AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರಭಾಸ್ ಜೊತೆ ನಟಿಸಲಿರುವ ಕಿಚ್ಚ ಸುದೀಪ್? ಸಿನಿಮಾ ಯಾವುದು?

Kichcha Sudeep: ಸುದೀಪ್, ಪ್ಯಾನ್ ಇಂಡಿಯಾ ಟ್ರೆಂಡ್ ಶುರುವಾಗುವ ದಶಕಕ್ಕೂ ಮೊದಲೇ ಪ್ಯಾನ್ ಇಂಡಿಯಾ ನಟ ಎನಿಸಿಕೊಂಡಿದ್ದವರು.ಆದರೆ ಇತ್ತೀಚೆಗೆ ಸುದೀಪ್ ಅವರು ಪರಭಾಷೆ ಸಿನಿಮಾಗಳಲ್ಲಿ ನಟಿಸುವುದು ಕಡಿಮೆ ಮಾಡಿದ್ದಾರೆ. ಆದರೆ ಇತ್ತೀಚೆಗೆ ಸುದೀಪ್ ಅವರಿಗೆ ಮತ್ತೆ ಪರ ಭಾಷೆಗಳ ಸಿನಿಮಾಗಳಿಂದ ಆಫರ್​​ಗಳು ಬರುತ್ತಿವೆ. ಇದೀಗ ಪ್ರಭಾಸ್ ಅವರ ಸಿನಿಮಾನಲ್ಲಿ ಸುದೀಪ್ ನಟಿಸಲಿದ್ದಾರೆ ಎನ್ನಲಾಗುತ್ತಿವೆ.

ಪ್ರಭಾಸ್ ಜೊತೆ ನಟಿಸಲಿರುವ ಕಿಚ್ಚ ಸುದೀಪ್? ಸಿನಿಮಾ ಯಾವುದು?
Prabhas Sudeep
ಮಂಜುನಾಥ ಸಿ.
|

Updated on:Jun 18, 2026 | 11:46 AM

Share

ಸುದೀಪ್ (Sudeep), ಪ್ಯಾನ್ ಇಂಡಿಯಾ ಟ್ರೆಂಡ್ ಶುರುವಾಗುವ ದಶಕಕ್ಕೂ ಮೊದಲೇ ಪ್ಯಾನ್ ಇಂಡಿಯಾ ನಟ ಎನಿಸಿಕೊಂಡಿದ್ದವರು. ಅವರ ನಟನಾ ಪ್ರತಿಭೆಗೆ ಕನ್ನಡ ಮಾತ್ರವಲ್ಲದೇ ಹಿಂದಿ, ತೆಲುಗು, ತಮಿಳು ಭಾಷೆಗಳಿಂದ ದೊಡ್ಡ ಅವಕಾಶಗಳೇ ಬಂದಿದ್ದವು. ಅಮಿತಾ ಬಚ್ಚನ್ ಸೇರಿದಂತೆ ಇನ್ನೂ ಹಲವರೊಟ್ಟಿಗೆ ಸಮನಾದ ಪಾತ್ರಗಳಲ್ಲಿ ಸುದೀಪ್ ನಟಿಸಿದ್ದಾರೆ. ಆದರೆ ಇತ್ತೀಚೆಗೆ ಸುದೀಪ್ ಅವರು ಪರಭಾಷೆ ಸಿನಿಮಾಗಳಲ್ಲಿ ನಟಿಸುವುದು ಕಡಿಮೆ ಮಾಡಿದ್ದಾರೆ. ಆದರೆ ಇತ್ತೀಚೆಗೆ ಸುದೀಪ್ ಅವರಿಗೆ ಮತ್ತೆ ಪರ ಭಾಷೆಗಳ ಸಿನಿಮಾಗಳಿಂದ ಆಫರ್​​ಗಳು ಬರುತ್ತಿವೆ. ಇದೀಗ ಪ್ರಭಾಸ್ ಅವರ ಸಿನಿಮಾನಲ್ಲಿ ಸುದೀಪ್ ನಟಿಸಲಿದ್ದಾರೆ ಎನ್ನಲಾಗುತ್ತಿವೆ.

