ಐದು ಸಾವಿರ ಸಂಭಾವನೆ ಹೆಚ್ಚಿಸಿಕೊಳ್ಳಲು 10 ಸಿನಿಮಾ ಮಾಡಿದ್ದ ರಾಜ್​ಕುಮಾರ್

ರಾಜಕುಮಾರರು ಕನ್ನಡ ಚಿತ್ರರಂಗದ ಅಪ್ರತಿಮ ನಟ. ಅವರ ಸರಳತೆ ಮತ್ತು ಕಠಿಣ ಪರಿಶ್ರಮಕ್ಕೆ ಈ ಲೇಖನ ಸಾಕ್ಷಿಯಾಗಿದೆ. ಐದು ಸಾವಿರ ರೂಪಾಯಿ ವೇತನ ಹೆಚ್ಚಳಕ್ಕಾಗಿ ಅವರು ಹತ್ತು ಸಿನಿಮಾಗಳಲ್ಲಿ ಅಭಿನಯಿಸಿದ್ದರು ಎಂಬುದು ಅಚ್ಚರಿಯ ಸಂಗತಿ. ಆಗಿನ ಕಾಲದಲ್ಲಿ ಇದು ಅಪಾರವಾದ ಸಾಧನೆ.

ಐದು ಸಾವಿರ ಸಂಭಾವನೆ ಹೆಚ್ಚಿಸಿಕೊಳ್ಳಲು 10 ಸಿನಿಮಾ ಮಾಡಿದ್ದ ರಾಜ್​ಕುಮಾರ್
ರಾಜ್​ಕುಮಾರ್
Updated By: ರಾಜೇಶ್ ದುಗ್ಗುಮನೆ

Updated on: Apr 12, 2025 | 11:59 AM

ರಾಜ್​ಕುಮಾರ್ (Rajkumar) ಅವರು ಭಾರತೀಯ ಚಿತ್ರರಂಗ ಕಂಡ ಶ್ರೇಷ್ಠ ನಟರಲ್ಲಿ ಒಬ್ಬರು. ಅವರ ಖ್ಯಾತಿ ಅಪಾರ. ರಾಜ್​ಕುಮಾರ್ ನಮ್ಮನ್ನು ಅಗಲಿ 19 ವರ್ಷ ಕಳೆದಿದೆ. ಆದಾಗ್ಯೂ ಅವರ ನೆನಪು ಹಾಗೆಯೇ ಇದೆ. ಅವರು ಮಾಡಿದ ಸಿನಿಮಾಗಳನ್ನು ಜನರು ಈಗಲೂ ನೆನಪಿಸಿಕೊಳ್ಳುತ್ತಾರೆ. ಅವರು ಹಾಡಿದ ಹಾಡುಗಳು ಈಗಲೂ ಜನರು ಕೇಳುತ್ತಾರೆ. ಎಫ್​ಎಂಗಳಲ್ಲಿ ರಾಜ್​ಕುಮಾರ್ ಹಾಡುಗಳನ್ನು ಹಾಕಲಾಗುತ್ತದೆ. ಇಂದು (ಏಪ್ರಿಲ್ 12) ಕುಟುಂಬದವರು ಅವರ ಸಮಾಧಿಗೆ ಪೂಜೆ ಸಲ್ಲಿಸಿ ನೆನಪಿಸಿಕೊಂಡಿದ್ದಾರೆ. ರಾಜ್​ಕುಮಾರ್ ಬಗ್ಗೆ ಒಂದು ಅಚ್ಚರಿಯ ಮಾಹಿತಿಯನ್ನು ಇಂದು ತಿಳಿಯೋಣ.

ಈಗಿನ ಕಾಲದಲ್ಲಿ ಸೆಲೆಬ್ರಿಟಿಗಳು ಸಂಭಾವನೆಯನ್ನು ಕೋಟಿ ರೂಪಾಯಿ ಲೆಕ್ಕದಲ್ಲಿ ಪಡೆಯುತ್ತಾರೆ. ಒಂದು ಕೋಟಿ ರೂಪಾಯಿಗೆ ಸಿನಿಮಾ ಮಾಡೋ ಹೀರೋಗಳು, ಒಂದು ಚಿತ್ರ ಹಿಟ್ ಆದರೆ ಸಂಭಾವನೆಯನ್ನು 3-4 ಕೋಟಿ ರೂಪಾಯಿಗೆ ಏರಿಸಿಕೊಂಡ ಉದಾಹರಣೆ ಸಾಕಷ್ಟು ಇದೆ. ಆದರೆ, ರಾಜ್​ಕುಮಾರ್ ಅವರು ಹಾಗೆ ಇರಲಿಲ್ಲ. ಐದು ಸಾವಿರ ಸಂಬಳ ಹೆಚ್ಚಿಸಿಕೊಳ್ಳಲು ಅವರು ಮಾಡಿದ್ದು ಬರೋಬ್ಬರಿ 10 ಸಿನಿಮಾ. ಮೊದಲು ಅವರಿಗೆ ಸಂಭಾವನೆ 5 ಸಾವಿರ ಇತ್ತು. ಆ ಬಳಿಕ ಅದು 10 ಸಾವಿರ ಆಯಿತು. ಆಗಿನ ಕಾಲದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುತ್ತಿದ್ದ ಹೀರೋ ಆಗಿದ್ದರು ರಾಜ್​ಕುಮಾರ್.

