‘ಪುಷ್ಪ’ ಕನ್ನಡ ವರ್ಷನ್ ನೋಡೋಕೆ ಬಂದವರ ಮೇಲೆ ದೌರ್ಜನ್ಯ; ತೆಲುಗು ನೋಡಿ ಎಂದು ಅವಾಜ್
‘ಪುಷ್ಪ’ ಚಿತ್ರ ತೆಲುಗಿನಲ್ಲಿ ನಿರ್ಮಾಣವಾಗಿ ಇನ್ನುಳಿದ ಭಾಷೆಗಳಿಗೆ ಡಬ್ ಆಗಿದೆ. ಕನ್ನಡ, ಹಿಂದಿ, ಮಲಯಾಳಂ, ತಮಿಳು ಭಾಷೆಗಳಿಗೆ ಡಬ್ ಆಗಿ ತೆರೆಕಂಡಿದೆ. ಆದರೆ ಕರ್ನಾಟಕದ ಹೆಚ್ಚು ಚಿತ್ರಮಂದಿರಗಳಲ್ಲಿ ಕನ್ನಡ ವರ್ಷನ್ಗಿಂತಲೂ ತೆಲುಗು ವರ್ಷನ್ ಅನ್ನು ಬಿಡುಗಡೆ ಮಾಡಲಾಗಿದೆ.
‘ಪುಷ್ಪ’ ಸಿನಿಮಾ (Pushpa Movie) ಇಂದು (ಡಿಸೆಂಬರ್ 17) ರಿಲೀಸ್ ಆಗಿದೆ. ತೆಲುಗು ಮಾತ್ರವಲ್ಲದೆ, ಕನ್ನಡ, ಹಿಂದಿ, ತಮಿಳಿನಲ್ಲೂ ಸಿನಿಮಾ ಬಿಡುಗಡೆ ಆಗಿದೆ. ಬೇಸರದ ವಿಚಾರ ಎಂದರೆ, ಕನ್ನಡ ಅವತರಣಿಕೆಯಲ್ಲಿ ಈ ಸಿನಿಮಾ ಇಂದು ತೆರೆಕಾಣಲೇ ಇಲ್ಲ. ಕನ್ನಡ ವರ್ಷನ್ ಬಂದಿಲ್ಲ ಎನ್ನುವ ಮಾತು ಚಿತ್ರಮಂದಿರದವರ ಕಡೆಯಿಂದ ಬಂದಿದೆ. ಇದನ್ನು ಪ್ರಶ್ನೆ ಮಾಡಲು ಹೋದವರ ಮೇಲೆ ದೌರ್ಜನ್ಯ ನಡೆದಿದೆ. ಈ ವಿಚಾರ ಕೇಳಿ ಅಭಿಮಾನಿಗಳು ಬೇಸರಗೊಂಡಿದ್ದಾರೆ. ಕೆಲವರು ಈ ಬಗ್ಗೆ ತೀವ್ರವಾಗಿ ಆಕ್ರೋಶ ಹೊರಹಾಕಿದ್ದಾರೆ.
‘ಪುಷ್ಪ’ ಚಿತ್ರ ತೆಲುಗಿನಲ್ಲಿ ನಿರ್ಮಾಣವಾಗಿ ಇನ್ನುಳಿದ ಭಾಷೆಗಳಿಗೆ ಡಬ್ ಆಗಿದೆ. ಕನ್ನಡ, ಹಿಂದಿ, ಮಲಯಾಳಂ, ತಮಿಳು ಭಾಷೆಗಳಿಗೆ ಡಬ್ ಆಗಿ ತೆರೆಕಂಡಿದೆ. ಆದರೆ ಕರ್ನಾಟಕದ ಹೆಚ್ಚು ಚಿತ್ರಮಂದಿರಗಳಲ್ಲಿ ಕನ್ನಡ ವರ್ಷನ್ಗಿಂತಲೂ ತೆಲುಗು ವರ್ಷನ್ ಅನ್ನು ಬಿಡುಗಡೆ ಮಾಡಲಾಗಿದೆ. ಬೆಂಗಳೂರಿನಲ್ಲಿ ಮೊದಲು ಮೂರು ಕನ್ನಡ ಶೋಗಳನ್ನು ಆಯೋಜಿಸಲಾಗಿತ್ತು. ಆದರೆ, ಶುಕ್ರವಾರ (ಡಿಸೆಂಬರ್ 17) ಈ ಸಂಖ್ಯೆ ಕೇವಲ ಒಂದಕ್ಕೆ ಇಳಿಕೆ ಆಗಿತ್ತು. ಈಗ ಅಲ್ಲಿಯೂ ಸಿನಿಮಾ ಪ್ರದರ್ಶನ ಕಂಡಿಲ್ಲ.
