ಜನಸಾಮಾನ್ಯರು ಮಾತ್ರವಲ್ಲ ಶ್ರೇಯಾ ಘೋಷಾಲ್ ಕೂಡ ಅದೆಷ್ಟು ತಪ್ಪು ಲಿರಿಕ್ಸ್ ಹೇಳ್ತಾರೆ ನೋಡಿ
ಶ್ರೇಯಾ ಘೋಷಾಲ್ ಭಾರತದ ಗಾಯಕಿಯರಲ್ಲಿ ಒಬ್ಬರು. ಅವರ ಧ್ವನಿಗೆ ಮರುಳಾಗದವರೇ ಇಲ್ಲ. ಅನೇಕ ಸೂಪರ್ ಹಿಟ್ ಹಾಡುಗಳನ್ನು ಅವರು ನೀಡಿದ್ದಾರೆ. ಅವರ ಗಾಯನಕ್ಕೆ ಎಲ್ಲರೂ ಫಿದಾ ಆಗುತ್ತಾರೆ. ಅವರು ಅನೇಕ ಶೋಗಳಿಗೆ ಜಡ್ಜ್ ಕೂಡ ಆಗಿದ್ದಾರೆ. ಸಾಕಷ್ಟು ಕಾನ್ಸರ್ಟ್ಗಳನ್ನು ಶ್ರೇಯಾ ಮಾಡುತ್ತಾರೆ. ಈ ವೇಳೆ ಅವರು ಸಾಕಷ್ಟು ತಪ್ಪು ತಪ್ಪು ಲಿರಿಕ್ಸ್ ಹೇಳಿದ್ದು ಇದೆ.
ಜನಸಾಮಾನ್ಯರು ಹಾಡುವಾಗ ತಪ್ಪು ತಪ್ಪು ಸಾಲುಗಳನ್ನು ಹೇಳಿ ಟೀಕೆಗೆ ಒಳಗಾದ ಉದಾಹರಣೆ ಸಾಕಷ್ಟು ಇದೆ. ಅನೇಕರು ಈ ತಪ್ಪನ್ನು ಮಾಡುತ್ತಾರೆ. ಸಾಮಾನ್ಯರು ಈ ರೀತಿಯ ಶಬ್ದಗಳನ್ನು ಹೇಳಿದಾಗ ಯಾವುದೇ ಸಮಸ್ಯೆ ಆಗೋದಿಲ್ಲ. ಅದೇ ಯಾವುದಾದರೂ ಸೆಲೆಬ್ರಿಟಿಗಳು ತಪ್ಪು ತಪ್ಪಾಗಿ ಲಿರಿಕ್ಸ್ ಹೇಳಿದರೆ ಟೀಕೆಗೆ ಒಳಗಾಗಬೇಕಾಗುತ್ತದೆ. ಖ್ಯಾತ ಗಾಯಕಿ ಶ್ರೇಯಾ ಘೋಷಾಲ್ ಕೂಡ ತಪ್ಪು ಸಾಲುಗಳನ್ನು ಹೇಳುವುದರಲ್ಲಿ ಎತ್ತಿದ ಕೈ. ಅವರು ಅನೇಕ ಬಾರಿ ಈ ತಪ್ಪನ್ನು ಮಾಡಿದ್ದಾರೆ.
ಶ್ರೇಯಾ ಘೋಷಾಲ್ ಭಾರತದ ಗಾಯಕಿಯರಲ್ಲಿ ಒಬ್ಬರು. ಅವರ ಧ್ವನಿಗೆ ಮರುಳಾಗದವರೇ ಇಲ್ಲ. ಅನೇಕ ಸೂಪರ್ ಹಿಟ್ ಹಾಡುಗಳನ್ನು ಅವರು ನೀಡಿದ್ದಾರೆ. ಅವರ ಗಾಯನಕ್ಕೆ ಎಲ್ಲರೂ ಫಿದಾ ಆಗುತ್ತಾರೆ. ಅವರು ಅನೇಕ ಶೋಗಳಿಗೆ ಜಡ್ಜ್ ಕೂಡ ಆಗಿದ್ದಾರೆ. ಸಾಕಷ್ಟು ಕಾನ್ಸರ್ಟ್ಗಳನ್ನು ಶ್ರೇಯಾ ಮಾಡುತ್ತಾರೆ. ಈ ವೇಳೆ ಅವರು ಸಾಕಷ್ಟು ತಪ್ಪು ತಪ್ಪು ಲಿರಿಕ್ಸ್ ಹೇಳಿದ್ದು ಇದೆ.
