AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ರಾಜ್ಯೋತ್ಸವ ಪ್ರಶಸ್ತಿ’: ಚಲನಚಿತ್ರ ಕ್ಷೇತ್ರದಲ್ಲಿ ಯಾರಿಗೆ ಸಿಕ್ತು ಗೌರವ

Rajyothsava Award: ಕಲೆ, ಸಾಹಿತ್ಯ, ಸಮಾಜ ಸೇವೆ, ಶಿಕ್ಷಣ, ಸಂಗೀತ ಹೀಗೆ ಹಲವು ವಿಭಾಗಗಳಲ್ಲಿ ಸೇವೆ ಮಾಡಿದ ವಿಶೇಷ ವ್ಯಕ್ತಿಗಳಿಗೆ ಈ ಪ್ರಶಸ್ತಿಯನ್ನು ಘೋಷಿಸಲಾಗಿದ್ದು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಡಗಡಿ ಅವರು ಇಂದು (ಅಕ್ಟೋಬರ್ 30) ಸುದ್ದಿಗೋಷ್ಠಿ ನಡೆಸಿ ಪ್ರಶಸ್ತಿಗಳನ್ನು ಘೋಷಣೆ ಮಾಡಿದ್ದಾರೆ. ಚಲನಚಿತ್ರ ಮತ್ತು ಕಿರುತೆರೆ ವಿಭಾಗದಲ್ಲಿ ಸೇವೆ ಸಲ್ಲಿಸಿದ ಮೂವರಿಗೆ ಪ್ರಶಸ್ತಿ ದೊರಕಿದೆ.

‘ರಾಜ್ಯೋತ್ಸವ ಪ್ರಶಸ್ತಿ’: ಚಲನಚಿತ್ರ ಕ್ಷೇತ್ರದಲ್ಲಿ ಯಾರಿಗೆ ಸಿಕ್ತು ಗೌರವ
Rajyothsava
ಮಂಜುನಾಥ ಸಿ.
|

Updated on: Oct 30, 2026 | 8:55 PM

Share

ರಾಜ್ಯೋತ್ಸವ ಪ್ರಶಸ್ತಿಯನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಘೋಷಣೆ ಮಾಡಿದೆ. ಈ ಬಾರಿ 71 ಮಂದಿಗೆ ರಾಜ್ಯೋತ್ಸವ ಪ್ರಶಸ್ತಿ ಘೋಷಣೆ ಮಾಡಲಾಗಿದೆ. ಕಲೆ, ಸಾಹಿತ್ಯ, ಸಮಾಜ ಸೇವೆ, ಶಿಕ್ಷಣ, ಸಂಗೀತ ಹೀಗೆ ಹಲವು ವಿಭಾಗಗಳಲ್ಲಿ ಸೇವೆ ಮಾಡಿದ ವಿಶೇಷ ವ್ಯಕ್ತಿಗಳಿಗೆ ಈ ಪ್ರಶಸ್ತಿಯನ್ನು ಘೋಷಿಸಲಾಗಿದ್ದು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಡಗಡಿ ಅವರು ಇಂದು (ಅಕ್ಟೋಬರ್ 30) ಸುದ್ದಿಗೋಷ್ಠಿ ನಡೆಸಿ ಪ್ರಶಸ್ತಿಗಳನ್ನು ಘೋಷಣೆ ಮಾಡಿದ್ದಾರೆ. ಚಲನಚಿತ್ರ ಮತ್ತು ಕಿರುತೆರೆ ವಿಭಾಗದಲ್ಲಿ ಸೇವೆ ಸಲ್ಲಿಸಿದ ಮೂವರಿಗೆ ಪ್ರಶಸ್ತಿ ದೊರಕಿದೆ.

