‘ಆಸ್ಕರ್’ ಕಾರ್ಯಕ್ರಮದ ವೇಳೆ ನಡೆದಿತ್ತು ಯಾರೂ ಊಹಿಸಿದ ಘಟನೆ; ನೆನಪಿಸಿಕೊಂಡ ರಾಜಮೌಳಿ
‘ಆರ್ಆರ್ಆರ್’ ಚಿತ್ರದ ವಿಶೇಷ ಶೋ ಜಪಾನ್ನಲ್ಲಿ ನಡೆದಿದೆ. 2022ರಲ್ಲೇ ಈ ಕಾರ್ಯಕ್ರಮ ಆಯೋಜನೆಗೊಳ್ಳಬೇಕಿತ್ತು. ಆದರೆ, ಕೊವಿಡ್ ಕಾರಣದಿಂದ ಕಾರ್ಯಕ್ರಮ ಮುಂದಕ್ಕೆ ಹೋಗಿತ್ತು. ಇತ್ತೀಚೆಗೆ ಈ ವಿಶೇಷ ಶೋ ನಡೆದಿದ್ದು, ರಾಜಮೌಳಿ ಭಾಗಿ ಆಗಿದ್ದಾರೆ. ಈ ವೇಳೆ ಅವರು ಹಳೆಯ ಘಟನೆ ನೆನಪಿಸಿಕೊಂಡಿದ್ದಾರೆ.

‘ಆರ್ಆರ್ಆರ್’ ಚಿತ್ರದ (RRR Movie) ‘ನಾಟು ನಾಟು..’ ಹಾಡಿಗೆ ಆಸ್ಕರ್ ಲಭಿಸಿ ಒಂದು ವರ್ಷಗಳ ಮೇಲಾಗಿದೆ. ಆದರೂ ಅದರ ಬಗ್ಗೆ ಆಗುತ್ತಿರುವ ಚರ್ಚೆ ನಿಂತಿಲ್ಲ. ಸಿನಿಮಾ ತಂಡದವರು ಆಗಾಗ ಇದರ ಬಗ್ಗೆ ನೆನಪಿಸಿಕೊಳ್ಳುತ್ತಾರೆ. ಈ ಚಿತ್ರದಲ್ಲಿ ಜೂನಿಯರ್ ಎನ್ಟಿಆರ್ ಹಾಗೂ ರಾಮ್ ಚರಣ್ ಮುಖ್ಯಭೂಮಿಕೆ ನಿರ್ವಹಿಸಿದ್ದರು. 95ನೇ ಸಾಲಿನ ಆಸ್ಕರ್ ಅವಾರ್ಡ್ ವೇದಿಕೆ ಮೇಲೆ ಏನಾಗಿತ್ತು ಎಂಬುದನ್ನು ಎಸ್ಎಸ್ ರಾಜಮೌಳಿ ಅವರು ಹೇಳಿದ್ದಾರೆ. ಈ ವಿಚಾರ ಅನೇಕರಿಗೆ ಅಚ್ಚರಿ ತಂದಿದೆ.
‘ಆರ್ಆರ್ಆರ್’ ಚಿತ್ರದ ವಿಶೇಷ ಶೋ ಜಪಾನ್ನಲ್ಲಿ ನಡೆದಿದೆ. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ 2022ರಲ್ಲೇ ಈ ಕಾರ್ಯಕ್ರಮ ಆಯೋಜನೆಗೊಳ್ಳಬೇಕಿತ್ತು. ಆದರೆ, ಕೊವಿಡ್ ಕಾರಣದಿಂದ ಕಾರ್ಯಕ್ರಮ ಮುಂದಕ್ಕೆ ಹೋಗಿತ್ತು. ಇತ್ತೀಚೆಗೆ ಈ ವಿಶೇಷ ಶೋ ನಡೆದಿದ್ದು, ರಾಜಮೌಳಿ ಭಾಗಿ ಆಗಿದ್ದಾರೆ. ಈ ವೇಳೆ ಅವರು ಹಳೆಯ ಘಟನೆ ನೆನಪಿಸಿಕೊಂಡಿದ್ದಾರೆ.
