ಮಲಯಾಳಂ ಚಿತ್ರರಂಗಕ್ಕೆ ಪದಾರ್ಪಣೆ ಮಾಡಲಿದ್ದಾರೆ ಕಿಚ್ಚ ಸುದೀಪ್?

Kichcha Sudeep: ಪ್ಯಾನ್ ಇಂಡಿಯಾ ಟ್ರೆಂಡ್ ಶುರುವಾಗುವ ದಶಕಕ್ಕೂ ಮೊದಲೇ ಅವರು ಪ್ಯಾನ್ ಇಂಡಿಯಾ ಸ್ಟಾರ್. ಕನ್ನಡ ಮಾತ್ರವಲ್ಲದೆ ತೆಲುಗು, ತಮಿಳು, ಹಿಂದಿ ಸಿನಿಮಾಗಳಲ್ಲಿ ನಟಿಸಿರುವ ಕಿಚ್ಚ, ದೇಶ, ವಿದೇಶಗಳಲ್ಲೂ ಅಭಿಮಾನಿಗಳನ್ನು ಹೊಂದಿದ್ದಾರೆ. ಹಲವು ಭಾಷೆಗಳಲ್ಲಿ ನಟಿಸಿರುವ ಸುದೀಪ್ ಅವರು ಮಲಯಾಳಂ ಸಿನಿಮಾನಲ್ಲಿ ಈ ವರೆಗೂ ನಟಿಸಿರಲಿಲ್ಲ. ಆದರೆ ಇದೀಗ ಮಲಯಾಳಂ ಚಿತ್ರರಂಗಕ್ಕೂ ಪದಾರ್ಪಣೆ ಮಾಡಲು ಮುಂದಾಗಿದ್ದಾರೆ.

ಮಲಯಾಳಂ ಚಿತ್ರರಂಗಕ್ಕೆ ಪದಾರ್ಪಣೆ ಮಾಡಲಿದ್ದಾರೆ ಕಿಚ್ಚ ಸುದೀಪ್?
Sudeep

Updated on: Jun 21, 2026 | 8:41 PM

ಕಿಚ್ಚ ಸುದೀಪ್ (Kichcha Sudeep) ಕನ್ನಡದ ಸ್ಟಾರ್ ನಟ, ಪ್ಯಾನ್ ಇಂಡಿಯಾ ಟ್ರೆಂಡ್ ಶುರುವಾಗುವ ದಶಕಕ್ಕೂ ಮೊದಲೇ ಅವರು ಪ್ಯಾನ್ ಇಂಡಿಯಾ ಸ್ಟಾರ್. ಕನ್ನಡ ಮಾತ್ರವಲ್ಲದೆ ತೆಲುಗು, ತಮಿಳು, ಹಿಂದಿ ಸಿನಿಮಾಗಳಲ್ಲಿ ನಟಿಸಿರುವ ಕಿಚ್ಚ, ದೇಶ, ವಿದೇಶಗಳಲ್ಲೂ ಅಭಿಮಾನಿಗಳನ್ನು ಹೊಂದಿದ್ದಾರೆ. ಹಲವು ಭಾಷೆಗಳಲ್ಲಿ ನಟಿಸಿರುವ ಸುದೀಪ್ ಅವರು ಮಲಯಾಳಂ ಸಿನಿಮಾನಲ್ಲಿ ಈ ವರೆಗೂ ನಟಿಸಿರಲಿಲ್ಲ. ಆದರೆ ಇದೀಗ ಮಲಯಾಳಂ ಚಿತ್ರರಂಗಕ್ಕೂ ಪದಾರ್ಪಣೆ ಮಾಡಲು ಮುಂದಾಗಿದ್ದಾರೆ.

ಸುದೀಪ್ ಅವರು ಇದೀಗ ಮಲಯಾಳಂ ಸಿನಿಮಾ ಒಂದರಲ್ಲಿ ನಟಿಸಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಮಲಯಾಳಂನ ಕೆಲ ಮಾಧ್ಯಮಗಳು ವರದಿ ಮಾಡಿರುವಂತೆ ಸುದೀಪ್ ಅವರು ಈಗಾಗಲೇ ಮಲಯಾಳಂನ ‘ಉಯಿರ್’ ಹೆಸರಿನ ಸಿನಿಮಾನಲ್ಲಿ ನಟಿಸಿದ್ದಾರೆ. ಇದೊಂದು ಮರ್ಡರ್ ಮಿಸ್ಟರ್ ಥ್ರಿಲ್ಲರ್ ಸಿನಿಮಾ ಆಗಿದ್ದು, ಸಿನಿಮಾನಲ್ಲಿ ರೋಷನ್ ಮ್ಯಾಥೀವ್ ನಾಯಕ. ನಿಜ ಘಟನೆ ಆಧರಿತ ಸಿನಿಮಾ ಇದಾಗಿದ್ದು, ಸಿನಿಮಾನಲ್ಲಿ ಪ್ರಮುಖವಾದ ಪಾತ್ರವೊಂದರಲ್ಲಿ ಸುದೀಪ್ ನಟಿಸಿದ್ದಾರಂತೆ.