ಚಲನಚಿತ್ರ ಮತ್ತು ಕಿರುತೆರೆ ವಿಭಾಗದಲ್ಲಿ ಸೇವೆ ಸಲ್ಲಿಸಿರುವ ಮೂವರನ್ನು ಈ ಬಾರಿ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಧಾರವಾಡದ ಕೆ ವೆಂಕಟರಮಣ (ಬಾಬಜೀ), ಬೆಂಗಳೂರು ಗ್ರಾಮಾಂತರದ ಅಶೋಕ್, ಬೆಂಗಳೂರು ನಗರದ ಕೆಎಸ್ ರವೀಂದ್ರನಾಥ್ ಅವರುಗಳನ್ನು ಈ ಬಾರಿ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ಇದನ್ನೂ ಓದಿ:71 ಸಾಧಕರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಘೋಷಣೆ: ಸಂಪೂರ್ಣ ಪಟ್ಟಿ ಇಲ್ಲಿದೆ

ಇನ್ನು ಹಲವು ಸಿನಿಮಾ ಜೊತೆಗೆ ಕಿರುತೆರೆಯಲ್ಲಿಯೂ ಕಾಣಿಸಿಕೊಂಡಿರುವ ದೇಹದಾರ್ಡ್ರ್ಯ ಸ್ಪರ್ಧಿ ಜಿಮ್ ರವಿ ಅವರಿಗೆ ಕ್ರೀಡಾ ವಿಭಾಗದಲ್ಲಿ ರಾಜ್ಯೋತ್ಸವ ಪ್ರಶಸ್ತಿ ನೀಡಲಾಗಿದೆ. ಕೋಲಾರದ ಅವರನ್ನು ಕ್ರೀಡಾ ಕ್ಷೇತ್ರದಿಂದ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಯಕ್ಷಗಾನ ವಿಭಾಗದಲ್ಲಿ ಉಡುಪಿಯ ಗೋಪಾಲ ಗಣಿಗ, ನೃತ್ಯ ಕ್ಷೇತ್ರದಲ್ಲಿ ಸತ್ಯನಾರಾಯಣ ರಾಜು, ಬಯಲಾಟ ವಿಭಾಗದಲ್ಲಿ ಕೊಪ್ಪಳದ ಹುಲಿಗೆಮ್ಮ, ರಂಗಭೂಮಿ ವಿಭಾಗದಲ್ಲಿ ಬೆಂಗಳೂರು ಗ್ರಾಮಾಂತರದ ಡಿ ಕೆಂಪಣ್ಣ, ಧಾರಾವಾಡದ ಜಯಲಕ್ಷ್ಮಿ ಪಾಟೀಲ್, ಚಿತ್ರದುರ್ಗದ ತಿಮ್ಮಯ್ಯ, ಮೈಸೂರಿನ ಕೆಆರ್ ಸುಮತಿ, ಬೆಂಗಳೂರು ದಕ್ಷಿಣದ ಪುಟ್ಟವೀರಪ್ಪ, ಮೈಸೂರಿನ ಹೊನ್ನನಾಯಕ ಅವರುಗಳನ್ನು ಆಯ್ಕೆ ಮಾಡಲಾಗಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಮಂಜುನಾಥ ಸಿ.
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
ಹೆಲಿಕಾಪ್ಟರ್​​ ದುರಂತದಲ್ಲಿ ಸಾವನ್ನಪ್ಪಿದ CCB ಇನ್ಸ್​ಪೆಕ್ಟರ್ ಅರುಣ್ ಯಾರು
ಹೆಲಿಕಾಪ್ಟರ್​​ ದುರಂತದಲ್ಲಿ ಸಾವನ್ನಪ್ಪಿದ CCB ಇನ್ಸ್​ಪೆಕ್ಟರ್ ಅರುಣ್ ಯಾರು
