Toxic Movie: ರಿಲೀಸ್ಗೂ ಮೊದಲೇ ಹೊಸ ದಾಖಲೆ ಬರೆದ ‘ಟಾಕ್ಸಿಕ್’ ಸಿನಿಮಾ
ಯಶ್ ನಟನೆಯ ‘ಟಾಕ್ಸಿಕ್’ ಚಿತ್ರ ಕನ್ನಡ ಮತ್ತು ಇಂಗ್ಲೀಷ್ ಭಾಷೆಗಳಲ್ಲಿ ಏಕಕಾಲದಲ್ಲಿ ಚಿತ್ರೀಕರಣ ಮಾಡುವ ಮೂಲಕ ಹೊಸ ದಾಖಲೆ ಸೃಷ್ಟಿಸಿದೆ. ಈ ಹಿಂದೆ ಎಂದಿಗೂ ಕನ್ನಡ ಚಿತ್ರರಂಗದಲ್ಲಿ ಇಂತಹ ಪ್ರಯತ್ನ ಆಗಿರಲಿಲ್ಲ. ನಯನತಾರಾ ಮತ್ತು ಕಿಯಾರಾ ಅಡ್ವಾಣಿ ಸಹ ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಚಿತ್ರದ ಬಿಡುಗಡೆ ದಿನಾಂಕವನ್ನು ಡಿಸೆಂಬರ್ ಗೆ ಮುಂದೂಡಲಾಗಿದೆ.

ಯಶ್ ನಟನೆಯ ‘ಟಾಕ್ಸಿಕ್’ ಸಿನಿಮಾದ ಕೆಲಸಗಳು ಭರದಿಂದ ಸಾಗುತ್ತಿವೆ. ಈ ಚಿತ್ರದ ಬಗ್ಗೆ ಅಭಿಮಾನಿಗಳು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಈ ಸಿನಿಮಾ ಈಗ ಹೊಸ ದಾಖಲೆ ಬರೆದಿದೆ. ಶೂಟಿಂಗ್ ಸಂದರ್ಭದಲ್ಲೇ ಈ ದಾಖಲೆ ‘ಟಾಕ್ಸಿಕ್’ ಚಿತ್ರದ ಪಾಲಾಗಿದೆ. ಈ ಬಗ್ಗೆ ಚಿತ್ರತಂಡ ಹೆಮ್ಮೆಯಿಂದ ಹೇಳಿಕೊಂಡಿದೆ. ಅಷ್ಟಕ್ಕೂ ಈ ಸಿನಿಮಾ ಮಾಡಿರುವ ದಾಖಲೆ ಏನು? ಆ ಬಗ್ಗೆ ಇಲ್ಲಿದೆ ವಿವರ.
‘ಟಾಕ್ಸಿಕ್’ ಸಿನಿಮಾದಲ್ಲಿ ಯಶ್ ಮುಖ್ಯ ಪಾತ್ರದಲ್ಲಿ ನಟಿಸುತ್ತಾ ಇದ್ದಾರೆ. ನಯನತಾರಾ, ಕಿಯಾರಾ ಅಡ್ವಾಣಿ ಮೊದಲಾದವರು ಚಿತ್ರದಲ್ಲಿ ನಟಿಸುತ್ತಿದ್ದಾರೆ. ಮಲಯಾಳಂನ ಗೀತು ಮೋಹನ್ದಾಸ್ ಅವರು ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಪಕ್ಕಾ ಮಾಸ್ ಶೈಲಿಯಲ್ಲಿ ಮೂಡಿಬರುತ್ತಿರುವ ಈ ಚಿತ್ರ ಇಂಗ್ಲಿಷ್ ಹಾಗೂ ಕನ್ನಡದಲ್ಲಿ ಒಟ್ಟಿಗೆ ಶೂಟ್ ಆಗುತ್ತಿದೆ. ಈ ರೀತಿ ಆಗುತ್ತಿರುವುದು ಕನ್ನಡ ಇತಿಹಾಸದಲ್ಲಿ ಇದೇ ಮೊದಲು.