ರೋಷನ್ ಮ್ಯಾಥಿವ್ ಜೊತೆಗೆ ಬೈಜು ಸಂತೋಷ್, ಶ್ರುತಿ ಮೆನನ್, ವಿನೀತ್ ತಟ್ಟಿಲ್ ಇನ್ನೂ ಕೆಲವು ಪ್ರತಿಭಾವಂತ ನಟರು ನಟಿಸಿದ್ದಾರೆ. ಪೊಲೀಸರ ತಂಡವೊಂದು ಕೊಲೆಗಳನ್ನು ಬೆನ್ನತ್ತುವ ಕತೆಯನ್ನು ಈ ಸಿನಿಮಾ ಒಳಗೊಂಡಿದೆ. ಮಲಯಾಳಂ ಸಿನಿಮಾಗಳಲ್ಲಿ ಅತಿಥಿ ಪಾತ್ರಗಳು ಬಲು ಅಪರೂಪ, ಆದರೆ ಈ ಸಿನಿಮಾನಲ್ಲಿ ಸುದೀಪ್ ಅವರು ಪ್ರಮುಖವಾದ, ಕತೆಗೆ ತಿರುವು ನೀಡುವ ಅತಿಥಿ ಪಾತ್ರದಲ್ಲಿ ನಟಿಸಿದ್ದಾರೆ ಎಂಬ ಸುದ್ದಿ ಇದೆ. ಕೆಲ ಮಲಯಾಳಂ ಸಿನಿಮಾ ಪೇಜುಗಳು ಸುದ್ದಿಯನ್ನು ಹಂಚಿಕೊಂಡಿವೆ.

ಇದನ್ನೂ ಓದಿ:ಅಭಿಮಾನಿಗಳಿಗೆ ಕಿಚ್ಚನ್ ಸರ್​​ಪ್ರೈಸ್; ಸುದೀಪ್ ಕಡೆಯಿಂದ ಬ್ಯಾಕ್ ಟು ಬ್ಯಾಕ್ ಸಿನಿಮಾ

‘ಉಯಿರ್’ ಮಲಯಾಳಂ ಸಿನಿಮಾ ಇದೇ ಜೂನ್ 26ಕ್ಕೆ ಬಿಡುಗಡೆ ಆಗುತ್ತಿದೆ. ‘ಜೋಸೆಫ್’ ಸೇರಿದಂತೆ ಹಲವು ಸೂಪರ್ ಹಿಟ್ ಸಿನಿಮಾಗಳನ್ನು ನೀಡಿರುವ ಪದ್ಮಕುಮಾರ್ ಅವರು ಈ ಸಿನಿಮಾ ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾ ಮೂಲಕ ಸುದೀಪ್ ಅವರು ಮಲಯಾಳಂ ಚಿತ್ರರಂಗಕ್ಕೆ ಎಂಟ್ರಿ ನೀಡುತ್ತಿದ್ದಾರೆ. ‘ಉಯಿರ್’ ಅವರ ಮೊದಲ ಮಲಯಾಳಂ ಸಿನಿಮಾ ಆಗಲಿದೆ.

ಸುದೀಪ್ ಅವರು ಪ್ರಸ್ತುತ ಹಲವು ಸಿನಿಮಾಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ‘ಬಿಲ್ಲಾ ರಂಗ ಭಾಷಾ’ ಸಿನಿಮಾ ಚಿತ್ರೀಕರಣ ಚಾಲ್ತಿಯಲ್ಲಿದೆ. ಬಳಿಕ ಕೆಆರ್​​ಜಿ ನಿರ್ಮಿಸಲಿರುವ ಸಿನಿಮಾನಲ್ಲಿ ಸುದೀಪ್ ನಟಿಸಲಿದ್ದಾರೆ. ಇವುಗಳ ಜೊತೆಗೆ ಇನ್ನೂ ಎರಡು ಸಿನಿಮಾಗಳನ್ನು ಸುದೀಪ್ ಓಕೆ ಮಾಡಿದ್ದಾರೆ ಎನ್ನಲಾಗುತ್ತಿದೆ. ಸುದೀಪ್ ಅವರು ರಾಜಮೌಳಿ ನಿರ್ದೇಶನದ ‘ವಾರಣಾಸಿ’ ಸಿನಿಮಾನಲ್ಲೂ ಅತಿಥಿ ಪಾತ್ರದಲ್ಲಿ ನಟಿಸಿದ್ದಾರೆ ಎಂಬ ಸುದ್ದಿ ಇತ್ತೀಚೆಗಷ್ಟೆ ಹರಿದಾಡಿತ್ತು. ಆದರೆ ಆ ಬಗ್ಗೆ ಖಾತ್ರಿ ಇಲ್ಲ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us