AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಂಗನಾ ರನೌತ್ ಜೊತೆ ಹಾರರ್ ಸಿನಿಮಾ ಘೋಷಿಸಿದ ರಾಣಾ ದಗ್ಗುಬಾಟಿ

ದೆಹಲಿಯಲ್ಲಿ ನಡೆದ ‘ಹೊರರ್‌ಕಾನ್ ಇಂಡಿಯಾ 2026’ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ರಾಣಾ ದಗ್ಗುಬಾಟಿ ಅವರು ಹಾಲೋವೀನ್ ದಿನದಂದು ತಮ್ಮ ಹೊಸ ಸಿನಿಮಾ ಘೋಷಣೆ ಮಾಡಿದ್ದಾರೆ. ಅವರು ನಿರ್ಮಾಣ ಮಾಡಲಿರುವ ಈ ಸಿನಿಮಾ ಸಿನಿಮಾವನ್ನು ತೆಲುಗಿನ ರವಿ ಬಾಬು ನಿರ್ದೇಶನ ಮಾಡಲಿದ್ದಾರೆ. ಕಂಗನಾ ರಣಾವತ್ ನಟಿಸಿ ರಾಣಾ ನಿರ್ಮಾಣ ಮಾಡಲಿರುವ ಸಿನಿಮಾಕ್ಕೆ ‘ಸ್ಕೇರಿ ಪಿಕ್ಚರ್’ ಎಂದು ಹೆಸರಿಡಲಾಗಿದೆ. ರಾಣಾ ದಗ್ಗುಬಾಟಿ ಸಿನಿಮಾ ಘೋಷಿಸಿದ ಕೆಲವೇ ಸಮಯದಲ್ಲಿ ಸಿನಿಮಾದ ಪೋಸ್ಟರ್ ಅನ್ನು ನಟಿ ಕಂಗನಾ ರಣೌತ್ ಹಂಚಿಕೊಂಡಿದ್ದರು.

ಕಂಗನಾ ರನೌತ್ ಜೊತೆ ಹಾರರ್ ಸಿನಿಮಾ ಘೋಷಿಸಿದ ರಾಣಾ ದಗ್ಗುಬಾಟಿ
Kangana Rana
ಮಂಜುನಾಥ ಸಿ.
|

Updated on: Nov 01, 2026 | 5:26 PM

Share

ಮುಖ್ಯಾಂಶಗಳು

  • ಕಂಗನಾ ಸಿನಿಮಾ ನಿರ್ಮಿಸಲಿರುವ ರಾಣಾ
  • ಹಾರರ್ ಸಿನಿಮಾನಲ್ಲಿ ಕಂಗನಾ ನಟಿಸಲಿದ್ದಾರೆ
  • ಸಿನಿಮಾದ ಹೆಸರು ‘ಸ್ಕೇರಿ ಪಿಕ್ಚರ್’

ರಾಣಾ ದಗ್ಗುಬಾಟಿ, ತೆಲುಗು ಚಿತ್ರರಂಗದ ಖ್ಯಾತ ನಟನಾಗಿರುವ ಜೊತೆಗೆ ನಿರ್ಮಾಪಕ ಹಾಗೂ ವಿತರಕರೂ ಸಹ ಹೌದು. ತೆಲುಗು ಮಾತ್ರವಲ್ಲದೆ ಬೇರೆ ಭಾಷೆಗಳಲ್ಲಿಯೂ ಸಹ ರಾಣಾ ದಗ್ಗುಬಾಟಿ ಸಿನಿಮಾಗಳನ್ನು ನಿರ್ಮಾಣ ಮಾಡುತ್ತಲೇ ಇರುತ್ತಾರೆ. ಇದೀಗ ರಾಣಾ ದಗ್ಗುಬಾಟಿ ಹೊಸದೊಂದು ಸಿನಿಮಾ ಘೋಷಣೆ ಮಾಡಿದ್ದು, ಬಾಲಿವುಡ್ ನಟಿ, ಸಂಸದೆ ಕಂಗನಾ ರಣೌತ್ ಅವರು ನಾಯಕಿಯಾಗಿ ನಟಿಸಲಿರುವ ಹಾರರ್ ಸಿನಿಮಾ ನಿರ್ಮಾಣ ಮಾಡಲಿದ್ದಾರೆ.

