AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Kichcha Sudeep Birthday: ಕಿಚ್ಚ ಸುದೀಪ್ ಜನ್ಮದಿನ; ನಟ ಆಸ್ತಿ ಎಷ್ಟು ಗೊತ್ತಾ?

ಕನ್ನಡ ಚಿತ್ರರಂಗದ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರ ಆಸ್ತಿ ಮೌಲ್ಯ 165 ಕೋಟಿ ರೂಪಾಯಿ ತಲುಪಿದೆ. ಸಿನಿಮಾ ಸಂಭಾವನೆ, ಬಿಗ್ ಬಾಸ್ ಕಾರ್ಯಕ್ರಮ, ಬ್ರ್ಯಾಂಡ್ ಎಂಡಾರ್ಸ್‌ಮೆಂಟ್, ಬೆಂಗಳೂರಿನ 20 ಕೋಟಿ ಮೌಲ್ಯದ ಐಷಾರಾಮಿ ಬಂಗಲೆ ಹಾಗೂ  ದುಬಾರಿ ಕಾರುಗಳ ಸಂಪೂರ್ಣ ವಿವರ ಇಲ್ಲಿದೆ. ಸಮಾಜ ಸೇವೆಯಲ್ಲೂ ಸುದೀಪ್ ಮುಂಚೂಣಿಯಲ್ಲಿದ್ದಾರೆ.

Kichcha Sudeep Birthday: ಕಿಚ್ಚ ಸುದೀಪ್ ಜನ್ಮದಿನ; ನಟ ಆಸ್ತಿ ಎಷ್ಟು ಗೊತ್ತಾ?
ಸುದೀಪ್Image Credit source: Sudeep
 ಶ್ರೀಲಕ್ಷ್ಮೀ ಎಚ್
| Edited By: |

Updated on:Sep 02, 2026 | 7:47 AM

Share

ಮುಖ್ಯಾಂಶಗಳು

  • ಸಿನಿಮಾ ಹಾಗೂ ಬಿಗ್ ಬಾಸ್ ಶೋನಿಂದ ಭಾರಿ ಆದಾಯ
  • 20 ಕೋಟಿಯ ಬಂಗಲೆ ಕಾರು ಹಾಗೂ ರಿಚರ್ಡ್ ಮಿಲ್ಲಿ ವಾಚ್
  • ಸಾಮಾಜಿಕ ಸೇವೆ ಮತ್ತು ಸಾಲು ಸಾಲು ಬಿಗ್ ಬಜೆಟ್ ಸಿನಿಮಾಗಳು

ಕನ್ನಡ ಚಿತ್ರರಂಗದ ಹೆಮ್ಮೆಯ ನಟ ಕಿಚ್ಚ ಸುದೀಪ್ ಅವರಿಗೆ ದೇಶಾದ್ಯಂತ ಭಾರಿ ಜನಪ್ರಿಯತೆ ಇದೆ. ನಟನೆ ಜೊತೆಗೆ ನಿರ್ದೇಶನ ಹಾಗೂ ನಿರ್ಮಾಣದಲ್ಲೂ ಅವರು ಸೈ ಎನಿಸಿಕೊಂಡಿದ್ದಾರೆ. ಹಿರಿತೆರೆ ಜೊತೆಗೆ ಬಿಗ್ ಬಾಸ್ ಮೂಲಕ ಕಿರುತೆರೆಯ ಸೂಪರ್ ಸ್ಟಾರ್ ಆಗಿ ಬೆಳೆದಿದ್ದಾರೆ. ಕೋಟ್ಯಂತರ ಅಭಿಮಾನಿಗಳ ಪ್ರೀತಿ ಗಳಿಸಿರುವ ಸುದೀಪ್ ಅವರಿಗೆ ಇಂದು ಬರ್ತ್​ಡೇ. ಅವರ ಒಟ್ಟು ಆಸ್ತಿ ಮೌಲ್ಯ ಹಾಗೂ ಐಷಾರಾಮಿ ಜೀವನ ಶೈಲಿಯ ಕುರಿತ ಒಂದು ನೋಟ ಇಲ್ಲಿದೆ.

