AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತೆರೆ ಮೇಲೆ ಮತ್ತೆ ಕುಸ್ತಿ ಕಥೆ; ‘ಗಜರಾಮ’ ಸಿನಿಮಾದಲ್ಲಿ ರಾಜವರ್ಧನ್ ಪೈಲ್ವಾನ್

ರಾಜವರ್ಧನ್ ಅಭಿನಯದ ‘ಗಜರಾಮ’ ಚಿತ್ರ ಫೆ.7ಕ್ಕೆ ತೆರೆಕಾಣಲಿದೆ. ಈ ಸಿನಿಮಾದ ಟ್ರೇಲರ್​ ಅನಾವರಣ ಆಗಿದೆ. ಕುಸ್ತಿ ಕಥೆ ಹೊಂದಿರುವ ಈ ಚಿತ್ರಕ್ಕೆ ಸುನಿಲ್ ಕುಮಾರ್‌ ನಿರ್ದೇಶನ ಮಾಡಿದ್ದಾರೆ. ನರಸಿಂಹಮೂರ್ತಿ ಅವರು ನಿರ್ಮಾಣ ಮಾಡಿದ್ದಾರೆ. ರಾಜವರ್ಧನ್ ಜೊತೆ ಕಬೀರ್ ಸಿಂಗ್, ತಪಸ್ವಿನಿ ಮುಂತಾದವರು ಪಾತ್ರವರ್ಗದಲ್ಲಿ ಇದ್ದಾರೆ.

ತೆರೆ ಮೇಲೆ ಮತ್ತೆ ಕುಸ್ತಿ ಕಥೆ; ‘ಗಜರಾಮ’ ಸಿನಿಮಾದಲ್ಲಿ ರಾಜವರ್ಧನ್ ಪೈಲ್ವಾನ್
Rajavardan
ಮದನ್​ ಕುಮಾರ್​
|

Updated on: Jan 28, 2025 | 5:25 PM

Share

ಕಿಚ್ಚ ಸುದೀಪ್ ನಟನೆಯ ‘ಪೈಲ್ವಾನ್’ ಸಿನಿಮಾದಲ್ಲಿ ಕುಸ್ತಿಯ ಕಹಾನಿ ಇತ್ತು. ಯೋಗರಾಜ್ ಭಟ್ ನಿರ್ದೇಶನ ಮಾಡಿದ್ದ ‘ಗರಡಿ’ ಸಿನಿಮಾ ಕೂಡ ಕುಸ್ತಿಯ ಕಥೆಯನ್ನು ಹೇಳಿತ್ತು. ಈಗ ಇನ್ನೊಂದು ಸಿನಿಮಾದ ಕೂಡ ಇದೇ ರೀತಿಯ ಕಥಾವಸ್ತು ಹೊಂದಿದೆ. ಹೌದು, ರಾಜವರ್ಧನ್ ನಟಿಸಿರುವ ‘ಗಜರಾಮ’ ಸಿನಿಮಾದಲ್ಲಿ ಸಹ ಕುಸ್ತಿ ಅಖಾಡದ ಕಥೆ ಇರಲಿದೆ ಎಂಬುದು ಟ್ರೇಲರ್​ ಮೂಲಕ ಗೊತ್ತಾಗಿದೆ. ಇತ್ತೀಚೆಗೆ ‘ಗಜರಾಮ’ ಸಿನಿಮಾದ ಟ್ರೇಲರ್​ ಬಿಡುಗಡೆ ಮಾಡಲಾಗಿದೆ. ಈ ಚಿತ್ರದಲ್ಲಿ ರಾಜವರ್ಧನ್ ಅವರು ಪೈಲ್ವಾನ್ ಪಾತ್ರ ಮಾಡಿದ್ದಾರೆ.