ದೆಹಲಿಯಲ್ಲಿ ನಡೆದ ‘ಹೊರರ್‌ಕಾನ್ ಇಂಡಿಯಾ 2026’ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ರಾಣಾ ದಗ್ಗುಬಾಟಿ ಅವರು ಹಾಲೋವೀನ್ ದಿನದಂದು ತಮ್ಮ ಹೊಸ ಸಿನಿಮಾ ಘೋಷಣೆ ಮಾಡಿದ್ದಾರೆ. ಅವರು ನಿರ್ಮಾಣ ಮಾಡಲಿರುವ ಈ ಸಿನಿಮಾ ಸಿನಿಮಾವನ್ನು ತೆಲುಗಿನ ರವಿ ಬಾಬು ನಿರ್ದೇಶನ ಮಾಡಲಿದ್ದಾರೆ. ಕಂಗನಾ ರಣಾವತ್ ನಟಿಸಿ ರಾಣಾ ನಿರ್ಮಾಣ ಮಾಡಲಿರುವ ಸಿನಿಮಾಕ್ಕೆ ‘ಸ್ಕೇರಿ ಪಿಕ್ಚರ್’ ಎಂದು ಹೆಸರಿಡಲಾಗಿದೆ. ರಾಣಾ ದಗ್ಗುಬಾಟಿ ಸಿನಿಮಾ ಘೋಷಿಸಿದ ಕೆಲವೇ ಸಮಯದಲ್ಲಿ ಸಿನಿಮಾದ ಪೋಸ್ಟರ್ ಅನ್ನು ನಟಿ ಕಂಗನಾ ರಣೌತ್ ಹಂಚಿಕೊಂಡಿದ್ದರು.

ರಾಜಕೀಯದಲ್ಲಿ ಬ್ಯುಸಿ ಆಗಿರುವ ಕಂಗನಾ ರನೌತ್, ಸಿನಿಮಾಗಳಲ್ಲಿ ನಟಿಸುವುದನ್ನೂ ಸಹ ಮುಂದುವರೆಸಿದ್ದಾರೆ. ಬಾಲಿವುಡ್​​ನ ಅತ್ಯುತ್ತಮ ನಟಿಯರಲ್ಲಿ ಒಬ್ಬರಾಗಿರುವ ಕಂಗನಾ ರನೌತ್, ಈ ಹಿಂದೆ ‘ಚಂದ್ರಮುಖಿ 2’ ಸಿನಿಮಾನಲ್ಲಿ ನಟಿಸಿದ್ದು, ಅದು ಅವರು ನಟಿಸಿದ್ದ ಏಕೈಕ ಹಾರರ್ ಸಿನಿಮಾ ಅಗಿತ್ತು. ಆದರೆ ಕಂಗನಾ ರನೌತ್ ಇತ್ತೀಚೆಗೆ ನಟಿಸಿದ ಯಾವೊಂದು ಸಿನಿಮಾ ಸಹ ಹಿಟ್ ಆಗಿಲ್ಲ. ಇದರ ನಡುವೆ ರಾಣಾ ದಗ್ಗುಬಾಟಿ ಅವರು ಕಂಗನಾ ಅನ್ನು ನಾಯಕಿಯನ್ನಾಗಿ ಹಾಕಿಕೊಂಡಿದ್ದಾರೆ.

