
‘ಸು ಫ್ರಮ್ ಸೋ’ ಸಿನಿಮಾ (Su From So Movie) ಗಳಿಕೆಯಲ್ಲಿ ಎರಡನೇ ಸೋಮವಾರವೂ ಅಬ್ಬರಿಸಿದೆ. ರಾಜ್ ಬಿ. ಶೆಟ್ಟಿ ನಿರ್ಮಾಣದ, ಜೆಪಿ ತುಮಿನಾಡ್ ನಿರ್ದೇಶನದ ಈ ಚಿತ್ರವು ಬಾಕ್ಸ್ ಆಫೀಸ್ನಲ್ಲಿ ಯಶಸ್ವಿ ಪ್ರದರ್ಶನ ಕಂಡಿದೆ. ಈ ಚಿತ್ರ ಎರಡನೇ ಸೋಮವಾರ (ಆಗಸ್ಟ್ 4) ಬಂಗಾರದ ಬೆಳೆ ತೆಗೆದಿದೆ. ಈ ಸಿನಿಮಾದ ಸೋಮವಾರದ ಕಲೆಕ್ಷನ್ ನೋಡಿ ಅನೇಕರಿಗೆ ಅಚ್ಚರಿ ಆಗಿದೆ. ಚಿತ್ರದ ಗಳಿಕೆ ಹೀಗೆಯೇ ಮುಂದುವರಿದರೆ ಸಿನಿಮಾ 100 ಕೋಟಿ ರೂಪಾಯಿ ಕ್ಲಬ್ ಸೇರಿದರೂ ಅಚ್ಚರಿ ಏನಿಲ್ಲ.
‘ಸು ಫ್ರಮ್ ಸೋ’ ಸಿನಿಮಾದ ಜನಪ್ರಿಯತೆ ಈಗ ಜಗದಗಲ ವ್ಯಾಪಿಸಿದೆ. ಅಂದರೆ, ವಿವಿಧ ದೇಶಗಳಲ್ಲಿಯೂ ‘ಸು ಫ್ರಮ್ ಸೋ’ ಸಿನಿಮಾ ಪ್ರದರ್ಶನ ಕಾಣುತ್ತಿದೆ. ಕರ್ನಾಟಕದಲ್ಲೂ ವಾರದ ದಿನಗಳಲ್ಲಿ ಸಿನಿಮಾ ಹೌಸ್ಫುಲ್ ಪ್ರದರ್ಶನ ಕಾಣುತ್ತಿರುವುದು ವಿಶೇಷ. ಇದು ಚಿತ್ರಕ್ಕೆ ಪ್ಲಸ್ ಆಗಿದೆ.
‘ಸು ಫ್ರಮ್ ಸೋ’ ಸಿನಿಮಾ ಆಗಸ್ಟ್ 4ರಂದು ಚಿತ್ರ 3.50 ಕೋಟಿ ರೂಪಾಯಿ ಆಸುಪಾಸಿನಲ್ಲಿ ಗಳಿಕೆ ಮಾಡಿದೆ ಎಂದು sacnilk ವರದಿ ಮಾಡಿದೆ. ಈ ಮೂಲಕ ಚಿತ್ರದ ಒಟ್ಟಾರೆ ಗಳಿಕೆ ಸುಮಾರು 40 ಕೋಟಿ ರೂಪಾಯಿ ಆಗಿದೆ. ಸಣ್ಣ ಬಜೆಟ್ನಲ್ಲಿ ಸಿದ್ಧವಾದ ಸಿನಿಮಾ ಇಷ್ಟು ದೊಡ್ಡ ಕಲೆಕ್ಷನ್ ಮಾಡುತ್ತದೆ ಎಂದರೆ ಅದು ನಿಜಕ್ಕೂ ಹೆಮ್ಮೆಯೇ ಸರಿ.
‘ಸು ಫ್ರಮ್ ಸೋ’ ಸಿನಿಮಾ ಬಗ್ಗೆ ಅಭಿಮಾನಿಗಳಿಗೆ ಸಾಕಷ್ಟು ನಿರೀಕ್ಷೆ ಸೃಷ್ಟಿ ಆಗಲು ಕಾರಣ ಟ್ರೇಲರ್. ಸಿನಿಮಾದ ಟ್ರೇಲರ್ ನೋಡಿದ ಅನೇಕರು ಚಿತ್ರವನ್ನು ಮೆಚ್ಚಿಕೊಂಡರು. ಸಿನಿಮಾಗೆ ಪ್ರೀಮಿಯರ್ ಶೋಗಳನ್ನು ಮಾಡಿದ್ದು ಸಿನಿಮಾಗೆ ಸಹಕಾರಿ ಆಯಿತು. ಚಿತ್ರವನ್ನು ಜನರು ಮನಸಾರೆ ಇಷ್ಟಪಟ್ಟರು. ಪ್ರೀತಿಯಿಂದ ಸಿನಿಮಾನ ಜನರು ಹೊಗಳಿದರು. ಮಲಯಾಳಂ ಭಾಷೆಯಲ್ಲಿ ಸಿನಿಮಾಗೆ ಮೆಚ್ಚುಗೆ ಸಿಕ್ಕಿದೆ.
ಇದನ್ನೂ ಓದಿ: ಕೋಟಿ ಕೋಟಿ ಬಾಚಿಕೊಂಡು ದಾಖಲೆ ಮಾಡುತ್ತಿದೆ ‘ಸು ಫ್ರಮ್ ಸೋ’ ಸಿನಿಮಾ
‘ಸು ಫ್ರಮ್ ಸೋ’ ಸಿನಿಮಾ ಈಗ ತೆಲುಗಿನಲ್ಲೂ ರಿಲೀಸ್ ಆಗುತ್ತಿದೆ. ‘ಪುಷ್ಪ’ ಸರಣಿಯನ್ನು ನಿರ್ಮಾಣ ಮಾಡಿದ ‘ಮೈತ್ರಿ ಮೂವೀ ಮೇಕರ್ಸ್’ ಈ ಚಿತ್ರವನ್ನು ತೆಲುಗಿನಲ್ಲಿ ರಿಲೀಸ್ ಮಾಡುವ ಜವಾಬ್ದಾರಿ ಹೊತ್ತುಕೊಂಡಿದೆ. ಈಗಾಗಲೇ ಚಿತ್ರದ ಟ್ರೇಲರ್ ಸಿದ್ಧವಾಗಿ ಬಿಡುಗಡೆ ಕಂಡಿದೆ. ಆಗಸ್ಟ್ 8ರಂದು ಸಿನಿಮಾ ಥಿಯೇಟರ್ನಲ್ಲಿ ತೆರೆಗೆ ಬರಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.