‘ಶಂಕರ್​ನಾಗ್ ಇಂದು ಇದ್ದಿದ್ದರೆ ರಾಜ್ಯದ ಸಿಎಂ ಆಗಿರುತ್ತಿದ್ದರು’; ರವಿಚಂದ್ರನ್

ರವಿಚಂದ್ರನ್ ಅವರು ಶಂಕರ್ ನಾಗ್ ಅವರನ್ನು ಸ್ಮರಿಸುತ್ತಾ, ಅವರ ಕೆಲಸದ ಬಗ್ಗೆ ಮತ್ತು ದೂರದೃಷ್ಟಿಯ ಬಗ್ಗೆ ಮಾತನಾಡಿದ್ದಾರೆ. ಶಂಕರ್ ನಾಗ್ ಅವರು ಸಿನಿಮಾಗಳ ಜೊತೆಗೆ ಸಾಮಾಜಿಕ ಕೆಲಸಗಳಲ್ಲೂ ತೊಡಗಿಸಿಕೊಂಡಿದ್ದರು. ರವಿಚಂದ್ರನ್ ಅವರು ಶಂಕರ್ ನಾಗ್ ಅವರು ಮುಖ್ಯಮಂತ್ರಿಯಾಗುವಷ್ಟು ಸಾಮರ್ಥ್ಯ ಹೊಂದಿದ್ದರು ಎಂದು ಹೇಳಿದ್ದಾರೆ.

‘ಶಂಕರ್​ನಾಗ್ ಇಂದು ಇದ್ದಿದ್ದರೆ ರಾಜ್ಯದ ಸಿಎಂ ಆಗಿರುತ್ತಿದ್ದರು’; ರವಿಚಂದ್ರನ್
ರವಿಚಂದ್ರನ್-ಶಂಕರ್​ನಾಗ್
Updated By: ರಾಜೇಶ್ ದುಗ್ಗುಮನೆ

Updated on: May 01, 2025 | 6:00 AM

ಶಂಕರ್ ನಾಗ್ (Shankar Nag) ಅವರು ಕನ್ನಡ ಚಿತ್ರರಂಗ ಕಂಡ ಶ್ರೇಷ್ಠ ನಟ, ನಿರ್ಮಾಪಕ ಹಾಗೂ ನಿರ್ದೇಶಕ. ಅವರು ಸಿನಿಮಾಗಳನ್ನು ಬಿಟ್ಟು ಬೇರೆಯದನ್ನೂ ಆಲೋಚಿಸುತ್ತಿದ್ದರು ಎಂದೇ ಹೇಳಬಹುದು. ಅವರು ಸಿನಿಮಾ ಬಗ್ಗೆ ಮಾತ್ರ ಅಲ್ಲ, ಸಾಮಾಜಿಕ ಕೆಲಸಗಳ ಬಗ್ಗೆ ಅವರು ಆಲೋಚಿಸುತ್ತಿದ್ದರು. ಈ ಕಾರಣಕ್ಕೆ ಅವರು ಅನೇಕರಿಗೆ ಇಷ್ಟ ಆಗಿದ್ದರು ಎನ್ನಬಹುದು. ಶಂಕರ್​ ನಾಗ್ ಅವರು ಅನೇಕರ ಜೊತೆ ಆಪ್ತತೆ ಬೆಳೆಸಿಕೊಂಡಿದ್ದರು. ಆ ಪೈಕಿ ರವಿಚಂದ್ರನ್ ಕೂಡ ಒಬ್ಬರು. ಅವರು ಹೇಳಿದ ಒಂದು ಮಾತನ್ನು ಇಂದು ನಾವು ನೆನಪಿಸಿಕೊಳ್ಳಲೇಬೇಕು.

ರವಿಚಂದ್ರನ್ ಅವರು ಇತ್ತೀಚೆಗೆ ‘ಭರ್ಜರಿ ಬ್ಯಾಚುಲರ್ಸ್ ಸೀಸನ್ 2’ ವೇದಿಕೆ ಮೇಲೆ ಕಾಣಿಸಿಕೊಂಡರು. ಮತ್ತು ಶಂಕರ್ ನಾಗ್ ಅವರ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಆಡಿದರು. ಶಂಕರ್ ನಾಗ್ ಅವರನ್ನು ರವಿಚಂದ್ರನ್ ಹತ್ತಿರದಿಂದ ಕಂಡವರು. ಅವರನ್ನು ಬಾಯ್ತುಂಬ ಹೊಗಳಿದ್ದಾರೆ. ಅವರು ಇದ್ದಿದ್ದರೆ ಸಿಎಂ ಆಗಿ ಇರುತ್ತಿದ್ದರು ಎಂದು ಕೂಡ ಹೇಳಿದ್ದಾರೆ.

