AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತಮಿಳು ನಿರ್ದೇಶಕನೊಟ್ಟಿಗೆ ಸುದೀಪ್ ಸಿನಿಮಾ, ಚಿತ್ರದ ಹೆಸರೇನು?

Kichcha Sudeep: ಈ ಹುಟ್ಟುಹಬ್ಬಕ್ಕೆ ಅಭಿಮಾನಿಗಳಿಗೆ ಸಿಗಲು ಆಗುತ್ತಿಲ್ಲವೆಂದು ಕಿಚ್ಚ ಹೇಳಿದಾಗ ಸಹಜವಾಗಿಯೇ ಅಭಿಮಾನಿಗಳು ತುಸು ಬೇಸರಗೊಂಡಿದ್ದರು, ಆದರೆ ಅದರ ಬದಲಾಗಿ ಸುದೀಪ್ ತಮ್ಮ ಸಿನಿಮಾಗಳ ಘೋಷಣೆಯನ್ನು ಮಾಡುವ ಮೂಲಕ ಅಭಿಮಾನಿಗಳ ಮನದಲ್ಲಿ ಖುಷಿ ಮತ್ತು ನಿರೀಕ್ಷೆಗಳನ್ನು ಮೂಡಿಸಿದ್ದಾರೆ. ಕೆಲ ದಿನಗಳ ಹಿಂದೆ ಸುದೀಪ್ ಹಂಚಿಕೊಂಡಿದ್ದ ಪೋಸ್ಟ್​​ನಲ್ಲಿ, ‘ಸಿಂಹ ಸುಮ್ಮನೆ ಕೂತಿದೆ ಎಂದರೆ ಸುಸ್ತಾಗಿದೆ ಎಂದಲ್ಲ, ಮುಂದಿನ ಭೇಟೆಗೆ ತಯಾರಾಗಿದೆ ಎಂದರ್ಥ’ ಎಂದಿದ್ದರು. ಸುದೀಪ್ ಅವರು ಹಾಗೆ ಹೇಳಿದ್ದೇಕೆ ಎಂಬುದು ಈಗ ತಿಳಿಯುತ್ತಿದೆ.

ತಮಿಳು ನಿರ್ದೇಶಕನೊಟ್ಟಿಗೆ ಸುದೀಪ್ ಸಿನಿಮಾ, ಚಿತ್ರದ ಹೆಸರೇನು?
School Bus
ಮಂಜುನಾಥ ಸಿ.
|

Updated on:Sep 02, 2026 | 11:02 AM

Share

ಮುಖ್ಯಾಂಶಗಳು

  • ಸುದೀಪ್ ಹುಟ್ಟುಹಬ್ಬ ಇಂದು (ಸೆಪ್ಟೆಂಬರ್ 02)
  • ಹುಟ್ಟುಹಬ್ಬದಂದು ಸುದೀಪ್ ಹೊಸ ಸಿನಿಮಾ ಘೋಷಿಸಿದ್ದಾರೆ.
  • ತಮಿಳು ನಿರ್ದೇಶಕನ ಸಿನಿಮಾನಲ್ಲಿ ಸುದೀಪ್ ನಟಿಸುತ್ತಿದ್ದಾರೆ.

ಸುದೀಪ್ (Sudeep) ಹುಟ್ಟುಹಬ್ಬಕ್ಕೆ ಅಭಿಮಾನಿಗಳಿಗೆ ಒಂದರ ಹಿಂದೊಂದು ಖುಷಿ ಸುದ್ದಿಗಳನ್ನು ಸುದೀಪ್ ನೀಡುತ್ತಿದ್ದಾರೆ. ಈ ಹುಟ್ಟುಹಬ್ಬಕ್ಕೆ ಅಭಿಮಾನಿಗಳಿಗೆ ಸಿಗಲು ಆಗುತ್ತಿಲ್ಲವೆಂದು ಕಿಚ್ಚ ಹೇಳಿದಾಗ ಸಹಜವಾಗಿಯೇ ಅಭಿಮಾನಿಗಳು ತುಸು ಬೇಸರಗೊಂಡಿದ್ದರು, ಆದರೆ ಅದರ ಬದಲಾಗಿ ಸುದೀಪ್ ತಮ್ಮ ಸಿನಿಮಾಗಳ ಘೋಷಣೆಯನ್ನು ಮಾಡುವ ಮೂಲಕ ಅಭಿಮಾನಿಗಳ ಮನದಲ್ಲಿ ಖುಷಿ ಮತ್ತು ನಿರೀಕ್ಷೆಗಳನ್ನು ಮೂಡಿಸಿದ್ದಾರೆ. ಕೆಲ ದಿನಗಳ ಹಿಂದೆ ಸುದೀಪ್ ಹಂಚಿಕೊಂಡಿದ್ದ ಪೋಸ್ಟ್​​ನಲ್ಲಿ, ‘ಸಿಂಹ ಸುಮ್ಮನೆ ಕೂತಿದೆ ಎಂದರೆ ಸುಸ್ತಾಗಿದೆ ಎಂದಲ್ಲ, ಮುಂದಿನ ಭೇಟೆಗೆ ತಯಾರಾಗಿದೆ ಎಂದರ್ಥ’ ಎಂದಿದ್ದರು. ಸುದೀಪ್ ಅವರು ಹಾಗೆ ಹೇಳಿದ್ದೇಕೆ ಎಂಬುದು ಈಗ ತಿಳಿಯುತ್ತಿದೆ.

