AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಉಗ್ರಂ ರಿಮೇಕ್ ಅನ್ನೋದು ಎಲ್ಲರಿಗೂ ಗೊತ್ತು’; ವೈರಲ್ ಆಯ್ತು ರವಿ ಬಸ್ರೂರು ಹೇಳಿದ್ದ ಮಾತು

‘ಸಲಾರ್’ ಸಿನಿಮಾದ ಟ್ರೇಲರ್ ನೋಡಿದ ಅನೇಕರಿಗೆ ‘ಉಗ್ರಂ’ ಸಿನಿಮಾ ನೆನಪಾಗಿದೆ. ಆ ಚಿತ್ರದಲ್ಲಿ ಇದ್ದ ಫ್ರೆಂಡ್​ಶಿಪ್ ಕಥೆ ‘ಸಲಾರ್’ ಸಿನಿಮಾದ ಟ್ರೇಲರ್​ನಲ್ಲೂ ಹೈಲೈಟ್ ಆಗಿದೆ. ಕೆಲವು ವರ್ಷಗಳ ಹಿಂದೆ ಸಂಗೀತ ನಿರ್ದೇಶಕ ರವಿ ಬಸ್ರೂರು ಹೇಳಿದ ಮಾತನ್ನು ಎಲ್ಲರೂ ನೆನಪಿಸಿಕೊಳ್ಳುತ್ತಿದ್ದಾರೆ.

‘ಉಗ್ರಂ ರಿಮೇಕ್ ಅನ್ನೋದು ಎಲ್ಲರಿಗೂ ಗೊತ್ತು’; ವೈರಲ್ ಆಯ್ತು ರವಿ ಬಸ್ರೂರು ಹೇಳಿದ್ದ ಮಾತು
ರವಿ ಬಸ್ರೂರ್, ಪ್ರಶಾಂತ್​ ನೀಲ್, ಪ್ರಭಾಸ್
Follow us
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ

Updated on:Dec 02, 2023 | 11:30 AM

ಶ್ರೀಮುರಳಿ, ತಿಲಕ್ ಶೇಖರ್, ಹರಿಪ್ರಿಯಾ ಮೊದಲಾದವರು ನಟಿಸಿದ್ದ ‘ಉಗ್ರಂ’ ಸಿನಿಮಾ (Ugram Movie) ರಿಲೀಸ್ ಆಗಿದ್ದು 2014ರಲ್ಲಿ. ಈ ಚಿತ್ರ ಥಿಯೇಟರ್​ನಲ್ಲಿ ಹೆಚ್ಚು ಸದ್ದು ಮಾಡಲಿಲ್ಲ. ಆದರೆ, ಪೈರಸಿ ಕಾಪಿ ಎಲ್ಲಾ ಮೊಬೈಲ್​ಗಳಲ್ಲಿ ಹರಿದಾಡಿತು. ಸಿನಿಮಾ ಯೂಟ್ಯೂಬ್​ನಲ್ಲಿ ರಿಲೀಸ್ ಆಯಿತು. ಆಗ ಜನರು ಸಿನಿಮಾ ಇಷ್ಟಪಟ್ಟರು. ಈ ಚಿತ್ರಕ್ಕೆ ಭರ್ಜರಿ ಮೆಚ್ಚುಗೆ ಸಿಕ್ಕಿತು. ಆ ಬಳಿಕ ಪ್ರಶಾಂತ್ ನೀಲ್ ಅವರು ‘ಕೆಜಿಎಫ್’ ಹಾಗೂ ‘ಕೆಜಿಎಫ್ 2’ ಸಿನಿಮಾ ಮಾಡಿದರು. ಈ ಸಿನಿಮಾಗಳಿಂದ ಇತಿಹಾಸವೇ ಸೃಷ್ಟಿ ಆಯಿತು. ಈಗ ಅವರ ನಿರ್ದೇಶನದ ‘ಸಲಾರ್’ ಸಿನಿಮಾ ಬಿಡುಗಡೆಗೆ ರೆಡಿ ಆಗಿದೆ. ಈ ಚಿತ್ರದ ಟ್ರೇಲರ್ ಸದ್ದು ಮಾಡುತ್ತಿದೆ. ಜೊತೆಗೆ ಈ ಚಿತ್ರದಲ್ಲಿ ‘ಉಗ್ರಂ’ ಶೇಡ್ ಎದ್ದು ಕಾಣಿಸಿದೆ.

