರಲಿವೆ. ವೀಕ್ಷಕರಿಗೆ ಈ ಇವೆಂಟ್​ ತುಂಬಾ ಆಕರ್ಷಕವಾಗಿರಲಿದೆ ಎಂದು ಆಯೋಜಕರು ತಿಳಿಸಿದ್ದಾರೆ. ಡೈಸ್ ಹಾಕಿದಾಗ ಕಾಯಿನ್ ಬದಲು ಕಾಯಿನ್ ಗರ್ಲ್ಸ್ ಮೂವ್ ಆಗುತ್ತಾರೆ! ರೆಗ್ಯುಲರ್​ ಲುಡೋ ಆಟದ ನಿಯಮಕ್ಕಿಂತ ‘ಪ್ರೊ ಲುಡೋ ಸ್ಟಾರ್ ಲೀಗ್’ ನಿಯಮಗಳು ಡಿಫರೆಂಟ್ ಆಗಿರಲಿವೆ.

ನವೀನ್ ಡಿ. ಪಡೀಲ್, ಸುಂದರ್ ರೈ ಮಂದಾರ, ಮಿಮಿಕ್ರಿ ಗೋಪಿ, ವಿನುತಾ, ಅದ್ವಿತಿ ಶೆಟ್ಟಿ, ಅಶ್ವಿತಿ ಶೆಟ್ಟಿ, ತುಕಾಲಿ ಸಂತೋಷ್, ಮಾನಸ ಸಂತೋಷ್, ಮಂಜು ಪಾವಗಡ, ಹುಲಿ ಕಾರ್ತಿಕ್, ಚಂದನ ಗೌಡ, ಅಮೃತಾ, ಕೆಂಪೇಗೌಡ, ಮಾನ್ಯ ಗೌಡ, ಸೀತಾರಾಮ್, ಸಾಕ್ಷಿ ಮೇಘನಾ ಅವರು ಈ ಲೀಗ್​ನಲ್ಲಿ ಆಟ ಆಡಲಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