ಅಭಿಮಾನಿಗಳಿಗೆ ಸಿನಿಮಾ ನೋಡಿ ಎಂದು ಒತ್ತಾಯಿಸುತ್ತಿರಲಿಲ್ಲ ರಾಜ್​ಕುಮಾರ್; ಕಾರಣ ತುಂಬಾ ವಿಚಿತ್ರ

ರಾಜ್ ಕುಮಾರ್ ಅವರು ಕನ್ನಡ ಚಿತ್ರರಂಗದ ದಂತಕಥೆ. ಅವರ ಸಿನಿಮಾಗಳು ಅಪಾರ ಜನಪ್ರಿಯತೆ ಪಡೆದಿದ್ದರೂ, ಅವರು ಎಂದಿಗೂ ಅಭಿಮಾನಿಗಳನ್ನು ತಮ್ಮ ಸಿನಿಮಾ ನೋಡಲು ಒತ್ತಾಯಿಸಲಿಲ್ಲ. ಒಂದು ಹಳೆಯ ಸಂದರ್ಶನದಲ್ಲಿ, ತಮ್ಮ ಸಿನಿಮಾ ನೋಡುವಾಗ ನಾಚಿಕೆಯಾಗುತ್ತದೆ ಎಂದು ಅವರು ಹೇಳಿಕೊಂಡಿದ್ದರು.

ಅಭಿಮಾನಿಗಳಿಗೆ ಸಿನಿಮಾ ನೋಡಿ ಎಂದು ಒತ್ತಾಯಿಸುತ್ತಿರಲಿಲ್ಲ ರಾಜ್​ಕುಮಾರ್; ಕಾರಣ ತುಂಬಾ ವಿಚಿತ್ರ
Follow us
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ

Updated on:Nov 06, 2024 | 7:41 AM

ರಾಜ್​ಕುಮಾರ್ ಅವರು ದೊಡ್ಡ ಮಟ್ಟದಲ್ಲಿ ಹೆಸರು ಮಾಡಿದವರು. ಅವರು ಕನ್ನಡ ಚಿತ್ರರಂಗಕ್ಕೆ ನೀಡಿದ ಕೊಡುಗೆ ತುಂಬಾನೇ ದೊಡ್ಡದು. ಅವರು ಮಾಡಿದ ಬಹುತೇಕ ಸಿನಿಮಾಗಳು ಸೂಪರ್ ಹಿಟ್. 100 ದಿನಗಳು ಓಡಿದ ಸಿನಿಮಾಗಳ ಪಟ್ಟಿ ತುಂಬಾನೇ ದೊಡ್ಡದಿದೆ. ಆದರೆ, ಅವರು ಯಾರ ಬಳಿಯೂ ಸಿನಿಮಾ ನೋಡಿ ಎಂದು ಒತ್ತಾಯ ಮಾಡುತ್ತಿರಲಿಲ್ಲ ಅನ್ನೋದು ಇಲ್ಲಿ ಗಮನಿಸಬೇಕಾದ ವಿಚಾರ. ಈ ಕುರಿತ ಹಳೆಯ ವಿಡಿಯೋ ಒಂದು ವೈರಲ್ ಆಗಿದೆ.

ರಾಜ್​ಕುಮಾರ್ ಅವರು ಹಲವು ವರ್ಷಗಳ ಕಾಲ ಚಿತ್ರರಂಗದಲ್ಲಿ ಆ್ಯಕ್ಟೀವ್ ಆಗಿದ್ದರು. ಅವರ ಸಿನಿಮಾಗಳನ್ನು ಫ್ಯಾನ್ಸ್ ಖುಷಿಖುಷಿಯಿಂದ ನೋಡುತ್ತಿದ್ದರು. ಅವರು ಒಂದೇ ಒಂದು ಸಿನಿಮಾನ ಮಾತ್ರ ಅಭಿಮಾನಿಗಳ ಬಳಿ ನೋಡುವಂತೆ ಕೋರಿದ್ದರು. ಅವರಿಗೆ ಅವರದ್ದೇ ಸಿನಿಮಾಗಳನ್ನು ನೋಡಲು ಬೇಸರ ಆಗುತ್ತಿತ್ತು, ನಾಚಿಕೆ ಆಗುತ್ತಿತ್ತಂತೆ ಅನ್ನೋದು ಗೊತ್ತಾ? ಈ ಬಗ್ಗೆ ಅವರು ಸಂದರ್ಶನ ಒಂದರಲ್ಲಿ ಹೇಳಿಕೊಂಡಿದ್ದರು. ಇದು ವೈರಲ್ ಆಗಿದೆ.

