AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Kabzaa Movie: ಮುಂಬೈ, ದೆಹಲಿ, ಹೈದರಾಬಾದ್​​ನಲ್ಲಿ ಹೇಗಿದೆ ‘ಕಬ್ಜ’ ಅಬ್ಬರ? ಇಲ್ಲಿದೆ ಸಂಪೂರ್ಣ ವಿವರ

ಹೈದರಾಬಾದ್, ಚೆನ್ನೈ, ದೆಹಲಿ ಹಾಗೂ ಮುಂಬೈ ಭಾಗದಲ್ಲಿ ಸಿನಿಮಾಗೆ ಹೆಚ್ಚಿನ ಶೋಗಳು ಸಿಕ್ಕಿವೆ. ಬೆಂಗಳೂರು ಸೇರಿ ರಾಜ್ಯದ ವಿವಿಧ ಕಡೆಗಳಲ್ಲಿ ಕೆಲವು ಶೋಗಳ ಟಿಕೆಟ್​ಗಳು ಸೋಲ್ಡ್​ಔಟ್ ಆಗಿದೆ.

Kabzaa Movie: ಮುಂಬೈ, ದೆಹಲಿ, ಹೈದರಾಬಾದ್​​ನಲ್ಲಿ ಹೇಗಿದೆ ‘ಕಬ್ಜ’ ಅಬ್ಬರ? ಇಲ್ಲಿದೆ ಸಂಪೂರ್ಣ ವಿವರ
ಕಬ್ಜ ಪೋಸ್ಟರ್
ರಾಜೇಶ್ ದುಗ್ಗುಮನೆ
|

Updated on: Mar 16, 2023 | 12:17 PM

Share

ಆರ್​. ಚಂದ್ರು ಅವರ ಕನಸಿನ ಪ್ರಾಜೆಕ್ಟ್​ ‘ಕಬ್ಜ’ ಸಿನಿಮಾ (Kabzaa Movie) ರಿಲೀಸ್​ಗೆ ರೆಡಿ ಇದೆ. ಈ ಚಿತ್ರಕ್ಕೆ ಅಬ್ಬರದ ಪ್ರಚಾರ ನೀಡುವ ಕೆಲಸ ಆಗುತ್ತಿದೆ. ಕರ್ನಾಟಕ (Karnataka) ಮಾತ್ರವಲ್ಲದೆ ಪರಭಾಷೆಯಲ್ಲೂ ಸಿನಿಮಾ ರಿಲೀಸ್ ಆಗುತ್ತಿದೆ. ಹೈದರಾಬಾದ್, ಚೆನ್ನೈ, ದೆಹಲಿ ಹಾಗೂ ಮುಂಬೈ ಭಾಗದಲ್ಲಿ ಸಿನಿಮಾಗೆ ಹೆಚ್ಚಿನ ಶೋಗಳು ಸಿಕ್ಕಿವೆ. ಬೆಂಗಳೂರು ಸೇರಿ ರಾಜ್ಯದ ವಿವಿಧ ಕಡೆಗಳಲ್ಲಿ ಕೆಲವು ಶೋಗಳ ಟಿಕೆಟ್​ಗಳು ಸೋಲ್ಡ್​ಔಟ್ ಆಗಿದೆ. ಹಾಗಾದರೆ, ‘ಕಬ್ಜ’ ಚಿತ್ರಕ್ಕೆ ದೇಶದ ಪ್ರಮುಖ ನಗರಗಳಲ್ಲಿ ರೆಸ್ಪಾನ್ಸ್​ ಹೇಗಿದೆ ಎನ್ನುವ ಬಗ್ಗೆ ಇಲ್ಲಿದೆ ವಿವರ.

ದೆಹಲಿ

ರಾಜ್ಯ ರಾಜಧಾನಿ ದೆಹಲಿಯಲ್ಲಿ ‘ಕಬ್ಜ’ ಅಬ್ಬರಿಸೋಕೆ ರೆಡಿ ಆಗಿದೆ. ದೆಹಲಿಯಲ್ಲಿ ‘ಕಬ್ಜ’ ಕನ್ನಡ ಹಾಗೂ ಹಿಂದಿ ಭಾಷೆಯಲ್ಲಿ ವೀಕ್ಷಣೆಗೆ ಲಭ್ಯವಿದೆ. ಹಿಂದಿ ವರ್ಷನ್​ಗೆ ಮೊದಲ ದಿನವಾದ ಶುಕ್ರವಾರ (ಮಾರ್ಚ್​ 17) 134 ಶೋಗಳು ಲಭ್ಯವಿದೆ. ಕನ್ನಡಕ್ಕೆ ನಾಲ್ಕು ಶೋಗಳು ಸಿಕ್ಕಿವೆ.

