
ರಾಕಿಂಗ್ ಸ್ಟಾರ್ ಯಶ್ ಅವರ ತಾಯಿ ಪುಷ್ಪಾ ಅವರು ನಿರ್ಮಿಸಿದ ‘ಕೊತ್ತಲವಾಡಿ’ ಸಿನಿಮಾ (Kothalavadi Movie) ಇಂದು (ಆಗಸ್ಟ್ 1) ರಿಲೀಸ್ ಆಗಿದೆ. ಈ ಚಿತ್ರದ ಬಗ್ಗೆ ಫ್ಯಾನ್ಸ್ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಸಿನಿಮಾ ಹೇಗಿದೆ ಎಂಬುದನ್ನು ಅಭಿಮಾನಿಗಳು ನಿರ್ಧರಿಸಲಿದ್ದಾರೆ. ಸಿನಿಮಾದಲ್ಲಿ ಕಥಾ ನಾಯಕ ಪೃಥ್ವಿ ಅಂಬಾರ್ ಅವರು ಒಂದು ಬೈಕ್ ಓಡಿಸುತ್ತಾರೆ. ಈ ಬೈಕ್ ಯಶ್ ಅವರದ್ದು ಎಂದು ಹೇಳಿದ್ದಾರೆ ಪೃಥ್ವಿ ಅಂಬಾರ್.
‘ಕೊತ್ತಲವಾಡಿ’ ಸಿನಿಮಾದ ಕಥೆ ಸಾಗೋದು ಚಾಮರಾಜನಗರದ ಕೊತ್ತಲವಾಡಿ ಊರಿನಲ್ಲಿ. ಪಕ್ಕಾ ಗ್ರಾಮೀಣ ಸೊಗಡಿನಲ್ಲಿ ಸಿನಿಮಾದ ಕಥೆ ಸಾಗುತ್ತದೆ. ಈ ಚಿತ್ರದಲ್ಲಿ ಕಥಾ ನಾಯಕ ಪೃಥ್ವಿ ಅಂಬಾರ್ ಅವರು ಸಿಬಿಝಡ್ ಬೈಕ್ನಲ್ಲಿ ಓಡಾಡುತ್ತಾರೆ.
ಮೆಟ್ರೊ ಸಾಗಾ ಯೂಟ್ಯೂಬ್ ಚಾನೆಲ್ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಪೃಥ್ವಿ ಅವರು, ‘ಶೂಟಿಂಗ್ಗೆ ಬಳಕೆ ಆದ ಬೈಕ್ಗೆ ಒಂದು ವಿಶೇಷತೆ ಇದೆ ಎಂದು ನಿರ್ದೇಶಕರು ಹೇಳುತ್ತಲೇ ಬರುತ್ತಿದ್ದರು. ಅದೇನು ಎಂದು ಗೊತ್ತಿರಲೇ ಇಲ್ಲ. ನಾನು ಪಿಯುಸಿಯಲ್ಲಿ ಇದ್ದಾಗ ಸಿಬಿಝಡ್ ಬೈಕ್ ಇದೆ ಎಂದರೆ ಕ್ರೇಜ್ ಇತ್ತು. ಏನು ಎಂಬ ಪ್ರಶ್ನೆ ಇತ್ತು’ ಎಂದಿದ್ದಾರೆ ಪೃಥ್ವಿ.
#YashBOSS Bike, how it is used in the film & the sweet memories ❤️https://t.co/yXPqEldLHg#Kothalavadi pic.twitter.com/j2OwQeu1r0
— MetroSaga (@metrosaga) August 1, 2025
ಆರಂಭದಲ್ಲಿ ಯಶ್ ತಾಯಿ ನಿರ್ಮಾಪಕಿ ಎಂಬ ವಿಚಾರ ಯಾರಿಗೂ ಹೇಳಿರಲಿಲ್ಲ. ಶೂಟಿಂಗ್ ಮುಗಿದ ದಿನ ಹಾಸನಕ್ಕೆ ಕರೆದುಕೊಂಡು ಹೋಗಿ ವಿಚಾರವನ್ನು ರಿವೀಲ್ ಮಾಡಲಾಯಿತು. ‘ನೀವು ಸಿನಿಮಾದಲ್ಲಿ ಓಡಿಸಿದ ಬೈಕ್ ಯಶ್ ಅವರು ಧಾರಾವಾಹಿ ಟೈಮ್ನಲ್ಲಿ ತೆಗೆದುಕೊಂಡ ಬೈಕ್ ಎಂದು ಹೇಳಿದರು’ ಎಂದಿದ್ದಾರೆ ಪೃಥ್ವಿ ಅಂಬಾರ್.
ಇದನ್ನೂ ಓದಿ: Kothalavadi Movie Review: ‘ಕೊತ್ತಲವಾಡಿ’; ಅಪೂರ್ಣತೆಯ ಮಧ್ಯೆ ಹರಿಯುವ ಕಣ್ಣೀರ ಕೋಡಿ
ಯಶ್ ತಾಯಿ ಕೂಡ ಈ ಮೊದಲು ಆ ವಿಚಾರ ಹೇಳಿದ್ದರು. ಅವರ ಮೊದಲ ಬೈಕ್ನ ಹಾಸನದಲ್ಲೇ ಸುಮ್ಮನೆ ಇಡಲಾಗಿತ್ತು. ಇದನ್ನು ನೋಡಿದ್ದ ಯಶ್, ಬೈಕ್ನ ಯಾಕೆ ಸುಮ್ಮನೆ ನಿಲ್ಲಿಸಿ ಇಟ್ಟಿದ್ದೀರಾ, ರೆಡಿ ಮಾಡಿಸಿ ಎಂದು ಹೇಳಿದ್ದರಂತೆ. ಅದನ್ನು ರೆಡಿ ಮಾಡಿಸಿ ಸಿನಿಮಾ ಉದ್ದಕ್ಕೂ ಬಳಕೆ ಆಗುತ್ತದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 3:05 pm, Fri, 1 August 25