ಸುದೀಪ್ ಹುಟ್ಟುಹಬ್ಬಕ್ಕೆ ‘ಬಿಲ್ಲಾ ರಂಗ ಭಾಷಾ’ ಸಿನಿಮಾದ ಹೊಸ ರಗಡ್ ಪೋಸ್ಟರ್ ರಿಲೀಸ್ ಮಾಡಲಾಗಿದೆ. ಅದರ ಬೆನ್ನಲ್ಲೆ ಸುದೀಪ್ ಹೊಸ ಸಿನಿಮಾದ ಘೋಷಣೆಯನ್ನೂ ಸಹ ಮಾಡಿದ್ದಾರೆ. ಸುದೀಪ್ ಅವರು ತಮಿಳು ನಿರ್ದೇಶಕನ ಸಿನಿಮಾನಲ್ಲಿ ನಟಿಸಲಿದ್ದಾರೆ ಎಂಬ ಸುದ್ದಿ ಕಳೆದ ಕೆಲ ತಿಂಗಳುಗಳಿಂದಲೂ ಹರಿದಾಡುತ್ತಲೇ ಇತ್ತು. ಆದರೆ ಆ ನಿರ್ದೇಶಕ ಯಾರೆಂಬುದು ಖಾತ್ರಿ ಆಗಿರಲಿಲ್ಲ. ಇದೀಗ ಸುದೀಪ್ ಹುಟ್ಟುಹಬ್ಬಕ್ಕೆ ಅಧಿಕೃತವಾಗಿ ಸಿನಿಮಾದ ಘೋಷಣೆ ಮಾಡಲಾಗಿದೆ. ಜೊತೆಗೆ ಸಿನಿಮಾದ ಟೈಟಲ್ ಸಹ ಅನೌನ್ಸ್ ಮಾಡಲಾಗಿದೆ.

ಸುದೀಪ್ ಅವರು ತಮಿಳಿನ ಖ್ಯಾತ ನಟ ಮತ್ತು ನಿರ್ದೇಶಕ ಸಮುದ್ರಕಣಿ ನಿರ್ದೇಶನದ ಸಿನಿಮಾನಲ್ಲಿ ನಟಿಸಲಿದ್ದಾರೆ. ಸಮುದ್ರಕಣಿ, ಖ್ಯಾತ ನಿರ್ದೇಶಕರಾಗಿದ್ದು, ‘ನಾಡೋಡಿಗಳ್’ (ಕನ್ನಡದಲ್ಲಿ ‘ಹುಡುಗರು’), ‘ಪೊರಾಲಿ’ (ಕನ್ನಡದಲ್ಲಿ ಯಾರೇ ಕೂಗಾಡಲಿ) ಸೇರಿದಂತೆ ‘ಅಪ್ಪ’, ‘ಬ್ರೋ’ ಇನ್ನೂ ಹಲವು ಬ್ಲಾಕ್ ಬಸ್ಟರ್ ಸಿನಿಮಾಗಳನ್ನು ನಿರ್ದೇಶಿಸಿದ್ದಾರೆ. ಸಂಪೂರ್ಣ ಕಮರ್ಶಿಯಲ್ ಅಲ್ಲದ ಆದರೆ ಅದ್ಭುತ ಕತೆಯನ್ನು ಒಳಗೊಂಡ ಸಿನಿಮಾಗಳನ್ನು ನಿರ್ದೇಶಿಸುವುದು ಅವರ ಸ್ಟೈಲ್. ಇದೀಗ ಈ ಪ್ರತಿಭಾವಂತ ನಿರ್ದೇಶಕನ ಜೊತೆಗೆ ದೈತ್ಯ ಪ್ರತಿಭೆ ಸುದೀಪ್ ಕೈಜೋಡಿಸಿದ್ದಾರೆ.

