ರಶ್ಮಿಕಾ ಮಂದಣ್ಣ (Rashmika Mandanna) ಕೆಲವೇ ವರ್ಷಗಳಲ್ಲಿ ಸಾಕಷ್ಟು ಎತ್ತರಕ್ಕೆ ಬೆಳೆದಿದ್ದಾರೆ. ಕನ್ನಡ ಮಾತ್ರವಲ್ಲದೆ ತೆಲುಗು, ತಮಿಳು ಹಾಗೂ ಹಿಂದಿಯಲ್ಲಿ ಸ್ಟಾರ್ ನಟರ ಜತೆ ಅವರು ತೆರೆಹಂಚಿಕೊಂಡಿದ್ದಾರೆ. ರಶ್ಮಿಕಾ ಇಷ್ಟೊಂದು ಎತ್ತರಕ್ಕೆ ಬೆಳೆದ ಬಗ್ಗೆ ಅವರ ಅಭಿಮಾನಿಗಳಿಗೆ ಖುಷಿ ಇದೆ. ಆದರೆ, ಒಂದು ವರ್ಗದ ಜನರು ಮಾತ್ರ ರಶ್ಮಿಕಾ ಏನೇ ಮಾಡಿದರೂ ಟೀಕೆ ಮಾಡುವುದನ್ನು ಮುಂದುವರಿಸಿದ್ದಾರೆ. ರಶ್ಮಿಕಾ ಮಾಡಿದ್ದೆಲ್ಲವೂ ತಪ್ಪು ಎಂದು ಬೆಟ್ಟು ಮಾಡಿ ತೋರಿಸುತ್ತಾರೆ. ಅವರು ಸಂಕ್ರಾಂತಿ (Sankranti Festival) ಶುಭಾಶಯ ಕೋರಲು ಕನ್ನಡದಲ್ಲೇ ಟ್ವೀಟ್ ಮಾಡಿದ್ದಾರೆ. ಆದಾಗ್ಯೂ ಅನೇಕರಿಗೆ ಸಮಾಧಾನ ಆದಂತಿಲ್ಲ.
ರಶ್ಮಿಕಾ ಮಂದಣ್ಣ ಅವರು ಸಂಕ್ರಾಂತಿ ಹಬ್ಬದ ನಿಮಿತ್ತ ಟ್ವೀಟ್ ಮಾಡಿದ್ದಾರೆ. ಸಾಂಪ್ರದಾಯಿಕ ಉಡುಗೆತೊಟ್ಟು ಕೈ ಮುಗಿದಿದ್ದಾರೆ. ಹಣೆಗೆ ಕುಂಕುಮ ಇಟ್ಟುಕೊಂಡಿದ್ದಾರೆ. ಹಲವು ಭಾಷೆಗಳಲ್ಲಿ ರಶ್ಮಿಕಾ ಶುಭಾಶಯ ತಿಳಿಸಿದ್ದಾರೆ. ವಿಶೇಷ ಎಂದರೆ ಅವರು ಮೊದಲು ಕನ್ನಡದಲ್ಲಿ ಬರೆದುಕೊಂಡಿದ್ದಾರೆ. ‘ಸಂಕ್ರಾಂತಿಯ ಶುಭಾಶಯಗಳು’ ಎಂದು ರಶ್ಮಿಕಾ ಬರೆದಿದ್ದಾರೆ. ಆ ಬಳಿಕ ತಮಿಳು, ಹಿಂದಿ, ತೆಲುಗು, ಮಲಯಾಳಂ ಹಾಗೂ ಇಂಗ್ಲಿಷ್ನಲ್ಲಿ ರಶ್ಮಿಕಾ ವಿಷ್ ಮಾಡಿದ್ದಾರೆ.
