Radhika Pandit: ಸೆಲ್ಫ್​ ಲವ್ ಬಗ್ಗೆ ಸ್ಫೂರ್ತಿದಾಯಕ ಮಾತುಗಳನ್ನಾಡಿದ ನಟಿ ರಾಧಿಕಾ ಪಂಡಿತ್

ರಾಧಿಕಾ ಸೋಶಿಯಲ್ ಮೀಡಿಯಾದಲ್ಲಿ ಹೊಸಹೊಸ ಫೋಟೋ ಹಂಚಿಕೊಳ್ಳುತ್ತಿರುತ್ತಾರೆ. ಮಕ್ಕಳು ಮಾಡುವ ತುಂಟಾಟಗಳ ವಿಡಿಯೋ ಹಂಚಿಕೊಳ್ಳುತ್ತಾರೆ. ಇದು ಅಭಿಮಾನಿಗಳಿಗೆ ಸಖತ್ ಇಷ್ಟ ಆಗುತ್ತದೆ.

Radhika Pandit: ಸೆಲ್ಫ್​ ಲವ್ ಬಗ್ಗೆ ಸ್ಫೂರ್ತಿದಾಯಕ ಮಾತುಗಳನ್ನಾಡಿದ ನಟಿ ರಾಧಿಕಾ ಪಂಡಿತ್
Edited By:

Updated on: May 23, 2022 | 1:37 PM

ರಾಧಿಕಾ ಪಂಡಿತ್ ಅವರು (Radhika Pandit) ನಟನೆಯಿಂದ ಅಂತರ ಕಾಯ್ದುಕೊಂಡಿದ್ದಾರೆ. ಹಾಗಂತ ಅವರ ಖ್ಯಾತಿ ಕಿಂಚಿತ್ತೂ ಕಡಿಮೆ ಆಗಿಲ್ಲ. ಅವರ ಡೈಹಾರ್ಡ್ ಫ್ಯಾನ್ಸ್ ಈಗಲೂ ರಾಧಿಕಾ ಅವರನ್ನು ಹಿಂಬಾಲಿಸುತ್ತಾರೆ. ಯಶ್ (Yash) ಪತ್ನಿ ಎಂಬ ಕಾರಣಕ್ಕೂ ರಾಧಿಕಾ ಜನಪ್ರಿಯತೆ ಹೆಚ್ಚುತ್ತಿದೆ. ರಾಧಿಕಾ ಪಂಡಿತ್ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟೀವ್. ನಿತ್ಯ ಹೊಸ ಫೋಟೋ ಹಂಚಿಕೊಳ್ಳುವ ಮೂಲಕ ಅವರು ಗಮನ ಸೆಳೆಯುತ್ತಾರೆ. ಆಗಾಗ ಅವರು ಸ್ಫೂರ್ತಿದಾಯಕ​ ಮಾತುಗಳನ್ನು ಕೂಡ ಆಡುತ್ತಾರೆ. ಈಗ ರಾಧಿಕಾ ಪಂಡಿತ್​ ಅವರು ಹೊಸ ಫೋಟೋ ಹಂಚಿಕೊಂಡಿದ್ದಾರೆ. ಅದಕ್ಕೆ ನೀಡಿದ ಕ್ಯಾಪ್ಶನ್​​ನಲ್ಲಿ ಆಂತರಿಕವಾಗಿ ಮತ್ತಷ್ಟು ಸುಂದರವಾಗಿ ಕಾಣುವುದು ಹೇಗೆ ಎಂದು ಹೇಳಿಕೊಟ್ಟಿದ್ದಾರೆ.

ರಾಧಿಕಾ ಪಂಡಿತ್ ಹಾಗೂ ಯಶ್ 2016ರಲ್ಲಿ ಮದುವೆ ಆದರು. ಆ ಬಳಿಕ ಅವರು ಚಿತ್ರರಂಗದಲ್ಲಿ ಆ್ಯಕ್ಟೀವ್ ಆಗಿದ್ದು ಕಡಿಮೆ. ಆದರೆ, ಪತಿಯ ಬೆಂಬಲಕ್ಕೆ ಸದಾ ನಿಂತಿದ್ದಾರೆ. ‘ಕೆಜಿಎಫ್’ ಸರಣಿಯಲ್ಲಿ ಯಶ್ ನಟಿಸುವಾಗ ಕುಟುಂಬವನ್ನು ನೋಡಿಕೊಂಡು ಹೋಗುವ ಸಂಪೂರ್ಣ ಜವಾಬ್ದಾರಿಯನ್ನು ರಾಧಿಕಾ ತೆಗೆದುಕೊಂಡಿದ್ದರು.