ಸಾಮಾನ್ಯವಾಗಿ ಸಿನಿಮಾನ ಮೊದಲು ಮೂಲ ಭಾಷೆಯಲ್ಲಿ ಶೂಟ್ ಮಾಡಿ ಉಳಿದ ಭಾಷೆಗೆ ಡಬ್ ಮಾಡಿ ರಿಲೀಸ್ ಮಾಡಲಾಗುತ್ತದೆ. ಕೆಲವೊಮ್ಮೆ ಎರಡು ಭಾಷೆಗಳಲ್ಲಿ ಸಿನಿಮಾಗಳು ಒಟ್ಟಿಗೆ ಶೂಟ್ ಆದ ಉದಾಹರಣೆ ಇದೆ. ಆದರೆ, ಕನ್ನಡ ಹಾಗೂ ಇಂಗ್ಲಿಷ್ನಲ್ಲಿ ಒಟ್ಟಿಗೆ ಸಿನಿಮಾ ಶೂಟ್ ಈವರೆಗೆ ಆಗಿಲ್ಲ ಎಂದು ‘ಟಾಕ್ಸಿಕ್’ ತಂಡ ಹೇಳಿಕೊಂಡ ಬಗ್ಗೆ ವರದಿ ಆಗಿದೆ.
‘ಟಾಕ್ಸಿಕ್’ ತಂಡ ಈಗ ಕನ್ನಡ ಹಾಗೂ ಇಂಗ್ಲಿಷ್ನಲ್ಲಿ ಒಟ್ಟಿಗೆ ಸಿನಿಮಾ ಶೂಟ್ ಮಾಡಿ ಹೊಸ ದಾಖಲೆ ಬರೆದಿದೆ. ಈ ಮೂಲಕ ಅಪರೂಪದ ದಾಖಲೆಯನ್ನು ತನ್ನದಾಗಿಸಿಕೊಂಡಿದೆ. ಈ ಚಿತ್ರ ಪ್ಯಾನ್ ವರ್ಲ್ಡ್ ಮಟ್ಟದಲ್ಲಿ ರಿಲೀಸ್ ಆಗಲಿದೆ.
ಇದನ್ನೂ ಓದಿ: Toxic Movie: ಯಶ್ ನಿರ್ಧಾರದಿಂದ ಹೆಚ್ಚಿತು ‘ಟಾಕ್ಸಿಕ್’ ಚಿತ್ರದ ಬಜೆಟ್
‘ಟಾಕ್ಸಿಕ್’ ಸಿನಿಮಾದ ಪಾತ್ರವರ್ಗ ದೊಡ್ಡದಿರುವುದರಿಂದ ಸಹಜವಾಗಿ ನಿರೀಕ್ಷೆ ಹೆಚ್ಚಿದೆ. ‘ಕೆಜಿಎಫ್ 2’ ಬಳಿಕ ಯಶ್ ನಟಿಸುತ್ತಿರುವ ಸಿನಿಮಾ ಇದು ಎಂಬ ಕಾರಣದಿಂದಲೂ ಈ ಚಿತ್ರದ ಬಗ್ಗೆ ನಿರೀಕ್ಷೆ ಇದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ‘ಟಾಕ್ಸಿಕ್’ ಸಿನಿಮಾ ಏಪ್ರಿಲ್ನಲ್ಲಿ ಬಿಡುಗಡೆ ಆಗಬೇಕಿತ್ತು. ಆದರೆ, ಚಿತ್ರದ ರಿಲೀಸ್ ಡಿಸೆಂಬರ್ಗೆ ಮುಂದೂಡಲ್ಪಟಿದ್ದೆಯಂತೆ. ಕ್ರಿಸ್ಮಸ್ ಸಂದರ್ಭದಲ್ಲಿ ಚಿತ್ರ ತೆರೆಗೆ ಬರಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.