AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

’‘ಓಹ್ ಭ್ರಮೆ‘ ಅಲ್ಲ’’: ಮತ್ತೆ ಒಂದಾದ ಪ್ರೇಮ್-ಸುದೀಪ್

Kichcha Sudeep: ಸುದೀಪ್ ಅವರಿಗಾಗಿ ವಿಶೇಷ ವಿಡಿಯೋ ಮೂಲಕ ಹುಟ್ಟುಹಬ್ಬದ ಶುಭಾಶಯಗಳನ್ನು ನಿರ್ದೇಶಕ ಪ್ರೇಮ್ ಕೋರಿದ್ದಾರೆ. ಅದೇ ವಿಡಿಯೋನಲ್ಲಿ ತಮ್ಮ ಹಾಗೂ ಸುದೀಪ್ ಅವರ ಹೊಸ ಸಿನಿಮಾದ ಘೋಷಣೆಯನ್ನೂ ಸಹ ಮಾಡಿದ್ದಾರೆ. ಒಳ್ಳೆಯ ಹಿನ್ನೆಲೆ ಸಂಗೀತ, ಒಳ್ಳೆಯ ಕ್ಯಾರಿಕೇಚರ್ ಮಾದರಿಯ ಚಿತ್ರಗಳನ್ನು ಒಳಗೊಂಡ ವಿಡಿಯೋ ಅದಾಗಿದ್ದು, ವಿಡಿಯೋನಲ್ಲಿ ‘ಹೊಸ ಪ್ರಪಂಚ, ಹೊಸ ಅಧ್ಯಾಯ, ಹೊಸ ಆರಂಭ’ ಎಂದು ಬರೆಯಲಾಗಿದ್ದು, ಎಲ್ಲವೂ ಅಕ್ಟೋಬರ್ 20ರಿಂದ ಶುರು ಆಗಲಿದೆ ಎಂದು ಹೇಳಲಾಗಿದೆ.

’‘ಓಹ್ ಭ್ರಮೆ‘ ಅಲ್ಲ’’: ಮತ್ತೆ ಒಂದಾದ ಪ್ರೇಮ್-ಸುದೀಪ್
Prem Sudeep
ಮಂಜುನಾಥ ಸಿ.
|

Updated on:Sep 02, 2026 | 6:34 PM

Share

ಮುಖ್ಯಾಂಶಗಳು

  • ಕಿಚ್ಚ ಸುದೀಪ್ ಹೊಸ ಸಿನಿಮಾ ಘೋಷಣೆ
  • ಮತ್ತೆ ನಿರ್ದೇಶಕ ಪ್ರೇಮ್ ಜೊತೆ ಕೈಜೋಡಿಸಿದ ನಟ
  • ಪ್ರೇಮ್ ಹಾಗೂ ಸುದೀಪ್ ಕಾಂಬಿನೇಷನ್ ಸಿನಿಮಾ

ಕಿಚ್ಚ ಸುದೀಪ್ (Sudeep) ಹುಟ್ಟುಹಬ್ಬ ಇಂದು (ಸೆಪ್ಟೆಂಬರ್ 2). ಸುದೀಪ್ ನಟನೆಯ ‘ಬಿಲ್ಲಾ ರಂಗ ಭಾಷಾ’ ಸಿನಿಮಾದ ಹೊಸ ಪೋಸ್ಟರ್ ಇಂದು ಬೆಳಿಗ್ಗೆಯಷ್ಟೆ ಬಿಡುಗಡೆ ಆಗಿದೆ. ತಮಿಳಿನ ಸ್ಟಾರ್ ನಿರ್ದೇಶಕ ಸಮುದ್ರಕಿಣಿ ಅವರು ಸುದೀಪ್ ಅವರಿಗಾಗಿ ಸಿನಿಮಾ ಒಂದನ್ನು ನಿರ್ದೇಶಿಸುತ್ತಿದ್ದು, ಆ ಸಿನಿಮಾದ ಟೈಟಲ್ ಸಹ ಅಧಿಕೃತವಾಗಿ ಘೋಷಣೆ ಮಾಡಲಾಗಿದೆ. ಅದರ ಜೊತೆಗೆ ‘ದೇವರಾಯ’ ಹೆಸರಿನ ಐತಿಹಾಸಿಕ ಸಿನಿಮಾ ಸಹ ಘೋಷಣೆಯಾಗಿದೆ. ಇದೀಗ ಸಂಜೆ ವೇಳೆಗೆ ಸುದೀಪ್ ಅವರ ಹೊಸ ಸಿನಿಮಾ ಘೋಷಿಸಲಾಗಿದ್ದು, ಸುದೀಪ್ ಮತ್ತೊಮ್ಮೆ ಪ್ರೇಮ್ ಜೊತೆ ಕೈ ಜೋಡಿಸಿದ್ದಾರೆ. ಈ ಹಿಂದೆ ‘ವಿಲನ್’ ಸಿನಿಮಾಕ್ಕಾಗಿ ಈ ಇಬ್ಬರು ಒಟ್ಟಿಗೆ ಕೆಲಸ ಮಾಡಿದ್ದರು. ಈಗ ಸುದೀಪ್ ಅವರಿಗಾಗಿ ಸಿನಿಮಾ ಒಂದನ್ನು ಪ್ರೇಮ್ ನಿರ್ದೇಶನ ಮಾಡಲಿದ್ದಾರೆ.