ಅಗಸ್ತ್ಯ ಎನ್ನುವ ವ್ಯಕ್ತಿ ಗೆಳೆಯ ಬಾಲಾನಿಗಾಗಿ ಜೀವನವನ್ನೇ ಸವೆಸುತ್ತಾನೆ. ಬಾಲನಿಗೋಸ್ಕರ ಅಗಸ್ತ್ಯ ರೌಡಿಸಂ ಆರಂಭಿಸುತ್ತಾನೆ. ಈ ಸಿನಿಮಾ ಸಖತ್ ರಗಡ್ ಆಗಿತ್ತು. ‘ಕೆಜಿಎಫ್ 2’ ರಿಲೀಸ್​ಗೂ ಮೊದಲೇ ‘ಸಲಾರ್’ ಸೆಟ್ಟೇರಿತ್ತು. ಇದು ‘ಉಗ್ರಂ’ ಸಿನಿಮಾ ರಿಮೇಕ್ ಎನ್ನುವ ಸುದ್ದಿ ಹರಿದಾಡಿತ್ತು. ಆದರೆ, ತಂಡ ಇದನ್ನು ಅಲ್ಲಗಳೆಯುತ್ತಲೇ ಬಂದಿತ್ತು. ಆದರೆ, ರವಿ ಬಸ್ರೂರು ಮಾತ್ರ ಅಸಲಿ ವಿಚಾರವನ್ನು ಒಪ್ಪಿಕೊಂಡಿದ್ದರು.

‘ಉಗ್ರಂ’ ಸಿನಿಮಾಗೆ ರವಿ ಬಸ್ರೂರು ಸಂಗೀತ ಸಂಯೋಜನೆ ಮಾಡಿದ್ದರು. ‘ಕೆಜಿಎಫ್’ ಹಾಗೂ ‘ಕೆಜಿಎಫ್ 2’ ಚಿತ್ರದಲ್ಲಿ ಪ್ರಶಾಂತ್ ನೀಲ್ ಜೊತೆ ಸಂಗೀತ ನಿರ್ದೇಶಕನಾಗಿ ರವಿ ಬಸ್ರೂರು ಕೆಲಸ ಮಾಡಿದರು. ‘ಸಲಾರ್’ ಚಿತ್ರಕ್ಕೂ ಅವರದ್ದೇ ಸಂಗೀತ ಸಂಯೋಜನೆ ಇದೆ. ‘ಸಲಾರ್’ ಸೆಟ್ಟೇರಿದ ಸಂದರ್ಭದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ರವಿ ಬಸ್ರೂರು ಅವರಿಗೆ ಪ್ರಶ್ನೆ ಒಂದು ಎದುರಾಗಿತ್ತು. ‘ಇದು ಉಗ್ರಂ ರಿಮೇಕ್​ ಹೌದಾ’ ಎಂದು ಪ್ರಶ್ನೆ ಕೇಳಲಾಯಿತು.

ಇದಕ್ಕೆ ರವಿ ಬಸ್ರೂರು ಅವರು ನೇರ ಮಾತುಗಳಲ್ಲಿ ಉತ್ತರ ನೀಡಿದ್ದರು. ‘ಅದು ಎಲ್ಲರಿಗೂ ಗೊತ್ತಿರುವ ವಿಚಾರವೇ. ಆದರೆ, ರಿಮೇಕ್ ಆದರೂ ಇವರು ಹೇಗೆ ಮಾಡುತ್ತಾರೆ ಅನ್ನೋದು ನಿಮಗೆ ಗೊತ್ತಿದೆ’ ಎಂದಿದ್ದರು ರವಿ ಬಸ್ರೂರು. ಟ್ರೇಲರ್ ನೋಡಿದ ಅನೇಕರು ಈ ಮಾತನ್ನು ನೆನಪಿಸಿಕೊಳ್ಳುತ್ತಿದ್ದಾರೆ.

‘ಉಗ್ರಂ’ ಸಿನಿಮಾದಲ್ಲಿರುವ ಫ್ರೆಂಡ್​ಶಿಪ್ ಕಥೆಯನ್ನು ಬೇರೆ ರೀತಿಯಲ್ಲಿ ಹೇಳುವ ಪ್ರಯತ್ನವನ್ನು ಪ್ರಶಾಂತ್ ನೀಲ್ ಮಾಡುತ್ತಿರಬಹುದು ಎಂದು ಟ್ರೇಲರ್ ನೋಡಿದವರು ಊಹಿಸಿದ್ದಾರೆ. ‘ಸಲಾರ್’ ಟ್ರೇಲರ್​ನಲ್ಲಿ ‘ಉಗ್ರಂ’ ಸಿನಿಮಾದ ಛಾಯೆ ಕಾಣಿಸಿದೆ. ನೂರಾರು ಕೋಟಿ ರೂಪಾಯಿ ಬಜೆಟ್​ನಲ್ಲಿ ‘ಸಲಾರ್’ ಸಿದ್ಧವಾಗಿದೆ.

