‘ಟಾಕ್ಸಿಕ್​​’ಗೆ ಹೆದರಿ ಸಂಪ್ರದಾಯ ಮುರಿದ ನಟ ಸಲ್ಮಾನ್ ಖಾನ್; ಇದು ಯಶ್ ಪವರ್

ಸಲ್ಮಾನ್ ಖಾನ್ ಯಶ್ ಅವರ ‘ಟಾಕ್ಸಿಕ್’ ಸಿನಿಮಾಗೆ ಹೆದರಿ ತಮ್ಮ ಈದ್ ಬಿಡುಗಡೆ ಸಂಪ್ರದಾಯ ಮುರಿದಿದ್ದಾರೆ. ಈ ಹಿಂದೆ ಯಶ್ ‘ಕೆಜಿಎಫ್’ ಚಿತ್ರಗಳು ಬಾಕ್ಸ್ ಆಫೀಸ್‌ನಲ್ಲಿ ದೊಡ್ಡ ಹೆಸರು ಮಾಡಿದ್ದವು. ಮಾರ್ಚ್ 19ರಂದು ‘ಟಾಕ್ಸಿಕ್’ ಜೊತೆಗೆ ‘ಧುರಂಧರ್ 2’ ಸಹ ತೆರೆಗೆ ಬರಲಿದ್ದು, ದೊಡ್ಡ ಕ್ಲಾಶ್ ನಿರೀಕ್ಷಿಸಲಾಗಿದೆ. ಸಲ್ಮಾನ್ ತಮ್ಮ ‘ಗಲ್ವಾನ್’ ಚಿತ್ರವನ್ನು ಏಪ್ರಿಲ್ 17ಕ್ಕೆ ಮುಂದೂಡಿದ್ದಾರೆ.

‘ಟಾಕ್ಸಿಕ್​​’ಗೆ ಹೆದರಿ ಸಂಪ್ರದಾಯ ಮುರಿದ ನಟ ಸಲ್ಮಾನ್ ಖಾನ್; ಇದು ಯಶ್ ಪವರ್
ಸಲ್ಮಾನ್-ಯಶ್

Updated on: Dec 27, 2025 | 5:44 PM

‘ಟಾಕ್ಸಿಕ್’ ಸಿನಿಮಾ (Toxic Movie) ಮಾರ್ಚ್ 19ರಂದು ರಿಲೀಸ್ ಆಗುತ್ತಿದೆ. ಈ ಚಿತ್ರಕ್ಕೆ ಕೇವಲ ಸ್ಯಾಂಡಲ್​​ವುಡ್ ಮಾತ್ರವಲ್ಲ, ವಿಶ್ವ ಮಟ್ಟದಲ್ಲಿ ನಿರೀಕ್ಷೆ ಇದೆ. ಕನ್ನಡದ ಜೊತೆಗೆ ಇಂಗ್ಲಿಷನ್​​ನಲ್ಲಿ ಏಕಕಾಲಕ್ಕೆ ಶೂಟ್ ಆದ ಈ ಚಿತ್ರ ತೆಲುಗು, ಹಿಂದಿ ಮೊದಲಾದ ಭಾಷೆಗೆ ಡಬ್ ಆಗಿ ತೆರೆಗೆ ಬರುತ್ತಿದೆ. ಈಗ ‘ಟಾಕ್ಸಿಕ್’ ಚಿತ್ರಕ್ಕೆ ಸಲ್ಮಾನ್ ಖಾನ್ ಹೆದರಿದ್ದಾರೆ. ಅವರು ತಮ್ಮ ಸಂಪ್ರದಾಯವನ್ನು ಮುರಿದುಕೊಂಡಿದ್ದಾರೆ.