ಇದನ್ನೂ ಓದಿ:175 ಕೋಟಿ ರೂಪಾಯಿಗೆ ‘ಕಿಂಗ್’ ಸಿನಿಮಾದ ವಿದೇಶಿ ವಿತರಣಾ ಹಕ್ಕುಗಳು ಸೇಲ್

ಕಾರ್ಯಕ್ರಮದಲ್ಲಿ ಸಿನಿಮಾ ಬಗ್ಗೆ ಮಾತನಾಡಿದ ರಾಣಾ, ‘ಇದು ಒಂದು ಹಾರರ್ ಸಿನಿಮಾ ಆಗಿದ್ದು. ನನ್ನ ಸ್ನೇಹಿತರಾದ ರವಿ ಬಾಬು ಇದನ್ನು ನಿರ್ದೇಶಿಸುತ್ತಿದ್ದಾರೆ. ಅವರು ತೆಲುಗಿನಲ್ಲಿ ಅನೇಕ ಹಾರರ್ ಸಿನಿಮಾಗಳನ್ನು ನಿರ್ದೇಶಿಸಿದ್ದಾರೆ. ಇದು ಅವರ ಮೊದಲ ಹಿಂದಿ ಚಲನಚಿತ್ರವಾಗಿದೆ. ಈ ಚಿತ್ರದ ಶೀರ್ಷಿಕೆಯನ್ನು ಮೊದಲು ಇಲ್ಲಿಯೇ ಘೋಷಿಸಲಾಗಿದೆ’ ಎಂದರು. ರವಿ ಬಾಬು ಅವರು ದಿವಂಗತ ಹಿರಿಯ ತೆಲುಗು ನಟ ಚಲಪತಿ ರಾವ್ ಅವರ ಪುತ್ರರಾಗಿದ್ದು, 1998ರಿಂದ ನಟರಾಗಿ ಮತ್ತು 2002ರಿಂದ ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದಾರೆ. ಅವರು ತಮ್ಮ ವಿಶಿಷ್ಟ, ಪ್ರಯೋಗಾತ್ಮಕ ಮತ್ತು ಭಿನ್ನ ಪ್ರಕಾರದ ಚಲನಚಿತ್ರ ನಿರ್ಮಾಣ ಶೈಲಿಗೆ ಹೆಸರುವಾಸಿಯಾಗಿದ್ದಾರೆ. 2023ರಲ್ಲಿ ಅವರು ಹಂದಿಯ ಮರಿಯನ್ನು ಮುಖ್ಯ ಪಾತ್ರವಾಗಿಟ್ಟುಕೊಂಡು ‘ಅದುಗೋ’ ಎಂಬ ವಿಭಿನ್ನ ಚಿತ್ರ ನಿರ್ದೇಶಿಸಿದ್ದರು.

