ಶಿವರಾಜ್​ಕುಮಾರ್-ಗೀತಾ ಪ್ರೇಮ ನೋಡಿ ಆ ವ್ಯಕ್ತಿಗೆ ನಿಜಕ್ಕೂ ಶಾಕ್ ಆಗಿತ್ತು..

ಶಿವರಾಜ್‌ಕುಮಾರ್ ಮತ್ತು ಗೀತಾ ಶಿವರಾಜ್‌ಕುಮಾರ್ 39 ವರ್ಷಗಳ ಕಾಲ ದಾಂಪತ್ಯ ಜೀವನ ನಡೆಸಿದ್ದಾರೆ. ಅವರ ಮಿಯಾಮಿ ಪ್ರವಾಸದಲ್ಲಿ ನಡೆದ ಘಟನೆ ಮತ್ತು ವಿಮಾನ ನಿಲ್ದಾಣದಲ್ಲಿ ನಡೆದ ಒಂದು ಘಟನೆಯನ್ನು ಶಿವಣ್ಣ ವಿವರಿಸಿದ್ದಾರೆ. ಅವರ ಪ್ರೀತಿಯು ದಿನ ಕಳೆದಂತೆ ಬಲಗೊಳ್ಳುತ್ತಿದೆ ಎಂಬುದನ್ನು ಅವರ ಮಾತುಗಳು ಸಾಬೀತುಪಡಿಸುತ್ತವೆ.

ಶಿವರಾಜ್​ಕುಮಾರ್-ಗೀತಾ ಪ್ರೇಮ ನೋಡಿ ಆ ವ್ಯಕ್ತಿಗೆ ನಿಜಕ್ಕೂ ಶಾಕ್ ಆಗಿತ್ತು..
ಶಿವಣ್ಣ-ಗೀತಾ
Updated By: ರಾಜೇಶ್ ದುಗ್ಗುಮನೆ

Updated on: Apr 21, 2025 | 9:28 AM

ಶಿವರಾಜ್​ಕುಮಾರ್ (Shiva Rajkumar) ಹಾಗೂ ಗೀತಾ ಶಿವರಾಜ್​ಕುಮಾರ್ ಅವರದ್ದು ಪ್ರೇಮ ವಿವಾಹ. ಇಬ್ಬರೂ ಪ್ರೀತಿಸಿ ಮದುವೆ ಆದರು. ಈಗ ಇವರು ಹಾಯಾಗಿ ಸಂಸಾರ ನಡೆಸುತ್ತಾ ಇದ್ದಾರೆ. ಈ ದಂಪತಿಗಳ ಸಂಬಂಧ ದಿನ ಕಳೆದಂತೆ ಮತ್ತಷ್ಟು ಗಟ್ಟಿ ಆಗುತ್ತಾ ಇದೆ. ಶಿವರಾಜ್​ಕುಮಾರ್-ಗೀತಾ ಅವರು ಇತ್ತೀಚೆಗೆ ಮಿಯಾಮಿಗೆ ತೆರಳಿದ್ದರು. ಅಲ್ಲಿ ಕ್ಯಾನ್ಸರ್​ಗೆ ಚಿಕಿತ್ಸೆ ಪಡೆದು ಬಂದಿದ್ದರು. ಅವರು ಈಗ ಕ್ಯಾನ್ಸರ್ ಮುಕ್ತರಾಗಿದ್ದಾರೆ. ಅಲ್ಲಿ ಹೋಗಿ ಅವರು ಮರು ಜೀವ ಪಡೆದು ಬಂದರು. ಈ ವೇಳೆ ಅಲ್ಲಿ ನಡೆದ ಘಟನೆ ಬಗ್ಗೆ ಅವರು ಮಾತನಾಡಿದ್ದಾರೆ.

ಶಿವರಾಜ್​ಕುಮಾರ್ ಅವರು ಕಳೆದ ವಾರ ‘ಸರಿಗಮಪ’ ವೇದಿಕೆ ಏರಿದ್ದಾರೆ. ಈ ವೇಳೆ ಅವರು ಮಾತನಾಡಿದ್ದಾರೆ. ‘ಮಿಯಾಮಿಯಿಂದ ವಾಪಸ್ ಬರುತ್ತಿದೆ. ಲಾಂಗ್ ಫ್ಲೈಟ್. ಏರ್​ಪೋರ್ಟ್​ನಲ್ಲಿ ವಾಶ್​ರೂಂನಲ್ಲಿದ್ದೆ. ಗೀತಾ ಅವರು ಬಂದು ಹೊರಗೆ ಕಾಯುತ್ತಾ ಇದ್ದರು. ಆಗ ಸ್ಟೀವರ್ಡ್​ ಬಂದು ಇಲ್ಲೇಕೆ ನಿಂತಿದ್ದೀರಾ ಎಂದು ಗೀತಾ ಬಳಿ ಕೇಳಿದರು. ಹಸ್ಬಂಡ್ ಒಳಗೆ ಹೋಗಿದ್ದಾರೆ ವೇಟ್ ಮಾಡ್ತಾ ಇದೀನಿ ಎಂದರು ಗೀತಾ. ಬರ್ತಾರೆ ಹೋಗಿ ಎಂದರರು. ಅವರಿಗೆ ಸರ್ಜರಿ ಆಗಿದೆ ಅದಕ್ಕೆ ಇಲ್ಲಿದೀನಿ ಎಂದು ಗೀತಾ ವಿವರಿಸಿದರು’ ಎಂದಿದ್ದಾರೆ ಶಿವಣ್ಣ.

