AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೆಲ ಸಿನಿಮಾಗಳಲ್ಲಿ ನಟಿಸಿ ತಪ್ಪು ಮಾಡಿದೆ: ಸಿನಿಮಾ ಆಯ್ಕೆ ಬಗ್ಗೆ ಶ್ರೀಲೀಲಾ ಮಾತು

ತೆಲುಗು ಚಿತ್ರರಂಗದಲ್ಲಿ ಬಲು ಬೇಗನೆ ಟಾಪ್ ನಟಿಯಾಗಿ ಮೆರೆದ ಶ್ರೀಲೀಲಾ ಈಗ ತಮಿಳು ಚಿತ್ರರಂಗದಲ್ಲೂ ಬೇಡಿಕೆಯ ನಟಿ ಎನಿಸಿಕೊಂಡಿದ್ದಾರೆ. ತಮಿಳಿನಲ್ಲಿ ಇದೀಗ ‘ಓಂ’ ಸಿನಿಮಾನಲ್ಲಿ ಶ್ರೀಲೀಲಾ ನಟನೆ ಮಾಡಿದ್ದಾರೆ. ಸಿನಿಮಾ ಕೆಲವೇ ದಿನಗಳಲ್ಲಿ ರಿಲೀಸ್ ಆಗಲಿದೆ. ಇತ್ತೀಚೆಗಷ್ಟೆ ಹೈದರಾಬಾದ್​​ನಲ್ಲಿ ನಡೆದ ಸಿನಿಮಾದ ಪ್ರೀ ರಿಲೀಸ್ ಕಾರ್ಯಕ್ರಮದಲ್ಲಿ ಮಾತನಾಡಿದ ನಟಿ ಶ್ರೀಲೀಲಾ, ತಮ್ಮ ವೃತ್ತಿ ಜೀವನದಲ್ಲಿ ತಾವು ಮಾಡಿದ ಕೆಲ ತಪ್ಪು ಆಯ್ಕೆಗಳ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ.

ಕೆಲ ಸಿನಿಮಾಗಳಲ್ಲಿ ನಟಿಸಿ ತಪ್ಪು ಮಾಡಿದೆ: ಸಿನಿಮಾ ಆಯ್ಕೆ ಬಗ್ಗೆ ಶ್ರೀಲೀಲಾ ಮಾತು
Sreeleela Movie
ಮಂಜುನಾಥ ಸಿ.
|

Updated on: Nov 17, 2026 | 1:09 PM

Share

ಮುಖ್ಯಾಂಶಗಳು

  • ತಮ್ಮ ಹಳೆಯ ಸಿನಿಮಾಗಳ ಬಗ್ಗೆ ಶ್ರೀಲೀಲಾ ಮಾತು
  • ಕೆಲ ಕೆಟ್ಟ ಸಿನಿಮಾಗಳಲ್ಲಿ ನಟಿಸಿರುವುದಾಗಿ ನಟಿ ಶ್ರೀಲೀಲಾ
  • ಶ್ರೀಲೀಲಾ ಆಯ್ಕೆ ಬದಲಾಗಿದೆಯಂತೆ

ಕನ್ನಡದ ನಟಿ ಶ್ರೀಲೀಲಾ ಈಗ ಪರ ಭಾಷೆ ಸಿನಿಮಾಗಳಲ್ಲಿ ಸಖತ್ ಆಗಿ ಮಿಂಚುತ್ತಿದ್ದಾರೆ. ತೆಲುಗು ಚಿತ್ರರಂಗದಲ್ಲಿ ಬಲು ಬೇಗನೆ ಟಾಪ್ ನಟಿಯಾಗಿ ಮೆರೆದ ಶ್ರೀಲೀಲಾ ಈಗ ತಮಿಳು ಚಿತ್ರರಂಗದಲ್ಲೂ ಬೇಡಿಕೆಯ ನಟಿ ಎನಿಸಿಕೊಂಡಿದ್ದಾರೆ. ತಮಿಳಿನಲ್ಲಿ ಇದೀಗ ‘ಓಂ’ ಸಿನಿಮಾನಲ್ಲಿ ಶ್ರೀಲೀಲಾ ನಟನೆ ಮಾಡಿದ್ದಾರೆ. ಸಿನಿಮಾ ಕೆಲವೇ ದಿನಗಳಲ್ಲಿ ರಿಲೀಸ್ ಆಗಲಿದೆ. ಇತ್ತೀಚೆಗಷ್ಟೆ ಹೈದರಾಬಾದ್​​ನಲ್ಲಿ ನಡೆದ ಸಿನಿಮಾದ ಪ್ರೀ ರಿಲೀಸ್ ಕಾರ್ಯಕ್ರಮದಲ್ಲಿ ಮಾತನಾಡಿದ ನಟಿ ಶ್ರೀಲೀಲಾ, ತಮ್ಮ ವೃತ್ತಿ ಜೀವನದಲ್ಲಿ ತಾವು ಮಾಡಿದ ಕೆಲ ತಪ್ಪು ಆಯ್ಕೆಗಳ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ.