ಸುದೀಪ್ ಅವರ ಬಹುಪಾಲು ಆದಾಯ ಸಿನಿಮಾಗಳಿಂದಲೇ ಬರುತ್ತದೆ. ಪ್ರಸ್ತುತ ಅವರು ಒಂದು ಚಿತ್ರಕ್ಕೆ 8 ರಿಂದ 10 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಾರೆ. ಇದರ ಜೊತೆಗೆ ಪ್ರಮುಖ ಸಿನಿಮಾಗಳಲ್ಲಿ ಲಾಭದ ಪಾಲು ಕೂಡ ಪಡೆಯುತ್ತಾರೆ. ‘ವಿಕ್ರಾಂತ್ ರೋಣ’, ‘ಮ್ಯಾಕ್ಸ್’ ಸಿನಿಮಾದ ಭರ್ಜರಿ ಯಶಸ್ಸಿನ ನಂತರ ಅವರ ಮಾರುಕಟ್ಟೆ ಮೌಲ್ಯ ಮತ್ತಷ್ಟು ಹೆಚ್ಚಾಗಿದೆ.

ರಿಯಾಲಿಟಿ ಶೋಗಳು ಸುದೀಪ್ ಅವರ ಆದಾಯದ ಪ್ರಮುಖ ಮೂಲವಾಗಿವೆ. ಬಿಗ್ ಬಾಸ್ ಕನ್ನಡ ಶೋ ಅನ್ನು ಯಶಸ್ವಿಯಾಗಿ ನಡೆಸಿಕೊಡುತ್ತಿದ್ದಾರೆ. ಪ್ರತಿ ಸೀಸನ್‌ಗೆ ಅವರಿಗೆ ಭಾರಿ ಪ್ರಮಾಣದ ಸಂಭಾವನೆ ಸಿಗುತ್ತದೆ. ಇದರ ಜೊತೆಗೆ ಕಲ್ಚರಲ್ ಹಾಗೂ ಬ್ರ್ಯಾಂಡ್ ರಾಯಭಾರಿಯಾಗಿ ಕೋಟ್ಯಂತರ ರೂಪಾಯಿ ಗಳಿಸುತ್ತಾರೆ. ತಮ್ಮ ‘ಕಿಚ್ಚ ಕ್ರಿಯೇಷನ್ಸ್’ ಬ್ಯಾನರ್ ಮೂಲಕ ಹೊಸ ಪ್ರತಿಭೆಗಳಿಗೆ ಅವಕಾಶ ನೀಡುತ್ತಿದ್ದಾರೆ.

ಸುದೀಪ್ ಅವರ ಐಷಾರಾಮಿ ಕಾರುಗಳ ಸಂಗ್ರಹ ಅದ್ಭುತವಾಗಿದೆ. ಬೆಂಗಳೂರಿನಲ್ಲಿ ಸುಮಾರು 20 ಕೋಟಿ ರೂಪಾಯಿ ಮೌಲ್ಯದ ಭವ್ಯ ಬಂಗಲೆ ಹೊಂದಿದ್ದಾರೆ. ಇದರಲ್ಲಿ ಸಕಲ ಸೌಲಭ್ಯಗಳ ಜೊತೆಗೆ ಖಾಸಗಿ ಜಿಮ್ ಕೂಡ ಇದೆ. ಮುಂಬೈನಲ್ಲಿ ಸುಂದರ ಫಾರ್ಮ್‌ಹೌಸ್ ಹಾಗೂ ಹಲವೆಡೆ ಜಮೀನು ಹೊಂದಿದ್ದಾರೆ. ಅವರ ಬಳಿ ಬಿಎಂಡಬ್ಲ್ಯೂ ರೀತಿಯ ಕಾರುಗಳಿವೆ. 1.5 ಕೋಟಿ ರೂಪಾಯಿ ಬೆಲೆಯ ರಿಚರ್ಡ್ ಮಿಲ್ಲಿ ವಾಚ್ ಕೂಡ ಅವರ ಬಳಿಯಿದೆ. ಇತ್ತೀಚೆಗೆ ಅವರು ಹೊಸ ಕ್ಯಾರವಾನ್ ಖರೀದಿ ಮಾಡಿದ್ದಾರೆ.

