AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಸೀಮಾ ಜೊತೆಗಿನ ವಿಚ್ಛೇದನಕ್ಕೆ ನಾನೇ ಕಾರಣ’ ತಪ್ಪು ಒಪ್ಪಿಕೊಂಡ ನಟ ಸೊಹೈಲ್ ಖಾನ್

ಬಾಲಿವುಡ್ ನಟ ಸೊಹೈಲ್ ಖಾನ್, ಮಾಜಿ ಪತ್ನಿ ಸೀಮಾ ಸಜ್ದೇಹ್ ಅವರೊಂದಿಗಿನ ವಿಚ್ಛೇದನದ ಕುರಿತು ಕೊನೆಗೂ ಮೌನ ಮುರಿದಿದ್ದಾರೆ. ರಿಯಾಲಿಟಿ ಶೋ ಒಂದರಲ್ಲಿ ಮಾತನಾಡಿದ ಅವರು, ತಮ್ಮ 25 ವರ್ಷಗಳ ದಾಂಪತ್ಯದ ಅಂತ್ಯಕ್ಕೆ ತಾನೇ ಸಂಪೂರ್ಣ ಜವಾಬ್ದಾರ ಎಂದು ರಾಷ್ಟ್ರೀಯ ದೂರದರ್ಶನದಲ್ಲೇ ಒಪ್ಪಿಕೊಂಡಿದ್ದಾರೆ. ಸೊಹೈಲ್ ಅವರ ಈ ಘನತೆಯುಳ್ಳ ನಡೆಗೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದ್ದು, ವಿಚ್ಛೇದನದ ಬಳಿಕವೂ ಇಬ್ಬರೂ ಪರಸ್ಪರ ಗೌರವ ಕಾಯ್ದುಕೊಂಡಿದ್ದಾರೆ.

‘ಸೀಮಾ ಜೊತೆಗಿನ ವಿಚ್ಛೇದನಕ್ಕೆ ನಾನೇ ಕಾರಣ’ ತಪ್ಪು ಒಪ್ಪಿಕೊಂಡ ನಟ ಸೊಹೈಲ್ ಖಾನ್
ಸೊಹೈಲ್ ಖಾನ್
 ಶ್ರೀಲಕ್ಷ್ಮೀ ಎಚ್
| Edited By: |

Updated on: Jul 10, 2026 | 7:50 AM

Share

ಮುಖ್ಯಾಂಶಗಳು

  • ವಿಚ್ಛೇದನದ ಬಗ್ಗೆ ಸೊಹೈಲ್ ಖಾನ್ ಹೇಳಿಕೆ
  • ಸುಂದರ ದಾಂಪತ್ಯ ಮುರಿಯಲು ನಾನೇ ಕಾರಣ ಎಂದ ನಟ
  • ರಿಯಾಲಿಟಿ ಶೋನಲ್ಲಿ ಬಹಿರಂಗಗೊಂಡ ಸತ್ಯ

ಬಾಲಿವುಡ್ ನಟ ಸಲ್ಮಾನ್ ಖಾನ್ ಅವರ ಸಹೋದರ ಸೊಹೈಲ್ ಖಾನ್ ಹಾಗೂ ಅವರ ಮಾಜಿ ಪತ್ನಿ ಸೀಮಾ ಸಜ್ದೇಹ್ 25 ವರ್ಷಗಳ ದಾಂಪತ್ಯ ಜೀವನದ ಬಳಿಕ 2020 ರಲ್ಲಿ ವಿಚ್ಛೇದನ ಪಡೆದಿದ್ದರು. ಬೇರ್ಪಟ್ಟ ನಂತರ ಸೀಮಾ ಅವರು ಹಲವು ಸಂದರ್ಶನಗಳಲ್ಲಿ ಈ ಬಗ್ಗೆ ಮಾತನಾಡಿದ್ದರಾದರೂ, ಸೊಹೈಲ್ ಖಾನ್ ಮಾತ್ರ ಮೌನ ವಹಿಸಿದ್ದರು. ಆದರೆ ಈಗ ಮೊದಲ ಬಾರಿಗೆ ಸೊಹೈಲ್ ಖಾನ್ ಅವರು ತಮ್ಮ ವಿಚ್ಛೇದನದ ಕುರಿತು ಬಹಿರಂಗವಾಗಿ ಮಾತನಾಡಿದ್ದು, ಇದರ ಜವಾಬ್ದಾರಿಯನ್ನು ತಾವೇ ಹೊತ್ತುಕೊಂಡಿದ್ದಾರೆ.