ಸುದೀಪ್ ಅವರಿಗಾಗಿ ವಿಶೇಷ ವಿಡಿಯೋ ಮೂಲಕ ಹುಟ್ಟುಹಬ್ಬದ ಶುಭಾಶಯಗಳನ್ನು ನಿರ್ದೇಶಕ ಪ್ರೇಮ್ ಕೋರಿದ್ದಾರೆ. ಅದೇ ವಿಡಿಯೋನಲ್ಲಿ ತಮ್ಮ ಹಾಗೂ ಸುದೀಪ್ ಅವರ ಹೊಸ ಸಿನಿಮಾದ ಘೋಷಣೆಯನ್ನೂ ಸಹ ಮಾಡಿದ್ದಾರೆ. ಒಳ್ಳೆಯ ಹಿನ್ನೆಲೆ ಸಂಗೀತ, ಒಳ್ಳೆಯ ಕ್ಯಾರಿಕೇಚರ್ ಮಾದರಿಯ ಚಿತ್ರಗಳನ್ನು ಒಳಗೊಂಡ ವಿಡಿಯೋ ಅದಾಗಿದ್ದು, ವಿಡಿಯೋನಲ್ಲಿ ‘ಹೊಸ ಪ್ರಪಂಚ, ಹೊಸ ಅಧ್ಯಾಯ, ಹೊಸ ಆರಂಭ’ ಎಂದು ಬರೆಯಲಾಗಿದ್ದು, ಎಲ್ಲವೂ ಅಕ್ಟೋಬರ್ 20ರಿಂದ ಶುರು ಆಗಲಿದೆ ಎಂದು ಹೇಳಲಾಗಿದೆ.

ಈ ಹಿಂದೆ ಪ್ರೇಮ್ ಅವರು ಕಾರ್ಯಕ್ರಮವೊಂದರಲ್ಲಿ ತಾವು ಸುದೀಪ್ ಅವರೊಟ್ಟಿಗೆ ಸಿನಿಮಾ ಮಾಡುವುದಾಗಿ ಘೋಷಿಸಿದ್ದರು. ಇದೀಗ ಅದು ನಿಜವಾಗಿದೆ. ಅಕ್ಟೋಬರ್ 20ರಿಂದ ಸಿನಿಮಾದ ಕೆಲಸಗಳು ಶುರುವಾಗಲಿವೆ. ಸುದೀಪ್ ಪ್ರಸ್ತುತ ‘ಬಿಲ್ಲಾ ರಂಗ ಭಾಷಾ’ ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿ ಆಗಿದ್ದು, ಅದು ಮುಗಿದ ಬಳಿಕ ಬಹುಷಃ ಹೊಸ ಸಿನಿಮಾದ ಕೆಲಸ ಶುರು ಮಾಡಲಿದ್ದಾರೆ.

ಇದನ್ನೂ ಓದಿ:ತಮಿಳು ನಿರ್ದೇಶಕನೊಟ್ಟಿಗೆ ಸುದೀಪ್ ಸಿನಿಮಾ, ಚಿತ್ರದ ಹೆಸರೇನು?