ತಮ್ಮ ಸಿನಿಮಾ ಪ್ರಯಾಣದ ಆರಂಭಿಕ ದಿನಗಳನ್ನು ನೆನಪಿಸಿಕೊಂಡ ಶ್ರೀಲೀಲಾ, ‘ಮುಂಬೈನಲ್ಲಿ ಮೆಡಿಕಲ್ ಇಂಟರ್ನ್‌ಶಿಪ್ ಮಾಡುತ್ತಿದ್ದ ಕಾಲದಲ್ಲೇ ತನಗೆ ಸಾಕಷ್ಟು ಸಿನಿಮಾಗಳ ಆಫರ್‌ಗಳು ಬಂದಿದ್ದವು. ಆದರೆ ವಿದ್ಯಾಭ್ಯಾಸದ ಕಾರಣದಿಂದ ಆ ಸಂದರ್ಭದಲ್ಲಿ ಆ ಸಿನಿಮಾಗಳನ್ನು ಒಪ್ಪಿಕೊಳ್ಳಲು ಸಾಧ್ಯವಾಗಲಿಲ್ಲ’ ಎಂದರು.

ಚಿಕ್ಕ ವಯಸ್ಸಿನಲ್ಲೇ ಚಿತ್ರರಂಗಕ್ಕೆ ಕಾಲಿಟ್ಟ ಕಾರಣ ನನಗೆ ಆಯ್ಕೆ ಮಾಡುವ ಶಕ್ತಿ ಇರಲಿಲ್ಲ, ಬಂದ ಪ್ರತಿಯೊಂದು ಅವಕಾಶವನ್ನೂ ಯಾವುದೇ ಹಿಂಜರಿಕೆಯಿಲ್ಲದೆ ಒಪ್ಪಿಕೊಂಡೆ ಆದರೂ ನೀವೆಲ್ಲ ಸಾಕಷ್ಟು ಪ್ರೀತಿ ತೋರಿಸಿದಿರಿ. ಒಂದು ಹಂತದಲ್ಲಿ ನಾನು ಮಾಡುತ್ತಿದ್ದ ಸಿನಿಮಾಗಳ ಆಯ್ಕೆಯ ಬಗ್ಗೆ ನನ್ನಲ್ಲೇ ಹಲವು ಸಂದೇಹಗಳು ಮೂಡಿದವು. ನನಗೆ ಸ್ವಲ್ಪ ಬಿಡುವಿನ ಸಮಯ ಸಿಕ್ಕಾಗಲೆಲ್ಲಾ, ಹಿಂದೆ ನಾನು ಮಾಡಿದ ಚಿತ್ರಗಳ ಬಗ್ಗೆ ಕೂಲಂಕಷವಾಗಿ ಆಲೋಚಿಸುತ್ತಿದ್ದೆ. ಆಗೆಲ್ಲ ನಾನು ಮಾಡಿದ ತಪ್ಪುಗಳು ನನಗೆ ಸ್ಪಷ್ಟವಾಗಿ ಕಾಣುತ್ತಿದ್ದವು’ ಎಂದರು ಶ್ರೀಲೀಲಾ.

ಇದನ್ನೂ ಓದಿ:‘ಧರ್ಮನ್’ ಚಿತ್ರಕ್ಕೆ ನಟಿ ಶ್ರೀಲೀಲಾ ಎಂಟ್ರಿ; ರಜನಿಕಾಂತ್ ಜೊತೆ ನಟಿಸುವ ಅವಕಾಶ

‘ನಾನು ‘ಓಂ’ ಸಿನಿಮಾದ ನಿರ್ದೇಶಕ ರಾಜಕುಮಾರಿ ಪೆರ್ರಿಸ್ವಾಮಿ ಅವರಿಗೆ ಧನ್ಯವಾದ ಹೇಳಬೇಕು. ನಾನು ಯೋಚಿಸುವ ವಿಧಾನ ಬದಲಾಯಿಸಿದ್ದೇ ಅವರು. ‘ನೀನು ಯಾವಾಗ ಆಯ್ಕೆ ಮಾಡಲು ಆರಂಭಿಸುತ್ತೀಯೋ ಆಗಲೇ ನಿನ್ನ ಜೀವನ ಬದಲಾಗುತ್ತದೆ’ ಎಂದರು. ಅವರ ಮಾತಿನಂತೆ ನಾನು ಸಿನಿಮಾಗಳನ್ನು ಒಪ್ಪಿಕೊಳ್ಳುವ ಬದಲು ಆಯ್ಕೆ ಮಾಡಿಕೊಳ್ಳಲು ಆರಂಭಿಸಿದೆ. ಅದರ ಭಾಗವಾಗಿಯೇ ನಾನು ‘ಓಂ’ ಸಿನಿಮಾನಲ್ಲಿ ನಟನೆ ಮಾಡಿದ್ದೇನೆ’ ಎಂದರು.

