‘ಯಶೋ ಮಾರ್ಗ’ದಿಂದ ಮತ್ತೊಂದು ಒಳ್ಳೆಯ ಕೆಲಸ; 400 ವರ್ಷಗಳ ಇತಿಹಾಸ ಇರುವ ಪುಷ್ಕರಣಿ ಪುನಶ್ಚೇತನ
ಕೆಳದಿ ಅರಸರ ಕಾಲದಲ್ಲಿ ನಿರ್ಮಾಣವಾದ ಈ ಪುಷ್ಕರಣಿಗೆ 400 ವರ್ಷಗಳ ಇತಿಹಾಸ ಇದೆ. ಹಾಳಾಗುತ್ತಿದ್ದ ಪುಷ್ಕರಣಿಗೆ ಯಶೋ ಮಾರ್ಗ ಟೀಮ್ ಪುನಶ್ಚೇತನ ನೀಡಿದೆ. ವಿಶ್ವ ಪರಿಸರ ದಿನದಂದು ಪುಷ್ಕರಣಿಯನ್ನು ಲೋಕಾರ್ಪಣೆ ಮಾಡಿರುವುದು ವಿಶೇಷ.
ನಟ ಯಶ್ ಅವರು (Yash) ಸಿನಿಮಾ ಕೆಲಸಗಳಿಂದ ಮಾತ್ರ ಹೆಸರು ಮಾಡಿದವರಲ್ಲ. ಅವರಿಗೆ ಸಮಾಜದ ಬಗ್ಗೆ ಸಾಕಷ್ಟು ಕಾಳಜಿ ಇದೆ. ಸಿನಿಮಾ ಕೆಲಸಗಳ ಮಧ್ಯೆ ಅವರು ಪರಿಸರಪರ ಕೆಲಸಗಳನ್ನು ಮಾಡುತ್ತಾರೆ. ಈ ಮೂಲಕ ಅವರು ಆಗಾಗ ಚರ್ಚೆ ಆಗುತ್ತಿರುತ್ತಾರೆ. ‘ಕೆಜಿಎಫ್ 2’ ಸಿನಿಮಾ (KGF Chapter 2) ಗೆಲುವು ಕಂಡ ಖುಷಿಯಲ್ಲಿರುವ ಅವರು ಈ ರೀತಿಯ ಕಾರ್ಯಗಳತ್ತ ಹೆಚ್ಚು ಒಲವು ತೋರುತ್ತಿದ್ದಾರೆ. ಅವರ ‘ಯಶೋ ಮಾರ್ಗ’ದಿಂದ ಈಗ ಮತ್ತೊಂದು ಒಳ್ಳೆಯ ಕೆಲಸ ಆಗಿದೆ. ಯಶೋ ಮಾರ್ಗ ತಂಡದಿಂದ 400 ವರ್ಷಗಳ ಇತಿಹಾಸ ಇರುವ ಪುಷ್ಕರಣಿ ಪುನಶ್ಚೇತನ ಆಗಿದೆ.
ಯಶ್ ಅವರು ‘ಯಶೋ ಮಾರ್ಗ’ ತಂಡ ಕಟ್ಟಿದ್ದಾರೆ. ಇದರ ಅಡಿಯಲ್ಲಿ ರಾಜ್ಯದ ನಾನಾ ಕೆರೆಗಳ ಹೂಳೆತ್ತುವ ಕೆಲಸ ಆಗಿದೆ. ಪಾಳು ಬಿದ್ದ ಅನೇಕ ಕೆರೆಗಳು ಈಗ ನೀರು ತುಂಬಿ ಕಂಗೊಳಿಸುತ್ತಿವೆ. ಅದೇ ರೀತಿ ಈಗ ಶಿವಮೊಗ್ಗದ ಸಾಗರ ತಾಲ್ಲೂಕಿನ ಆನಂದಪುರದಲ್ಲಿರುವ ಚಂಪಕ ಸರಸು ಪುಷ್ಕರಣಿಯನ್ನು ಸ್ವಚ್ಛ ಮಾಡುವ ಕೆಲಸ ಆಗಿದೆ.
