AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ರೆಹಮಾನ್ ಡಕಾಯಿತ್ ಪಾತ್ರದಲ್ಲಿ ನೀವೇ ನಟಿಸಬೇಕಿತ್ತು’; ಶಿವಣ್ಣನ ಎದುರು ಫ್ಯಾನ್ಸ್ ಬೇಡಿಕೆ ಇಟ್ಟಿದ್ದೇಕೆ?

ಶಿವರಾಜ್‌ಕುಮಾರ್ ಅವರ ಡ್ಯಾನ್ಸ್‌ ವೈರಲ್ ಆಗಿದೆ. ಅದನ್ನು ನೋಡಿದ ಅಭಿಮಾನಿಗಳು ‘ಧುರಂಧರ್’ ಚಿತ್ರದ ರೆಹಮಾನ್ ಡಕಾಯಿತ್ ಪಾತ್ರದಲ್ಲಿ ಅವರೇ ನಟಿಸಬೇಕಿತ್ತು ಎಂದು ಬಯಸಿದ್ದಾರೆ. ಶಿವಣ್ಣ ತಮ್ಮ ಮಾಸ್ ಪಾತ್ರಗಳು ಹಾಗೂ ಡ್ಯಾನ್ಸ್​‌ಗೆ ಹೆಸರುವಾಸಿ. ಈ ಪಾತ್ರದ ಮೂಲಕ ಅವರು ದಕ್ಷಿಣ ಭಾರತದಾದ್ಯಂತ ಚಿತ್ರಕ್ಕೆ ಇನ್ನಷ್ಟು ಜನಪ್ರಿಯತೆ ತರಬಲ್ಲರು ಎಂಬುದು ಅಭಿಮಾನಿಗಳ ಅಭಿಪ್ರಾಯ.

‘ರೆಹಮಾನ್ ಡಕಾಯಿತ್ ಪಾತ್ರದಲ್ಲಿ ನೀವೇ ನಟಿಸಬೇಕಿತ್ತು’; ಶಿವಣ್ಣನ ಎದುರು ಫ್ಯಾನ್ಸ್ ಬೇಡಿಕೆ ಇಟ್ಟಿದ್ದೇಕೆ?
ಶಿವಣ್ಣ-ರೆಹಮಾನ್
ರಾಜೇಶ್ ದುಗ್ಗುಮನೆ
|

Updated on:Apr 18, 2026 | 7:06 AM

Share

ಕನ್ನಡದ ನಟ ಶಿವರಾಜ್​​ಕುಮಾರ್ ಅವರು (Shiva Rajkumar) ವಿವಿಧ ರೀತಿಯ ಪಾತ್ರಗಳ ಮೂಲಕ ಜನರ ಗಮನ ಸೆಳೆದಿದ್ದಾರೆ. ಓಂ ಚಿತ್ರದಲ್ಲಿ ಲಾಂಗ್ ಹಿಡಿದು ಮಿಂಚಿದ್ದರು. ಆ ಬಳಿಕ ಅವರಿಗೂ ಮಚ್ಚಿಗೂ ಒಂದು ನಂಟು ಬೆಳೆಯಿತು. ಈ ರೀತಿಯ ಪಾತ್ರಗಳು ಶಿವಣ್ಣಗೆ ಹೆಚ್ಚು ಹೊಂದುತ್ತವೆ. ಶಿವಣ್ಣ ಓರ್ವ ಅದ್ಭುತ ಡ್ಯಾನ್ಸರ್ ಕೂಡ ಹೌದು. ಇತ್ತೀಚೆಗೆ ಅವರು ಡ್ಯಾನ್ಸ್ ಮಾಡಿದ ವಿಡಿಯೋ ವೈರಲ್ ಆಗಿದೆ. ಇದನ್ನು ನೋಡಿದ ಬಳಿಕ ಅನೇಕರು ‘ರೆಹಮಾನ್ ಡಕಾಯಿತ್ ಪಾತ್ರದಲ್ಲಿ ನೀವೇ ನಟಿಸಬೇಕಿತ್ತು’ ಎಂದು ಕಮೆಂಟ್ ಮಾಡಿದ್ದಾರೆ.