ಇದನ್ನೂ ಓದಿ
ರಾವಣನಾಗಿ ‘ರಾಮಾಯಣ’ ಆರಂಭಿಸುವುದಕ್ಕೂ ಮೊದಲು ಮಹತ್ವದ ಕೆಲಸ ಮಾಡಿದ ಯಶ್  
ಫ್ಯಾನ್ಸಿ ಹೆಸರಲ್ಲ.. ಮಗನಿಗೆ ಪೌರಾಣಿಕ ಪಾತ್ರದ ಹೆಸರಿಟ್ಟ ಪ್ರಣಿತಾ ಸುಭಾಷ್
ಭೀಕರ ಅಪಘಾತಕ್ಕೆ ಒಳಗಾದ ನಟ ಅಜಿತ್ ಕುಮಾರ್; ಶಾಕಿಂಗ್ ವಿಡಿಯೋ ವೈರಲ್
ಪ್ರಿಯಾಂಕಾ ಪತಿ ನಿಕ್ ಜೋನಸ್​ನ ಭೇಟಿ ಮಾಡಿದ ಸಿತಾರಾ ಕುಟುಂಬ

‘ಎಷ್ಟು ವರ್ಷ ಆಯ್ತು ಮದುವೆ ಆಗಿ ಎಂದು ಅವರು ಕೇಳಿದರು. ಗೀತಾ ಅವರು 39 ವರ್ಷ ಎಂದರು. ಮದುವೆ ಆಗಿ ಇಷ್ಟು ವರ್ಷ ಆದರೂ ಈ ರೀತಿ ಇದೀರಾ, ಇಷ್ಟು ಪ್ರೀತಿಸುತ್ತೀರಾ ಎಂದು ಅವರು ಕೇಳಿದರು. ಅವರಿಗೆ ನಂಬೋಕೆ ಆಗಲೇ ಇಲ್ಲ. ಸಾಧ್ಯವೇ ಇಲ್ಲ ಎಂದು ಗೋಡೆಗೆ ಕೈ ಚಚ್ಚಿಕೊಂಡರು’ ಎಂದಿದ್ದಾರೆ ಶಿವರಾಜ್​ಕುಮಾರ್.

ಶಿವರಾಜ್​ಕುಮಾರ್ ಅವರನ್ನು ಪ್ರತಿ ಹಂತದಲ್ಲೂ ಗೀತಾ ಅವರು ಬೆಂಬಲಿಸುತ್ತಾ ಬಂದಿದ್ದಾರೆ. ಅದರಲ್ಲೂ ಕ್ಯಾನ್ಸರ್ ಎಂಬುದು ಗೊತ್ತಾದಾಗ ಶಿವರಾಜ್​ಕುಮಾರ್ ಅವರು ನಡುಗಿ ಹೋದರು. ಆಗ ಅವರನ್ನು ಬೆಂಬಲಿಸಿ ಜೊತೆಗೆ ಇದ್ದಿದ್ದು ಗೀತಾ ಅವರೇ ಆಗಿದ್ದರು. ಈ ಬಗ್ಗೆ ಅವರು ಅನೇಕ ಬಾರಿ ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: ಶಿವರಾಜ್​​ಕುಮಾರ್ ಅವರನ್ನು ಬಾಯ್ತುಂಬ ಹೊಗಳಿದ ಅನುಶ್ರೀ; ಶಿವಣ್ಣನ ರಿಯಾಕ್ಷನ್ ಹೇಗಿತ್ತು ನೋಡಿ

ಶಿವರಾಜ್​​ಕುಮಾರ್ 1986ರಲ್ಲಿ ವಿವಾಹ ಆದರು. 2026ಕ್ಕೆ ಅವರ ವಿವಾಹ ಆಗಿ 40 ವರ್ಷಗಳು ಪೂರ್ಣಗೊಳ್ಳಲಿದೆ. ಅವರ ದಾಂಪತ್ಯಕ್ಕೆ ಹೀಗೆ ಇನ್ನೂ ಹಲವು ವರ್ಷಗಳ ಕಾಲ ಇರಲಿ ಎಂದು ಫ್ಯಾನ್ಸ್ ಹಾರೈಸುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 7:51 am, Mon, 21 April 25