ಕೆಳದಿ ಅರಸರ ಕಾಲದಲ್ಲಿ ನಿರ್ಮಾಣವಾದ ಈ ಪುಷ್ಕರಣಿಗೆ 400 ವರ್ಷಗಳ ಇತಿಹಾಸ ಇದೆ. ಹಾಳಾಗುತ್ತಿದ್ದ ಪುಷ್ಕರಣಿಗೆ ಯಶೋ ಮಾರ್ಗ ಟೀಮ್ ಪುನಶ್ಚೇತನ ನೀಡಿದೆ. ವಿಶ್ವ ಪರಿಸರ ದಿನದಂದು ಪುಷ್ಕರಣಿಯನ್ನು ಲೋಕಾರ್ಪಣೆ ಮಾಡಿರುವುದು ವಿಶೇಷ. ಯಶ್ ಅವರ ತಂಡ ಮಾಡಿದ ಈ ಕಾರ್ಯಕ್ಕೆ ಎಲ್ಲ ಕಡೆಗಳಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಯಶ್ ಅವರ ತಂಡದಿಂದ ಮತ್ತಷ್ಟು ಈ ರೀತಿಯ ಕಾರ್ಯಗಳು ಆಗಲಿ ಎಂದು ಫ್ಯಾನ್ಸ್ ಕೋರುತ್ತಿದ್ದಾರೆ.
ಯಶ್ ಅವರ ನಟನೆಯ ‘ಕೆಜಿಎಫ್ 2’ ಸಿನಿಮಾ ವಿಶ್ವ ಬಾಕ್ಸ್ ಆಫೀಸ್ನಲ್ಲಿ 1200 ಕೋಟಿ ರೂಪಾಯಿ ಕಲೆಕ್ಷನ್ ಮಾಡಿ ದಾಖಲೆ ಬರೆದಿದೆ. ಈ ಸಿನಿಮಾ ಬಾಲಿವುಡ್ ಒಂದರಲ್ಲೇ 433+ ಕೋಟಿ ಬಾಚಿಕೊಂಡಿದೆ. ಈ ಕಾರಣಕ್ಕೆ ಅವರ ಮುಂದಿನ ಸಿನಿಮಾ ಬಗ್ಗೆ ಸಾಕಷ್ಟು ನಿರೀಕ್ಷೆ ಮೂಡಿದೆ. ಯಶ್ ಮುಂದಿನ ಸಿನಿಮಾ ಯಾವುದು ಎನ್ನುವ ಕುತೂಹಲ ಸದ್ಯದ್ದು. ನರ್ತನ್ ಜತೆ ಯಶ್ ಕೈ ಜೋಡಿಸಲಿದ್ದಾರೆ ಎನ್ನುವ ಸುದ್ದಿ ಮೊದಲಿನಿಂದಲೂ ಹರಿದಾಡುತ್ತಿದೆ. ಆದರೆ, ಯಾರೊಬ್ಬರೂ ಈ ಬಗ್ಗೆ ಅಧಿಕೃತ ಘೋಷಣೆ ಮಾಡಿಲ್ಲ. ಅವರ ಮುಂದಿನ ಘೋಷಣೆ ಬಗ್ಗೆ ಫ್ಯಾನ್ಸ್ ಕಾಯುತ್ತಿದ್ದಾರೆ. ಇತ್ತೀಚೆಗಷ್ಟೇ ‘ಕೆಜಿಎಫ್ 2’ 50 ದಿನ ಪೂರೈಸಿದೆ. ಈ ಚಿತ್ರದ ನಿರ್ದೇಶಕ ಪ್ರಶಾಂತ್ ನೀಲ್ ಜನ್ಮದಿನದ ಸೆಲೆಬ್ರೇಷನ್ನಲ್ಲಿ ಯಶ್ ಕೂಡ ಪಾಲ್ಗೊಂಡಿದ್ದರು.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.