ಇತ್ತೀಚೆಗೆ ‘ಅಲೈಯನ್ಸ್’ ಎಂಬ ರಿಯಾಲಿಟಿ ಶೋನಲ್ಲಿ ಈ ಮಾಜಿ ದಂಪತಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಈ ಕಾರ್ಯಕ್ರಮದ ಪ್ರೋಮೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಅದರಲ್ಲಿ ನಿರೂಪಕ ಕುನಾಲ್ ಖೇಮು ಅವರು ಮಾಜಿ ಪತ್ನಿಯನ್ನು ನೋಡಿದಾಗ ನಿಮಗೇನನಿಸುತ್ತದೆ ಎಂದು ಸೊಹೈಲ್ ಅವರ ಬಳಿ ಕೇಳಿದ್ದಾರೆ. ಇದಕ್ಕೆ ಉತ್ತರಿಸಿದ ಸೊಹೈಲ್, ‘ನನ್ನ ಜೀವನದ 25 ಸುಂದರ ವರ್ಷಗಳನ್ನು ನಾನು ಈಕೆಯೊಂದಿಗೆ ಕಳೆದಿದ್ದೇನೆ. ನಮ್ಮ ಸಂಬಂಧದಲ್ಲಿ ಏನಾದರೂ ತಪ್ಪು ನಡೆದಿದ್ದರೆ, ಅದರ ಸಂಪೂರ್ಣ ಜವಾಬ್ದಾರಿಯನ್ನು ನಾನೇ ವಹಿಸಿಕೊಳ್ಳುತ್ತೇನೆ’ ಎಂದು ನ್ಯಾಷನಲ್ ಟಿವಿಯಲ್ಲೇ ಒಪ್ಪಿಕೊಂಡಿದ್ದಾರೆ.

ಸೊಹೈಲ್ ಖಾನ್ ಅವರ ಈ ಘನತೆಯುಳ್ಳ ತಪ್ಪೊಪ್ಪಿಗೆಯನ್ನು ಕೇಳಿ ಸೀಮಾ ಸಜ್ದೇಹ್ ಸಂತಸ ವ್ಯಕ್ತಪಡಿಸಿದ್ದು, ಕಾರ್ಯಕ್ರಮದಲ್ಲಿದ್ದ ಉಳಿದ ಸ್ಪರ್ಧಿಗಳು ಚಪ್ಪಾಳೆ ತಟ್ಟಿ ಗೌರವಿಸಿದ್ದಾರೆ. ಇತ್ತ ನೆಟಿಜನ್‌ಗಳು ಸಹ ಸೊಹೈಲ್ ವರ್ತನೆಗೆ ಫಿದಾ ಆಗಿದ್ದು, ‘ನಿಜವಾದ ಪುರುಷ ಎಂದರೆ ಹೀಗಿರಬೇಕು’, ‘ಇದು ಖಾನ್ ಕುಟುಂಬದ ಸಂಸ್ಕಾರ’ ಹಾಗೂ ‘ಪರಸ್ಪರ ಗೌರವ ಕೊಡುವುದು ಎಂದರೆ ಇದೇ’ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಕಮೆಂಟ್ ಮಾಡುವ ಮೂಲಕ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ಇದನ್ನೂ ಓದಿ: ಸಲ್ಲು ಸಹೋದರ ಸೊಹೈಲ್​-ಸೀಮಾ ವಿಚ್ಛೇದನ; ರಾತ್ರೋರಾತ್ರಿ ಓಡಿಹೋಗಿ ಮದುವೆ ಆಗಿದ್ದ ಜೋಡಿಯ ಪ್ರೇಮ ಕಹಾನಿ ಇಲ್ಲಿದೆ

ಸೀಮಾ ಮತ್ತು ಸೊಹೈಲ್ 1998 ರಲ್ಲಿ ಮದುವೆಯಾಗಿದ್ದು, ಇವರಿಗೆ ಯೋಹನ್ ಹಾಗೂ ನಿರ್ವಾಣ ಎಂಬ ಇಬ್ಬರು ಮಕ್ಕಳಿದ್ದಾರೆ. ವಿಚ್ಛೇದನದ ಬಳಿಕವೂ ಇಬ್ಬರೂ ಒಟ್ಟಾಗಿ ಮಕ್ಕಳ ಜವಾಬ್ದಾರಿಯನ್ನು ನೋಡಿಕೊಳ್ಳುತ್ತಿದ್ದಾರೆ. ಈ ಹಿಂದೆ ಸಂದರ್ಶನವೊಂದರಲ್ಲಿ ಮಾತನಾಡಿದ್ದ ಸೀಮಾ, ‘ಖಾನ್ ಕುಟುಂಬ ಯಾವಾಗಲೂ ನನ್ನ ಕುಟುಂಬವೇ ಆಗಿರುತ್ತದೆ. ಸೊಹೈಲ್‌ನಿಂದ ಬೇರ್ಪಟ್ಟ ತಕ್ಷಣ ಆ ಸಂಬಂಧಗಳೇನು ಮುರಿದುಹೋಗುವುದಿಲ್ಲ. ನನ್ನ ಸ್ವಂತ ಗುರುತಿಗಾಗಿ ನಾನು ದೂರವಾದೆ ಅಷ್ಟೇ, ಸೊಹೈಲ್ ನನ್ನ ಮಕ್ಕಳ ತಂದೆಯಾಗಿ ಯಾವಾಗಲೂ ಇರುತ್ತಾರೆ’ ಎಂದು ಹೇಳಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us