‘ಧುರಂಧರ್’ ಚಿತ್ರದಲ್ಲಿ ರೆಹಮಾನ್ ಡಕಾಯಿತ್ ಪಾತ್ರದಲ್ಲಿ ಅಕ್ಷಯ್ ಖನ್ನಾ ನಟಿಸಿದ್ದಾರೆ. ಈ ಪಾತ್ರ ಸಾಕಷ್ಟು ಗಮನ ಸೆಳೆದಿದೆ. ಅಕ್ಷಯ್ ಖನ್ನಾ ಅವರ ಡ್ಯಾನ್ಸ್ ವಿಡಿಯೋ ಅಂತೂ ಮನೆ ಮಾತಾಯಿತು. ಹೋದಲ್ಲಿ ಬಂದಲ್ಲಿ, ಈ ಹಾಡಿನ ಬಗ್ಗೆ ಎಲ್ಲರೂ ಮಾತನಾಡಿದರು. ಇನ್​​ಸ್ಟಾಗ್ರಾಮ್ ರೀಲ್ಸ್​​ನಲ್ಲಿ ಇದರದ್ದೇ ಚರ್ಚೆ ನಡೆಯಿತು. ಈಗ ಈ ಹಾಡಿಗೆ ಶಿವಣ್ಣ ಡ್ಯಾನ್ಸ್ ಮಾಡಿದ್ದಾರೆ.

ಕುಮಾರ್ ಗೌಡ ಎಂಬುವವರು ಈ ವಿಡಿಯೋನ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇದಕ್ಕೆ ಅವರು ‘ನನ್ನ ಜನ್ಮದಿನದ ಸಂಭ್ರಮಾಚರಣೆ’ ಎಂದು ಕ್ಯಾಪ್ಶನ್ ನೀಡಿದ್ದಾರೆ. ಕುಮಾರ್ ಜನ್ಮದಿನಕ್ಕೆ ಶಿವಣ್ಣ ಕೂಡ ಬಂದಿದ್ದರು. ಈ ವೇಳೆ ‘ಧುರಂಧರ್’ ಚಿತ್ರದಲ್ಲಿ ಅಕ್ಷಯ್ ಖನ್ನಾ ಡ್ಯಾನ್ಸ್ ಮಾಡಿದ ಹಾಡನ್ನು ಪ್ಲೇ ಮಾಡಲಾಗಿದೆ. ಇದಕ್ಕೆ ಶಿವಣ್ಣ ಸಖತ್ ಆಗಿ ಸ್ಟೆಪ್ ಹಾಕಿದ್ದಾರೆ.

ಇದನ್ನೂ ಓದಿ: ಹಂಪಿ ಉತ್ಸವದಲ್ಲಿ ಡ್ಯಾನ್ಸ್ ಮಾಡಿ ರಂಜಿಸಿದ ಶಿವರಾಜ್​​ಕುಮಾರ್

ಈ ವಿಡಿಯೋ ನೋಡಿದ ಬಳಿಕ, ‘ಧುರಂಧರ್’ ಚಿತ್ರದಲ್ಲಿ ರೆಹಮಾನ್ ಡಕಾಯಿತ್ ಪಾತ್ರವನ್ನು ಶಿವಣ್ಣ ಮಾಡಬೇಕಿತ್ತು ಎಂದು ಅನೇಕರು ಹೇಳಿದ್ದಾರೆ. ಶಿವರಾಜ್​​ಕುಮಾರ್ ಅವರು ಕನ್ನಡ, ತೆಲುಗು, ತಮಿಳು ಮೊದಲಾದ ಭಾಷೆಯಲ್ಲಿ ಚಿರಪರಿಚಿತರು. ಅವರು ರೆಹಮಾನ್ ಡಕಾಯಿತ್ ಪಾತ್ರದಲ್ಲಿ ನಟಿಸಿದ್ದರೆ, ದಕ್ಷಿಣ ಭಾರತದಲ್ಲಿ ‘ಧುರಂಧರ್’ ಸಿನಿಮಾ ಮತ್ತಷ್ಟು ಕಲೆಕ್ಷನ್ ಮಾಡಲು ಸಹಕಾರಿ ಆಗುತ್ತಿತ್ತು. ಅವರಿಗೆ ಈಗ ತೆಲುಗು, ತಮಿಳಿನಿಂದ ಆಫರ್ ಬರುತ್ತಿವೆ. ಶೀಘ್ರವೇ ಅವರು ಬಾಲಿವುಡ್​​ಗೂ ಎಂಟ್ರಿ ಕೊಡಬಹುದು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 7:03 am, Sat, 18 April 26