ರಶ್ಮಿಕಾ ಕನ್ನಡದಲ್ಲಿ ಬರೆದುಕೊಂಡ ಬಗ್ಗೆ ಅನೇಕರಿಂದ ಮೆಚ್ಚುಗೆ ವ್ಯಕ್ತವಾಗಿದೆ. ಎಲ್ಲರೂ ನಟಿಗೆ ಮರಳಿ ಶುಭಾಶಯ ತಿಳಿಸಿದ್ದಾರೆ. ಆದರೆ, ಇನ್ನೂ ಕೆಲವರು ಅಸಮಾಧಾನ ತೋರಿದ್ದಾರೆ. ‘ರಶ್ಮಿಕಾ ಅವರೇ ನೀವು ಈ ಮೊದಲು ಮಾಡಿದ್ದನ್ನು ನಾವು ಮರೆಯುವುದಿಲ್ಲ. ಏನೇ ಮಾಡಿದರೂ ನೀವು ನಮಗೆ ಇಷ್ಟವಾಗುವುದಿಲ್ಲ’ ಎಂದು ಕೆಲವರು ಬರೆದುಕೊಂಡಿದ್ದಾರೆ. ಆದರೆ, ಈ ಟ್ರೋಲ್ಗಳ ಬಗ್ಗೆ ರಶ್ಮಿಕಾ ತಲೆಕೆಡಿಸಿಕೊಂಡಿಲ್ಲ.
ಸಂಕ್ರಾಂತಿಯ ಶುಭಾಶಯಗಳು!
அனைவருக்கும் இனிய பொங்கல் திருநாள் நல்வாழ்த்துக்கள்!
संक्रांति की शुभकामनाएं!
సంక్రాంతి శుభాకాంక్షలు!
പൊങ്കൽ ആശംസകൾ!
Happy Sankranti! ❤️❤️ pic.twitter.com/EWoLBtLd21— Rashmika Mandanna (@iamRashmika) January 15, 2023
ರಶ್ಮಿಕಾ ಮಂದಣ್ಣ ನಟನೆಯ ‘ವಾರಿಸು’ ಸಿನಿಮಾ ಸಂಕ್ರಾಂತಿ ನಿಮಿತ್ತ ರಿಲೀಸ್ ಆಗಿದೆ. ಈ ಚಿತ್ರ ಒಳ್ಳೆಯ ರೀತಿಯಲ್ಲಿ ಕಮಾಯಿ ಮಾಡುತ್ತಿದೆ. ಆದರೆ, ರಶ್ಮಿಕಾ ಮಂದಣ್ಣ ಪಾತ್ರಕ್ಕೆ ಹೆಚ್ಚು ತೂಕ ಇಲ್ಲ ಎಂಬ ವಿಚಾರ ಫ್ಯಾನ್ಸ್ಗೆ ಬೇಸರ ತರಿಸಿದೆ.
ಇದನ್ನೂ ಓದಿ: Mission Majnu: ಅಂಧ ಯುವತಿ ಪಾತ್ರದಲ್ಲಿ ರಶ್ಮಿಕಾ ಮಂದಣ್ಣ; ‘ಮಿಷನ್ ಮಜ್ನು’ ಚಿತ್ರದ ತೆರೆ ಹಿಂದಿನ ಕಹಾನಿ ಇಲ್ಲಿದೆ..
ರಶ್ಮಿಕಾ ಮಂದಣ್ಣ ನಟನೆಯ ‘ಮಿಷನ್ ಮಜ್ನು’ ಚಿತ್ರ ರಿಲೀಸ್ಗೆ ರೆಡಿ ಇದೆ. ಜನವರಿ 20ರಂದು ಈ ಚಿತ್ರ ನೇರವಾಗಿ ನೆಟ್ಫ್ಲಿಕ್ಸ್ ಒಟಿಟಿ ಮೂಲಕ ರಿಲೀಸ್ ಆಗುತ್ತಿದೆ. ಸಿದ್ದಾರ್ಥ್ ಮಲ್ಹೋತ್ರ ಈ ಚಿತ್ರದ ನಾಯಕ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:07 am, Mon, 16 January 23