ನಟ ರಾಜವರ್ಧನ್ ಅವರು ಕನ್ನಡ ಚಿತ್ರರಂಗದಲ್ಲಿ ತಮ್ಮದೇ ರೀತಿಯಲ್ಲಿ ಗುರುತಿಸಿಕೊಂಡಿದ್ದಾರೆ. ‘ಗಜರಾಮ’ ಸಿನಿಮಾಗೆ ಅವರು ಎಷ್ಟು ಶ್ರಮ ಹಾಕಿದ್ದಾರೆ ಎಂಬುದು ಟ್ರೇಲರ್​ ಮೂಲಕ ಕಾಣುತ್ತಿದೆ. 2 ನಿಮಿಷ 46 ಸೆಕೆಂಡ್ ಅವಧಿಯ ಈ ಟ್ರೇಲರ್​ನಲ್ಲಿ ಆ್ಯಕ್ಷನ್, ಸೆಂಟಿಮೆಂಟ್, ಎಮೋಷನ್, ಲವ್, ಸಸ್ಪೆನ್ಸ್ ಮುಂತಾದ ಅಂಶಗಳು ಹೈಲೈಟ್ ಆಗಿವೆ. ಆದ್ದರಿಂದ ಸಿನಿಪ್ರಿಯರಿಗೆ ಚಿತ್ರದ ಮೇಲೆ ನಿರೀಕ್ಷೆ ಮೂಡಿದೆ. ಫೆಬ್ರವರಿ 7ರಂದು ಈ ಸಿನಿಮಾ ಬಿಡುಗಡೆ ಆಗಲಿದೆ.

ರಾಜವರ್ಧನ್ ಅವರು ಕುಸ್ತಿ ಅಖಾಡದಲ್ಲಿ ಪೈಲ್ವಾನ್ ಆಗಿ ತೊಡೆ ತಟ್ಟಿದ್ದಾರೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಖ್ಯಾತಿ ಹೊಂದಿರುವ ನಟ ಕಬೀರ್ ಸಿಂಗ್ ಅವರು ‘ಗಜರಾಮ’ ಸಿನಿಮಾದಲ್ಲಿ ವಿಲನ್ ಆಗಿ ಅಬ್ಬರಿಸಿದ್ದಾರೆ. ದೀಪಕ್‌ ಅವರು ಪೊಲೀಸ್ ಪಾತ್ರದಲ್ಲಿ ಖದರ್ ತೋರಿಸಿದ್ದಾರೆ. ಈ ಸಿನಿಮಾದಲ್ಲಿ ನಟಿ ತಪಸ್ವಿನಿ ಅವರು ನಾಯಕಿಯಾಗಿ ಅಭಿನಯಿಸಿದ್ದಾರೆ.

‘ಗಜರಾಮ’ ಸಿನಿಮಾ ಟ್ರೇಲರ್:

ಟ್ರೇಲರ್​ ಮಾತ್ರವಲ್ಲದೇ ಹಾಡುಗಳ ಮೂಲಕವೂ ‘ಗಜರಾಮ’ ಸಿನಿಮಾ ಸದ್ದು ಮಾಡಿದೆ. ಮನೋಮೂರ್ತಿ ಅವರ ಸಂಗೀತ ಈ ಸಿನಿಮಾಗಿದೆ. ಈ ಚಿತ್ರದಲ್ಲಿ ನಟಿ ರಾಗಿಣಿ ದ್ವಿವೇದಿ ಅವರು ಒಂದು ಹಾಡಿನಲ್ಲಿ ಹೆಜ್ಜೆ ಹಾಕಿದ್ದಾರೆ. ಅವರು ಕಾಣಿಸಿಕೊಂಡಿರುವ ‘ಸಾರಾಯಿ ಶಾಂತಮ್ಮ..’ ಹಾಡು ಈಗಾಗಲೇ ಹಿಟ್ ಆಗಿದೆ. ಈ ಸಿನಿಮಾಗೆ ಕೆ.ಎಸ್. ಚಂದ್ರಶೇಖರ್ ಅವರು ಛಾಯಾಗ್ರಹಣ ಮಾಡಿದ್ದಾರೆ. ಜ್ಞಾನೇಶ್ ಬಿ. ಮಠದ್ ಅವರು ಸಂಕಲನ ಮಾಡಿದ್ದಾರೆ. ಧನಂಜಯ್ ಅವರು ನೃತ್ಯ ನಿರ್ದೇಶನ ಮಾಡಿದ್ದಾರೆ. ಜಯಂತ್ ಕಾಯ್ಕಿಣಿ, ಚೇತನ್ ಕುಮಾರ್, ಚಿನ್ಮಯ್ ಭಾವಿಕೆರೆ ಅವರು ಸಾಹಿತ್ಯ ಬರೆದಿದ್ದಾರೆ.