ರವಿ ಅವರು ತಮ್ಮ ವೃತ್ತಿಜೀವನದಲ್ಲಿ ಹದಿಹರೆಯದವರ ಕಥೆಗಳಿಂದ ಹಿಡಿದು ಥ್ರಿಲ್ಲರ್‌ಗಳವರೆಗೆ ವಿವಿಧ ಪ್ರಕಾರದ ಸಿನಿಮಾಗಳನ್ನು ನಿರ್ದೇಶಿಸಿದ್ದಾರೆ. ಕಳೆದ ವರ್ಷ ‘ಕಾಫಿ ವಿದ್‌ ಎ ಕಿಲ್ಲರ್’ ಚಿತ್ರದಲ್ಲಿ ನಟಿಸಿದ್ದ ಅವರು, ಈ ವರ್ಷ ‘ರೇಜರ್’ ಚಿತ್ರವನ್ನು ನಿರ್ದೇಶಿಸಿದ್ದಾರೆ. ಇನ್ನು ಕಂಗನಾ ಅವರು ಹಿಮಾಚಲ ಪ್ರದೇಶದ ಮಂಡಿ ಕ್ಷೇತ್ರದ ಸಂಸದೆ ಆಗಿದ್ದಾರೆ. ರಾಜಕೀಯ ಮತ್ತು ಸಿನಿಮಾಗಳನ್ನು ಒಟ್ಟಿಗೆ ನಿರ್ವಹಿಸುತ್ತಿದ್ದಾರೆ. ಈ ವರ್ಷ ಬಿಡುಗಡೆಯಾದ ‘ಭಾರತ್ ಭಾಗ್ಯವಿಧಾತ’ ಚಿತ್ರದಲ್ಲಿ ಅವರು ಕೊನೆಯದಾಗಿ ನಟಿಸಿದ್ದರು ಹಾಗೂ ಅದನ್ನು ನಿರ್ಮಿಸಿದ್ದರು ಕೂಡ. ಆ ಸಿನಿಮಾ ಬಾಕ್ಸ್ ಆಫೀಸ್​​ನಲಲಿ ಫ್ಲಾಫ್ ಆಗಿತ್ತು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಮಂಜುನಾಥ ಸಿ.
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
ಸ್ಟಿಂಗ್: ಸರ್ಕಾರ ಯಾರನ್ನು ರಕ್ಷಿಸುತ್ತಿದೆ? ಪ್ರಲ್ಹಾದ್ ಜೋಶಿ ಪ್ರಶ್ನೆ
ಸ್ಟಿಂಗ್: ಸರ್ಕಾರ ಯಾರನ್ನು ರಕ್ಷಿಸುತ್ತಿದೆ? ಪ್ರಲ್ಹಾದ್ ಜೋಶಿ ಪ್ರಶ್ನೆ
ಹಾಸನಾಂಬೆ ದರ್ಶನಕ್ಕೆ ಬರುವ ಭಕ್ತರಿಗೆ ವಸತಿ ಸೌಲಭ್ಯ!
ಹಾಸನಾಂಬೆ ದರ್ಶನಕ್ಕೆ ಬರುವ ಭಕ್ತರಿಗೆ ವಸತಿ ಸೌಲಭ್ಯ!
ಕಿಚ್ಚ ಸುದೀಪ್ ಎದುರಲ್ಲೇ ಬಿಗ್ ಬಾಸ್ ಸ್ಪರ್ಧಿಗಳ ಆರೋಪ, ಪ್ರತ್ಯಾರೋಪ
ಕಿಚ್ಚ ಸುದೀಪ್ ಎದುರಲ್ಲೇ ಬಿಗ್ ಬಾಸ್ ಸ್ಪರ್ಧಿಗಳ ಆರೋಪ, ಪ್ರತ್ಯಾರೋಪ
ಅರಮನೆ ಅಂಗಳದಲ್ಲಿ ಕನ್ನಡಾಂಬೆಗೆ ನಿತ್ಯವೂ ಪೂಜೆ; ಇತಿಹಾಸ ವಿವರಿಸಿದ ಅರ್ಚಕರು
ಅರಮನೆ ಅಂಗಳದಲ್ಲಿ ಕನ್ನಡಾಂಬೆಗೆ ನಿತ್ಯವೂ ಪೂಜೆ; ಇತಿಹಾಸ ವಿವರಿಸಿದ ಅರ್ಚಕರು
ವಿಪಕ್ಷಗಳ ಒಗ್ಗಟ್ಟು ಪ್ರದರ್ಶನ: ರ‍್ಯಾಲಿಯಲ್ಲಿ ಘಟಾನುಘಟಿ ನಾಯಕರು ಭಾಗಿ
ವಿಪಕ್ಷಗಳ ಒಗ್ಗಟ್ಟು ಪ್ರದರ್ಶನ: ರ‍್ಯಾಲಿಯಲ್ಲಿ ಘಟಾನುಘಟಿ ನಾಯಕರು ಭಾಗಿ
ಹಿರೇಮಗಳೂರು ಕೋದಂಡರಾಮ ದೇಗುಲ: ನಿತ್ಯವೂ ಕನ್ನಡದಲ್ಲೇ ಪೂಜೆ, ಮಂತ್ರಘೋಷ!
ಹಿರೇಮಗಳೂರು ಕೋದಂಡರಾಮ ದೇಗುಲ: ನಿತ್ಯವೂ ಕನ್ನಡದಲ್ಲೇ ಪೂಜೆ, ಮಂತ್ರಘೋಷ!
ದೆಹಲಿಯಲ್ಲಿ ಕನ್ನಡ ರಾಜ್ಯೋತ್ಸವ; ಧ್ವಜಾರೋಹಣ ನೆರವೇರಿಸಿದ ಸಿದ್ದರಾಮಯ್ಯ
ದೆಹಲಿಯಲ್ಲಿ ಕನ್ನಡ ರಾಜ್ಯೋತ್ಸವ; ಧ್ವಜಾರೋಹಣ ನೆರವೇರಿಸಿದ ಸಿದ್ದರಾಮಯ್ಯ
ಹಾಸನಾಂಬೆ ದರ್ಶನಕ್ಕೆ ರಾಜ್ಯದ ಮೂಲೆ ಮೂಲೆಯಿಂದ ಹರಿದು ಬಂದ ಭಕ್ತರು
ಹಾಸನಾಂಬೆ ದರ್ಶನಕ್ಕೆ ರಾಜ್ಯದ ಮೂಲೆ ಮೂಲೆಯಿಂದ ಹರಿದು ಬಂದ ಭಕ್ತರು
ಮೈಸೂರು:ಕನ್ನಡಾಂಬೆ ಭುವನೇಶ್ವರಿ ದೇಗುಲದ ಬಗ್ಗೆ ನಿಮಗೆಷ್ಟು ಗೊತ್ತು?
ಮೈಸೂರು:ಕನ್ನಡಾಂಬೆ ಭುವನೇಶ್ವರಿ ದೇಗುಲದ ಬಗ್ಗೆ ನಿಮಗೆಷ್ಟು ಗೊತ್ತು?
ಲವ್ ಮಾಡೋದು ಬಿಟ್ಟು ಆಟವಾಡು: ಸುದೀಪ್ ಎದುರಲ್ಲೇ ಸೌಂದರ್ಯಾಗೆ ಕಿರಣ್ ಟೀಕೆ
ಲವ್ ಮಾಡೋದು ಬಿಟ್ಟು ಆಟವಾಡು: ಸುದೀಪ್ ಎದುರಲ್ಲೇ ಸೌಂದರ್ಯಾಗೆ ಕಿರಣ್ ಟೀಕೆ