‘ಟಾಕ್ಸಿಕ್’ ನೋಡಿ ಮೆಚ್ಚಿಕೊಂಡ ಉಪೇಂದ್ರ; ಆದರೆ ನೆಟ್ಟಿಗರ ಅಭಿಪ್ರಾಯವೇ ಬೇರೆ

‘ಟಾಕ್ಸಿಕ್’ ಸಿನಿಮಾಗೆ ಕನ್ನಡ ಚಿತ್ರರಂಗದ ಸೆಲೆಬ್ರಿಟಿಗಳ ಬೆಂಬಲ ಸಿಗುತ್ತಿಲ್ಲ ಎಂಬ ಆರೋಪ ಕೇಳಿಬಂದಿತ್ತು. ಇಂಥ ಸಂದರ್ಭದಲ್ಲಿ ಉಪೇಂದ್ರ ಅವರು ಈ ಸಿನಿಮಾ ನೋಡಿ ಮೆಚ್ಚಿಕೊಂಡಿದ್ದಾರೆ. ಆದರೆ ಉಪೇಂದ್ರ ಅವರ ಮಾತಿಗೆ ಸೋಶಿಯಲ್ ಮೀಡಿಯಾದಲ್ಲಿ ಪರ-ವಿರೋಧದ ಅಭಿಪ್ರಾಯ ವ್ಯಕ್ತವಾಗಿದೆ. ಆ ಬಗ್ಗೆ ಇಲ್ಲಿದೆ ವಿವರ..

‘ಟಾಕ್ಸಿಕ್’ ನೋಡಿ ಮೆಚ್ಚಿಕೊಂಡ ಉಪೇಂದ್ರ; ಆದರೆ ನೆಟ್ಟಿಗರ ಅಭಿಪ್ರಾಯವೇ ಬೇರೆ
Upendra, Yash

Updated on: Aug 28, 2026 | 3:44 PM

ಗೀತು ಮೋಹನ್‌ದಾಸ್ ನಿರ್ದೇಶನದ, ಯಶ್ (Yash) ಅಭಿನಯದ ‘ಟಾಕ್ಸಿಕ್’ ಸಿನಿಮಾ ಬುಧವಾರ (ಆಗಸ್ಟ್ 26) ಚಿತ್ರಮಂದಿರಗಳಲ್ಲಿ ಬಿಡುಗಡೆ ಆದ ನಂತರ ವಿಮರ್ಶಕರಿಂದ, ಪ್ರೇಕ್ಷಕರಿಂದ ಮಿಶ್ರ ಪ್ರತ್ರಿಕ್ರಿಯೆಗಳನ್ನು ಪಡೆದುಕೊಂಡಿದೆ. ‘ರಿಯಲ್ ಸ್ಟಾರ್’ ಉಪೇಂದ್ರ (Upendra) ಅವರು ಈ ಸಿನಿಮಾ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಚಿತ್ರವನ್ನು ವೀಕ್ಷಿಸಿದ ಅವರು ಸೋಶಿಯಲ್ ಮೀಡಿಯಾದಲ್ಲಿ ವಿಮರ್ಶೆಯನ್ನು ಹಂಚಿಕೊಂಡಿದ್ದು, ಅದಕ್ಕೂ ವೀಕ್ಷಕರಿಂದ ವಿಭಿನ್ನ ಅಭಿಪ್ರಾಯಗಳು ವ್ಯಕ್ತವಾಗಿವೆ.

‘ಟಾಕ್ಸಿಕ್ ಒಂದು ಕಾಲ್ಪನಿಕ ಕಥೆ. ಆದರೆ ದೊಡ್ಡವರಿಗಾಗಿ? ಟಾಕ್ಸಿಕ್ ಸಿನಿಮಾ ನೋಡಿದೆ. ವಾವ್! ಎಂತಹ ಸಿನಿಮಾ! ಒಂದು ಹೊಸ ಲೋಕ. ಒಂದು ಸಂಪೂರ್ಣ ಹೊಸ ಅನುಭವ! ಪ್ರತಿಯೊಬ್ಬ ಕಲಾವಿದ ಮತ್ತು ತಂತ್ರಜ್ಞರ ಶ್ರಮ, ಶ್ರದ್ಧೆ ಹಾಗೂ ಕಲೆಯ ಮೇಲಿನ ಪ್ರೀತಿ ನಿಜಕ್ಕೂ ಅಭಿನಂದನೀಯ! ಯಶ್ ಮತ್ತು ಇಡೀ ತಂಡಕ್ಕೆ ಹ್ಯಾಟ್ಸ್ ಆಫ್!’ ಎಂದು ಉಪೇಂದ್ರ ಅವರು ಟ್ವೀಟ್ ಮಾಡಿದ್ದಾರೆ.