ದೇವೇಗೌಡರ ಭೇಟಿಯಾದ ಯಡಿಯೂರಪ್ಪ: ಕುತೂಹಲ ಮೂಡಿಸಿದ ಮಾಜಿ CM ನಡೆ
ದೇವೇಗೌಡರ ಭೇಟಿಯಾದ ಯಡಿಯೂರಪ್ಪ: ಕುತೂಹಲ ಮೂಡಿಸಿದ ಮಾಜಿ CM ನಡೆ
ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನಕ್ಕೆ ದಿನಾಂಕ ನಿಗದಿ, ರಜನೀಕಾಂತ್ ಅತಿಥಿ?
ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನಕ್ಕೆ ದಿನಾಂಕ ನಿಗದಿ, ರಜನೀಕಾಂತ್ ಅತಿಥಿ?
AICC ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಗೆ ಅಶೋಕ್​​ ಸವಾಲು
AICC ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಗೆ ಅಶೋಕ್​​ ಸವಾಲು
ಹಾಸನಾಂಬೆ ದರ್ಶನಕ್ಕೆ ಭಕ್ತ ಸಾಗರ: ಪೊಲೀಸರ ಜೊತೆಗೆ ಫೀಲ್ಡಿಗಿಳಿದ ಸಚಿವ
ಹಾಸನಾಂಬೆ ದರ್ಶನಕ್ಕೆ ಭಕ್ತ ಸಾಗರ: ಪೊಲೀಸರ ಜೊತೆಗೆ ಫೀಲ್ಡಿಗಿಳಿದ ಸಚಿವ
​​ಸ್ಟಿಂಗ್ ಆಪರೇಷನ್​ ಕೇಸಿಗೆ ಸ್ಫೋಟಕ ತಿರುವು:ಕುತೂಹಲ ಮೂಡಿಸಿದ ಸಿಸಿಬಿ ನಡೆ
​​ಸ್ಟಿಂಗ್ ಆಪರೇಷನ್​ ಕೇಸಿಗೆ ಸ್ಫೋಟಕ ತಿರುವು:ಕುತೂಹಲ ಮೂಡಿಸಿದ ಸಿಸಿಬಿ ನಡೆ
ಸಿಎಂಗೆ ಮಹತ್ವದ ಮನವಿ ಮಾಡಿಕೊಂಡ ತನ್ವೀರ್ ಸೇಠ್
ಸಿಎಂಗೆ ಮಹತ್ವದ ಮನವಿ ಮಾಡಿಕೊಂಡ ತನ್ವೀರ್ ಸೇಠ್
ವಾಟಾಳ್ ನಾಗರಾಜ್​ಗೆ ರಾಜ್ಯೋತ್ಸವ ಪ್ರಶಸ್ತಿ ಕೊಡಬೇಕು ಎಂದು ನನಗೆ ಆಸೆ: ಸಿಎಂ
ವಾಟಾಳ್ ನಾಗರಾಜ್​ಗೆ ರಾಜ್ಯೋತ್ಸವ ಪ್ರಶಸ್ತಿ ಕೊಡಬೇಕು ಎಂದು ನನಗೆ ಆಸೆ: ಸಿಎಂ
ದಾವಣಗೆರೆ: ಮನೆ ಮುಂದೆ ನಿಲ್ಲಿಸಿದ್ದ ಇನೋವಾ ಕಾರು ಕಳ್ಳತನ
ದಾವಣಗೆರೆ: ಮನೆ ಮುಂದೆ ನಿಲ್ಲಿಸಿದ್ದ ಇನೋವಾ ಕಾರು ಕಳ್ಳತನ
ಸ್ಟಿಂಗ್​​ ಪ್ರಕರಣ ಸಂಬಂಧ ಕುಮಾರಸ್ವಾಮಿ ದೆಹಲಿ ಮನೆ ಮಹಜರು?
ಸ್ಟಿಂಗ್​​ ಪ್ರಕರಣ ಸಂಬಂಧ ಕುಮಾರಸ್ವಾಮಿ ದೆಹಲಿ ಮನೆ ಮಹಜರು?