ಇದನ್ನೂ ಓದಿ: ಮಕ್ಕಳಿಗೆ ಚಿತ್ರಮಂದಿರಕ್ಕೆ ಎಂಟ್ರಿ, ಸಮಯ ನಿಗದಿಗೊಳಿಸಿ ಕೋರ್ಟ್ ಸೂಚನೆ

ಕೆಲವು ನಿರ್ದೇಶಕರ ಜತೆ ಅಸಿಸ್ಟೆಂಟ್ ಹಾಗೂ ಅಸೋಸಿಯೇಟ್ ಡೈರೆಕ್ಟರ್ ಆಗಿ ಕೆಲಸ ಮಾಡಿ ಅನುಭವ ಹೊಂದಿರುವ ಸುನಿಲ್ ಕುಮಾರ್‌ ಅವರು ‘ಗಜರಾಮ’ ಚಿತ್ರದ ಮೂಲಕ ಸ್ವತಂತ್ರ್ಯ ನಿರ್ದೇಶಕರಾಗಿದ್ದಾರೆ. ಈ ಮೊದಲು ‘ಬಾಂಡ್ ರವಿ’ ಚಿತ್ರವನ್ನು ನಿರ್ಮಿಸಿದ್ದ ನರಸಿಂಹಮೂರ್ತಿ ಅವರು ‘ಲೈಫ್​ ಲೈನ್ ಫಿಲ್ಮ್ಸ್’ ಮೂಲಕ ‘ಗಜರಾಮ’ ಸಿನಿಮಾಗೆ ಬಂಡವಾಳ ಹೂಡಿದ್ದಾರೆ. ಮಲ್ಲಿಕಾರ್ಜುನ್ ಕಾಶಿ ಹಾಗೂ ಝೇವಿಯರ್ ಫರ್ನಾಂಡಿಸ್ ಅವರು ಸಹ ನಿರ್ಮಾಪಕರಾಗಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ದೇವೇಗೌಡರ ಈ ನಿರ್ಧಾರದ ಹಿಂದಿರುವ ರಾಜಕೀಯ ಲೆಕ್ಕಾಚಾರವೇನು ಗೊತ್ತಾ?
ದೇವೇಗೌಡರ ಈ ನಿರ್ಧಾರದ ಹಿಂದಿರುವ ರಾಜಕೀಯ ಲೆಕ್ಕಾಚಾರವೇನು ಗೊತ್ತಾ?
ರಾಯರ ಮಠಕ್ಕೂ ತಟ್ಟಿದ ಭಾಷಾ ವಿವಾದ: ತೆಲುಗು ಭಾಷಿಕರ ವಿರೋಧ
ರಾಯರ ಮಠಕ್ಕೂ ತಟ್ಟಿದ ಭಾಷಾ ವಿವಾದ: ತೆಲುಗು ಭಾಷಿಕರ ವಿರೋಧ
ಏಕಾಏಕಿ ಮುಗಿಬಿದ್ದ ಬೀದಿ ನಾಯಿಗಳಿಂದ ದಂಪತಿ, ಮಗು ಕೂದಲೆಳೆ ಅಂತರದಲ್ಲಿ ಪಾರು
ಏಕಾಏಕಿ ಮುಗಿಬಿದ್ದ ಬೀದಿ ನಾಯಿಗಳಿಂದ ದಂಪತಿ, ಮಗು ಕೂದಲೆಳೆ ಅಂತರದಲ್ಲಿ ಪಾರು
