ಗಣಪತಿ ಹಬ್ಬದ ಸಂಭ್ರಮದಲ್ಲಿ ‘ಸು ಫ್ರಮ್ ಸೋ’ ವೇಶ; ಬಾವ-ಗುರೂಜಿ ಹೈಲೈಟ್
‘ಸು ಫ್ರಮ್ ಸೋ’ ಸಿನಿಮಾದ ಭರ್ಜರಿ ಯಶಸ್ಸಿನ ನಂತರ, ಅದರ ಪ್ರಮುಖ ಪಾತ್ರಗಳಾದ ಬಾವ, ಗುರೂಜಿ ಮತ್ತು ಅಶೋಕರನ್ನು ಕರಾವಳಿಯ ಜನರು ಗಣೇಶ ಚತುರ್ಥಿಯ ಸಂದರ್ಭದಲ್ಲಿ ಅದ್ಭುತವಾಗಿ ಅನುಕರಿಸಿದ್ದಾರೆ. ಈ ವಿಡಿಯೋಗಳು ವೈರಲ್ ಆಗಿದ್ದು, ಫ್ಯಾನ್ಸ್‌ಗಳು ತಮ್ಮ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ. ಚಿತ್ರದ ಜನಪ್ರಿಯತೆಯನ್ನು ಇದು ಸಾಬೀತುಪಡಿಸುತ್ತದೆ.

ರಾಜ್ ಬಿ. ಶೆಟ್ಟಿ ನಿರ್ಮಾಣದ ‘ಸು ಫ್ರಮ್ ಸೋ’ ಸಿನಿಮಾ (Su From So Movie) ಸೂಪರ್ ಹಿಟ್ ಆಗಿದೆ. ಈ ಚಿತ್ರದ ಯಶಸ್ಸಿನ ಬೆನ್ನಲ್ಲೇ ರಾಜ್ ಅವರು ಹೊಸ ಸಿನಿಮಾ ಕೆಲಸಗಳಲ್ಲಿ ತೊಡಗಿಕೊಳ್ಳಬೇಕಿದೆ. ಈ ಮಧ್ಯೆ ಕರಾವಳಿಯಲ್ಲಿ ‘ಸು ಫ್ರಮ್ ಸೋ’ದ ಪಾತ್ರಗಳನ್ನು ನಕಲು ಮಾಡಲಾಗಿದೆ. ಈ ವಿಡಿಯೋ ಭರ್ಜರಿಯಾಗಿ ವೈರಲ್ ಆಗಿದೆ. ಇದಕ್ಕೆ ಫ್ಯಾನ್ಸ್ ನಾನಾ ರೀತಿಯಲ್ಲಿ ಕಮೆಂಟ್ ಮಾಡುವ ಕೆಲಸ ಮಾಡಿದ್ದಾರೆ.
‘ಸು ಫ್ರಮ್ ಸೋ’ ಸಿನಿಮಾ ಕರಾವಳಿ ಕಥೆಯನ್ನು ಹೊಂದಿದೆ ಮತ್ತು ಅಲ್ಲಿನ ಸೊಗಡನ್ನು ಬಿಂಬಿಸುತ್ತದೆ. ಈ ಚಿತ್ರದಲ್ಲಿ ಬಾವ, ಗುರೂಜಿ ಹಾಗೂ ಅಶೋಕ ಪಾತ್ರಗಳು ಹೈಲೈಟ್ ಆಗಿದ್ದವು. ಅದೇ ರೀತಿ ಕರಾವಳಿಯಲ್ಲಿ ಗಣೇಶ ಚತುರ್ಥಿ ಸಂದರ್ಭದಲ್ಲಿ ಬಾವ, ಗುರೂಜಿ ಹಾಗೂ ಅಶೋಕನ ಪಾತ್ರದಲ್ಲಿ ಎಲ್ಲರೂ ಮಿಂಚಿದ್ದಾರೆ. ಈ ವಿಡಿಯೋಗಳನ್ನು ಹಂಚಿಕೊಳ್ಳಲಾಗಿದೆ. ಇದನ್ನು ಫ್ಯಾನ್ಸ್ ಕೂಡ ಇಷ್ಟಪಟ್ಟಿದ್ದಾರೆ. ಇದಕ್ಕೆ ನಾನಾ ರೀತಿಯ ಕಮೆಂಟ್ಗಳು ಬಂದಿವೆ.
ಇದನ್ನೂ ಓದಿ: ‘ಸು ಫ್ರಮ್ ಸೋ’ ಒಟಿಟಿ ರಿಲೀಸ್ ದಿನಾಂಕ ರಿವೀಲ್ ಆದರೂ ನಿಂತಿಲ್ಲ ಸಿನಿಮಾ ಕಲೆಕ್ಷನ್
‘ಸು ಫ್ರಮ್ ಸೋ’ ಚಿತ್ರದಲ್ಲಿ ಬಾವನ ಪಾತ್ರ ಸಾಕಷ್ಟು ಗಮನ ಸೆಳೆದಿದೆ. ಅವನು ಇಡೀ ದಿನ ಮದ್ಯ ಸೇವನೆ ಮಾಡಿಕೊಂಡು ತೂರಾಡುತ್ತಾ ಇರುತ್ತಾನೆ. ಈಗ ಇದನ್ನು ಅನುಕರಿಸಲಾಗಿದ್ದು, ಬಾವನ ಪಾತ್ರ ಅದೇ ರೀತಿಯಲ್ಲಿ ಮೂಡಿ ಬಂದಿದೆ. ಗುರೂಜಿ ಪಾತ್ರ ಕೂಡ ಹಾಗೆಯೇ ಇದೆ. ಇಷ್ಟೇ ಅಲ್ಲ, ಕ್ಲೈಮ್ಯಾಕ್ಸ್ ವೇಳೆ ಅಶೋಕನು ಮುಖಕ್ಕೆ ಅರಿಶಿಣ ಹಚ್ಚಿಕೊಂಡು ಬರುತ್ತಾನೆ. ಇದರಲ್ಲೂ ಅದೇ ರೀತಿಯಲ್ಲಿ ಆಗಮಿಸಲಾಗಿದೆ. ಈ ವಿಡಿಯೋ ಗಮನ ಸೆಳೆಯುವ ರೀತಿಯಲ್ಲಿ ಇದೆ.
View this post on Instagram
‘ಸು ಫ್ರಮ್ ಸೋ’ ಸಿನಿಮಾ ಜುಲೈ 25ರಂದು ರಿಲೀಸ್ ಆಯಿತು. ಈ ಚಿತ್ರವು ಈಗಾಗಲೇ ವಿಶ್ವ ಬಾಕ್ಸ್ ಆಫೀಸ್ನಲ್ಲಿ 100 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿದೆ. ಈ ಚಿತ್ರವನ್ನು ಸಾಕಷ್ಟು ಜನರು ಇಷ್ಟಪಟ್ಟಿದ್ದಾರೆ. ಜನರ ಕಡೆಯಿಂದ ಸಿನಿಮಾಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ರಾಜ್ ಅವರು ಈಗ ಬೇರೆ ಸಿನಿಮಾ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ ಎನ್ನಲಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.