‘ನಾನು ಸಿನಿಮಾಗಳಿಂದ ಬ್ರೇಕ್ ಪಡೆದು ಮೆಡಿಕಲ್ ಕಾಲೇಜಿನ ಇಂಟರ್ನ್​​ಶಿಪ್​ ಮಾಡುವಾಗ ನನಗೆ ಈ ಸಿನಿಮಾದ ಕತೆ ಹೇಳಲಾಗಿತ್ತು. ಆಗ ನನಗೆ ಗೊಂದಲಗಳಿದ್ದವು. ಆದರೆ ನಿರ್ದೇಶಕರೊಟ್ಟಿಗೆ ಮಾತನಾಡಿದ ಬಳಿಕ ನನಗೆ ಎಲ್ಲವೂ ಸ್ಪಷ್ಟವಾಯ್ತು’ ಎಂದ ಶ್ರೀಲೀಲಾ, ‘ಈ ಕಥೆಯನ್ನು ನನಗೆ ಮೊದಲಿಗೆ ವಿವರಿಸಿದಾಗಲೇ, ಇದರಲ್ಲಿ ಯಾವುದೇ ಕಮರ್ಶೀಯಲ್ ಹಾಡುಗಳು ಇರುವುದಿಲ್ಲ ಎಂದು ನಿರ್ದೇಶಕರು ಸ್ಪಷ್ಟಪಡಿಸಿದ್ದರು. ಅದು ನನಗೆ ತುಸು ಹೊಸದು ಅನಿಸಿತು, ಏಕೆಂದರೆ ನನ್ನಿಂದ ಸಿನಿಮಾಕ್ಕೆ ಕೊಡುವುದೇ ಹಾಡು ಮತ್ತು ಡ್ಯಾನ್ಸ್ ಎಂದು ನಾನು ಅಂದುಕೊಂಡಿದ್ದೆ. ಅವರು ಅದನ್ನು ಬದಲಾಯಿಸಿದರು. ಅದಕ್ಕಾಗಿ ಅವರಿಗೆ ಧನ್ಯವಾದ’ ಎಂದರು ಶ್ರೀಲೀಲಾ.

