ಗಾಯಕಿ ಹರಿಣಿ ತಂದೆ ಎ.ಕೆ. ರಾವ್ ಸಂಶಯಾಸ್ಪದ​ ಸಾವಿಗೆ ಬರೋಬ್ಬರಿ 390 ಕೋಟಿ ಸಾಲದ ನಂಟು

AK Rao Death: ಉದ್ಯಮಿ ಗಿರೀಶ್‌ಗೆ 150 ಕೋಟಿ ರೂಪಾಯಿ ಹಾಗೂ ಪಣಿತರನ್‌ಗೆ 240 ಕೋಟಿ ರೂಪಾಯಿ ಸಾಲ ಕೊಡಿಸಲು ಎ.ಕೆ. ರಾವ್​ ಮುಂದಾಗಿದ್ದರು. ಬಳಿಕ ಅವರು ಶವವಾಗಿ ಪತ್ತೆಯಾದರು. ಈ ಸಂಬಂಧ ತನಿಖೆ ನಡೆಯುತ್ತಿದೆ.​

ಗಾಯಕಿ ಹರಿಣಿ ತಂದೆ ಎ.ಕೆ. ರಾವ್ ಸಂಶಯಾಸ್ಪದ​ ಸಾವಿಗೆ ಬರೋಬ್ಬರಿ 390 ಕೋಟಿ ಸಾಲದ ನಂಟು
ಹರಿಣಿ. ಎ.ಕೆ. ರಾವ್
Follow us
| Updated By: ಮದನ್​ ಕುಮಾರ್​

Updated on: Nov 27, 2021 | 9:23 AM

ಸಿನಿಮಾ ಹಿನ್ನೆಲೆ ಗಾಯಕಿ ಹರಿಣಿ ಅವರ ತಂದೆ ಎ.ಕೆ. ರಾವ್​ ಅನುಮಾನಾಸ್ಪದವಾಗಿ ಸಾವಿಗೀಡಾದ ಘಟನೆಯ ಜಾಲವನ್ನು ಪೊಲೀಸರು ಭೇದಿಸುತ್ತಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಕಿಂಗ್​ ವಿಚಾರಗಳು ಹೊರಬರುತ್ತಿವೆ. ಯಲಹಂಕ ಬಳಿ ರೈಲ್ವೆ ಹಳಿ ಮೇಲೆ ಎ.ಕೆ. ರಾವ್ ಶವ ಪತ್ತೆ ಆಗಿತ್ತು. ಅಚ್ಚರಿ ಏನೆಂದರೆ, ಈ ಸಾವಿಗೆ ಬರೋಬ್ಬರಿ 390 ಕೋಟಿ ರೂಪಾಯಿ ಸಾಲದ ನಂಟು ಇದೆ ಎಂಬುದು ಈಗ ಬಯಲಾಗಿದೆ. ಉದ್ಯಮಿ ಗಿರೀಶ್‌ ಸೇರಿದಂತೆ ಇನ್ನೂ ಇಬ್ಬರಿಗೆ ಸಾಲ ಕೊಡಿಸಲು ಎ.ಕೆ. ರಾವ್ ಮುಂದಾಗಿದ್ದರು ಎಂದು ತಿಳಿದುಬಂದಿದೆ. ಉದ್ಯಮಿ ಗಿರೀಶ್‌ಗೆ 150 ಕೋಟಿ ರೂಪಾಯಿ ಹಾಗೂ ಪಣಿತರನ್‌ಗೆ 240 ಕೋಟಿ ರೂಪಾಯಿ ಸಾಲ ಕೊಡಿಸಲು ಎ.ಕೆ. ರಾವ್​ ಮುಂದಾಗಿದ್ದರು. ಡ್ಯಾನಿಯಲ್ ಆರ್ಮ್ ಸ್ಟ್ರಾಂಗ್‌ನಿಂದ ಸಾಲ ಕೊಡಿಸಲು ಪ್ರಯತ್ನ ಮಾಡಲಾಗಿತ್ತು.

