AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸುದೀಪ್ ಮಗಳು ಸಾನ್ವಿ ಧ್ವನಿಯಲ್ಲಿ ಮೂಡಿ ಬಂತು ಹೊಸ ಹಾಡು; ಇಂಪಾಗಿದೆ ‘ಅರಗಿಣಿಯೇ’ ಸಾಂಗ್

ಸುದೀಪ್ ಅಳಿಯ ಸಂಚಿತ್ ಸಂಜೀವ್ 'ಮ್ಯಾಂಗೋ ಪಚ್ಚ' ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಈ ಚಿತ್ರದ 'ಅರಗಿಣಿಯೇ' ಹಾಡಿಗೆ ಸುದೀಪ್ ಪುತ್ರಿ ಸಾನ್ವಿ ಸುದೀಪ್ ಧ್ವನಿಯಾಗಿದ್ದಾರೆ. ಗಾಯಕಿಯಾಗಿ ಗುರುತಿಸಿಕೊಳ್ಳುತ್ತಿರುವ ಸಾನ್ವಿಗೆ ಸುದೀಪ್ ಸಂಪೂರ್ಣ ಬೆಂಬಲ ನೀಡುತ್ತಿದ್ದಾರೆ. ಈ ಹಿಂದೆಯೂ 'ಮಸ್ತ್ ಮಲೈಕಾ' ಹಾಡಿ ಗಮನ ಸೆಳೆದಿದ್ದ ಸಾನ್ವಿ, ಈಗ ಮತ್ತೊಂದು ಹಿಟ್ ನೀಡಿದ್ದಾರೆ.

ಸುದೀಪ್ ಮಗಳು ಸಾನ್ವಿ ಧ್ವನಿಯಲ್ಲಿ ಮೂಡಿ ಬಂತು ಹೊಸ ಹಾಡು; ಇಂಪಾಗಿದೆ ‘ಅರಗಿಣಿಯೇ’ ಸಾಂಗ್
ಸಾನ್ವಿ-ಸುದೀಪ್
ರಾಜೇಶ್ ದುಗ್ಗುಮನೆ
|

Updated on: Jan 14, 2026 | 12:39 PM

Share

ಸುದೀಪ್ ಅವರ ಅಳಿಯ ಸಂಚಿತ್ ಸಂಜೀವ್ ಅವರು ಚಿತ್ರರಂಗಕ್ಕೆ ಕಾಲಿಡೋಕೆ ರೆಡಿ ಆಗಿದ್ದಾರೆ. ‘ಮ್ಯಾಂಗೋ ಪಚ್ಚ’ ಸಿನಿಮಾದಲ್ಲಿ ಅವರು ನಟಿಸಿದ್ದಾರೆ. ಸಿನಿಮಾದ ಕೆಲಸ ಕೊನೆಯ ಹಂತದಲ್ಲಿ ಇದ್ದು, ಶೀಘ್ರವೇ ಸಿನಿಮಾ ರಿಲೀಸ್ ಆಗಲಿದೆ. ವಿವೇಕ್ ನಿರ್ದೇಶನದ ಈ ಚಿತ್ರಕ್ಕೆ, ಪ್ರಿಯಾ ಹಾಗೂ ಕೆಆರ್​​ಜಿ ಸ್ಟುಡಿಯೋ ಬಂಡವಾಳ ಹೂಡಿದೆ. ಈ ಚಿತ್ರದ ‘ಅರಗಿಣಿಯೇ..’ ಹಾಡು ಬಿಡುಗಡೆ ಆಗಿದೆ. ಈ ಸಾಂಗ್​​ನ ಸುದೀಪ್ ಮಗಳು ಸಾನ್ವಿ (Sanvi Sudeep) ಹಾಡಿದ್ದಾರೆ ಅನ್ನೋದು ವಿಶೇಷ.

ಸಾಮಾನ್ಯವಾಗಿ ಸ್ಟಾರ್ ಹೀರೋಗಳ ಮಕ್ಕಳು ನಟ/ನಟಿಯಾಗಿ ಚಿತ್ರರಂಗದಲ್ಲಿ ಮಿಂಚಲು ಬಯಸುತ್ತಾರೆ. ಆದರೆ, ಸಾನ್ವಿ ಆ ರೀತಿ ಅಲ್ಲ. ಅವರು ಗಾಯಕಿಯಾಗಿ ಗುರುತಿಸಿಕೊಳ್ಳಲು ಬಯಸುತ್ತಿದ್ದಾರೆ. ಸುದೀಪ್ ನಟನೆಯ ‘ಮಾರ್ಕ್’ ಚಿತ್ರದ ‘ಮಸ್ತ್ ಮಲೈಕಾ’ ಹಾಡನ್ನು ಇವರು ಹಾಡಿದ್ದರು. ಈ ಹಾಡು ಸಾಕಷ್ಟು ಗಮನ ಸೆಳೆದಿತ್ತು. ಈಗ ‘ಅರಗಿಣಿಯೇ..’ ಹಾಡನ್ನು ಹಾಡಿದ್ದಾರೆ.