‘ಆಸ್ಕರ್ ಅವಾರ್ಡ್ ಕಾರ್ಯಕ್ರಮದಲ್ಲಿ ನನ್ನ ಸಹೋದರ ಎಂಎಂ ಕೀರವಾಣಿ ಜೊತೆ ನಡೆದ ಒಂದು ಫನ್ ವಿಚಾರವನ್ನು ಹೇಳಿಕೊಳ್ಳಲೇಬೇಕು. ‘ನಾಟು ನಾಟು..’ ಹಾಡು ಆಸ್ಕರ್ಗೆ ನಾಮಿನೇಟ್ ಆಗಿತ್ತು. ಈ ಅವಾರ್ಡ್ನ ನಾವು ಗೆದ್ದೇ ಗೆಲ್ಲುತ್ತೇವೆ ಎನ್ನುವ ಭರವಸೆ ಅವರಿಗೆ ಇತ್ತು. ಆಸ್ಕರ್ ವೇದಿಕೆ ಮೇಲೆ 45 ಸೆಕೆಂಡ್ ಮಾತ್ರ ಮಾತನಾಡುವ ಅವಕಾಶ ಇರುತ್ತದೆ. ಅವರು ವೇದಿಕೆ ಏರುತ್ತಿದ್ದಂತೆ ಉಸಿರಾಡಲೂ ಅವರ ಬಳಿ ಸಾಧ್ಯವಾಗಿಲ್ಲ’ ಎಂದಿದ್ದಾರೆ ರಾಜಮೌಳಿ. ಈ ರೀತಿ ಆಗುತ್ತದೆ ಎಂದು ಅವರು ಯಾರೂ ಊಹಿಸಿರಲಿಲ್ಲ.
‘ಮೂರು ವಾರಗಳಿಂದ ಕೀರವಾಣಿ ಅವರು ಆಸ್ಕರ್ ವೇದಿಕೆ ಮೇಲೆ ಏನು ಮಾತನಾಡಬೇಕು ಎಂಬುದನ್ನು ಪ್ರ್ಯಾಕ್ಟಿಸ್ ಮಾಡಿಕೊಳ್ಳುತ್ತಿದ್ದರು. ನಾವು ಅವರನ್ನು ಟ್ರೇನ್ ಮಾಡುತ್ತಿದ್ದೆವು. ಹೇಗೆ ನಡೆಯಬೇಕು, ಹೇಗೆ ನಿಲ್ಲಬೇಕು, ಹೇಗೆ ಜನರತ್ತ ಕೈ ಬೀಸಬೇಕು ಎಂದು ಹೇಳಿದ್ದೆವು. ಮೂರು ವಾರ ಕೀರವಾಣಿ ಅವರು ಇದನ್ನೇ ಪ್ರ್ಯಾಕ್ಟಿಸ್ ಮಾಡಿದ್ದರು’ ಎಂದಿದ್ದಾರೆ ಅವರು.
‘ಅಕಾಡೆಮಿ ಅವಾರ್ಡ್ ಕಾರ್ಯಕ್ರಮದಲ್ಲಿ ಅವರು ಎಲ್ಲವನ್ನೂ ಮರೆತರು. ಅವರು ವೇದಿಕೆ ಏರುವಾಗ ಎದುರುಸಿರು ಬಂತು. ಅದನ್ನು ನಿಯಂತ್ರಿಸಿಕೊಂಡು ಅವರು ಸ್ಪೀಚ್ ಕೊಟ್ಟರು. ಅವರು ಹಾಡನ್ನು ಕೂಡ ಹೇಳಿದರು. ನಾವು ಮರುದಿನ ಮನೆಗೆ ಬಂದೆವು’ ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ ರಾಜಮೌಳಿ.
ಇದನ್ನೂ ಓದಿ: ‘ಆರ್ಆರ್ಆರ್ ಚಿತ್ರಕ್ಕೆ ಸೀಕ್ವೆಲ್ ಬರುತ್ತದೆ’; ಜಪಾನ್ನಲ್ಲಿ ರಹಸ್ಯ ಬಿಚ್ಚಿಟ್ಟ ರಾಜಮೌಳಿ
ಜಪಾನ್ ವೇದಿಕೆ ಮೇಲೆ ರಾಜಮೌಳಿ ‘ಆರ್ಆರ್ಆರ್ 2’ ಮಾಡುವ ಬಗ್ಗೆ ಮಾತನಾಡಿದ್ದಾರೆ. ಆದರೆ, ಈ ಬಗ್ಗೆ ಹೆಚ್ಚಿನ ಮಾಹಿತಿ ರಿವೀಲ್ ಮಾಡುವುದಿಲ್ಲ ಎಂದು ಕೂಡ ಹೇಳಿದ್ದಾರೆ. ಸದ್ಯ ಅವರು ಮಹೇಶ್ ಬಾಬು ಜೊತೆ ಸಿನಿಮಾ ಮಾಡುತ್ತಿದ್ದಾರೆ. ಈ ಚಿತ್ರದ ಕೆಲಸಗಳು ಶೀಘ್ರವೇ ಆರಂಭ ಆಗಲಿದೆ. ಮಹೇಶ್ ಬಾಬು ಅವರು ಈ ಚಿತ್ರಕ್ಕಾಗಿ ಟ್ರಾನ್ಸ್ಫಾರ್ಮೇಷನ್ ಮಾಡಿಕೊಳ್ಳುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ



