ಶಂಕರ್​ಗೆ ಮುಂದಿದೆ ಇನ್ನಷ್ಟು ಕಷ್ಟದ ದಿನಗಳು? ಸಿಗಲ್ಲ ಸಿನಿಮಾ ಆಫರ್?

ಶಂಕರ್ ಅವರ ಚಿತ್ರಗಳು ಒಂದು ಕಾಲದಲ್ಲಿ ಬ್ರಾಂಡ್ ಆಗಿದ್ದವು. ಆದರೆ ಇತ್ತೀಚಿನ ಚಿತ್ರಗಳಾದ 'ಇಂಡಿಯನ್ 2' ಮತ್ತು 'ಗೇಮ್ ಚೇಂಜರ್' ನಿರೀಕ್ಷೆಗಳನ್ನು ತಲುಪಿಲ್ಲ. ಇದರಿಂದ ನಿರ್ಮಾಪಕರು ಅವರ ಮುಂಬರುವ ಚಿತ್ರಗಳ ಬಗ್ಗೆ ಆತಂಕ ವ್ಯಕ್ತಪಡಿಸುತ್ತಿದ್ದಾರೆ. 'ವೀರಯುಗ ನಾಯಗನ್ ವೇಲ್ಪಾರಿ' ಚಿತ್ರದ ಮೇಲೆ ಭಾರೀ ನಿರೀಕ್ಷೆ ಇದೆ ಆದರೆ 'ಗೇಮ್ ಚೇಂಜರ್' ಯಶಸ್ಸು ಇದಕ್ಕೆ ನಿರ್ಣಾಯಕವಾಗಿದೆ.

ಶಂಕರ್​ಗೆ ಮುಂದಿದೆ ಇನ್ನಷ್ಟು ಕಷ್ಟದ ದಿನಗಳು? ಸಿಗಲ್ಲ ಸಿನಿಮಾ ಆಫರ್?
ಶಂಕರ್
Follow us
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ

Updated on: Jan 12, 2025 | 6:30 AM

ನಿರ್ದೇಶಕ ಶಂಕರ್ ಅವರ ಹೆಸರು ಒಂದು ಕಾಲದಲ್ಲಿ ಬ್ರಾಂಡ್ ಆಗಿತ್ತು. ಅವರ ಸಿನಿಮಾಕ್ಕಾಗಿ ಪ್ರೇಕ್ಷಕರು ಕಾತರದಿಂದ ಕಾಯುತ್ತಿದ್ದರು. ಆದರೆ ಹಲವಾರು ವರ್ಷಗಳಿಂದ ಅವರ ರೇಂಜ್​ನಲ್ಲಿ ಒಂದೇ ಒಂದು ಸಿನಿಮಾ ಬರಲಿಲ್ಲ. ವಿಕ್ರಮ್ ಅಭಿನಯದ ‘ಐ’ ಚಿತ್ರದ ನಂತರ ಶಂಕರ್ ಅವರ ‘ನಂಬನ್’ ಸಿನಿಮಾ ಬಂದು ಹೆಚ್ಚು ಗಮನ ಸೆಳೆದಿಲ್ಲ. ಭಾರೀ ನಿರೀಕ್ಷೆಗಳ ನಡುವೆ ಬಂದ ‘2.0’ ಅಷ್ಟಾಗಿ ಗಮನ ಸೆಳೆದಿಲ್ಲ. ಈಗ ಅವರ ಮುಂಬರುವ ಸಿನಿಮಾಗಳ ಮೇಲೆ ನಿರ್ಮಾಪಕರಿ ಭಯ ಶುರುವಾಗಿದೆ. ದೊಡ್ಡ ಬಜೆಟ್​ನಲ್ಲಿ ಸಿನಿಮಾ ನಿರ್ಮಾಣ ಮಾಡಲು ನಿರ್ಮಾಪಕರು ಮುಂದೆ ಬರುತ್ತಿಲ್ಲ.