‘ಅರಗಿಣಿಯೇ..’ ಹಾಡು ಸಖತ್ ಮೆಲೋಡಿಯಾಗಿದೆ. ಈ ಹಾಡಿಗೆ ಚರಣ್ ರಾಜ್ ಸಂಗೀತ ಸಂಯೋಜನೆ ಮಾಡಿದ್ದು ಕಿವಿಗೆ ಇಂಪು ನೀಡಿದೆ. ಈ ಹಾಡಿನಲ್ಲಿ ಸಾನ್ವಿ ಸುದೀಪ್ ಜೊತೆ ಕಪಿಲ್ ಕಪಿಲನ್ ಕೂಡ ಹಾಡಿದ್ದಾರೆ. ಧನಂಜಯ ರಂಜನ್ ಹಾಡಿಗೆ ಸಾಹಿತ್ಯ ಬರೆದಿದ್ದಾರೆ.

ಇದನ್ನೂ ಓದಿ: ಸುದೀಪ್ ಮಗಳು ಸಾನ್ವಿ ಬಗ್ಗೆ ಯಾಕಿಷ್ಟು ಟ್ರೋಲ್? ಅವರು ಮಾಡಿದ ತಪ್ಪೇನು?

ಮಗಳು ಯಾವುದೇ ಕ್ಷೇತ್ರ ಆಯ್ಕೆ ಮಾಡಿಕೊಂಡರೂ ಅದಕ್ಕೆ ಬೆಂಬಲ ನೀಡೋದಾಗಿ ಸುದೀಪ್ ಹೇಳಿದ್ದರು. ಸಾನ್ವಿ ಸಂಗೀತ ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳಲು ಆಸಕ್ತಿ ತೋರಿಸಿದಂತೆ ಇದೆ. ಇದಕ್ಕೆ ಸುದೀಪ್ ಬೆಂಬಲವಾಗಿ ನಿಂತಿದ್ದಾರೆ. ‘ಮಸ್ತ್ ಮಲೈಕಾ’ ಹಾಡಿಗೆ ಸಾನ್ವಿ ಹೆಸರನ್ನು ಸುದೀಪ್ ಅವರೇ ಸೂಚಿಸಿದರೇ ಎಂಬ ಪ್ರಶ್ನೆ ಎದುರಾಗಿತ್ತು. ಇದಕ್ಕೆ ಉತ್ತರಿಸಿದ್ದ ಸುದೀಪ್, ಈ ಅವಕಾಶ ಸಾನ್ವಿ ಟ್ಯಾಲೆಂಟ್​​ನಿಂದ ಬಂದಿದೆ ಎಂದಿದ್ದರು.