Follow Us
ಬಿಎಸ್​ವೈ ಅಭಿಮಾನೋತ್ಸವಕ್ಕೆ ಸಜ್ಜಾದ ಚಿತ್ರದುರ್ಗ: ಕೇಸರಿಮಯವಾದ ನಗರ
ಬಿಎಸ್​ವೈ ಅಭಿಮಾನೋತ್ಸವಕ್ಕೆ ಸಜ್ಜಾದ ಚಿತ್ರದುರ್ಗ: ಕೇಸರಿಮಯವಾದ ನಗರ
ಸರ್ಕಾರ ರಚನೆಗೆ ವಿಜಯ್​ ಕಸರತ್ತು: ತಮಿಳುನಾಡಿನಲ್ಲಿ ಏನೇನಾಗ್ತಿದೆ ನೋಡಿ!
ಸರ್ಕಾರ ರಚನೆಗೆ ವಿಜಯ್​ ಕಸರತ್ತು: ತಮಿಳುನಾಡಿನಲ್ಲಿ ಏನೇನಾಗ್ತಿದೆ ನೋಡಿ!
ಕೊಬ್ಬರಿ ಎಣ್ಣೆ ದೀಪ ಹಚ್ಚುವುದರಿಂದ ತುಂಬಾ ಒಳ್ಳೇದು! ಯಾಕೆ ಗೊತ್ತಾ?
ಕೊಬ್ಬರಿ ಎಣ್ಣೆ ದೀಪ ಹಚ್ಚುವುದರಿಂದ ತುಂಬಾ ಒಳ್ಳೇದು! ಯಾಕೆ ಗೊತ್ತಾ?
ಇಂದು ಈ ರಾಶಿಯವರು ಧಾರ್ಮಿಕ ಕಾರ್ಯಗಳಲ್ಲಿ ಹೆಚ್ಚಾಗಿ ಭಾಗಿಯಾಗಬೇಕು
ಇಂದು ಈ ರಾಶಿಯವರು ಧಾರ್ಮಿಕ ಕಾರ್ಯಗಳಲ್ಲಿ ಹೆಚ್ಚಾಗಿ ಭಾಗಿಯಾಗಬೇಕು
ವೇಗದ ಶತಕ ಬಾರಿಸಿದ ಮಿಚೆಲ್ ಮಾರ್ಷ್
ವೇಗದ ಶತಕ ಬಾರಿಸಿದ ಮಿಚೆಲ್ ಮಾರ್ಷ್
ಕಲಬುರಗಿ: 1.44 ಕೋಟಿ ರೂ ಮೌಲ್ಯದ ಫೋನ್‌ ಪತ್ತೆ ಮಾಡಿದ್ಹೇಗೆ ಗೊತ್ತಾ?
ಕಲಬುರಗಿ: 1.44 ಕೋಟಿ ರೂ ಮೌಲ್ಯದ ಫೋನ್‌ ಪತ್ತೆ ಮಾಡಿದ್ಹೇಗೆ ಗೊತ್ತಾ?
ಫೋನ್‌ ಕಳೆದುಕೊಂಡು ವ್ಯಕ್ತಿ ಮಾಡಿದ್ದೇನು? ಅನುಭವದ ಮಾತು ಕೇಳಿ
ಫೋನ್‌ ಕಳೆದುಕೊಂಡು ವ್ಯಕ್ತಿ ಮಾಡಿದ್ದೇನು? ಅನುಭವದ ಮಾತು ಕೇಳಿ
ಮೇ 10ರವರೆಗೆ ಚೆನ್ನೈನಲ್ಲೇ ಇರಿ; ಡಿಎಂಕೆ ಶಾಸಕರಿಗೆ ಸ್ಟಾಲಿನ್ ಆದೇಶ
ಮೇ 10ರವರೆಗೆ ಚೆನ್ನೈನಲ್ಲೇ ಇರಿ; ಡಿಎಂಕೆ ಶಾಸಕರಿಗೆ ಸ್ಟಾಲಿನ್ ಆದೇಶ
ಡಾಲಿ ಧನಂಜಯ್ ಪುತ್ರನಿಗಾಗಿ ಕಲಘಟಗಿ ತೊಟ್ಟಿಲು: ವಿಶೇಷತೆ ತಿಳಿಸಿದ ಸಾಹುಕಾರ್
ಡಾಲಿ ಧನಂಜಯ್ ಪುತ್ರನಿಗಾಗಿ ಕಲಘಟಗಿ ತೊಟ್ಟಿಲು: ವಿಶೇಷತೆ ತಿಳಿಸಿದ ಸಾಹುಕಾರ್
ಕೈಗಾ ಅಣುಸ್ಥಾವರದ ರಕ್ಷಾ ಕವಚ‌ ಹೊತ್ತು ತರುತ್ತಿದ್ದ ವಾಹನ ಪಲ್ಟಿ
ಕೈಗಾ ಅಣುಸ್ಥಾವರದ ರಕ್ಷಾ ಕವಚ‌ ಹೊತ್ತು ತರುತ್ತಿದ್ದ ವಾಹನ ಪಲ್ಟಿ