AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಟಿ ಶ್ರುತಿ ಹಾಸನ್​ಗೆ ಕೊವಿಡ್ ಪಾಸಿಟಿವ್​; ಆತಂಕ ಹೊರಹಾಕಿದ ಫ್ಯಾನ್ಸ್​

ಈ ಪೋಸ್ಟ್​ಗೆ ನೂರಾರು ಕಮೆಂಟ್​ಗಳು ಬಂದಿವೆ. ಚಿತ್ರರಂಗದ ಅನೇಕ ಸೆಲೆಬ್ರಿಟಿಗಳು ಅವರು ಬೇಗ ಗುಣಮುಖರಾಗಲಿ ಎಂದು ಹಾರೈಸುತ್ತಿದ್ದಾರೆ. ‘ಶ್ರುತಿ ಅವರೇ ಬೇಗ ಗುಣಮುಖರಾಗಿ ಹಿಂದಿರುಗಿ’ ಎಂದು ಸಿದ್ದಾರ್ಥ್​ ಮಲ್ಹೋತ್ರಾ ಬರೆದುಕೊಂಡಿದ್ದಾರೆ.  ‘

ನಟಿ ಶ್ರುತಿ ಹಾಸನ್​ಗೆ ಕೊವಿಡ್ ಪಾಸಿಟಿವ್​; ಆತಂಕ ಹೊರಹಾಕಿದ ಫ್ಯಾನ್ಸ್​
ಶ್ರುತಿ ಹಾಸನ್
TV9 Web
| Edited By: |

Updated on: Feb 27, 2022 | 1:51 PM

Share

ಕೊವಿಡ್​ (Covid-19) ಮೂರನೇ ಅಲೆ ಕಡಿಮೆ ಆಗಿದೆ. ಎಲ್ಲ ಚಟುವಟಿಕೆಗಳು ಮತ್ತೆ ಆರಂಭಗೊಂಡಿದೆ. ಆದಾಗ್ಯೂ ಕೊರೊನಾ ಸಂಪೂರ್ಣವಾಗಿ ಕಡಿಮೆ ಆಗಿಲ್ಲ. ಕೆಲವರಿಗೆ ಕೊರೊನಾ ವೈರಸ್​ ಅಂಟುತ್ತಿದೆ. ಎಷ್ಟೇ ಎಚ್ಚರಿಕೆ ವಹಿಸಿದರೂ ಕೊವಿಡ್​ ಪಾಸಿಟಿವ್​ ಆಗುತ್ತಿದೆ. ಈಗ ಖ್ಯಾತ ನಟಿ, ಕಮಲ್​ ಹಾಸನ್ (Kamal Haasan)​ ಮಗಳು ಶ್ರುತಿ ಹಾಸನ್​ಗೂ (Shruti Haasan) ಕೊರೊನಾ ಸೋಂಕು ಅಂಟಿದೆ. ಈ ಬಗ್ಗೆ ಸೋಶಿಯಲ್​ ಮೀಡಿಯಾದಲ್ಲಿ ಅವರು ಬರೆದುಕೊಂಡಿದ್ದಾರೆ. ನೆಚ್ಚಿನ ನಟಿಗೆ ಕೊವಿಡ್​ ಅಂಟಿರುವುದರಿಂದ ಸಹಜವಾಗಿಯೇ ಅವರ ಅಭಿಮಾನಿಗಳು ಕೊಂಚ ಆತಂಕಗೊಂಡಿದ್ದಾರೆ. ಆದರೆ, ನಟಿಗೆ ಯಾವುದೇ ತೊಂದರೆ ಆಗಿಲ್ಲ.

‘ಎಲ್ಲರಿಗೂ ನಮಸ್ಕಾರ. ಎಲ್ಲಾ ಸುರಕ್ಷತಾ ಕ್ರಮಗಳನ್ನು ತೆಗೆದುಕೊಂಡ ಹೊರತಾಗಿಯೂ ಕೋವಿಡ್‌ ಪಾಸಿಟಿವ್​ ಆಗಿದೆ. ನಾನು ಗುಣಮುಖನಾಗುತ್ತಿದ್ದೇನೆ. ಶೀಘ್ರವೇ ಹಿಂದಿರುಗುತ್ತೇನೆ. ಧನ್ಯವಾದಗಳು ಮತ್ತು ಶೀಘ್ರದಲ್ಲೇ ನಿಮ್ಮನ್ನು ಭೇಟಿ ಮಾಡುತ್ತೇನೆ’ ಎಂದು ಶ್ರುತಿ ಹಾಸನ್​ ಬರೆದುಕೊಂಡಿದ್ದಾರೆ.