ಸುದೀಪ್ ಹಾಗೂ ಶಿವರಾಜ್ ಕುಮಾರ್ ಒಟ್ಟಿಗೆ ನಟಿಸಿದ್ದ ‘ವಿಲನ್’ ಸಿನಿಮಾ ಅನ್ನು ಪ್ರೇಮ್ ನಿರ್ದೇಶನ ಮಾಡಿದ್ದರು. ಆ ಸಿನಿಮಾ ನಿರೀಕ್ಷಿತ ಮಟ್ಟದಲ್ಲಿ ಹಿಟ್ ಆಗಿರಲಿಲ್ಲ. ಆದರೆ ಆ ಸಿನಿಮಾದ ಕೆಲ ಹಾಡುಗಳು ಹಾಗೂ ವಿಶೇಷವಾಗಿ ಸುದೀಪ್ ಅವರ ‘ಓಹ್ ಭ್ರಮೆ’ ಡೈಲಾಗ್ ಬಹಳ ವೈರಲ್ ಆಗಿತ್ತು. ಇದೀಗ ಸುದೀಪ್ ಅವರು ಮತ್ತೊಮ್ಮೆ ಪ್ರೇಮ್ ಜೊತೆ ಕೈಜೋಡಿಸಿದ್ದು, ಈ ಬಾರಿ ಸುದೀಪ್ ಅವರಿಗಾಗಿ ಯಾವ ರೀತಿಯ ಸಿನಿಮಾ ಅನ್ನು ಪ್ರೇಮ್ ಕಟ್ಟುತ್ತಾರೆ ಕಾದು ನೋಡಬೇಕಿದೆ.

ಪ್ರೇಮ್ ಅವರು ದರ್ಶನ್ ಜೊತೆ ಸಿನಿಮಾ ಮಾಡಬೇಕಿತ್ತು. ಸಿನಿಮಾ ಘೋಷಣೆಯೂ ಆಗಿತ್ತು. ಆ ಸಿನಿಮಾವನ್ನೂ ಸಹ ಕೆವಿಎನ್ ನಿರ್ಮಾಣ ಮಾಡಬೇಕಿತ್ತು. ಆದರೆ ಅಷ್ಟರಲ್ಲೇ ದರ್ಶನ್ ಜೈಲು ಸೇರಿದರು. ಪ್ರೇಮ್ ಅವರು ಧ್ರುವ ಸರ್ಜಾ ಜೊತೆ ‘ಕೆಡಿ’ ಸಿನಿಮಾ ಮುಗಿಸಿದರು. ಇದೀಗ ಸುದೀಪ್ ಜೊತೆಗೆ ಹೊಸ ಪ್ರಾಜೆಕ್ಟ್ ಶುರು ಮಾಡಲು ಮುಂದಾಗಿದ್ದಾರೆ.

ಇನ್ನು ಸುದೀಪ್ ಅವರ ಕೈಯಲ್ಲಿ ಈಗ ಐದು ಸಿನಿಮಾಗಳಿವೆ. ‘ಬಿಲ್ಲಾ ರಂಗ ಭಾಷಾ’ ಸಿನಿಮಾನಲ್ಲಿ ನಟಿಸುತ್ತಿದ್ದಾರೆ. ಸಮುದ್ರಕಿಣಿ ನಿರ್ದೇಶನದ ‘ಸ್ಕೂಲ್ ಬಸ್’ ಸಿನಿಮಾನಲ್ಲಿ ನಟಿಸಲಿದ್ದಾರೆ. ಶ್ರೀ ಕೃಷ್ಣದೇವರಾಯ ಕತೆ ಒಳಗೊಂಡ ‘ದೇವರಾಯ’ ಸಿನಿಮಾನಲ್ಲಿ ನಟಿಸಲಿದ್ದಾರೆ. ಅದಾದ ಬಳಿಕ ಪ್ರೇಮ್ ನಿರ್ದೇಶನದ ಸಿನಿಮಾನಲ್ಲಿ ನಟಿಸಲಿದ್ದಾರೆ. ಕೆಆರ್​​​ಜಿ ನಿರ್ಮಿಸಲಿರುವ ಸಿನಿಮಾನಲ್ಲಿಯೂ ಕಿಚ್ಚ ನಟಿಸಲಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 6:33 pm, Wed, 2 September 26