ಇದನ್ನೂ ಓದಿ
Radhika Pandit: ನಾಚಿ ನೀರಾದ ರಾಧಿಕಾ ಪಂಡಿತ್; ವೈರಲ್ ಆಯ್ತು ಫೋಟೋ
Radhika Pandit: ಪತ್ನಿ ರಾಧಿಕಾ ಪಂಡಿತ್ ಕೆನ್ನೆಗೆ ಮುತ್ತಿಟ್ಟ ಯಶ್; ಫೋಟೋ ವೈರಲ್
Radhika Pandit: ‘ನೂರಾರು ಮಕ್ಕಳ ಜೀವ ಉಳಿಸಬಲ್ಲದು’; ಎದೆಹಾಲು ದಾನದ ಬಗ್ಗೆ ರಾಧಿಕಾ ಪಂಡಿತ್ ವಿಶೇಷ ಸಂದೇಶ
Radhika Pandit: ಕುಟುಂಬದೊಂದಿಗೆ ಜನ್ಮದಿನ ಆಚರಿಸಿದ ರಾಧಿಕಾ ಪಂಡಿತ್; ಇಲ್ಲಿವೆ ಮುದ್ದಾದ ಫೋಟೋಗಳು

ರಾಧಿಕಾ ಸೋಶಿಯಲ್ ಮೀಡಿಯಾದಲ್ಲಿ ಹೊಸಹೊಸ ಫೋಟೋ ಹಂಚಿಕೊಳ್ಳುತ್ತಿರುತ್ತಾರೆ. ಮಕ್ಕಳು ಮಾಡುವ ತುಂಟಾಟಗಳ ವಿಡಿಯೋ ಹಂಚಿಕೊಳ್ಳುತ್ತಾರೆ. ಇದು ಅಭಿಮಾನಿಗಳಿಗೆ ಸಖತ್ ಇಷ್ಟ ಆಗುತ್ತದೆ. ಇನ್ನು, ಜೀವನದಲ್ಲಿ ಏನು ಮಾಡಬಾರದು, ಏನು ಮಾಡಬೇಕು ಎನ್ನುವ ಮಾತುಗಳನ್ನು ಕೂಡ ರಾಧಿಕಾ ಪಂಡಿತ್ ಅಭಿಮಾನಿಗಳಿಗೆ ಹೇಳುತ್ತಾರೆ.

ಇದನ್ನೂ ಓದಿ:  ಮಕ್ಕಳ ಜತೆಗಿನ ವಿಶೇಷ ಫೋಟೋ ಹಂಚಿಕೊಂಡ ರಾಧಿಕಾ ಪಂಡಿತ್; ಇದಕ್ಕಿದೆ ಮಹತ್ವದ ಕಾರಣ

ಎರಡು ಹೊಸ ಫೋಟೋಗಳನ್ನು ಹಂಚಿಕೊಂಡಿರುವ ರಾಧಿಕಾ ಪಂಡಿತ್ ಅದಕ್ಕೆ, ‘ನಿಮ್ಮನ್ನು ನೀವು ಎಷ್ಟು ಪ್ರೀತಿಸುತ್ತೀರೋ ಅಷ್ಟು ಸುಂದರವಾಗಿ ಕಾಣುತ್ತೀರಿ. ಹ್ಯಾಪಿ ವೀಕೆಂಡ್’ ಎಂದು ಕ್ಯಾಪ್ಶನ್ ನೀಡಿದ್ದಾರೆ. ಈ ಮೂಲಕ ಸೆಲ್ಫ್​ ಲವ್ ಬಗ್ಗೆ ರಾಧಿಕಾ ಮಾತನಾಡಿದ್ದಾರೆ. ಈ ಫೋಟೋ ಹಾಗೂ ಅವರು ಬರೆದ ಸಾಲುಗಳು ಅಭಿಮಾನಿಗಳಿಗೆ ಇಷ್ಟವಾಗಿದೆ. ಈ ಫೋಟೋಗೆ ಫ್ಯಾನ್ಸ್​ ಸಾಕಷ್ಟು ಪ್ರೀತಿ ತೋರುತ್ತಿದ್ದಾರೆ. ಹಾರ್ಟ್ ಎಮೋಜಿಯನ್ನು ಕಮೆಂಟ್ ಬಾಕ್ಸ್​ನಲ್ಲಿ ಹಾಕುತ್ತಿದ್ದಾರೆ.

ಇತ್ತೀಚೆಗೆ ಯಶ್ ಅವರು ಮಕ್ಕಳ ಜತೆಗಿನ ವಿಡಿಯೋ ಹಂಚಿಕೊಂಡಿದ್ದರು. ಈ ವಿಡಿಯೋದಲ್ಲಿ ಯಶ್ ಹಾಗೂ ಆಯ್ರಾ ಇಬ್ಬರೂ ಸೇರಿ ಯಥರ್ವ್​​ನನ್ನು ಹೆದರಿಸಿದ್ದರು. ಈ ವಿಡಿಯೋ ಸಖತ್ ವೈರಲ್ ಆಗಿತ್ತು. ಅಲ್ಲದೆ, ಲಕ್ಷಾಂತರ ಬಾರಿ ಈ ವಿಡಿಯೋ ವೀಕ್ಷಣೆ ಕಂಡಿದೆ. ‘ಕೆಜಿಎಫ್ 2’ ಬಳಿಕ ಯಶ್ ಖ್ಯಾತಿ ಹೆಚ್ಚಿದೆ. ಅವರಿಗೆ ಇನ್​ಸ್ಟಾಗ್ರಾಮ್​ನಲ್ಲಿ 95 ಲಕ್ಷ ಜನ ಹಿಂಬಾಲಕರಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 1:17 pm, Sat, 14 May 22