Doddanna: ದೊಡ್ಡಣ್ಣ ಹೃದಯ ಬಡಿತದಲ್ಲಿ ಏರುಪೇರು; ಆಸ್ಪತ್ರೆಗೆ ದಾಖಲಾದ ಹಿರಿಯ ನಟ
Senior Actor Doddanna: ನಟ ದೊಡ್ಡಣ್ಣ ಅವರನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಯಾವುದೇ ಗಂಭೀರ ಸಮಸ್ಯೆ ಇಲ್ಲ ಎನ್ನಲಾಗುತ್ತಿದೆಯಾದರೂ ಅವರ ಹೃದಯಬಡಿತದಲ್ಲಿ ಏರುಪೇರಾಗುತ್ತಿರುವ ಬಗ್ಗೆ ಆಸ್ಪತ್ರೆ ಮೂಲಗಳಿಂದ ಮಾಹಿತಿ ಕೇಳಿಬಂದಿದೆ.
ಕನ್ನಡ ಚಿತ್ರರಂಗದ ಖ್ಯಾತ ನಟ ದೊಡ್ಡಣ್ಣ (Doddanna) ಅವರ ಆರೋಗ್ಯದಲ್ಲಿ ವ್ಯತ್ಯಯ ಉಂಟಾಗಿದೆ. ಅವರ ಹೃದಯಬಡಿತದಲ್ಲಿ ಏರುಪೇರು (Heartbeat Fluctuations) ಆಗಿರುವ ಹಿನ್ನೆಲೆಯಲ್ಲಿ ಅವರಿಗೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಬುಧವಾರ (ಆ.25) ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಸದ್ಯ ಯಾವುದೇ ಗಂಭೀರ ಸಮಸ್ಯೆ ಇಲ್ಲ ಎನ್ನಲಾಗುತ್ತಿದೆಯಾದರೂ ಹೃದಯಬಡಿತದಲ್ಲಿ ಏರುಪೇರಾಗುತ್ತಿರುವ ಬಗ್ಗೆ ಆಸ್ಪತ್ರೆ ಮೂಲಗಳಿಂದ ಮಾಹಿತಿ ಕೇಳಿಬಂದಿದೆ.
ದೊಡ್ಡಣ್ಣ ಅವರಿಗೆ ಪೇಸ್ ಮೇಕರ್ ಅಳವಡಿಸಲಾಗಿದೆ. ಮೂರು ದಿನಗಳ ಕಾಲ ಅವರು ಆಸ್ಪತ್ರೆಯಲ್ಲೇ ಇರಲಿದ್ದಾರೆ. ಬಳಿಕ ಡಿಸ್ಚಾರ್ಜ್ ಮಾಡಲಾಗುವುದು ಎಂಬ ಮಾಹಿತಿ ಲಭ್ಯವಾಗಿದೆ. ಇತ್ತೀಚಿನ ದಿನಗಳಲ್ಲಿ ದೊಡ್ಡಣ್ಣ ಅವರು ಹೆಚ್ಚು ಸಿನಿಮಾಗಳಲ್ಲಿ ನಟಿಸುತ್ತಿಲ್ಲ. ಅಂಬರೀಷ್ ಅಭಿನಯದ ‘ಅಂಬಿ ನಿಂಗ್ ವಯಸ್ಸಾಯ್ತೋ’ ಚಿತ್ರದ ಬಳಿಕ ದೊಡ್ಡಣ್ಣ ಬೇರೆ ಯಾವುದೇ ಚಿತ್ರದಲ್ಲೂ ಕಾಣಿಸಿಕೊಂಡಿಲ್ಲ. ಅನಾರೋಗ್ಯದ ಸುದ್ದಿಯಿಂದ ಅವರ ಅಭಿಮಾನಿಗಳಿಗೆ ಆತಂಕ ಉಂಟಾಗಿದೆ. ಬೇಗ ಗುಣಮುಖರಾಗಲಿ ಎಂದು ಎಲ್ಲರೂ ಪ್ರಾರ್ಥಿಸುತ್ತಿದ್ದಾರೆ.
ದೊಡ್ಡಣ್ಣ ಅವರ ಬಗ್ಗೆ ಕೆಲವೇ ದಿನಗಳ ಹಿಂದೆ ಗಾಳಿ ಸುದ್ದಿ ಕೇಳಿಬಂದಿತ್ತು. ಅವರು ನಿಧನರಾಗಿದ್ದಾರೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಕಿಡಿಗೇಡಿಗಳು ಸುಳ್ಳು ಸುದ್ದಿ ಹಬ್ಬಿಸಿ, ಅವರ ಆತ್ಮಕ್ಕೆ ಶಾಂತಿ ಕೋರುವ ರೀತಿಯಲ್ಲಿ ಪೋಸ್ಟ್ ಮಾಡಿದ್ದರು. ನಂತರ ಕೆಲವು ಗಂಟೆಗಳ ಕಾಲ ಆತಂಕದ ವಾತಾವರಣ ನಿರ್ಮಾಣ ಆಗಿತ್ತು. ಇದಕ್ಕೆ ಸ್ವತಃ ದೊಡ್ಡಣ್ಣ ಅವರೇ ವಿಡಿಯೋ ಮೂಲಕ ಪ್ರತಿಕ್ರಿಯೆ ನೀಡಿದ್ದರು. ‘ಕನ್ನಡಿಗರ ಆಶೀರ್ವಾದದಿಂದ ನಾನು ಆರೋಗ್ಯವಾಗಿದ್ದೇನೆ. ಯಾರೋ ಕಿಡಿಗೇಡಿಗಳು ಹೀಗೆ ಸುಳ್ಳು ಮಾಹಿತಿ ಹಬ್ಬಿಸಿದ್ದಾರೆ. ಅಭಿಮಾನಿಗಳಿಂದ, ಮಾಧ್ಯಮದವರಿಂದ, ಸ್ನೇಹಿತರಿಂದ ನೂರಾರು ಫೋನ್ ಕರೆಗಳು ಬರುತ್ತಿವೆ. ಯಾರೂ ಆತಂಕಪಡುವ ಅವಶ್ಯಕತೆ ಇಲ್ಲ’ ಎಂದು ಅವರು ಹೇಳಿದ್ದರು.
ಇದನ್ನೂ ಓದಿ:
ಅಂಬರೀಷ್ ಸ್ಮಾರಕ ಪತ್ರವನ್ನು ಕುಮಾರಸ್ವಾಮಿ ಎಸೆದಿದ್ದರು; ದೊಡ್ಡಣ್ಣ
‘ಅಂಬರೀಷ್ ಏನು ಮಾಡಿದ್ದಾನೆ ಎಂದು ಸ್ಮಾರಕ ಮಾಡಬೇಕು?’; ಕುಮಾರಸ್ವಾಮಿ ಇದೇ ಮಾತನ್ನು ಹೇಳಿದ್ದರು; ದೊಡ್ಡಣ್ಣ ಆರೋಪ
Published On - 12:58 pm, Thu, 26 August 21