ಸಲ್ಮಾನ್ ಖಾನ್ ಅವರು ಯಾವಾಗಲೂ ಈದ್ ಸಮಯದಲ್ಲಿ ಸಿನಿಮಾ ರಿಲೀಸ್ ಮಾಡುತ್ತಾರೆ. ಇದನ್ನು ಮೊದಲಿನಿಂದಲೂ ಅವರು ಅನುಸಿರಿಸಿಕೊಂಡು ಬರುತ್ತಿದ್ದಾರೆ. ಈ ಬಾರಿ ಅವರ ನಟನೆಯ ‘ಗಲ್ವಾನ್’ ಸಿನಿಮಾ ಮಾರ್ಚ್ 19ರಂದು (ಈದ್ ಹಬ್ಬದ ದಿನ) ತೆರೆಗೆ ಬರಲಿದೆ ಎನ್ನಲಾಗಿತ್ತು. ಆದರೆ, ಇದನ್ನು ಸಲ್ಲು ಏಪ್ರಿಲ್ 17ಕ್ಕೆ ಮುಂದೂಡಿಕೊಂಡಿದ್ದಾರೆ.

ಇದನ್ನೂ ಓದಿ: ರಾಧಿಕಾನ ಮೊದಲ ಬಾರಿಗೆ ಮನೆಗೆ ಕರೆತಂದಾಗ ಯಶ್​ಗೆ ಷರತ್ತು ಹಾಕಿದ್ದ ತಾಯಿ ಪುಷ್ಪಾ

2018ರಲ್ಲಿ ‘ಕೆಜಿಎಫ್’ ರಿಲೀಸ್ ಆಯಿತು. ಈ ವೇಳೆ ಶಾರುಖ್ ಖಾನ್ ಅವರ ‘ಝೀರೋ’ ಸಿನಿಮಾ ತೆರೆಗೆ ಬಂತು. ಈ ಚಿತ್ರ ‘ಕೆಜಿಎಫ್’ ಎದುರು ಹೀನಾಯವಾಗಿ ಸೋತಿದೆ. ‘ಕೆಜಿಎಫ್ 2’ ಚಿತ್ರದ ವೇಳೆ ದಳಪತಿ ವಿಜಯ್ ನಟನೆಯ ‘ಬೀಸ್ಟ್’ ಬಿಡುಗಡೆ ಆಯಿತು. ಈ ಚಿತ್ರದ ಎದುರು ಯಶ್ ಚಿತ್ರ ಗೆದ್ದಿದೆ. ಈ ಕಾರಣದಿಂದಲೇ ಯಶ್ ಎದುರು ಬರೋಕೆ ಎಲ್ಲರೂ ಭಯ ಬೀಳುತ್ತಾ ಇದ್ದಾರೆ.

ಈಗ ಯಶ್ ಅವರ ‘ಟಾಕ್ಸಿಕ್’ ಚಿತ್ರ ಮಾರ್ಚ್ 19ರಂದು ತೆರೆಗೆ ಬರುತ್ತಿದೆ. ಇದೇ ಸಮಯದಲ್ಲಿ ‘ಧುರಂಧರ್ 2’ ಕೂಡ ತೆರೆಗೆ ಬರುತ್ತಿದೆ. ‘ಧುರಂಧರ್’ ಸಿನಿಮಾ ಸೂಪರ್ ಹಿಟ್ ಆಗಿರುವುದರಿಂದ ಈ ಚಿತ್ರದ ಬಗ್ಗೆ ನಿರೀಕ್ಷೆ ಇದೆ. ಈ ಎರಡೂ ಸಿನಿಮಾಗಳು ಬಾಕ್ಸ್ ಆಫೀಸ್​​​ನಲ್ಲಿ ಕ್ಲ್ಯಾಶ್ ಆಗುವುದರಲ್ಲಿ ಇದೆ. ಈ ಕಾರಣಕ್ಕೆ ಸಲ್ಮಾನ್ ಖಾನ್ ಸಂಪ್ರದಾಯವನ್ನು ಬ್ರೇಕ್ ಮಾಡುತ್ತಿದ್ದಾರೆ. ಸಲ್ಮಾನ್ ಖಾನ್ ಅವರಿಗೆ ಇಂದು (ನವೆಂಬರ್ 27) ಜನ್ಮದಿನ. ಈ ವೇಳೆ ‘ಗಲ್ವಾನ್’ ಟೀಸರ್ ರಿಲೀಸ್ ಮಾಡಿ ರಿಲೀಸ್ ದಿನಾಂಕ ರಿವೀಲ್ ಮಾಡಲಾಗುತ್ತಾ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.