‘ನಾನು 200 ಸಿನಿಮಾಗಳವರೆಗೆ ಅಭಿನಯ ಮಾಡಿದ್ದೇನೆ. ಯಾವ ಚಿತ್ರ ಮೆಚ್ಚುಗೆ ಆಗಿದೆ, ಯಾವ ಸಿನಿಮಾದಲ್ಲಿ ಚೆನ್ನಾಗಿ ಅಭಿನಯಿಸಿದ್ದೀನಿ ಎಂಬ ಉತ್ತರ ಇನ್ನೂ ಸಿಕ್ಕಿಲ್ಲ. ‘ಮಂತ್ರಾಲಯ ಮಹಾತ್ಮೆ’ ಸಿನಿಮಾ ನನಗೆ ಇಷ್ಟವಾದ ಸಿನಿಮಾ. ಅದನ್ನು ಫ್ಯಾನ್ಸ್ ಬಳಿ ನೋಡಿ ಎಂದು ಕೋರಿಕೊಂಡಿದ್ದೆ’ ಎಂದಿದ್ದರು ರಾಜ್​ಕುಮಾರ್.

‘ಉಳಿದ ಯಾವ ಸಿನಿಮಾನ ನೋಡಿ ಎಂದು ಅಭಿಮಾನಿಗಳಿಗೆ ಹೇಳಿಲ್ಲ. ನನ್ನ ಚಿತ್ರವನ್ನು ನಾನೇ ನೋಡೋಕೆ ಆಗಿರಲಿಲ್ಲ. ಇತ್ತೀಚೆಗೆ ನನ್ನ ಸಿನಿಮಾನ ಟಿವಿಯಲ್ಲಿ ನೋಡ್ತಾ ಇದೀನಿ. ಹೀಗೆ ನೋಡುವಾಗ ನಾಚಿಕೆ ಆಗಿ ಎದ್ದು ನಡೆಯುತ್ತೇನೆ. ಮಾಡಿದ ಕರ್ತವ್ಯದಲ್ಲಿ ಲೋಪವೇ ಕಾಣುತ್ತದೆ. ಉತ್ತಮವಾದುದ್ದು ಕಾಣಲ್ಲ. ನನ್ನನ್ನು ಹೊಗಳಿಕೊಳ್ಳೋಕೆ ಬರಲ್ಲ. ಅದಕ್ಕೆ ತುಂಬಾ ಹೆಮ್ಮೆ ಎನಿಸುತ್ತದೆ. ಅದು ನನ್ನ ಅಪ್ಪ ಹೇಳಿಕೊಟ್ಟಿದ್ದು. ಅದನ್ನು ಪಾಲಿಸಿಕೊಂಡು ಬಂದಿದ್ದೇನೆ’ ಎಂದಿದ್ದರು ರಾಜ್​ಕುಮಾರ್.

ಇದನ್ನೂ ಓದಿ: ಗುರುಪ್ರಸಾದ್ ಗಡ್ಡವನ್ನು ಏಕೆ ಬಿಡುತ್ತಿದ್ದರು? ಇದೆ ರಾಜ್​ಕುಮಾರ್ ಕನೆಕ್ಷನ್

ರಾಜ್​ಕುಮಾರ್ ಅವರು ತುಂಬಾನೇ ಶಿಸ್ತಿನಿಂದ ಜೀವನ ನಡೆಸಿದ್ದರು. ಅವರು ಅನೇಕರಿಗೆ ಮಾದರಿ. ಅವರ ಬಗೆಗಿನ ಹಲವು ವಿಚಾರಗಳು ಸೋಶಿಯಲ್ ಮೀಡಿಯಾದಲ್ಲಿ ಆಗಾಗ ವೈರಲ್ ಆಗುತ್ತಾ ಇರುತ್ತವೆ. ಅವರಂತೆ ಅವರ ಮಕ್ಕಳು ಕೂಡ ಇದ್ದಾರೆ. ಪುನೀತ್ ಅವರು ಸರಳತೆಯಿಂದ ನಡೆದುಕೊಳ್ಳುತ್ತಿದ್ದರು. ಶಿವರಾಜ್​ಕುಮಾರ್ ಕೂಡ ಅನೇಕರಿಗೆ ಮಾದರಿ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 7:39 am, Wed, 6 November 24