ಬೆಂಗಳೂರಿನ ಆವಲಹಳ್ಳಿಯ ವೆಂಕಟೇಶ್ವರದಲ್ಲಿ ಬೆಳಗ್ಗೆ 11 ಗಂಟೆಗೆ ಕನ್ನಡ ವರ್ಷನ್ ರಿಲೀಸ್ ಆಗಬೇಕಿತ್ತು. ಆದರೆ, ಕನ್ನಡದಲ್ಲಿ ‘ಪುಷ್ಪ’ ಸಿನಿಮಾ ನೋಡೋಕೆ ಬಂದ ಅಭಿಮಾನಿಗಳಿಗೆ ನಿರಾಸೆ ಆಗಿದೆ. ಕನ್ನಡ ಅವತರಣಿಕೆ ಬಂದಿಲ್ಲ ಎಂದು ಥಿಯೇಟರ್ ಸಿಬ್ಬಂದಿ ಮಾಹಿತಿ ನೀಡಿದ್ದಾರೆ.
ಇಂದು ಬೆಂಗಳೂರಿನಲ್ಲಿ ‘ಪುಷ್ಪ’ದ ಕನ್ನಡ ವರ್ಷನ್ ವೆಂಕಟೇಶ್ವರದಲ್ಲಿ ಮಾತ್ರ ಪ್ರದರ್ಶನ ನಿಗದಿ ಆಗಿತ್ತು. ಈಗ ಅಲ್ಲಿಯೂ ಶೋ ಇಲ್ಲದೇ ಇರುವುದಕ್ಕೆ ಅಭಿಮಾನಿಗಳು ಬೇಸರಗೊಂಡಿದ್ದಾರೆ. ‘ಕನ್ನಡ ವರ್ಷನ್ ಬಂದಿಲ್ಲಾ ರೀ, ಬೇಕಿದ್ರೆ ತೆಲುಗು ನೋಡಿ ಎಂದು ಅವಾಜ್ ಹಾಕಿದರು. ಮತ್ತೊಬ್ಬನಿಗೆ ಹೊಡೆದರು. ನನ್ನ ಕಾಲರ್ ಪಟ್ಟಿ ಹಿಡಿದು ಇಲ್ಲಿಂದ ಸೈಲೆಂಟ್ ಆಗಿ ಹೊರಟು ಹೋಗಿ, ಹಣ ಹಿಂದಿರುಗಿಸುತ್ತೇವೆ ಎಂದರು. ಇದು ಹಣದ ವಿಚಾರ ಅಲ್ಲ. ನಾವು ಕನ್ನಡದಲ್ಲಿ ಸಿನಿಮಾ ನೋಡೋಕೆ ಬಂದಿದ್ದೇವೆ. ಅದನ್ನು ತೋರಿಸಬೇಕಾಗಿದ್ದು ನಿಮ್ಮ ಧರ್ಮ’ ಎಂದು ಅಭಿಮಾನಿಯೊಬ್ಬರು ಸಿಟ್ಟಾಗಿದ್ದಾರೆ.
ಇದನ್ನೂ ಓದಿ: Pushpa Movie First Half Review: ಮಾಸ್ ಅಲ್ಲು ಅರ್ಜುನ್; ಇಲ್ಲಿದೆ ‘ಪುಷ್ಪ’ ಚಿತ್ರದ ಫಸ್ಟ್ ಹಾಫ್ ವಿಮರ್ಶೆ
Pushpa Movie Review: ‘ಪುಷ್ಪ’ ಅಂದ್ರೆ ಫ್ಲವರ್ ಅಲ್ಲ, ಅದೊಂದು ಶ್ರಮದಾಯಕ ದೀರ್ಘ ಪಯಣ