Follow Us
ಸಿದ್ದರಾಮಯ್ಯ ಪ್ಯಾಲೇಸ್ ಕಟ್ಟಿಲ್ಲ: ಹೊಸ ಮನೆ ಬಗ್ಗೆ ಜಮೀರ್ ಹೇಳಿದ್ದಿಷ್ಟು
ಸಿದ್ದರಾಮಯ್ಯ ಪ್ಯಾಲೇಸ್ ಕಟ್ಟಿಲ್ಲ: ಹೊಸ ಮನೆ ಬಗ್ಗೆ ಜಮೀರ್ ಹೇಳಿದ್ದಿಷ್ಟು
ಗುಲ್ಮಾರ್ಗ್‌ನಲ್ಲಿ ಹಿಮಪಾತ; ಶ್ವೇತವರ್ಣಕ್ಕೆ ತಿರುಗಿದ ಪರ್ವತಗಳು
ಗುಲ್ಮಾರ್ಗ್‌ನಲ್ಲಿ ಹಿಮಪಾತ; ಶ್ವೇತವರ್ಣಕ್ಕೆ ತಿರುಗಿದ ಪರ್ವತಗಳು
ಗನ್, ಪಿಸ್ತೂಲ್ ಹೊಂದಿರುವವರಿಗೆ ಖಡಕ್ ಸಂದೇಶ ನೀಡಿದ ಸಿಎಂ ಡಿಕೆ ಶಿವಕುಮಾರ್
ಗನ್, ಪಿಸ್ತೂಲ್ ಹೊಂದಿರುವವರಿಗೆ ಖಡಕ್ ಸಂದೇಶ ನೀಡಿದ ಸಿಎಂ ಡಿಕೆ ಶಿವಕುಮಾರ್
ವಂದೇ ಮಾತರಂ: ಸಿಎಂ ಡಿಕೆಶಿಗೆ ರಾಜ್ಯಪಾಲರು ಬರೆದ 4 ಪುಟ ಪತ್ರದ ವಿವರ ಹೀಗಿದೆ
ವಂದೇ ಮಾತರಂ: ಸಿಎಂ ಡಿಕೆಶಿಗೆ ರಾಜ್ಯಪಾಲರು ಬರೆದ 4 ಪುಟ ಪತ್ರದ ವಿವರ ಹೀಗಿದೆ
ಎಚ್​​​ಕೆ ಪಾಟೀಲ್ ರಾಜೀನಾಮೆ ಎಚ್ಚರಿಕೆಗೆ ಡಿಕೆಶಿ ಪ್ರತಿಕ್ರಿಯೆ ಇಲ್ಲಿದೆ
ಎಚ್​​​ಕೆ ಪಾಟೀಲ್ ರಾಜೀನಾಮೆ ಎಚ್ಚರಿಕೆಗೆ ಡಿಕೆಶಿ ಪ್ರತಿಕ್ರಿಯೆ ಇಲ್ಲಿದೆ
ಧಾರವಾಡದಲ್ಲಿ ಶಾಲಾ ಕಟ್ಟಡ ಧ್ವಂಸ: ವಿದ್ಯಾರ್ಥಿಗಳಿಗೆ ಪೆಂಡಾಲ್ ಅಡಿ ಪಾಠ
ಧಾರವಾಡದಲ್ಲಿ ಶಾಲಾ ಕಟ್ಟಡ ಧ್ವಂಸ: ವಿದ್ಯಾರ್ಥಿಗಳಿಗೆ ಪೆಂಡಾಲ್ ಅಡಿ ಪಾಠ
ಟಾಸ್ಕ್ ವೇಳೆ ಚುಚ್ಚು ಮಾತು, ಕಣ್ಣೀರು ಹಾಕಿದ ಆಸಿಯಾ
ಟಾಸ್ಕ್ ವೇಳೆ ಚುಚ್ಚು ಮಾತು, ಕಣ್ಣೀರು ಹಾಕಿದ ಆಸಿಯಾ
ಅಡಿಕೆ ಹಾಳೆಯಿಂದ ಎಥೆನಾಲ್ ಉತ್ಪಾದಿಸುವ ಸಂಶೋಧನೆ ಯಶಸ್ವಿ
ಅಡಿಕೆ ಹಾಳೆಯಿಂದ ಎಥೆನಾಲ್ ಉತ್ಪಾದಿಸುವ ಸಂಶೋಧನೆ ಯಶಸ್ವಿ
ವಿದ್ಯಾರ್ಥಿನಿ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ಆರೋಪಿಗಳ ಕಾಲಿಗೆ ಗುಂಡೇಟು
ವಿದ್ಯಾರ್ಥಿನಿ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ಆರೋಪಿಗಳ ಕಾಲಿಗೆ ಗುಂಡೇಟು
72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭ: LIVE ಇಲ್ಲಿ ನೋಡಿ
72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭ: LIVE ಇಲ್ಲಿ ನೋಡಿ