ಇದನ್ನೂ ಓದಿ:  Kabzaa Movie: ಈ ವಾರ ‘ಕಬ್ಜ’ ಎದುರು ತೊಡೆತಟ್ಟಲು ರೆಡಿ ಆದ ಸಿನಿಮಾಗಳು ಇವೇ ನೋಡಿ..

ಮುಂಬೈ

ಬಾಲಿವುಡ್​ ಸಿನಿಮಾಗಳು ಮುಂಬೈನಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತವೆ. ಇಲ್ಲಿ ಕನ್ನಡದ ಚಿತ್ರಗಳು ಸೌಂಡ್ ಮಾಡಬೇಕು ಎಂದರೆ ಅದು ನಿಜಕ್ಕೂ ಚಾಲೆಂಜಿಂಗ್. ಈ ಚಾಲೆಂಜ್​ನ ಆರ್​. ಚಂದ್ರು ಸ್ವೀಕರಿಸಿದ್ದಾರೆ. ಮುಂಬೈ ಭಾಗದಲ್ಲಿ ‘ಕಬ್ಜ’ ಅಬ್ಬರಿಸೋಕೆ ರೆಡಿ ಆಗಿದೆ. ಶುಕ್ರವಾರ ಮುಂಬೈನಲ್ಲಿ ‘ಕಬ್ಜ’ ಕನ್ನಡ ವರ್ಷನ್ 28 ಶೋ ಹಾಗೂ ಹಿಂದಿ ವರ್ಷನ್​ಗೆ 175+ ಶೋಗಳು ಸಿಕ್ಕಿವೆ. ಚಿತ್ರಕ್ಕೆ ಒಳ್ಳೆಯ ರೆಸ್ಪಾನ್ಸ್ ಸಿಕ್ಕರೆ ಶೋಗಳ ಸಂಖ್ಯೆ ಮತ್ತಷ್ಟು ಏರಿಕೆ ಆಗಲಿದೆ.

ಇದನ್ನೂ ಓದಿ: ಕಬ್ಜ ಸಿನಿಮಾ ಆಗಲು ಮುಖ್ಯ ಕಾರಣ ಯಾರು? ಬಹಿರಂಗಪಡಿಸಿದ ನಿರ್ದೇಶಕ ಆರ್.ಚಂದ್ರು

ಹೈದರಾಬಾದ್, ಚೆನ್ನೈ

ಹೈದರಾಬಾದ್ ಹಾಗೂ ಚೆನ್ನೈ ಭಾಗದಲ್ಲಿ ‘ಕಬ್ಜ’ ಚಿತ್ರಕ್ಕೆ ಭರ್ಜರಿ ಸ್ವಾಗತ ಸಿಗುವ ಸೂಚನೆ ಇದೆ. ಈ ಭಾಗದಲ್ಲಿ ‘ಕಬ್ಜ’ ಚಿತ್ರಕ್ಕೆ ಹೆಚ್ಚಿನ ಶೋಗಳು ಸಿಗುತ್ತಿವೆ. ಹೈದರಾಬಾದ್​ನಲ್ಲಿ ಈ ಚಿತ್ರಕ್ಕೆ ಒಟ್ಟಾರೆ 250+ ಶೋ ಸಿಕ್ಕಿದೆ. ಚೆನ್ನೈನಲ್ಲಿ 120+ ಶೋಗಳು ‘ಕಬ್ಜ’ ಚಿತ್ರಕ್ಕಾಗಿ ಮುಡಿಪಿಡಲಾಗಿದೆ.

ಬೆಂಗಳೂರಲ್ಲಿ ಎಷ್ಟು ಶೋ?

ಬೆಂಗಳೂರಿನಲ್ಲಿ ‘ಕಬ್ಜ’ ಚಿತ್ರಕ್ಕೆ 500+ ಶೋ ಸಿಕ್ಕಿದೆ. ಸದ್ಯ ಯಾವುದೇ ಫ್ಯಾನ್​ ಶೋ ಬಗ್ಗೆ ಘೋಷಣೆ ಆಗಿಲ್ಲ.  ಬೆಳಗ್ಗೆ 9 ಗಂಟೆಯಿಂದ ಮಾತ್ರ ಶೋಗಳು ಆರಂಭ ಆಗುತ್ತಿವೆ. ಮುಂಜಾನೆ 6 ಗಂಟೆಯಿಂದ ಸಿನಿಮಾ ಪ್ರದರ್ಶನ ಕಾಣಲಿ ಅನ್ನೋದು ಫ್ಯಾನ್ಸ್ ಬಯಕೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