ಶ್ರೀಲೀಲಾ ಈ ವರೆಗೆ ಕೇವಲ ‘ಗ್ಲಾಮರಸ್-ಬಬ್ಲಿ’ ಪಾತ್ರಗಳಲ್ಲಿ ಮಾತ್ರವೇ ನಟಿಸಿದ್ದರು. ನಟನೆಗೆ ಒತ್ತು ಇರುವ ಸಿನಿಮಾನಲ್ಲಿ ಶ್ರೀಲೀಲಾ ನಟಿಸಿದ್ದು ಬಹಳ ಕಡಿಮೆ. ಅವರನ್ನು ಕೇವಲ ಹಾಡು ಮತ್ತು ಡ್ಯಾನ್ಸ್​​ಗಾಗಿ ಮಾತ್ರವೇ ನಿರ್ದೇಶಕರು ಬಳಸಿಕೊಂಡಿದ್ದರು. ಆದರೆ ‘ಓಂ’ ಸಿನಿಮಾನಲ್ಲಿ ಅವರು ಗೃಹಿಣಿಯ ಪಾತ್ರದಲ್ಲಿ ನಟನೆ ಮಾಡಿದ್ದಾರೆ. ಈ ಸಿನಿಮಾದ ಮೂಲಕ ತಮ್ಮ ಸಿನಿಮಾಗಳ ಆಯ್ಕೆಯ ವಿಧಾನ ಬದಲಾಗಲಿದೆ ಎಂದು ಶ್ರೀಲೀಲಾ ಹೇಳಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಮಂಜುನಾಥ ಸಿ.
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
ಸೌಜನ್ಯ ಪ್ರಕರಣ: ತನಿಖೆಗಾಗಿ ಎಸ್​ಐಟಿಯಿಂದ ಮೆಡಿಕಲ್ ಬೋರ್ಡ್ ರಚನೆ
ಸೌಜನ್ಯ ಪ್ರಕರಣ: ತನಿಖೆಗಾಗಿ ಎಸ್​ಐಟಿಯಿಂದ ಮೆಡಿಕಲ್ ಬೋರ್ಡ್ ರಚನೆ
ದೆಹಲಿಯಲ್ಲಿ ತಮಿಳುನಾಡು ಸಿಎಂ ವಿಜಯ್​ ಜೊತೆ ಸಿಎಂ ಡಿಕೆಶಿ ಚರ್ಚಿಸಿದ್ದೇನು?
ದೆಹಲಿಯಲ್ಲಿ ತಮಿಳುನಾಡು ಸಿಎಂ ವಿಜಯ್​ ಜೊತೆ ಸಿಎಂ ಡಿಕೆಶಿ ಚರ್ಚಿಸಿದ್ದೇನು?
ಬೇಲೂರಿನ ಕೋಗಿಲಮನೆ ಬಳಿ 30ಕ್ಕೂ ಹೆಚ್ಚು ಕಾಡಾನೆಗಳು ಪ್ರತ್ಯಕ್ಷ
ಬೇಲೂರಿನ ಕೋಗಿಲಮನೆ ಬಳಿ 30ಕ್ಕೂ ಹೆಚ್ಚು ಕಾಡಾನೆಗಳು ಪ್ರತ್ಯಕ್ಷ
19 ವರ್ಷದ ಇಬ್ಬರು ವಿದ್ಯಾರ್ಥಿನಿಯರು ರಸ್ತೆ ಅಪಘಾತದಲ್ಲಿ ಬಲಿ
19 ವರ್ಷದ ಇಬ್ಬರು ವಿದ್ಯಾರ್ಥಿನಿಯರು ರಸ್ತೆ ಅಪಘಾತದಲ್ಲಿ ಬಲಿ
ಚಳ್ಳಕೆರೆ ಬಳಿ ಡಿವೈಡರ್‌ಗೆ ಡಿಕ್ಕಿ ಹೊಡೆದ ಸಾರಿಗೆ ಬಸ್: 42 ಮಂದಿ ಪಾರು
ಚಳ್ಳಕೆರೆ ಬಳಿ ಡಿವೈಡರ್‌ಗೆ ಡಿಕ್ಕಿ ಹೊಡೆದ ಸಾರಿಗೆ ಬಸ್: 42 ಮಂದಿ ಪಾರು
ಸ್ಟಿಂಗ್ ಪ್ರಕರಣ: ಪೊಲೀಸರಿಗೆ ಮೊಬೈಲ್ ನೀಡಲು ಕೃಪಾ ಆಳ್ವ ನಿರಾಕರಣೆ!
ಸ್ಟಿಂಗ್ ಪ್ರಕರಣ: ಪೊಲೀಸರಿಗೆ ಮೊಬೈಲ್ ನೀಡಲು ಕೃಪಾ ಆಳ್ವ ನಿರಾಕರಣೆ!
ಪ್ರಧಾನಿ ಮೋದಿ ಆಡಳಿತದ ಯಶೋಗಾಥೆ, ಯೋಜನೆಗಳ ಅಧ್ಯಯನ
ಪ್ರಧಾನಿ ಮೋದಿ ಆಡಳಿತದ ಯಶೋಗಾಥೆ, ಯೋಜನೆಗಳ ಅಧ್ಯಯನ
ವೀರಾಂಜನೇಯ ವಿಗ್ರಹಕ್ಕೆ ಲೇಪಿಸಿದ ಬೆಣ್ಣೆ 17 ದಿನ ಕಳೆದರೂ ಕರಗಿಲ್ಲ
ವೀರಾಂಜನೇಯ ವಿಗ್ರಹಕ್ಕೆ ಲೇಪಿಸಿದ ಬೆಣ್ಣೆ 17 ದಿನ ಕಳೆದರೂ ಕರಗಿಲ್ಲ
‘ಮಾಡಿರೋದೇ ಒಂದು ಸಿನಿಮಾ, ಗಂಡಸರ ಹಾಗೆ ನಡೆದುಕೋ; ಜಗ್ಗುಗೆ ಮಂಜು ಅವಾಜ್
‘ಮಾಡಿರೋದೇ ಒಂದು ಸಿನಿಮಾ, ಗಂಡಸರ ಹಾಗೆ ನಡೆದುಕೋ; ಜಗ್ಗುಗೆ ಮಂಜು ಅವಾಜ್
ಸೆಂಟ್ರಲ್ ಜೈಲಿನ ಬಳಿ ನಿಷಿದ್ಧ ವಸ್ತುಗಳು: ಕೈದಿಗಳಿಗೆ ತಲುಪಿಸುವ ಯತ್ನ ವಿಫಲ
ಸೆಂಟ್ರಲ್ ಜೈಲಿನ ಬಳಿ ನಿಷಿದ್ಧ ವಸ್ತುಗಳು: ಕೈದಿಗಳಿಗೆ ತಲುಪಿಸುವ ಯತ್ನ ವಿಫಲ