AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೀಟೂ ಕೇಸ್​ನಲ್ಲಿ ಅರ್ಜುನ್​ ಸರ್ಜಾಗೆ ರಿಲೀಫ್​; ಶ್ರುತಿ ಹರಿಹರನ್​ ಮಾಡಿದ್ದ ಆರೋಪಕ್ಕೆ ಸಾಕ್ಷಿಯೇ ಸಿಕ್ಕಿಲ್ಲ?

‘ವಿಸ್ಮಯ’ ಸಿನಿಮಾ ಚಿತ್ರೀಕರಣ ವೇಳೆ ಅರ್ಜುನ್​ ಸರ್ಜಾ ಅವರಿಂದ ತಮಗೆ ಲೈಂಗಿಕ ಕಿರುಕುಳ ಆಗಿತ್ತು ಎಂದು ಶ್ರುತಿ ಹರಿಹರನ್​ ಆರೋಪಿಸಿದ್ದರು. ಮೂರು ವರ್ಷ ಕಳೆದರೂ ಈ ಕೇಸ್​ನಲ್ಲಿ ಸೂಕ್ತ ಸಾಕ್ಷಿ ಸಿಕ್ಕಿಲ್ಲ ಎನ್ನಲಾಗಿದೆ.

ಮೀಟೂ ಕೇಸ್​ನಲ್ಲಿ ಅರ್ಜುನ್​ ಸರ್ಜಾಗೆ ರಿಲೀಫ್​; ಶ್ರುತಿ ಹರಿಹರನ್​ ಮಾಡಿದ್ದ ಆರೋಪಕ್ಕೆ ಸಾಕ್ಷಿಯೇ ಸಿಕ್ಕಿಲ್ಲ?
ಅರ್ಜುನ್ ಸರ್ಜಾ, ಶ್ರುತಿ ಹರಿಹರನ್​
TV9 Web
| Updated By: ಮದನ್​ ಕುಮಾರ್​|

Updated on:Nov 28, 2021 | 10:11 AM

Share

ಚಿತ್ರರಂಗದಲ್ಲಿ ತಲ್ಲಣ ಸೃಷ್ಟಿ ಮಾಡಿದ್ದ ಮೀಟೂ (Me Too) ಕೇಸ್​ನಲ್ಲಿ ನಟಿ ಶ್ರುತಿ ಹರಿಹರನ್​ (Sruthi Hariharan) ಅವರಿಗೆ ಹಿನ್ನಡೆ ಆಗಿದೆ. ಕೇಸ್​ ದಾಖಲಾಗಿ ಮೂರು ವರ್ಷ ಕಳೆದರೂ ನಟ ಅರ್ಜುನ್​ ಸರ್ಜಾ (Arjun Sarja) ವಿರುದ್ಧ ಸೂಕ್ತ ಸಾಕ್ಷಿ ಸಿಕ್ಕಿಲ್ಲ. ಆ ಕಾರಣದಿಂದ ಕಬ್ಬನ್​ ಪಾರ್ಕ್​ ಪೊಲೀಸರು (Cubbon Park Police) ಬಿ ರಿಪೋರ್ಟ್​ (B report) ಸಿದ್ಧಪಡಿಸಲು ನಿರ್ಧರಿಸಿದ್ದಾರೆ. ಈ ಸಂಬಂಧ ಶ್ರುತಿ ಹರಿಹರನ್​ ಅವರಿಗೆ ನೋಟಿಸ್​ ಜಾರಿ ಮಾಡಲಾಗಿದೆ ಎಂಬ ಮಾಹಿತಿ ಸಿಕ್ಕಿದೆ. CRPC ನಿಯಮಾನುಸಾರ ಫಾರ್ಮ್​ ನಂಬರ್ 159ರ ಅಡಿಯಲ್ಲಿ ನೋಟಿಸ್ ನೀಡಲಾಗಿದೆ. ‘ವಿಸ್ಮಯ’ ಸಿನಿಮಾ ಚಿತ್ರೀಕರಣ ವೇಳೆ ಅರ್ಜುನ್​ ಸರ್ಜಾ ಅವರಿಂದ ತಮಗೆ ಲೈಂಗಿಕ ಕಿರುಕುಳ ಆಗಿತ್ತು ಎಂದು ಶ್ರುತಿ ಹರಿಹರನ್​ ಆರೋಪಿಸಿದ್ದರು. ಆದರೆ ಸೂಕ್ತ ಸಾಕ್ಷಿ ಸಿಗದ ಕಾರಣ ಅರ್ಜುನ್​ ಸರ್ಜಾ ಅವರಿಗೆ ಈ ಕೇಸ್​ನಿಂದ ಬಿಗ್​ ರಿಲೀಫ್​ ಸಿಗುವ ಸಾಧ್ಯತೆ ದಟ್ಟವಾಗಿದೆ.