ಡ್ಯಾನಿಯಲ್ ಮುಂಗಡವಾಗಿ 5 ಕೋಟಿ 80 ಲಕ್ಷ ಬಡ್ಡಿ ಪಡೆದುಕೊಂಡಿದ್ದ. ಬಡ್ಡಿ ಹಣ ಸಿಗುತ್ತಿದ್ದಂತೆಯೇ ಡ್ಯಾನಿಯಲ್ ನಾಪತ್ತೆಯಾಗಿದ್ದ. ಹೀಗಾಗಿ ಗಿರೀಶ್, ಪಣಿತರನ್ ಅವರು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಸುದ್ದಗುಂಟೆಪಾಳ್ಯ ಠಾಣೆಯಲ್ಲಿ ಡ್ಯಾನಿಯಲ್, ವಿವೇಕಾನಂದ, ರಾಘವ ವಿರುದ್ಧ ವಂಚನೆ ಕೇಸ್ ದಾಖಲು ಮಾಡಲಾಗಿತ್ತು. ಆ ದೂರಿನ ಹಿನ್ನೆಲೆಯಲ್ಲಿ ಎ.ಕೆ. ರಾವ್ ಅವರನ್ನು ಪೊಲೀಸರು ವಿಚಾರಣೆಗೆ ಕರೆದಿದ್ದರು. ವಿಚಾರಣೆಗೆ ಹಾಜರಾದ ಮರುದಿನವೇ ಅವರು ಶವವಾಗಿ ಪತ್ತೆಯಾಗಿದ್ದು, ಇನ್ನಷ್ಟು ಅನುಮಾನಗಳನ್ನು ಹುಟ್ಟುಹಾಕಿದೆ.

ಯಲಹಂಕ ಬಳಿ ರೈಲ್ವೆ ಹಳಿ ಮೇಲೆ ಎ.ಕೆ. ರಾವ್ ಶವ ಪತ್ತೆ ಆಗಾದ ಆಧಾರ್​ ಕಾರ್ಡ್​ ಸಿಕ್ಕಿತ್ತು. ಅಲ್ಲದೇ, ದೂರು ನೀಡಲು ಸಿದ್ಧಪಡಿಸಿರುವ ಪತ್ರ ಹಾಗೂ ಕೆಲವು ಡಾಕ್ಯುಮೆಂಟ್​ಗಳು ಸಹ ಪತ್ತೆ ಆಗಿದ್ದವು. ತಂದೆಯ ಸಾವು ಅನುಮಾನಾಸ್ಪದ ಆಗಿದೆ ಎಂದು ಎ.ಕೆ. ರಾವ್​ ಪುತ್ರಿ ಶಾಲಿನಿ ಅವರು ಪೊಲೀಸರಿಗೆ ದೂರು ನೀಡಿದ್ದರು. ‘ನಮ್ಮ ತಂದೆ ಕೊಲೆಯಾಗಿದ್ದಾರೆ. ಅವರು ಆತ್ಮಹತ್ಯೆ ಮಾಡಿಕೊಳ್ಳುವವರಲ್ಲ’ ಎಂದು ದೂರಿನಲ್ಲಿ ಹೇಳಲಾಗಿತ್ತು.

ಮೃತದೇಹದಲ್ಲಿ ಎಡಗೈ ನರ ಕಟ್ ಆಗಿತ್ತು. ಕುತ್ತಿಗೆಗೆ ಚಾಕುವಿನಿಂದ ಇರಿದಿರುವುದು ತಿಳಿದುಬಂದಿತ್ತು. ಮೃತದೇಹದ ಬಳಿಯಲ್ಲಿ ಚಾಕು ಸಹ ಸಿಕ್ಕಿತ್ತು. ಪ್ರಾಥಮಿಕ ತನಿಖೆ ವೇಳೆ ಇದು ಆತ್ಮಹತ್ಯೆ ಎಂದು ವೈದ್ಯರು ಹೇಳಿದ್ದರು. ಸದ್ಯ ತನಿಖೆ ಮುಂದುವರಿದಿದ್ದು ಹೊಸ ಹೊಸ ಶಾಕಿಂಗ್​ ವಿಚಾರಗಳು ಬೆಳಕಿಗೆ ಬರುತ್ತಿವೆ.

ಇದನ್ನೂ ಓದಿ:

‘ಜಿಮ್​ಗೆ ಹೋಗೋದ್ರಿಂದ ಸಾವು ಸಂಭವಿಸುತ್ತೆ ಅನ್ನೋದು ತಪ್ಪು’: ನಟ ನೆನಪಿರಲಿ ಪ್ರೇಮ್​

Puneeth Rajkumar: ‘ಪುನೀತ್​ ಅತಿಯಾಗಿ ಜಿಮ್​ ಮಾಡಿದ್ರು’: ಕರಾಳ ಶುಕ್ರವಾರದ ಘಟನೆ ವಿವರಿಸಿದ ಸೆಕ್ಯೂರಿಟಿ ಸಿಬ್ಬಂದಿ