ಹೊಸ ವರ್ಷಾಚರಣೆ: ಬೆಂಗಳೂರಿನಲ್ಲಿ ಟ್ರಾಫಿಕ್ ರೂಲ್ಸ್ ಹೇಗಿರುತ್ತೆ ಗೊತ್ತಾ?
ಹೊಸ ವರ್ಷಾಚರಣೆ: ಬೆಂಗಳೂರಿನಲ್ಲಿ ಟ್ರಾಫಿಕ್ ರೂಲ್ಸ್ ಹೇಗಿರುತ್ತೆ ಗೊತ್ತಾ?
2026 ಕುಂಭ ರಾಶಿಗೆ ಸಾಡೇಸಾತಿಯ ಅಂತಿಮ ಘಟ್ಟ; ಆರೋಗ್ಯದ ನಿರ್ಲಕ್ಷ್ಯಬೇಡ
2026 ಕುಂಭ ರಾಶಿಗೆ ಸಾಡೇಸಾತಿಯ ಅಂತಿಮ ಘಟ್ಟ; ಆರೋಗ್ಯದ ನಿರ್ಲಕ್ಷ್ಯಬೇಡ
ಭರ್ಜರಿ ಗಳಿಕೆ ಮಧ್ಯೆ ‘ಮಾರ್ಕ್’ ಸುದ್ದಿಗೋಷ್ಠಿ: ಇಲ್ಲಿದೆ ಲೈವ್
ಭರ್ಜರಿ ಗಳಿಕೆ ಮಧ್ಯೆ ‘ಮಾರ್ಕ್’ ಸುದ್ದಿಗೋಷ್ಠಿ: ಇಲ್ಲಿದೆ ಲೈವ್
‘ಗಂಡನ ಪಕ್ಕ ಮಲಗೋದು ಬಿಡಿ, ಹತ್ರ ಕುಳಿತುಕೊಳ್ಳಲೂ ಬಿಡ್ತಿರ್ಲಿಲ್ಲ ಅತ್ತೆ!’
‘ಗಂಡನ ಪಕ್ಕ ಮಲಗೋದು ಬಿಡಿ, ಹತ್ರ ಕುಳಿತುಕೊಳ್ಳಲೂ ಬಿಡ್ತಿರ್ಲಿಲ್ಲ ಅತ್ತೆ!’
14 ವರ್ಷಗಳ ಬಳಿಕ ಟೆಸ್ಟ್ ಪಂದ್ಯ ಗೆದ್ದ ಇಂಗ್ಲೆಂಡ್..!
14 ವರ್ಷಗಳ ಬಳಿಕ ಟೆಸ್ಟ್ ಪಂದ್ಯ ಗೆದ್ದ ಇಂಗ್ಲೆಂಡ್..!
ತಡರಾತ್ರಿ ಯುವತಿಯನ್ನು ಹಿಂಬಾಲಿಸಿಕೊಂಡು ಬಂದು ಪುಂಡರು
ತಡರಾತ್ರಿ ಯುವತಿಯನ್ನು ಹಿಂಬಾಲಿಸಿಕೊಂಡು ಬಂದು ಪುಂಡರು
ಮಕ್ಕಳ‌ ಕಳ್ಳಿಯರು ಎಂದು 7 ಮಹಿಳೆಯರಿಗೆ ಹಿಗ್ಗಾಮುಗ್ಗಾ ಥಳಿಸಿದ ಸಾರ್ವಜನಿಕರು
ಮಕ್ಕಳ‌ ಕಳ್ಳಿಯರು ಎಂದು 7 ಮಹಿಳೆಯರಿಗೆ ಹಿಗ್ಗಾಮುಗ್ಗಾ ಥಳಿಸಿದ ಸಾರ್ವಜನಿಕರು