‘ಟಾಕ್ಸಿಕ್’ ಸಿನಿಮಾಗೆ ಉತ್ತರ ಭಾರತದಲ್ಲಿ ಹೆಚ್ಚು ನೆಗೆಟಿವ್ ವಿಮರ್ಶೆ ಬಂದಿದೆ. ಅಲ್ಲದೇ, ತೆಲುಗು-ತಮಿಳು ಮಂದಿ ಕೂಡ ಟ್ರೋಲ್ ಮಾಡಿದ್ದಾರೆ. ಇಂಥ ಸಮಯದಲ್ಲಿ ಕನ್ನಡ ಚಿತ್ರರಂಗದ ಸೆಲೆಬ್ರಿಟಿಗಳು ‘ಟಾಕ್ಸಿಕ್’ ಚಿತ್ರಕ್ಕೆ ಬೆಂಬಲ ನೀಡುತ್ತಿಲ್ಲ ಎಂಬ ಮಾತು ಕೇಳಿಬಂದಿತ್ತು. ಹೀಗಿರುವಾಗ ಉಪೇಂದ್ರ ಅವರು ‘ಟಾಕ್ಸಿಕ್’ ಚಿತ್ರದ ಪರವಾಗಿ ಟ್ವೀಟ್ ಮಾಡಿರುವುದು ಗಮನ ಸೆಳೆದಿದೆ.

ಉಪೇಂದ್ರ ಅವರ ವಿಮರ್ಶೆಗೆ ನೆಟ್ಟಿಗರಿಂದ ಬಗೆಬಗೆಯ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಕೆಲವರಿಗೆ ಉಪೇಂದ್ರ ಹೇಳಿದ್ದು ಸರಿ ಎನಿಸಿದೆ. ಆದರೆ ಇನ್ನು ಕೆಲವರಿಗೆ ಅಸಮಾಧಾನ ಇದೆ. ‘ಎಕ್ಸ್’ (ಟ್ವಿಟರ್) ಬಳಕೆದಾರರೊಬ್ಬರು, ‘ಸಾಧಾರಣ ಸಿನಿಮಾಗಳನ್ನು ಮೆರೆಸುವುದನ್ನು ನಿಲ್ಲಿಸಿ. ಈ ರೀತಿ ಮಾಡಿದರೆ ಕನ್ನಡ ಚಿತ್ರರಂಗ ಅಭಿವೃದ್ಧಿ ಆಗಲ್ಲ’ ಎಂದು ಕಮೆಂಟ್ ಮಾಡಿದ್ದಾರೆ. ‘ಇದಕ್ಕಿಂತ ಕಬ್ಜ, ಮಾರ್ಟಿನ್ ಮತ್ತು ಕೆಡಿ ಸಿನಿಮಾಗಳೇ ಎಷ್ಟೋ ಪಟ್ಟು ಮೇಲು’ ಎಂದು ಇನ್ನೊಬ್ಬರು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ‘ಟಾಕ್ಸಿಕ್’ ಬೋಲ್ಡ್ ದೃಶ್ಯಕ್ಕೆ ರುಕ್ಮಿಣಿ ವಸಂತ್ ಟ್ರೋಲ್: ನಟಿಯ ಬೆಂಬಲಕ್ಕೆ ನಿಂತ ಫ್ಯಾನ್ಸ್

‘ಸರ್, ಈ ಸಿನಿಮಾ ನಿಮಗಷ್ಟೇ ಅರ್ಥವಾಗಲು ಸಾಧ್ಯ, ಬೇರೆಯವರಿಗೆ ಅಲ್ಲ. ನಮಗೆ ಕನಿಷ್ಠ ಪಕ್ಷ ಒಂದು ಬೇಸಿಕ್ ಕಥೆಯಾದರೂ ಬೇಕು. ಬರಿ ರಿಚ್ ವಿಶುವಲ್ಸ್ ಮತ್ತು ಪಬ್‌ಜಿ ಶೈಲಿಯ ಆಕ್ಷನ್ ದೃಶ್ಯಗಳು ಸಿನಿಮಾವನ್ನು ಗೆಲ್ಲಿಸಲು ಸಾಧ್ಯವಿಲ್ಲ’ ಎಂದು ಮತ್ತೊಬ್ಬರು ಕಮೆಂಟ್ ಮಾಡಿದ್ದಾರೆ. ‘ಸರ್, ನೀವು ನೋಡಿದ ಪ್ರಿಂಟ್ ಅನ್ನೇ ವಿತರಣೆ ಮಾಡುವಂತೆ ನಿರ್ಮಾಪಕರಿಗೆ ಹೇಳಿ ಪ್ಲೀಸ್’ ಎಂದು ಇನ್ನೊಬ್ಬರು ವ್ಯಂಗ್ಯ ಮಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Loading...
Unable to load recommendations.
Follow Us