AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪುನೀತ್ ಅವರ ಈ ಅಪರೂಪದ ವಿಡಿಯೋನ ಎಲ್ಲಾದರೂ ನೋಡಿದ್ರಾ?

ಸಾಧು ಕೋಕಿಲ ಹಾಗೂ ಪುನೀತ್ ಮಧ್ಯೆ ಒಳ್ಳೆಯ ಬಾಂಧವ್ಯ ಇತ್ತು. ಇಬ್ಬರೂ ಹಲವು ಕಡೆಗಳಲ್ಲಿ ಒಟ್ಟಾಗಿ ಸಾಗಿದ್ದು ಇದೆ. ಅದೇ ರೀತಿ ಕೊವಿಡ್ ಸಂದರ್ಭದಲ್ಲಿ ಪುನೀತ್ ಹಾಗೂ ಸಾಧು ಕೋಕಿಲ ಅವರು ಒಟ್ಟಾಗಿ ಕಾರಿನಲ್ಲಿ ಪ್ರಯಾಣ ಮಾಡಿದ್ದರು. ‘ಎಂಥ ಸೌಂದರ್ಯ ಕಂಡೆ..’ ಹಾಡನ್ನು ಪುನೀತ್ ಹಾಡಿದ್ದರು.

ಪುನೀತ್ ಅವರ ಈ ಅಪರೂಪದ ವಿಡಿಯೋನ ಎಲ್ಲಾದರೂ ನೋಡಿದ್ರಾ?
ಪುನೀತ್
ರಾಜೇಶ್ ದುಗ್ಗುಮನೆ
|

Updated on: Dec 04, 2024 | 7:35 AM

Share

ಪುನೀತ್ ರಾಜ್​ಕುಮಾರ್ ನಮ್ಮ ಜೊತೆ ಇಲ್ಲ ಎಂಬುದನ್ನು ಎಲ್ಲರೂ ಒಪ್ಪಲೇ ಬೇಕು. ಅವರ ಮನಸ್ಸು ತುಂಬಾನೇ ದೊಡ್ಡದಿತ್ತು. ಅವರು ಉದಾರತೆ ಮೆರೆಯುತ್ತಿದ್ದರು. ಅವರ ಅಪರೂಪದ ವಿಡಿಯೋಗಳು ಆಗಾಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಾ ಇರುತ್ತವೆ. ಅವರು ಇಲ್ಲದಿದ್ದರೂ ಫ್ಯಾನ್ಸ್ ಇದನ್ನು ನೆನಪಿಸಿಕೊಳ್ಳುತ್ತಾ ಇರುತ್ತಾರೆ. ಈಗ ಪುನೀತ್ ರಾಜ್​ಕುಮಾರ್ ಅವರಿಗೆ ಸಂಬಂಧಿಸಿದ ವಿಡಿಯೋ ಒಂದು ವೈರಲ್ ಆಗಿದೆ. ಆ ವಿಡಿಯೋದಲ್ಲಿ ಪುನೀತ್ ಅವರು ಹಾಡಿರೋದು ಇದೆ.

ಸಾಧು ಕೋಕಿಲ ಹಾಗೂ ಪುನೀತ್ ಮಧ್ಯೆ ಒಳ್ಳೆಯ ಬಾಂಧವ್ಯ ಇತ್ತು. ಇಬ್ಬರೂ ಹಲವು ಕಡೆಗಳಲ್ಲಿ ಒಟ್ಟಾಗಿ ಸಾಗಿದ್ದು ಇದೆ. ಅದೇ ರೀತಿ ಕೊವಿಡ್ ಸಂದರ್ಭದಲ್ಲಿ ಪುನೀತ್ ಹಾಗೂ ಸಾಧು ಕೋಕಿಲ ಅವರು ಒಟ್ಟಾಗಿ ಕಾರಿನಲ್ಲಿ ಪ್ರಯಾಣ ಮಾಡಿದ್ದರು. ‘ಎಂಥ ಸೌಂದರ್ಯ ಕಂಡೆ..’ ಹಾಡನ್ನು ಪುನೀತ್ ಹಾಡಿದ್ದರು. ಇದನ್ನು ಖುಷಿ ಖುಷಿಯಿಂದ ಪುನೀತ್ ಹಾಡಿದ್ದರು.