ಇದನ್ನೂ ಓದಿ:Kichcha Sudeep Birthday: ಕಿಚ್ಚ ಸುದೀಪ್ ಜನ್ಮದಿನ; ನಟ ಆಸ್ತಿ ಎಷ್ಟು ಗೊತ್ತಾ?

ಸುದೀಪ್ ಅವರಿಗಾಗಿ ಸಮುದ್ರಕಿಣಿ ನಿರ್ದೇಶನ ಮಾಡುತ್ತಿರುವ ಸಿನಿಮಾಕ್ಕೆ ‘ಸ್ಕೂಲ್ ಬಸ್ ವಾಯ್ಸಸ್’ ಎಂದು ಹೆಸರಿಡಲಾಗಿದೆ. ಸಿನಿಮಾದ ಹೆಸರು ಇದೊಂದು ಸಂದೇಶ ಹೊಂದಿರುವ ಸಿನಿಮಾ ಎಂಬುದನ್ನು ಸಾರಿ ಹೇಳುತ್ತಿದೆ. ಒಂದರ ಹಿಂದೊಂದು ಮಾಸ್ ಸಿನಿಮಾಗಳನ್ನು ಮಾಡಿಕೊಂಡೇ ಬಂದಿರುವ ಸುದೀಪ್ ಈಗ ಅವರ ನಟನೆಗೆ ಒರೆಗೆ ಹಚ್ಚುವ ಪಾತ್ರವೊಂದನ್ನು ನಟಿಸಲಿದ್ದಾರೆ ಎಂಬ ನಿರೀಕ್ಷೆ ಹುಟ್ಟಿದೆ.

ಸುದೀಪ್ ಸಹ ಕೇವಲ ಮಾಸ್ ಮಸಾಲಾ ಸಿನಿಮಾಗಳನ್ನು ಮಾಡಿಕೊಂಡು ಬಂದ ನಟರಲ್ಲ. ಹಲವಾರು ಪ್ರಯೋಗಾತ್ಮಕ ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ. ‘ಶಾಂತಿ ನಿವಾಸ’, ‘ಆಟೋಗ್ರಾಫ್’, ‘ಸ್ವಾತಿ ಮುತ್ತು’, ‘ಮಾತಾಡ್ ಮಾತಾಡ್ ಮಲ್ಲಿಗೆ’ ಇನ್ನೂ ಕೆಲವು ಭಿನ್ನ ಮಾದರಿಯ, ಕಂಟೆಂಟ್ ಆಧರಿತ ಸಿನಿಮಾಗಳಲ್ಲಿ ಸುದೀಪ್ ನಟಿಸಿದ್ದಾರೆ. ಇದೀಗ ಸುದೀಪ್ ಅವರು ‘ಸ್ಕೂಲ್ ಬಸ್’ ಮೂಲಕ ಮತ್ತೊಮ್ಮೆ ಅಂಥಹುದೇ ಪ್ರಯತ್ನಕ್ಕೆ ತಮ್ಮನ್ನು ಒಡ್ಡಿಕೊಳ್ಳಲಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 11:02 am, Wed, 2 September 26