ಉತ್ತರ ಕನ್ನಡ: ಮುರುಡೇಶ್ವರ ಕಡಲತೀರಕ್ಕೆ ಪ್ರವಾಸಿಗರಿಗೆ ನಿರ್ಬಂಧ
ಉತ್ತರ ಕನ್ನಡ: ಮುರುಡೇಶ್ವರ ಕಡಲತೀರಕ್ಕೆ ಪ್ರವಾಸಿಗರಿಗೆ ನಿರ್ಬಂಧ
ಮುಡಾ ಹಗರಣದ ಬಗ್ಗೆ ಪದೇ ಪದೆ ಮಾತಾಡೋದು ಬೇಡ: ಸಚಿವ ವಿ ಸೋಮಣ್ಣ
ಮುಡಾ ಹಗರಣದ ಬಗ್ಗೆ ಪದೇ ಪದೆ ಮಾತಾಡೋದು ಬೇಡ: ಸಚಿವ ವಿ ಸೋಮಣ್ಣ
ಅವರೇ ಹಾರೆ ಹಿಡಿದು ಗುಂಡಿ ಮುಚ್ಚಲು ಹೋಗಿದ್ದರಲ್ಲ ಈಗೇನಾಯ್ತು: ಹೆಚ್​ಡಿಕೆ
ಅವರೇ ಹಾರೆ ಹಿಡಿದು ಗುಂಡಿ ಮುಚ್ಚಲು ಹೋಗಿದ್ದರಲ್ಲ ಈಗೇನಾಯ್ತು: ಹೆಚ್​ಡಿಕೆ
ರಾಮಲೀಲಾ ನಾಟಕ ಪ್ರದರ್ಶನದ ವೇಳೆ ರಾಮ ಪಾತ್ರಧಾರಿ ಹೃದಯಾಘಾತದಿಂದ ಸಾವು
ರಾಮಲೀಲಾ ನಾಟಕ ಪ್ರದರ್ಶನದ ವೇಳೆ ರಾಮ ಪಾತ್ರಧಾರಿ ಹೃದಯಾಘಾತದಿಂದ ಸಾವು
‘ಬಿಗ್​ಬಾಸ್ ಏನು ಅಂಗಡಿಯಲ್ಲಿ ಸಿಗುವ ಒಳ ಉಡುಪಾ ಖರೀದಿ ಮಾಡೋಕೆ’
‘ಬಿಗ್​ಬಾಸ್ ಏನು ಅಂಗಡಿಯಲ್ಲಿ ಸಿಗುವ ಒಳ ಉಡುಪಾ ಖರೀದಿ ಮಾಡೋಕೆ’
ಸಿದ್ದರಾಮಯ್ಯ ವಾಹನಕ್ಕೆ ವಿರುದ್ಧ ದಿಕ್ಕಿನಲ್ಲಿ ಬಂದ ಜನಾರ್ದನ ರೆಡ್ಡಿ ಕಾರು
ಸಿದ್ದರಾಮಯ್ಯ ವಾಹನಕ್ಕೆ ವಿರುದ್ಧ ದಿಕ್ಕಿನಲ್ಲಿ ಬಂದ ಜನಾರ್ದನ ರೆಡ್ಡಿ ಕಾರು
ಅಕ್ಟೋಬರ್ 07 ರಿಂದ 13 ರವರೆಗಿನ ವಾರ ಭವಿಷ್ಯ ತಿಳಿಯಿರಿ
ಅಕ್ಟೋಬರ್ 07 ರಿಂದ 13 ರವರೆಗಿನ ವಾರ ಭವಿಷ್ಯ ತಿಳಿಯಿರಿ
Navratri 2024 4th Day: ನವರಾತ್ರಿ 4ನೇ ದಿನ ಕುಷ್ಮಾಂಡ ದೇವಿಯ ಮಹತ್ವವೇನು?
Navratri 2024 4th Day: ನವರಾತ್ರಿ 4ನೇ ದಿನ ಕುಷ್ಮಾಂಡ ದೇವಿಯ ಮಹತ್ವವೇನು?
Nithya Bhavishya: ನವರಾತ್ರಿಯ ನಾಲ್ಕನೇ ದಿನದ ರಾಶಿ ಭವಿಷ್ಯ ತಿಳಿಯಿರಿ
Nithya Bhavishya: ನವರಾತ್ರಿಯ ನಾಲ್ಕನೇ ದಿನದ ರಾಶಿ ಭವಿಷ್ಯ ತಿಳಿಯಿರಿ
ರಾಜಕಾಲುವೆ ಮುಚ್ಚಿರುವ ಕಾರಣ ಐದಾರು ಮನೆಗಳಿಗೆ ನುಗ್ಗಿದ ಮಳೆ ನೀರು
ರಾಜಕಾಲುವೆ ಮುಚ್ಚಿರುವ ಕಾರಣ ಐದಾರು ಮನೆಗಳಿಗೆ ನುಗ್ಗಿದ ಮಳೆ ನೀರು