ಕಳೆದ ವರ್ಷ ರಿಲೀಸ್ ಆದ ‘ಇಂಡಿಯನ್ 2’ ತೀವ್ರವಾಗಿ ಸೋತಿತ್ತು. ಬಿಗ್ ಬಜೆಟ್​ನಲ್ಲಿ ಬಂದ ಸಿನಿಮಾ ನಷ್ಟ ಉಂಟು ಮಾಡಿತ್ತು. ಇತ್ತೀಚೆಗೆ ಬಿಡುಗಡೆಯಾದ ‘ಗೇಮ್ ಚೇಂಜರ್’ ಸಿನಿಮಾಗೆ ಮಿಶ್ರ ಪ್ರತಿಕ್ರಿಯೆ ಸಿಕ್ಕಿದೆ. ಈ ಚಿತ್ರದ ಫಲಿತಾಂಶದ ಮೇಲೆ ಶಂಕರ್ ಅವರ ವೃತ್ತಿ ಜೀವನ ನಿಂತಿದೆ ಎನ್ನಲಾಗಿದೆ. ಇತ್ತೀಚಿಗೆ ಹೆಚ್ಚಾಗಿ ವಿಎಫ್ ಎಕ್ಸ್ ಚಿತ್ರಗಳನ್ನು ಮಾಡುತ್ತಿರುವ ಶಂಕರ್ ಬಹಳ ವರ್ಷಗಳ ನಂತರ ರಾಜಕೀಯ ಸಿನಿಮಾ ಮಾಡಿದ್ದಾರೆ.

‘ಗೇಮ್ ಚೇಂಜರ್’ ನಂತರ ‘ಇಂಡಿಯನ್ 3’ ಮಾಡಬೇಕಿದೆ. ಸದ್ಯ ಈ ಸಿನಿಮಾ ಸಾಧಾರಣ ಗಳಿಕೆ ಮಾಡುತ್ತಿದೆ. ಒಂದು ವೇಳೆ ‘ಗೇಮ್ ಚೇಂಜರ್’ ಮೂಲಕ ನಷ್ಟ ಆದರೆ ‘ಇಂಡಿಯನ್ 3’ ಸೆಟ್ಟೇರುವುದು ಅನುಮಾನ ಆಗಲಿದೆ. ‘ಇಂಡಿಯನ್ 2’ ದುರಂತ ಆಗಿರುವುದರಿಂದ ಮೂರನೇ ಭಾಗಕ್ಕಾಗಿ ಯಾರೂ ಹೆಚ್ಚಿನ ನಿರೀಕ್ಷೆಗಳನ್ನು ಹೊಂದಿಲ್ಲ. ಶಂಕರ್ ಈಗಾಗಲೇ ಮೂರನೇ ಸಿನಿಮಾಗಾಗಿ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಶಂಕರ್ ಅವರು ‘ವೀರಯುಗ ನಾಯಗನ್ ವೇಲ್ಪಾರಿ’ ಪುಸ್ತಕವನ್ನು ಆಧರಿಸಿ 3 ಭಾಗಗಳ ಚಿತ್ರವನ್ನು ಮಾಡಲು ಯೋಜಿಸಿದ್ದಾರೆ.

ಇದನ್ನೂ ಓದಿ: ಶಂಕರ್​ನಾಗ್ ಸ್ಟೈಲ್​ನಲ್ಲಿ ಮಾತನಾಡಿದ್ದ ಯಶ್; ಎಷ್ಟು ಪರ್ಫೆಕ್ಟ್ ಮಿಮಿಕ್ರಿ ನೋಡಿ

