Shah Rukh Khan: ಶಾರುಖ್ ಫೇವರಿಟ್ ಫೋಟೋಗ್ರಾಫರ್ ಜೊತೆ ಸಾನ್ಯಾ ಐಯ್ಯರ್; ಹೇಗಿತ್ತು ನೋಡಿ ಫೋಟೋಶೂಟ್ ಮೇಕಿಂಗ್
ಸಾನ್ಯಾ ಐಯ್ಯರ್ ಅವರು ಬಾಲಿವುಡ್ ಫೋಟೋಗ್ರಾಫರ್ ಜೊತೆ ಫೋಟೋಶೂಟ್ ಮಾಡಿಸಿದ್ದಾರೆ. ಅದರ ಮೇಕಿಂಗ್ ವಿಡಿಯೋ ಹಂಚಿಕೊಂಡಿದ್ದಾರೆ.
ನಟ ಶಾರುಖ್ ಖಾನ್ (Shah Rukh Khan) ಅವರು ಬಾಲಿವುಡ್ನಲ್ಲಿ ಸಾಕಷ್ಟು ಬೇಡಿಕೆ ಹೊಂದಿದ್ದಾರೆ. ಅವರು ಆಗಾಗ ಫೋಟೋಶೂಟ್ ಮಾಡಿಸುತ್ತಾರೆ. ಬಾಲಿವುಡ್ನ ಜನಪ್ರಿಯ ಫೋಟೋಗ್ರಾಫರ್ ಡಬೂ ರತ್ನಾನಿ ಜೊತೆ ಶಾರುಖ್ಗೆ ಒಳ್ಳೆಯ ಒಡನಾಟ ಇದೆ. ಅವರು ಶಾರುಖ್ನ ಫೇವರಿಟ್ ಫೋಟೋಗ್ರಾಫರ್ ಕೂಡ ಹೌದು. ಡಬೂ ರತ್ನಾನಿ ಜೊತೆ ಸಾನ್ಯಾ ಐಯ್ಯರ್ (Sanya Iyer) ಇತ್ತೀಚೆಗೆ ಫೋಟೋಶೂಟ್ ಮಾಡಿಸಿದ್ದರು. ಬಗೆಬಗೆಯ ಫೋಟೋಗಳನ್ನು ಅವರು ಹಂಚಿಕೊಂಡಿದ್ದರು. ಈ ಫೋಟೋ ಸಖತ್ ಬೋಲ್ಡ್ ಆಗಿತ್ತು. ಈ ಫೋಟೋಶೂಟ್ನ ಮೇಕಿಂಗ್ ವಿಡಿಯೋ ಹಂಚಿಕೊಳ್ಳಲಾಗಿದೆ. ಇದಕ್ಕೆ ಫ್ಯಾನ್ಸ್ ಕಡೆಯಿಂದ ಲೈಕ್ಸ್ ಸಿಕ್ಕಿದೆ.
ಸಾನ್ಯಾ ಐಯ್ಯರ್ ಅವರಿಗೆ ಕಿರುತೆರೆಯಲ್ಲಿ ಬೇಡಿಕೆ ಇದೆ. ‘ಬಿಗ್ ಬಾಸ್ ಒಟಿಟಿ’ ಹಾಗೂ ‘ಬಿಗ್ ಬಾಸ್ ಕನ್ನಡ ಸೀಸನ್ 9’ರ ಮೂಲಕ ಅವರ ಜನಪ್ರಿಯತೆ ಹೆಚ್ಚಿದೆ. ರೂಪೇಶ್ ಶೆಟ್ಟಿ ಜೊತೆಗಿನ ಒಡನಾಟದ ವಿಚಾರದಿಂದಲೂ ಅವರು ಸುದ್ದಿ ಆಗಿದ್ದರು. ಹೀಗಿರುವಾಗಲೇ ಸಾನ್ಯಾ ಐಯ್ಯರ್ ಅವರು ಬಾಲಿವುಡ್ ಫೋಟೋಗ್ರಾಫರ್ ಜೊತೆ ಫೋಟೋಶೂಟ್ ಮಾಡಿಸಿದ್ದಾರೆ. ಅದರ ಮೇಕಿಂಗ್ ವಿಡಿಯೋ ಹಂಚಿಕೊಂಡಿದ್ದಾರೆ.