ಸಾನ್ವಿ ಧ್ವನಿ ಕೇಳಿದ್ದ ಅಜನೀಶ್ ಲೋಕನಾಥ್ ‘ಮಸ್ತ್ ಮಲೈಕಾ’ ಹಾಡಿಗೆ ಅವಕಾಶ ನೀಡಿದರಂತೆ. ಅವರ ಧ್ವನಿ ತುಂಬಾನೇ ಹೊಂದಿಕೆ ಆಗುತ್ತದೆ ಎಂಬ ಕಾರಣಕ್ಕೆ ಅವರನ್ನು ಹಾಗೆಯೇ ಉಳಿಸಿಕೊಳ್ಳಲಾಯಿತು. ಈ ಹಾಡು ಟ್ರೆಂಡ್​​ನಲ್ಲಿದೆ. ಈಗ ಅವರಿಗೆ ಮತ್ತೊಂದು ಅವಕಾಶ ಸಿಕ್ಕಿದೆ. ಮುಂದಿನ ದಿನಗಳಲ್ಲಿ ಅವರ ಧ್ವನಿಯಿಂದ ಇನ್ನಷ್ಟು ಹಾಡು ಮೂಡಿ ಬರಲಿ ಎಂಬುದು ಫ್ಯಾನ್ಸ್ ಕೋರಿಕೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಚೊಚ್ಚಲ ಪಂದ್ಯ... ಅರ್ಧದಲ್ಲೇ ಬ್ಯಾಟಿಂಗ್ ನಿಲ್ಲಿಸಿ ವಾಪಸ್ ಕರೆಸಿದ ಕೋಚ್..!
ಚೊಚ್ಚಲ ಪಂದ್ಯ... ಅರ್ಧದಲ್ಲೇ ಬ್ಯಾಟಿಂಗ್ ನಿಲ್ಲಿಸಿ ವಾಪಸ್ ಕರೆಸಿದ ಕೋಚ್..!
JDS ಮುಖಂಡೆ ಪುತ್ರನ ಕಿರುಕಳಕ್ಕೆ ಯುವತಿ ಆತ್ಮಹತ್ಯೆ ಕೇಸ್​​ಗೆ ಟ್ವಿಸ್ಟ್​​
JDS ಮುಖಂಡೆ ಪುತ್ರನ ಕಿರುಕಳಕ್ಕೆ ಯುವತಿ ಆತ್ಮಹತ್ಯೆ ಕೇಸ್​​ಗೆ ಟ್ವಿಸ್ಟ್​​
ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ನಿವಾಸದಲ್ಲಿ ಅಗ್ನಿ ಅವಘಡ
ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ನಿವಾಸದಲ್ಲಿ ಅಗ್ನಿ ಅವಘಡ
ಹಾಸನ ಜಿಲ್ಲೆಯ ವಿವಿಧೆಡೆ ಭಾರಿ ಮಳೆ: ಒಣಗಲು ಹಾಕಿದ್ದ ಕಾಫಿ ಬೆಳೆಗೆ ಹಾನಿ
ಹಾಸನ ಜಿಲ್ಲೆಯ ವಿವಿಧೆಡೆ ಭಾರಿ ಮಳೆ: ಒಣಗಲು ಹಾಕಿದ್ದ ಕಾಫಿ ಬೆಳೆಗೆ ಹಾನಿ
ಮೆಟ್ರೋ ಕಾಮಗಾರಿ ವೇಳೆ ಕ್ರೇನ್​​ ಪಲ್ಟಿ: ತಪ್ಪಿದ ಭಾರೀ ದುರಂತ
ಮೆಟ್ರೋ ಕಾಮಗಾರಿ ವೇಳೆ ಕ್ರೇನ್​​ ಪಲ್ಟಿ: ತಪ್ಪಿದ ಭಾರೀ ದುರಂತ
ಲಕ್ಕುಂಡಿಯ ಸಿಕ್ಕ ಚಿನ್ನ ಮನೆಯಲ್ಲಿ ಇಟ್ಕೊಂಡ್ರೆ ಏನಾಗತ್ತೆ ಗೊತ್ತಾ?
ಲಕ್ಕುಂಡಿಯ ಸಿಕ್ಕ ಚಿನ್ನ ಮನೆಯಲ್ಲಿ ಇಟ್ಕೊಂಡ್ರೆ ಏನಾಗತ್ತೆ ಗೊತ್ತಾ?
ಲಕ್ಕುಂಡಿಯ ಈ ಸ್ಥಳದಲ್ಲಿ ಇಂದಿಗೂ ಸಿಗುತ್ತದೆ ಚಿನ್ನ, ರತ್ನ, ಹವಳ
ಲಕ್ಕುಂಡಿಯ ಈ ಸ್ಥಳದಲ್ಲಿ ಇಂದಿಗೂ ಸಿಗುತ್ತದೆ ಚಿನ್ನ, ರತ್ನ, ಹವಳ
ಲಕ್ಕುಂಡಿಯಲ್ಲಿ ಪತ್ತೆಯಾದ ನಿಧಿ ಯಾವ ಕಾಲದ್ದು ಗೊತ್ತೇ? ಬಯಲಾಯ್ತು ರಹಸ್ಯ
ಲಕ್ಕುಂಡಿಯಲ್ಲಿ ಪತ್ತೆಯಾದ ನಿಧಿ ಯಾವ ಕಾಲದ್ದು ಗೊತ್ತೇ? ಬಯಲಾಯ್ತು ರಹಸ್ಯ
ಥೈಲ್ಯಾಂಡ್​ನಲ್ಲಿ ಹಳಿ ತಪ್ಪಿದ ರೈಲು, 22 ಮಂದಿ ಸಾವು
ಥೈಲ್ಯಾಂಡ್​ನಲ್ಲಿ ಹಳಿ ತಪ್ಪಿದ ರೈಲು, 22 ಮಂದಿ ಸಾವು
ವೇಗವಾಗಿ ಬಂದು ಸಂಚಾರ ಗೃಹರಕ್ಷಕ ಸಿಬ್ಬಂದಿಗೆ ಡಿಕ್ಕಿ ಹೊಡೆದ ಬೈಕ್ ಸವಾರ
ವೇಗವಾಗಿ ಬಂದು ಸಂಚಾರ ಗೃಹರಕ್ಷಕ ಸಿಬ್ಬಂದಿಗೆ ಡಿಕ್ಕಿ ಹೊಡೆದ ಬೈಕ್ ಸವಾರ