ಈ ಪೋಸ್ಟ್​ಗೆ ನೂರಾರು ಕಮೆಂಟ್​ಗಳು ಬಂದಿವೆ. ಚಿತ್ರರಂಗದ ಅನೇಕ ಸೆಲೆಬ್ರಿಟಿಗಳು ಅವರು ಬೇಗ ಗುಣಮುಖರಾಗಲಿ ಎಂದು ಹಾರೈಸುತ್ತಿದ್ದಾರೆ. ‘ಶ್ರುತಿ ಅವರೇ ಬೇಗ ಗುಣಮುಖರಾಗಿ ಹಿಂದಿರುಗಿ’ ಎಂದು ಸಿದ್ದಾರ್ಥ್​ ಮಲ್ಹೋತ್ರಾ ಬರೆದುಕೊಂಡಿದ್ದಾರೆ.  ‘ಬೇಗ ಗುಣಮುಖರಾಗಿ. ನಿನಗೆ ನನ್ನ ಅಪ್ಪುಗೆ’ ಎಂದು ಗಾಯಕಿ ಸೋಫಿ ಚೌದರಿ ಪ್ರಾರ್ಥಿಸಿದ್ದಾರೆ.

ಶ್ರುತಿ ನಟನೆಯ ‘ಬೆಸ್ಟ್​ಸೆಲ್ಲರ್​’ ವೆಬ್​ ಸರಣಿ ಫೆಬ್ರವರಿ 18ರಂದು ರಿಲೀಸ್​ ಆಗಿದೆ. ಅಮೇಜಾನ್​ ಪ್ರೈಮ್ ವಿಡಿಯೋದಲ್ಲಿ ಈ ಸರಣಿ ಪ್ರಸಾರ ಕಂಡಿದೆ. ಪ್ರಭಾಸ್​ ನಟನೆಯ ಹಾಗೂ ಪ್ರಶಾಂತ್​ ನೀಲ್​ ನಿರ್ದೇಶನದ ‘ಸಲಾರ್​’ ಸಿನಿಮಾದಲ್ಲಿ ಶ್ರುತಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಈ ಸಿನಿಮಾ ಬಗ್ಗೆ ದೊಡ್ಡ ಮಟ್ಟದ ನಿರೀಕ್ಷೆ ಇದೆ.

ನಾನೇ ಮೊದಲು ಐ ಲವ್​ ಯೂ ಹೇಳಿದ್ದು ಎಂದಿದ್ದ ಶ್ರುತಿ:

ಶ್ರುತಿ ಹಾಸನ್​ ಸಮಯ ಸಿಕ್ಕಾಗೆಲ್ಲ ಪ್ರಿಯಕರ ಸಂತನು ಹಜಾರಿಕ ಜೊತೆ ಕಾಲ ಕಳೆಯುತ್ತಾರೆ. ಶ್ರುತಿ ಹಾಸನ್​ ಅವರು ಸೋಶಿಯಲ್​ ಮೀಡಿಯಾ ಖಾತೆಗಳಲ್ಲಿ ಸಾಕಷ್ಟು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಸಂತನು ​ ಜತೆ ತುಂಬ ಆಪ್ತವಾಗಿರುವ ಫೋಟೋಗಳನ್ನು ಅವರು ಅಪ್​ಲೋಡ್​ ಮಾಡುತ್ತಾರೆ.  ಸಾಮಾನ್ಯವಾಗಿ, ಹುಡುಗರು ಮೊದಲು ಪ್ರಪೋಸ್​ ಮಾಡುತ್ತಾರೆ. ಬಹುತೇಕ ಪ್ರೇಮ ಕಥೆಗಳಲ್ಲಿ ಇದೇ ಆಗಿರುತ್ತದೆ. ಆದರೆ, ಶ್ರುತಿ ಹಾಸನ್​ ಆ ರೀತಿ ಅಲ್ಲ. ಬಾಯ್​ಫ್ರೆಂಡ್​ ಸಂತನುಗೆ ಶ್ರುತಿ ಹಾಸನ್​ ಅವರೇ ಮೊದಲು ಐ ಲವ್​ ಯೂ ಹೇಳಿದ್ದರು. ರೀಲ್ಸ್​ನಲ್ಲಿ ಈ ವಿಚಾರ ಹೇಳಿಕೊಂಡಿದ್ದರು.

ಇದನ್ನೂ ಓದಿ: Shruti Haasan: ‘ಸಲಾರ್​​’ನಲ್ಲಿ ಶ್ರುತಿ ಲುಕ್ ಹೇಗಿದೆ? ಪಾತ್ರದ ಹೆಸರೇನು? ಅಭಿಮಾನಿಗಳ ಪ್ರಶ್ನೆಗೆ ಸಿಕ್ತು ಉತ್ತರ!