Follow Us
ಮಂಜುನಾಥ ಸಿ.
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
ಹನಿಟ್ರ್ಯಾಪ್ ವಿಡಿಯೋ ಭೀತಿ: ಮಾಧ್ಯಮಗಳ ವಿರುದ್ಧ ಮಾಜಿ ಸಿಎಂ ನಿರ್ಬಂಧಕಾಜ್ಞೆ
ಹನಿಟ್ರ್ಯಾಪ್ ವಿಡಿಯೋ ಭೀತಿ: ಮಾಧ್ಯಮಗಳ ವಿರುದ್ಧ ಮಾಜಿ ಸಿಎಂ ನಿರ್ಬಂಧಕಾಜ್ಞೆ
ಸೌಜನ್ಯ ಪ್ರಕರಣ ಮರು ತನಿಖೆ ಬಗ್ಗೆ ಎಸ್​​ಐಟಿಯಿಂದ ಹೈವೋಲ್ಟೇಜ್ ಸಭೆ
ಸೌಜನ್ಯ ಪ್ರಕರಣ ಮರು ತನಿಖೆ ಬಗ್ಗೆ ಎಸ್​​ಐಟಿಯಿಂದ ಹೈವೋಲ್ಟೇಜ್ ಸಭೆ
ಸುದೀಪ್ ಅನ್ನೇ ಎಳೆದಾಡಲು ಅಭಿಮಾನಿಗಳು: ವಿಡಿಯೋ ನೋಡಿ
ಸುದೀಪ್ ಅನ್ನೇ ಎಳೆದಾಡಲು ಅಭಿಮಾನಿಗಳು: ವಿಡಿಯೋ ನೋಡಿ
ಗಮನಸೆಳೆದ ಮೈ ಹೋಮ್ ವ್ಯೋಮ: ಅಪಾರ್ಟ್​​​ಮೆಂಟ್​​ ಖರೀದಿಗೆ ಮುಗಿಬಿದ್ದ ಜನ
ಗಮನಸೆಳೆದ ಮೈ ಹೋಮ್ ವ್ಯೋಮ: ಅಪಾರ್ಟ್​​​ಮೆಂಟ್​​ ಖರೀದಿಗೆ ಮುಗಿಬಿದ್ದ ಜನ
ತುಮಕೂರು ಯುವ ದಸರಾ: ಮಕ್ಕಳ ಪ್ರತಿಭೆಗೆ ಅದ್ದೂರಿ ವೇದಿಕೆ
ತುಮಕೂರು ಯುವ ದಸರಾ: ಮಕ್ಕಳ ಪ್ರತಿಭೆಗೆ ಅದ್ದೂರಿ ವೇದಿಕೆ
ಹಾಸನಾಂಬೆ ಉತ್ಸವದಲ್ಲಿ ಕೋಟಿ ಕೋಟಿ ಅವ್ಯವಹಾರ ಆರೋಪ
ಹಾಸನಾಂಬೆ ಉತ್ಸವದಲ್ಲಿ ಕೋಟಿ ಕೋಟಿ ಅವ್ಯವಹಾರ ಆರೋಪ
ಕಬ್ಬು ಬೆಳೆಗಾರರ ಪ್ರತಿಭಟನೆ: ಹಿರೇಬಾಗೇವಾಡಿ ಟೋಲ್​​ ಬಂದ್ ಮಾಡಿ ಆಕ್ರೋಶ
ಕಬ್ಬು ಬೆಳೆಗಾರರ ಪ್ರತಿಭಟನೆ: ಹಿರೇಬಾಗೇವಾಡಿ ಟೋಲ್​​ ಬಂದ್ ಮಾಡಿ ಆಕ್ರೋಶ
ಹಿರಿಯ IPS ಅಧಿಕಾರಿ ಎಸ್.ರವಿ ರಾಜೀನಾಮೆ: ಕಾರಣ ಇಲ್ಲಿದೆ
ಹಿರಿಯ IPS ಅಧಿಕಾರಿ ಎಸ್.ರವಿ ರಾಜೀನಾಮೆ: ಕಾರಣ ಇಲ್ಲಿದೆ
ಗಜೇಂದ್ರಗಡ: ಹೈಟೆಕ್ ಅಗ್ನಿಶಾಮಕ ಠಾಣೆ ಇದ್ದರೂ ಸಿಬ್ಬಂದಿ ಇಲ್ಲದೆ ವ್ಯರ್ಥ!
ಗಜೇಂದ್ರಗಡ: ಹೈಟೆಕ್ ಅಗ್ನಿಶಾಮಕ ಠಾಣೆ ಇದ್ದರೂ ಸಿಬ್ಬಂದಿ ಇಲ್ಲದೆ ವ್ಯರ್ಥ!
ಭಾರತ ಪ್ರಜಾತಂತ್ರದ ತಾಯಿ: ಬ್ಲೂಮ್​ಬರ್ಗ್ ಫೋರಂನಲ್ಲಿ ನರೇಂದ್ರ ಮೋದಿ
ಭಾರತ ಪ್ರಜಾತಂತ್ರದ ತಾಯಿ: ಬ್ಲೂಮ್​ಬರ್ಗ್ ಫೋರಂನಲ್ಲಿ ನರೇಂದ್ರ ಮೋದಿ