ವಾಸ್ತವವಾಗಿ ‘ವೀರಯುಗ ನಾಯಗನ್ ವೇಲ್ಪಾರಿ’ ಶಂಕರ್ ಅವರ ಕನಸಿನ ಯೋಜನೆಯಾಗಿದೆ. ಶಂಕರ್ ಕೂಡ ಈ ಸಿನಿಮಾವನ್ನು ಖಚಿತಪಡಿಸಿದ್ದಾರೆ. ಆದರೆ, ಈಗ ಶಂಕರ್ ಅವರ ಚಾರ್ಮ್ ನೋಡಿದರೆ ನಿರ್ಮಾಪಕರಿಗೆ ಮುಂದೇನು ಎನ್ನುವ ಪ್ರಶ್ನೆ ಮೂಡಿದೆ. ಪರಿಸ್ಥಿತಿ ಮುಂದಿನ ದಿನಗಳಲ್ಲಿ ಏನಾಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಸರ್ಕಾರದ ಅಸ್ಥಿಪಂಜರ ಮಾತ್ರ ಉಳಿದಿದೆ, ಸುಟ್ಟುಹೋಗೋದು ನಿಶ್ಚಿತ: ಸೋಮಣ್ಣ
ಸರ್ಕಾರದ ಅಸ್ಥಿಪಂಜರ ಮಾತ್ರ ಉಳಿದಿದೆ, ಸುಟ್ಟುಹೋಗೋದು ನಿಶ್ಚಿತ: ಸೋಮಣ್ಣ
ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಮನೆಗೆ ನುಗ್ಗಿದ ಚಿರತೆ, ವಿಡಿಯೋ ನೋಡಿ
ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಮನೆಗೆ ನುಗ್ಗಿದ ಚಿರತೆ, ವಿಡಿಯೋ ನೋಡಿ
ತ್ರಿವೇಣಿ ಸಂಗಮ ರಸ್ತೆಯಲ್ಲಿ ನಂದಿನಿ ಹಾಲಿಂದ ತಯಾರಾಗುವ ಬಿಸಿಬಿಸಿ ಚಹಾ ಲಭ್ಯ
ತ್ರಿವೇಣಿ ಸಂಗಮ ರಸ್ತೆಯಲ್ಲಿ ನಂದಿನಿ ಹಾಲಿಂದ ತಯಾರಾಗುವ ಬಿಸಿಬಿಸಿ ಚಹಾ ಲಭ್ಯ
ಅಹಮದಾಬಾದ್‌ನಲ್ಲಿ ಮಕರ ಸಂಕ್ರಾಂತಿ ಹಬ್ಬಕ್ಕೆ ಗಾಳಿಪಟ ಹಾರಿಸಿದ ಅಮಿತ್ ಶಾ
ಅಹಮದಾಬಾದ್‌ನಲ್ಲಿ ಮಕರ ಸಂಕ್ರಾಂತಿ ಹಬ್ಬಕ್ಕೆ ಗಾಳಿಪಟ ಹಾರಿಸಿದ ಅಮಿತ್ ಶಾ
ಹಿಂದಿನ ಸರ್ಕಾರ ಸಾಲಗಳನ್ನು ನಮ್ಮ ಸರ್ಕಾರ ತೀರಿಸುತ್ತಿದೆ: ಪ್ರಿಯಾಂಕ್ ಖರ್ಗೆ
ಹಿಂದಿನ ಸರ್ಕಾರ ಸಾಲಗಳನ್ನು ನಮ್ಮ ಸರ್ಕಾರ ತೀರಿಸುತ್ತಿದೆ: ಪ್ರಿಯಾಂಕ್ ಖರ್ಗೆ
ನಾಳೆ ದೆಹಲಿಗೆ ತೆರಳುವ ಮೊದಲು ಎಲ್ಲವನ್ನೂ ಮಾತಾಡುವೆ: ಕುಮಾರಸ್ವಾಮಿ
ನಾಳೆ ದೆಹಲಿಗೆ ತೆರಳುವ ಮೊದಲು ಎಲ್ಲವನ್ನೂ ಮಾತಾಡುವೆ: ಕುಮಾರಸ್ವಾಮಿ
ಮಹಾಕುಂಭದಲ್ಲಿ ಸಂಕ್ರಾಂತಿಯ ದಿನವಾದ ಇಂದು 2.5 ಕೋಟಿ ಭಕ್ತರಿಂದ ತೀರ್ಥ ಸ್ನಾನ
ಮಹಾಕುಂಭದಲ್ಲಿ ಸಂಕ್ರಾಂತಿಯ ದಿನವಾದ ಇಂದು 2.5 ಕೋಟಿ ಭಕ್ತರಿಂದ ತೀರ್ಥ ಸ್ನಾನ
ಮಿಡ್ ವೀಕ್ ಎಲಿನಿಮೇಷನ್ ಟಾಸ್ಕ್, ಗೆದ್ದವರ್ಯಾರು? ಸೋತವರ್ಯಾರು?
ಮಿಡ್ ವೀಕ್ ಎಲಿನಿಮೇಷನ್ ಟಾಸ್ಕ್, ಗೆದ್ದವರ್ಯಾರು? ಸೋತವರ್ಯಾರು?
ವೇದಿಕೆ ಮೇಲೆ ಚರ್ಚೆಯಲ್ಲಿ ಮಗ್ನರಾದ ಕುಮಾರಸ್ವಾಮಿ ಮತ್ತು ವಿಜಯೇಂದ್ರ
ವೇದಿಕೆ ಮೇಲೆ ಚರ್ಚೆಯಲ್ಲಿ ಮಗ್ನರಾದ ಕುಮಾರಸ್ವಾಮಿ ಮತ್ತು ವಿಜಯೇಂದ್ರ
ಸಚಿವೆ ಚೇತರಿಸಿಕೊಳ್ಳುತ್ತಿದ್ದಾರೆ, ಅವರಿಗೆ ವಿಶ್ರಾಂತಿಯ ಅಗತ್ಯವಿದೆ:ಶಶಿಕಲಾ
ಸಚಿವೆ ಚೇತರಿಸಿಕೊಳ್ಳುತ್ತಿದ್ದಾರೆ, ಅವರಿಗೆ ವಿಶ್ರಾಂತಿಯ ಅಗತ್ಯವಿದೆ:ಶಶಿಕಲಾ