ಶ್ರುತಿ ಹಾಸನ್​ ಹೊಸ ಫೋಟೋಶೂಟ್​; ಬಗೆ ಬಗೆಯಲ್ಲಿ ಪೋಸ್​ ನೀಡಿದ ಕಮಲ್ ಹಾಸನ್​​ ಪುತ್ರಿ

ನೀವೆಲ್ಲರೂ ನನ್ನ ರಕ್ಷಣೆಗೆ ಬರಬೇಕು: ಸದನದಲ್ಲಿ ಪರಿಪರಿಯಾಗಿ ಬೇಡಿಕೊಂಡ ಶಾಸಕ
ನೀವೆಲ್ಲರೂ ನನ್ನ ರಕ್ಷಣೆಗೆ ಬರಬೇಕು: ಸದನದಲ್ಲಿ ಪರಿಪರಿಯಾಗಿ ಬೇಡಿಕೊಂಡ ಶಾಸಕ
ಗರ್ಭಿಣಿ ಸೊಸೆಯನ್ನು ಮಾವ ಹತ್ಯೆ ಮಾಡಿದ್ಯಾಕೆ? ಸ್ಫೋಟಕ ಕಾರಣ ಬಿಚ್ಚಿಟ್ಟ SP
ಗರ್ಭಿಣಿ ಸೊಸೆಯನ್ನು ಮಾವ ಹತ್ಯೆ ಮಾಡಿದ್ಯಾಕೆ? ಸ್ಫೋಟಕ ಕಾರಣ ಬಿಚ್ಚಿಟ್ಟ SP
ಧಮ್ಕಿ ಕೇಸ್ ಆರೋಪಿ ರಾಜೀವ್ ಗೌಡ ಪತ್ನಿ ವಿಧಾನಸೌಧದಲ್ಲಿ ಪ್ರತ್ಯಕ್ಷ
ಧಮ್ಕಿ ಕೇಸ್ ಆರೋಪಿ ರಾಜೀವ್ ಗೌಡ ಪತ್ನಿ ವಿಧಾನಸೌಧದಲ್ಲಿ ಪ್ರತ್ಯಕ್ಷ
ಸದನದಲ್ಲಿ ಪೆನ್​ಡ್ರೈವ್ ತೋರಿಸಿದ ಆರ್​ ಅಶೋಕ್: ಯಾವ ಮ್ಯಾಟರ್ ಗೊತ್ತಾ?
ಸದನದಲ್ಲಿ ಪೆನ್​ಡ್ರೈವ್ ತೋರಿಸಿದ ಆರ್​ ಅಶೋಕ್: ಯಾವ ಮ್ಯಾಟರ್ ಗೊತ್ತಾ?
ನಿವೃತ್ತಿ ಬಗ್ಗೆ ಸ್ಫೋಟಕ ಹೇಳಿಕೆ ನೀಡಿದ ಕೆಎಲ್ ರಾಹುಲ್
ನಿವೃತ್ತಿ ಬಗ್ಗೆ ಸ್ಫೋಟಕ ಹೇಳಿಕೆ ನೀಡಿದ ಕೆಎಲ್ ರಾಹುಲ್
‘ದರ್ಶನ್ ‘ಲ್ಯಾಂಡ್​ಲಾರ್ಡ್’ ನೋಡಿದ್ದರೆ ಏನೆನ್ನುತ್ತಿದ್ದರು?’
‘ದರ್ಶನ್ ‘ಲ್ಯಾಂಡ್​ಲಾರ್ಡ್’ ನೋಡಿದ್ದರೆ ಏನೆನ್ನುತ್ತಿದ್ದರು?’
ಅಜಿತ್ ಪವಾರ್ ಅಂತ್ಯಕ್ರಿಯೆಗೆ ಸೇರಿದ್ದ ಜನಸಾಗರ ನೋಡಿ!
ಅಜಿತ್ ಪವಾರ್ ಅಂತ್ಯಕ್ರಿಯೆಗೆ ಸೇರಿದ್ದ ಜನಸಾಗರ ನೋಡಿ!
ಈ ವರ್ಷ ನಟಿ ರಚಿತಾ ರಾಮ್ ಮದುವೆ: ವಿಷಯ ಖಚಿತಪಡಿಸಿದ ಡಿಂಪಲ್ ಕ್ವೀನ್
ಈ ವರ್ಷ ನಟಿ ರಚಿತಾ ರಾಮ್ ಮದುವೆ: ವಿಷಯ ಖಚಿತಪಡಿಸಿದ ಡಿಂಪಲ್ ಕ್ವೀನ್
ಸಚಿವ ಸ್ಥಾನಕ್ಕೆ ರಾಜೀನಾಮೆ ಸುದ್ದಿ: ಈ ಬಗ್ಗೆ ಕೆಜೆ ಜಾರ್ಜ್ ಹೇಳಿದ್ದೇನು?
ಸಚಿವ ಸ್ಥಾನಕ್ಕೆ ರಾಜೀನಾಮೆ ಸುದ್ದಿ: ಈ ಬಗ್ಗೆ ಕೆಜೆ ಜಾರ್ಜ್ ಹೇಳಿದ್ದೇನು?
ಅಜಿತ್ ಪವಾರ್ ಅಂತ್ಯಕ್ರಿಯೆ; ಮಕ್ಕಳಿಂದ ಅಪ್ಪನ ಚಿತೆಗೆ ಅಗ್ನಿಸ್ಪರ್ಶ
ಅಜಿತ್ ಪವಾರ್ ಅಂತ್ಯಕ್ರಿಯೆ; ಮಕ್ಕಳಿಂದ ಅಪ್ಪನ ಚಿತೆಗೆ ಅಗ್ನಿಸ್ಪರ್ಶ