‘ಸಲಾರ್’ ಸಿನಿಮಾಗೆ ಪ್ರಶಾಂತ್ ನೀಲ್ ನಿರ್ದೇಶನ ಇದೆ. ‘ಹೊಂಬಾಳೆ ಫಿಲ್ಮ್ಸ್’ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದೆ. ನಿರ್ಮಾಪಕ ವಿಜಯ್ ಕಿರಗಂದೂರು ಅವರು ಯಾವುದೇ ವಿಚಾರದಲ್ಲೂ ರಾಜಿ ಮಾಡಿಕೊಂಡಿಲ್ಲ. ಪ್ರಭಾಸ್, ಪೃಥ್ವಿರಾಜ್ ಗೆಳೆಯರಾಗಿ ಕಾಣಿಸಿಕೊಂಡಿದ್ದಾರೆ. ಶ್ರುತಿ ಹಾಸನ್ ನಾಯಕಿ ಪಾತ್ರ ಮಾಡುತ್ತಿದ್ದಾರೆ. ಭುವನ್ ಗೌಡ ಛಾಯಾಗ್ರಹಣ ಚಿತ್ರಕ್ಕೆ ಇದೆ. ಅದ್ದೂರಿ ಸೆಟ್​ಗಳು ಗಮನ ಸೆಳೆದಿವೆ. ಮೇಕಿಂಗ್ ಅದ್ದೂರಿಯಾಗಿದ್ದರೂ ‘ಕೆಜಿಎಫ್ 2’ ಶೇಡ್ ಕಾಣಿಸಿರುವುದರಿಂದ ಅನೇಕರು ಬೇಸರಗೊಂಡಿದ್ದಾರೆ. ಡಿಸೆಂಬರ್ 22ರಂದು ಸಿನಿಮಾ ತೆಲುಗು, ಕನ್ನಡ, ಹಿಂದಿ, ತಮಿಳು ಹಾಗೂ ಮಲಯಾಳಂ ಭಾಷೆಗಳಲ್ಲಿ ರಿಲೀಸ್ ಆಗುತ್ತಿದೆ.

ಇದನ್ನೂ ಓದಿ: ‘ಉಗ್ರಂ’ನಿಂದ ‘ಸಲಾರ್’ ಚಿತ್ರದವರೆಗೆ: ಪ್ರಶಾಂತ್ ನೀಲ್​ ಸಿನಿಮಾಗೆ ಈ ಹೀರೋ ಪಾತ್ರಗಳೇ ಸ್ಫೂರ್ತಿ

ಇತ್ತೀಚೆಗೆ ಪ್ರಶಾಂತ್ ನೀಲ್ ಅವರು ತಮ್ಮ ಸಿನಿಮಾ ಮೇಕಿಂಗ್ ಬಗ್ಗೆ ಮಾತನಾಡಿದ್ದರು. ‘ಹೀರೋನ ವಿಲನ್ ರೀತಿ ತೋರಿಸೋದು ನನಗೆ ಇಷ್ಟ. ಅದುವೇ ನನ್ನ ಸಿನಿಮಾದ ಶಕ್ತಿ ಎಂದಿದ್ದರು. ಅದು ‘ಸಲಾರ್’ ಸಿನಿಮಾದಲ್ಲೂ ಮುಂದುವರಿಯುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 11:08 am, Sat, 2 December 23