‘ರಾಜ್​ಕುಮಾರ್​ಗೆ ಐದು ಸಾವಿರ ಸಂಬಳ ಇತ್ತು. ಹತ್ತು ಸಾವಿರ ಪಡೆಯಲು 10 ಸಿನಿಮಾ ಮೇಲೆ ಮಾಡಿದರು. ಈಗಿನ ಹೀರೋಗಳು ಒಂದು ಸಿನಿಮಾ ಮಾಡಿದರೆ ಮುಂದಿನ ಸಿನಿಮಾ ಕೋಟಿ ರೂಪಾಯಿ ಪಡೆಯುತ್ತದೆ. ನರಸಿಂಹ ರಾಜು ಅವರ ಕಾಲ್​ಶೀಟ್ ಪಡೆದು ನಂತರ ರಾಜ್​ಕುಮಾರ್ ಕಾಲ್​ಶೀಟ್ ಪಡೆಯಲಾಗುತ್ತಿತ್ತು’ ಎಂದು ನಟ ನಾಗೇಶ್ ಹೇಳಿದ್ದರು.

ಇದನ್ನೂ ಓದಿ
‘ಓಂ’ ಚಿತ್ರದ ತಕರಾರು; ರಾಜ್​ಕುಮಾರ್ ಹೇಳಿದ ಒಂದೇ ಮಾತಿಗೆ ಎಲ್ಲರೂ ಸೈಲೆಂಟ್
ಸಿಂಪತಿ ಗಳಿಸಲು ತಮಗೆ ಕಷ್ಟ ಇತ್ತು ಎಂದು ಕಥೆ ಹೇಳಿದ್ರಾ ವಿಕ್ಕಿ ಕೌಶಲ್?
ಚಿತ್ರರಂಗಕ್ಕೆ ಎಂಟ್ರಿ ಕೊಡೋಕೆ ರೆಡಿ ಆದ ರವಿತೇಜ ಮಗಳು ಮೋಕ್ಷಧಾ
‘ಲಕ್ಷ್ಮೀ ಬಾರಮ್ಮ’ ಕೊನೆ ಆಗುವುದಕ್ಕೂ ಮೊದಲು ಗುಡ್ ನ್ಯೂಸ್ ಕೊಟ್ಟ ಲಕ್ಷ್ಮೀ

ಇದನ್ನೂ ಓದಿ: ಕಂಚಿನ ಕಂಠ ಇದ್ದರೂ ಹಾಡುತ್ತಿರಲಿಲ್ಲ ರಾಜ್​ಕುಮಾರ್; ಆ ವ್ಯಕ್ತಿಯ ಒತ್ತಾಯಕ್ಕೆ ಗಾಯಕರಾದರು

‘9 ತಿಂಗಳುಗಳ ಕಾಲ 5 ಸಾವಿರ ಪಡೆಯುತ್ತಿದ್ದರು. ಬೇರೆಯವರ ಪರಿಸ್ಥಿತಿ ಕೇಳುವ ಹಾಗೇ ಇಲ್ಲ. ಕೊಟ್ಟರೆ 50 ರೂಪಾಯಿ ಇಟ್ಟುಕೊಳ್ಳಿ ಎನ್ನುತ್ತಿದ್ದರು. ನರಸಿಂಹ ರಾಜು ಜಾಸ್ತಿ ಸಿನಿಮಾ ಮಾಡುತ್ತಿದ್ದರು. ಎಲ್ಲಾ ಸಿನಿಮಾಗಳಲ್ಲೂ ಅವರು ಇರುತ್ತಿದ್ದರು. ಹೀಗಾಗಿ, ಸಂಭಾವನೆಗೆ ಸಮಸ್ಯೆ ಆಗಿರಲಿಲ್ಲ’ ಎಂದಿದ್ದರು ನಾಗೇಶ್.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.