ಪುನೀತ್ ರಾಜ್​ಕುಮಾರ್ ಅವರು ಹೀರೋ ಆಗಿ ಮಾತ್ರವಲ್ಲದೆ ಗಾಯಕನಾಗಿಯೂ ಗುರುತಿಸಿಕೊಂಡವರು. ಅವರು ಹಲವು ಸೂಪರ್ ಹಿಟ್ ಗೀತೆಗಳನ್ನು ಹಾಡಿದ್ದಾರೆ. ಈ ಹಾಡುಗಳನ್ನು ಅವರು ಸಖತ್ ಇಷ್ಟಪಟ್ಟು ಹಾಡುತ್ತಿದ್ದರು. ಅದೇ ರೀತಿ ಪುನೀತ್ ಅವರು ಈ ರೀತಿ ಕಾರಿನಲ್ಲಿ ಡ್ರೈವ್ ಮಾಡಿಕೊಂಡು ಹೋಗುವಾಗಲೂ ಹಾಡನ್ನು ಹಾಡುತ್ತಿದ್ದರು.

ಪುನೀತ್ ಅವರಿಗೆ ರೋಡ್ ಟ್ರಿಪ್ ಎಂದರೆ ಸಖತ್ ಇಷ್ಟ. ಅವರು ಆಗಾಗ ರೋಡ್ ಟ್ರಿಪ್ ಮಾಡುತ್ತಾ ಇರುತ್ತಿದ್ದರು. ಬೇರೆ ಬೇರೆ ಕಡೆಯ ಆಹಾರ ಸವಿಯುವುದು ಕೂಡ ಅವರಿಗೆ ಸಾಕಷ್ಟು ಇಷ್ಟದ ಕೆಲಸಗಳಲ್ಲಿ ಒಂದಾಗಿತ್ತು. ಆದರೆ, ಈಗ ಅವರು ನಮ್ಮ ಜೊತೆ ಇಲ್ಲ.

View this post on Instagram

A post shared by Sagar Manasu (@sagar_manasu)

ಇದನ್ನೂ ಓದಿ: ‘ಪುನೀತ್​ಗೆ ಕನ್ನಡ ಬರಲ್ಲ ಅಂತ ಹೇಳಿದ್ದ’: ಗುರುಪ್ರಸಾದ್ ವರ್ತನೆಗೆ ಜಗ್ಗೇಶ್ ಅಸಮಾಧಾನ 

ಪುನೀತ್ ರಾಜ್​ಕುಮಾರ್ ನಿಧನ ಹೊಂದಿದ ಬಳಿಕ ಅನೇಕ ರಸ್ತೆಗಳಿಗೆ ಅವರ ಹೆಸರನ್ನು ಇಡಲಾಗಿದೆ. ಈ ಮೂಲಕ ಅವರಿಗೆ ಗೌರವ ಸಲ್ಲಿಸೋ ಕೆಲಸ ಆಗಿದೆ. ಪುನೀತ್ ಅವರು ಹೀರೋ ಆಗಿ ನಟಿಸಿದ ಕೊನೆಯ ಚಿತ್ರ ‘ಜೇಮ್ಸ್’. 2021ರ ಅಕ್ಟೋಬರ್ 28ರಂದು ಹೃದಯಾಘಾತದಿಂದ ಪುನೀತ್ ನಿಧನ ಹೊಂದಿದ್ದರು. ಅವರು ಇಲ್ಲ ಎಂಬ ನೋವು ಬಹುವಾಗಿ ಕಾಡುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.