ಶ್ರೇಯಾ ಘೋಷಾಲ್ ಅವರು ಕಾನ್ಸರ್ಟ್ಗಳಲ್ಲಿ ಹಾಡುವಾಗ ತಪ್ಪು ಸಾಲುಗಳನ್ನು ಹೇಳುತ್ತಾರಂತೆ. ಈ ವಿಚಾರವನ್ನು ಅವರೇ ಒಪ್ಪಿಕೊಂಡಿದ್ದಾರೆ. ‘ನನ್ನ ಕಾನ್ಸರ್ಟ್ಗಳಲ್ಲಿ ಸಾಕಷ್ಟು ಹಾಡುಗಳ ಸಾಲುಗಳನ್ನು ಮರೆಯುತ್ತೇನೆ. ಸಾಕಷ್ಟು ವಿಡಿಯೋಗಳು ವೈರಲ್ ಆಗಿವೆ. ಅಭಿಮಾನಿಗಳು ಸರಿಯಾದ ಲಿರಿಕ್ಸ್ ಹಾಡಿದರೆ, ನಾನು ತಪ್ಪಾದ ಲಿರಿಕ್ಸ್ ಹೇಳುತ್ತಾ ಇರುತ್ತೇನೆ. ಆಗ ಜನರು ನನ್ನ ಹಾಡುಗಳನ್ನು ಕೇಳಿ ಕನ್ಫ್ಯೂಸ್ ಆಗುತ್ತಾರೆ. ಇವರು ದೊಡ್ಡ ಗಾಯಕಿ. ಅವರು ಹೇಳಿದ್ದೇ ಸರಿ ಇರಬಹುದು ಎಂದು ಅನೇಕರು ಅಂದುಕೊಳ್ಳುತ್ತಾರೆ’ ಎಂದಿದ್ದಾರೆ ಶ್ರೇಯಾ ಘೋಷಾಲ್.
View this post on Instagram
ಇದನ್ನೂ ಓದಿ: ‘ಪುಷ್ಪ 2’ ಕಪಲ್ ಸಾಂಗ್; ಆರು ಭಾಷೆಯಲ್ಲಿ ಮೋಡಿ ಮಾಡಿದ ಶ್ರೇಯಾ ಘೋಷಾಲ್
ಶ್ರೇಯಾ ಘೋಷಾಲ್ ಅವರು ಕೇವಲ ಬಾಲಿವುಡ್ಗೆ ಮಾತ್ರ ಸೀಮಿತವಾಗಿಲ್ಲ. ಕನ್ನಡದಲ್ಲೂ ಹಲವು ಸೂಪರ್ ಹಿಟ್ ಗೀತೆಗಳನ್ನು ನೀಡಿದ್ದಾರೆ. 2003ರಲ್ಲಿ ಅವರು ಕನ್ನಡದ ಹಾಡನ್ನು ಹಾಡಿದರು. ‘ಪ್ಯಾರಿಸ್ ಪ್ರಣಯ’ ಚಿತ್ರದ ‘ಕೃಷ್ಣ ನೀ ಬೇಗನೆ ಬಾರೋ..’ ಅವರು ಹಾಡಿದ ಮೊದಲ ಸಾಲುಗಳು. ಆ ಬಳಿಕ ಅವರು ನಿರಂತರವಾಗಿ ಕನ್ನಡದಲ್ಲಿ ಹಾಡು ಹಾಡಿದ್ದಾರೆ. ನೂರಾರು ಹಾಡುಗಳು ಅವರ ಕಂಠದಲ್ಲಿ ಮೂಡಿ ಬಂದಿವೆ. ‘ಪುಷ್ಪ 2’ ಚಿತ್ರದ ‘ನೋಡೋಕ..’ (ಕನ್ನಡ ವರ್ಷನ್) ಅವರು ಹಾಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.