ಪ್ರವಾದಿ, ಬಸವಣ್ಣ ಬಗ್ಗೆ ಯತ್ನಾಳ್​ಗೇನು ಗೊತ್ತು: ಕಾಶಪ್ಪನವರ್, ಶಾಸಕ
ಪ್ರವಾದಿ, ಬಸವಣ್ಣ ಬಗ್ಗೆ ಯತ್ನಾಳ್​ಗೇನು ಗೊತ್ತು: ಕಾಶಪ್ಪನವರ್, ಶಾಸಕ
ಸಿಎಂ ಸಿದ್ದರಾಮಯ್ಯ ಪಾಕಿಸ್ತಾನಕ್ಕೆ ನಿಜವಾದ ರಾಯಭಾರಿ!: ಆರ್ ಅಶೋಕ್
ಸಿಎಂ ಸಿದ್ದರಾಮಯ್ಯ ಪಾಕಿಸ್ತಾನಕ್ಕೆ ನಿಜವಾದ ರಾಯಭಾರಿ!: ಆರ್ ಅಶೋಕ್
ಮುಸ್ಲಿಮರ ಓಟಿಗೆ ಮಾರಿಕೊಂಡ ಕಾಂಗ್ರೆಸ್ ಸರ್ಕಾರ: ತೇಜಸ್ವಿ ಸೂರ್ಯ ವಾಗ್ದಾಳಿ
ಮುಸ್ಲಿಮರ ಓಟಿಗೆ ಮಾರಿಕೊಂಡ ಕಾಂಗ್ರೆಸ್ ಸರ್ಕಾರ: ತೇಜಸ್ವಿ ಸೂರ್ಯ ವಾಗ್ದಾಳಿ
ಮಂಜುನಾಥ್, ಭರತ್ ಮಕ್ಕಳಿಗೆ ಉಚಿತ ಶಿಕ್ಷಣ, ಆರೋಗ್ಯ ಸೇವೆ: ತೇಜಸ್ವಿ ಸೂರ್ಯ
ಮಂಜುನಾಥ್, ಭರತ್ ಮಕ್ಕಳಿಗೆ ಉಚಿತ ಶಿಕ್ಷಣ, ಆರೋಗ್ಯ ಸೇವೆ: ತೇಜಸ್ವಿ ಸೂರ್ಯ
ಯತ್ನಾಳ್ ವಿರುದ್ಧ ಮುಸ್ಲಿಮರ ಪ್ರತಿಭಟನೆಯಲ್ಲಿ ಹಿಂದೂ ಸ್ವಾಮೀಜಿಗಳು!
ಯತ್ನಾಳ್ ವಿರುದ್ಧ ಮುಸ್ಲಿಮರ ಪ್ರತಿಭಟನೆಯಲ್ಲಿ ಹಿಂದೂ ಸ್ವಾಮೀಜಿಗಳು!
ಪಹಲ್ಗಾಮ್​ನಲ್ಲಿ ಧರ್ಮ ಕೇಳಿ ಶೂಟ್ ಮಾಡಿದ್ದು ನಿಜ: ಮಂಜುನಾಥ್ ಪತ್ನಿ ಪಲ್ಲವಿ
ಪಹಲ್ಗಾಮ್​ನಲ್ಲಿ ಧರ್ಮ ಕೇಳಿ ಶೂಟ್ ಮಾಡಿದ್ದು ನಿಜ: ಮಂಜುನಾಥ್ ಪತ್ನಿ ಪಲ್ಲವಿ
ಭಾರತದಲ್ಲಿರುವ ಪಾಕಿಸ್ತಾನಿ ಹಿಂದೂಗಳ ಕತೆಯೇನು? ವಾಪಸ್ಸಾಗಲು ಮನಸ್ಸಿಲ್ಲ!
ಭಾರತದಲ್ಲಿರುವ ಪಾಕಿಸ್ತಾನಿ ಹಿಂದೂಗಳ ಕತೆಯೇನು? ವಾಪಸ್ಸಾಗಲು ಮನಸ್ಸಿಲ್ಲ!
ಪ್ರತಿಭಟನೆ ಹಿನ್ನೆಲೆ ಎಸ್ಪಿ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್
ಪ್ರತಿಭಟನೆ ಹಿನ್ನೆಲೆ ಎಸ್ಪಿ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್
ನಂಜನಗೂಡು ದೇವಾಲಯದಲ್ಲಿ ಒಂದೇ ತಿಂಗಳಲ್ಲಿ 2.59 ಕೋಟಿ ರೂ. ಸಂಗ್ರಹ
ನಂಜನಗೂಡು ದೇವಾಲಯದಲ್ಲಿ ಒಂದೇ ತಿಂಗಳಲ್ಲಿ 2.59 ಕೋಟಿ ರೂ. ಸಂಗ್ರಹ
ಸದ್ಯದ ಸ್ಥಿತಿಯಲ್ಲಿ ಪ್ರಧಾನಿ ಮೋದಿಯವರ ನಿರ್ಣಯವೇ ಅಂತಿಮ: ಹೆಚ್​ಕೆ ಪಾಟೀಲ್
ಸದ್ಯದ ಸ್ಥಿತಿಯಲ್ಲಿ ಪ್ರಧಾನಿ ಮೋದಿಯವರ ನಿರ್ಣಯವೇ ಅಂತಿಮ: ಹೆಚ್​ಕೆ ಪಾಟೀಲ್