ಇದನ್ನೂ ಓದಿ
‘ಒಡಹುಟ್ಟಿದವರು’ ಮಾಡಲು ರಾಜ್​ಕುಮಾರ್​ಗೆ ಎರಡು ಷರತ್ತು ಹಾಕಿದ್ದ ಅಂಬರೀಷ್
ತಮನ್ನಾ ಹಾಟ್ ಅವತಾರಕ್ಕೆ ಬದಲಾಯ್ತು ‘ರೇಡ್ 2’ ಸೆನ್ಸಾರ್ ಪ್ರಮಾಣಪತ್ರ?  
ಸಂಧ್ಯಾ ಥಿಯೇಟರ್ ಕಾಲ್ತುಳಿತ; ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಶ್ರೀತೇಜ್
‘ಬಾಹುಬಲಿ 2’ ಚಿತ್ರಕ್ಕೆ 8 ವರ್ಷ; ರೀ-ರಿಲೀಸ್ ದಿನಾಂಕ ಘೋಷಣೆ

‘ಶಂಕರ್ ನಾಗ್ ಎಂದು ಹೇಳಿದಾಗ ನೆನಪಾಗೋದು ಟೈಮ್. ಯಾವಾಗಲೂ ಕೆಲಸ ಮಾಡುತ್ತಾ ಇರುತ್ತಿದ್ದರು. ಶನಿವಾರ ಸ್ವಿಚ್​ ಆಫ್ ಆದರೆ ಸೋಮವಾರದ ಮುಂಜಾನೆವರೆಗೆ ಯಾರಿಗೂ ಸಿಗುತ್ತಾ ಇರಲಿಲ್ಲ. ಗಾಸಿಪ್ ಮಾಡ್ತಾ ಇರಲಿಲ್ಲ. ಶೂಟಿಂಗ್​ನಲ್ಲಿ ಅರ್ಧ ಗಂಟೆ ಬ್ರೇಕ್ ಸಿಕ್ಕರೆ ವಿಧನಾಸೌಧದಲ್ಲಿ ಕೆಲಸ ಮುಗಿಸಿಕೊಂಡು ಬರುತ್ತಿದ್ದರು’ ಎಂದು ರವಿಚಂದ್ರನ್ ವಿವರಿಸಿದ್ದಾರೆ. ಇದು ಅವರು ಟೈಮ್​ಗೆ ಕೊಡ್ತಾ ಇದ್ದಿದ್ದ ಪ್ರಾಮುಖ್ಯತೆ ಆಗಿದೆ.

‘ಶಂಕರ್ ನಾಗ್ ಅವರು ಇಂದು ಇದ್ದಿದ್ದರೆ ಸಿಎಂ ಆಗಿರುತ್ತಿದ್ದರು. ನಂದಿ ಹಿಲ್ಸ್​ಗೆ ಕೇಬಲ್ ಕಾರ್ ಮಾಡೋ ಆಲೋಚನೆ ಬಂದಿತ್ತು. 30 ಸಾವಿರದಲ್ಲಿ ಮನೆ ಕಟ್ಟಬಹುದು ಎಂದು ತೋರಿಸಿದ್ದರು. ಪಾಸಿಟಿವಿ ಮೈಂಡೆಡ್. ಆ ರೀತಿ ವ್ಯಕ್ತಿಯನ್ನು ನಾನು ಈವರೆಗೆ ನೋಡಿಯೇ ಇಲ್ಲ’ ಎಂದಿದ್ದರು ಅವರು.

ಇದನ್ನೂ ಓದಿ: ಶ್ರೀದೇವಿನ ಕನ್ನಡಕ್ಕೆ ಕರೆತರಲು ಹೋಗಿದ್ದ ರವಿಚಂದ್ರನ್; ಆಮೇಲೆ ಆಗಿದ್ದೇನು?

ರವಿಚಂದ್ರನ್ ಅವರು ಕರ್ನಾಟಕಕ್ಕೆ ಮೆಟ್ರೋ ಬರಬೇಕು ಎಂದು ಕೂಡ ಕನಸು ಕಂಡಿದ್ದರು. ಆದರೆ, ಈ ಕನಸು ಅವರು ಇದ್ದಾಗ ಈಡೇರಲಿಲ್ಲ. ಈಗ ಬೆಂಗಳೂರಿನಲ್ಲಿ ಮೆಟ್ರೋ ಇದೆ. ಹೀಗಾಗಿ, ಒಂದು ಮೆಟ್ರೋ ನಿಲ್ದಾಣಕ್ಕೆ ಅವರ ಹೆಸರು ಇಡಬೇಕು ಎನ್ನುವ ಆಗ್ರಹ ವ್ಯಕ್ತವಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.