ಇದನ್ನೂ ಓದಿ: Sudeep Birthday: ಕಿಚ್ಚ ಸುದೀಪ್‌ ಜನ್ಮದಿನ; 4 ಹೊಸ ಅನೌನ್ಸ್​ಮೆಂಟ್​​ಗೆ ಕೌಂಟ್​ಡೌನ್

ಕೇವಲ ಐಷಾರಾಮಿ ಜೀವನ ಮಾತ್ರವಲ್ಲದೆ ಸುದೀಪ್ ಸಾಮಾಜಿಕ ಸೇವೆಯಲ್ಲೂ ಸಕ್ರಿಯರಾಗಿದ್ದಾರೆ. ಸರ್ಕಾರಿ ಕನ್ನಡ ಶಾಲೆಗಳ ಅಭಿವೃದ್ಧಿಗೆ ಸ್ವಂತ ಹಣ ನೀಡುತ್ತಿದ್ದಾರೆ. ಬಡವರ ವೈದ್ಯಕೀಯ ವೆಚ್ಚ ಮತ್ತು ಕಷ್ಟದ ಸಮಯದಲ್ಲಿ ಪರಿಹಾರ ಸಾಮಗ್ರಿ ನೀಡುವ ಕಾರ್ಯ ಮಾಡುತ್ತಿದ್ದಾರೆ. ಸದ್ಯ ಅವರು ‘ಬಿಲ್ಲ ರಂಗ ಭಾಷಾ’ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 7:45 am, Wed, 2 September 26

Follow Us
 ಶ್ರೀಲಕ್ಷ್ಮೀ ಎಚ್
ಶ್ರೀಲಕ್ಷ್ಮೀ ಎಚ್

ಪತ್ರಕರ್ತೆ ಆಗಬೇಕು ಅಂದುಕೊಂಡವಳು. ಮನೆಯವರ ಒತ್ತಾಯಕ್ಕೆ ಅಕೌಂಟ್ ತೆಗೆದುಕೊಂಡೆ. ಈಗ ಬ್ಯಾಂಕ್ ಎಕ್ಸಾಂಗಳನ್ನು ಬರೆಯುತ್ತಿದ್ದೇನೆ. ಸಮಯ ಸಿಕ್ಕಾಗ ಸುತ್ತಾಡುತ್ತೇನೆ. ಓದಿನ ಬಗ್ಗೆ ಅತೀವ ಆಸಕ್ತಿ. ರವಿ ಬೆಳಗೆರೆ, ತೇಜಸ್ವಿ ನೆಚ್ಚಿನವರು. ಅವರ ಪುಸ್ತಕಗಳನ್ನು ಮತ್ತೆ ಮತ್ತೆ ಓದುತ್ತೇನೆ. ಸಮಯ ಸಿಕ್ಕಾಗ ಪತ್ರಿಕೆಗಳಿಗೆ ಕಥೆಗಳನ್ನು ಬರೆಯುತ್ತೇನೆ. ಸಿನಿಮಾ ಬಗ್ಗೆ ಅತೀವ ಆಸಕ್ತಿ. ಈಗ ಟಿವಿ9 ಕನ್ನಡಕ್ಕೆ ಸಿನಿಮಾ ಸುದ್ದಿಗಳನ್ನು ಬರೆಯುತ್ತಿದ್ದೇನೆ.

Read More