ಅರುಣ್​ ವೈದ್ಯನಾಥನ್​ ನಿರ್ದೇಶನದ ‘ವಿಸ್ಮಯ’ ಸಿನಿಮಾದಲ್ಲಿ ಶ್ರುತಿ ಹರಿಹರನ್​ ಮತ್ತು ಅರ್ಜುನ್​ ಸರ್ಜಾ ಅವರು ಗಂಡ-ಹೆಂಡತಿ ಪಾತ್ರದಲ್ಲಿ ನಟಿಸಿದ್ದರು. ಚಿತ್ರೀಕರಣದ ವೇಳೆ ಅರ್ಜುನ್​ ಸರ್ಜಾ ಅವರು ತಮ್ಮ ಮೇಲೆ ಲೈಂಗಿಕ ಕಿರುಕುಳ ನೀಡಿದ್ದರು ಎಂದು ಶ್ರುತಿ ಹರಿಹರನ್​ ಆರೋಪ ಹೊರಿಸಿದ ಬಳಿಕ ಇಡೀ ಸ್ಯಾಂಡಲ್​ವುಡ್​ನಲ್ಲಿ ವಿವಾದದ ಬೆಂಕಿ ಹೊತ್ತಿಕೊಂಡಿತ್ತು. ಕೆಲವರು ಶ್ರುತಿ ಪರವಾಗಿ ಮಾತನಾಡಿದ್ದರೆ, ಅನೇಕರು ಅರ್ಜುನ್​ ಸರ್ಜಾಗೆ ಬೆಂಬಲ ನೀಡಿದ್ದರು. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಈ ಬಗ್ಗೆ ಸಭೆ ನಡೆಸಲಾಗಿತ್ತು.

2018ರಲ್ಲಿ ಈ ವಿವಾದ ಬಗೆಹರಿಸಲು ‘ರೆಬೆಲ್​ ಸ್ಟಾರ್​’ ಅಂಬರೀಷ್​ ನೇತೃತ್ವದಲ್ಲಿ ಸಭೆ ಕರೆಯಲಾಗಿತ್ತು. ಆದರೆ ಶ್ರುತಿ ಹರಿಹರನ್​ ಅವರು ಸಭೆಯ ಅರ್ಧದಲ್ಲೇ ಹೊರ ನಡೆದಿದ್ದರು. ಕಾನೂನಿನ ಮೂಲಕವೇ ನ್ಯಾಯ ಪಡೆಯುವುದಾಗಿ ಅವರು ಹೇಳಿದ್ದರು. ಕಬ್ಬನ್​ ಪಾರ್ಕ್​ ಪೊಲೀಸ್​ ಠಾಣೆಯಲ್ಲಿ ಅರ್ಜುನ್​ ಸರ್ಜಾ ವಿರುದ್ಧ ದೂರು ನೀಡಿದ್ದರು. ಮಹಿಳೆಯ ಗೌರವಕ್ಕೆ ಧಕ್ಕೆ (354, 509), ಲೈಂಗಿಕ ಕಿರುಕುಳ (ಐಪಿಸಿ 354ಎ) ಹಾಗೂ ಜೀವಬೆದರಿಕೆ (ಐಪಿಸಿ 506) ಆರೋಪದಡಿ ಕೇಸ್ ದಾಖಲಾಗಿತ್ತು. ಸಾಕ್ಷಿಗಾಗಿ ಯುಬಿ ಸಿಟಿ, ದೇವನಹಳ್ಳಿ ಹಾಗು ಇತರೆ ಜಾಗದಲ್ಲಿ ಪೊಲೀಸರು ಪರಿಶೀಲನೆ ನಡೆಸಿದ್ದರು. ಮೂರು ವರ್ಷ ಕಳೆದರೂ ಶ್ರುತಿ ಹರಿಹರನ್​ ಮಾಡಿದ್ದ ಆರೋಪಕ್ಕೆ ಸೂಕ್ತ ಸಾಕ್ಷಿ ಸಿಕ್ಕಿಲ್ಲ. ಹಾಗಾಗಿ ಬಿ ರಿಪೋರ್ಟ್​ ನೀಡಲು ಪೊಲೀಸರು ಸಿದ್ಧರಾಗಿದ್ದಾರೆ ಎಂಬ ಮಾಹಿತಿ ಕೇಳಿಬಂದಿದೆ.

ಪ್ರಕರಣವೊಂದರ ತನಿಖೆ ಸಮಯದಲ್ಲಿ ಆರೋಪಿಯನ್ನು ವಿಚಾರಣೆಗೆ ಗುರಿಪಡಿಸಲು ಅಗತ್ಯ ಇರುವಷ್ಟು ಸಾಕ್ಷ್ಯಾಧಾರಗಳು ಸಿಗಲಿಲ್ಲ ಎಂದು ವಿಚಾರಣಾ ನ್ಯಾಯಾಲಯಕ್ಕೆ ಪೊಲೀಸರು ಸಲ್ಲಿಸುವ ಅಂತಿಮ ವರದಿಯೇ ಬಿ ರಿಪೋರ್ಟ್‌.

ಇದನ್ನೂ ಓದಿ:

ಡ್ರಗ್ಸ್​ ಕೇಸ್​ನಲ್ಲಿ ಸಿಕ್ಕಿಬಿದ್ದ ಮಗನ ಜತೆ ಹೆಮ್ಮೆಯಿಂದ ಪೋಸ್​ ಕೊಟ್ಟ ತಂದೆ; ನಗೆಪಾಟಲಿನ ವಿಡಿಯೋ ವೈರಲ್​

ಮೇಘನಾ ರಾಜ್​ ಚಿರಂಜೀವಿ ಸರ್ಜಾ ಪುತ್ರ ಜ್ಯೂ. ಚಿರು ಜೊತೆ ಅರ್ಜುನ್​ ಸರ್ಜಾ ಫೋಟೋ ವೈರಲ್

Published On - 9:19 am, Sun, 28 November 21