ಡಬೂ ರತ್ನಾನಿಗೆ ಬಾಲಿವುಡ್ನಲ್ಲಿ ಸಾಕಷ್ಟು ಬೇಡಿಕೆ ಇದೆ. ಅವರ ಜೊತೆ ಸಾನ್ಯಾ ಫೋಟೋಶೂಟ್ ಮಾಡಿಸಿದ್ದು ಅವರ ಫ್ಯಾನ್ಸ್ಗೆ ಖುಷಿ ನೀಡಿತ್ತು. ಇದರ ಮೇಕಿಂಗ್ ವಿಡಿಯೋ ಹಂಚಿಕೊಳ್ಳಲಾಗಿದೆ. ಸಾನ್ಯಾ ಅವರ ಮಾದಕ ಲುಕ್ ಎಲ್ಲರ ಗಮನ ಸೆಳೆದಿದೆ.
View this post on Instagram
ಇದನ್ನೂ ಓದಿ: Sanya Iyer: ಬಾಲಿವುಡ್ ಖ್ಯಾತ ಫೋಟೋಗ್ರಾಫರ್ ಡಬೂ ರತ್ನಾನಿ ಕ್ಯಾಮೆರಾದಲ್ಲಿ ಕನ್ನಡದ ಸಾನ್ಯಾ ಐಯ್ಯರ್
‘ಬಿಗ್ ಬಾಸ್’ಗೆ ಕಾಲಿಟ್ಟ ಬಳಿಕ ಜನಪ್ರಿಯತೆ ಹೆಚ್ಚುತ್ತದೆ. ಸಿನಿಮಾಗಳಿಂದ ಹೆಚ್ಚೆಚ್ಚು ಆಫರ್ ಬರುತ್ತದೆ. ಸಾನ್ಯಾ ಐಯ್ಯರ್ಗೆ ಬಾಲಿವುಡ್ನಿಂದ ಆಫರ್ ಬಂದಿದೆಯೇ ಎನ್ನುವ ಪ್ರಶ್ನೆ ಮೂಡಿದೆ. ಈ ಬಗ್ಗೆ ಅಧಿಕೃತ ಘೋಷಣೆ ಆಗಲಿ ಎಂದು ಫ್ಯಾನ್ಸ್ ಕಾಯುತ್ತಿದ್ದಾರೆ. ಅವರು ಚಿತ್ರರಂಗದಲ್ಲಿ ಮುಂದುವರಿಯಬೇಕು ಎಂದು ಬಿಗ್ ಬಾಸ್ನಲ್ಲಿ ಹೇಳಿಕೊಂಡಿದ್ದರು.
ಇದನ್ನೂ ಓದಿ: Sanya Iyer: ಸಖತ್ ಬೋಲ್ಡ್ ಆಗಿ ಪೋಸ್ ಕೊಟ್ಟ ಸಾನ್ಯಾ ಐಯ್ಯರ್; ಸಂಸ್ಕೃತಿ ನೆನಪಿಸಿದ ಫ್ಯಾನ್ಸ್
ಅಂದಹಾಗೆ, ಅನೇಕರಿಗೆ ಈ ಫೋಟೋಶೂಟ್ ಇಷ್ಟ ಆಗಿಲ್ಲ. ಫೋಟೋಗಳ ಬಗ್ಗೆ ಅನೇಕರು ನೆಗೆಟಿವ್ ಆಗಿ ಕಮೆಂಟ್ ಮಾಡಿದ್ದಾರೆ. ಅವರು ಇಷ್ಟೊಂದು ಬೋಲ್ಡ್ ಆಗಿ ಕಾಣಿಸಿಕೊಳ್ಳಬಾರದಿತ್ತು ಎನ್ನುವ ಅಭಿಪ್ರಾಯ ಕೆಲವರಿಂದ ವ್ಯಕ್ತವಾಗಿದೆ. ಆದರೆ, ಇದಕ್ಕೆ ಸಾನ್ಯಾ ಐಯ್ಯರ್ ತಲೆಕೆಡಿಸಿಕೊಂಡಿಲ್ಲ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