ಕೆಲವು ದಿನಗಳ ಹಿಂದೆಯಷ್ಟೆ ನಟ ಸುದೀಪ್ ಅವರು ರಾಜಮೌಳಿ ನಿರ್ದೇಶಿಸಿ, ಮಹೇಶ್ ಬಾಬು ನಟಿಸುತ್ತಿರುವ ‘ವಾರಣಾಸಿ’ ಸಿನಿಮಾದ ಅತಿಥಿ ಪಾತ್ರದಲ್ಲಿ ನಟಿಸಲಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ಆ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ಇದೀಗ ಸುದೀಪ್ ಅವರು ತೆಲುಗಿನ ಮತ್ತೊಬ್ಬ ಸ್ಟಾರ್ ನಟನ ಸಿನಿಮಾನಲ್ಲಿ ಅತಿಥಿ ಪಾತ್ರದಲ್ಲಿ ನಟಿಸಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಸುದೀಪ್ ಅವರು ಪ್ರಭಾಸ್ ನಟನೆಯ ಹೊಸ ಸಿನಿಮಾನಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಪ್ರಭಾಸ್, ಪ್ರಸ್ತುತ ಫೌಜಿ, ಸ್ಪಿರಿಟ್ ಮತ್ತು ‘ಕಲ್ಕಿ 2898 ಎಡಿ’ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಈ ಮೂರರಲ್ಲಿ ಸುದೀಪ್ ಅವರು ‘ಸ್ಪಿರಿಟ್’ ಸಿನಿಮಾನಲ್ಲಿ ಮುಖ್ಯವಾದ ಅತಿಥಿ ಪಾತ್ರದಲ್ಲಿ ನಟಿಸಲಿದ್ದಾರೆ ಎಂಬ ಸುದ್ದಿಗಳು ಹರಿದಾಡುತ್ತಿವೆ. ‘ಸ್ಪಿರಿಟ್’ ಸಿನಿಮಾನಲ್ಲಿ ಸುದೀಪ್ ಅವರು ಸೈನ್ಯಾಧಿಕಾರಿ ಪಾತ್ರದಲ್ಲಿ ಕಾಣೀಸಿಕೊಳ್ಳಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಕೆಲ ಸುದೀಪ್ ಅಭಿಮಾನಿಗಳು, ಪ್ರಭಾಸ್ ಹಾಗೂ ಸುದೀಪ್ ಅವರು ಸೈನ್ಯದ ಸಮವಸ್ತ್ರದಲ್ಲಿರುವ ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ:ಸುದೀಪ್ ನೆಪೋಟಿಸಂ ಹೇಳಿಕೆ ಬೆನ್ನಲ್ಲೇ ಶಿವಣ್ಣ ಖಡಕ್ ಉತ್ತರ

ಆದರೆ ಸುದೀಪ್ ಕುರಿತಾಗಿ ಇಂಥಹಾ ಸುದ್ದಿಗಳು ಪದೇ ಪದೇ ಹರಿದಾಡುತ್ತಲೇ ಇರುತ್ತವೆ. ಈ ಬಾರಿಯೂ ಸಹ ‘ವಾರಣಾಸಿ’ ಮತ್ತು ‘ಸ್ಪಿರಿಟ್’ ಎರಡೂ ಸಿನಿಮಾಗಳಲ್ಲಿ ಸುದೀಪ್ ಅತಿಥಿ ಪಾತ್ರದಲ್ಲಿ ನಟಿಸಲಿದ್ದಾರೆ ಎಂಬ ಸುದ್ದಿಗಳು ಹರಿದಾಡುತ್ತಿವೆ. ಆದರೆ ಎರಡೂ ಸುದ್ದಿಗಳು ಇನ್ನೂ ಖಾತ್ರಿ ಆಗಿಲ್ಲ. ಸುದೀಪ್ ಪ್ರಸ್ತುತ ‘ಬಿಲ್ಲಾ ರಂಗ ಭಾಷಾ’ ಸಿನಿಮಾದ ಚಿತ್ರೀಕರಣದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಅದಾದ ಬಳಿಕ ಕೆಆರ್​​ಜಿ ನಿರ್ಮಾಣದ ಸಿನಿಮಾನಲ್ಲಿ ನಟಿಸಲಿದ್ದಾರೆ. ಅವರೇ ಹೇಳಿರುವಂತೆ ಅವರು ಒಟ್ಟು ನಾಲ್ಕು ಸಿನಿಮಾಗಳನ್ನು ಒಪ್ಪಿಕೊಂಡಿದ್ದು, ಒಂದಾದ ಮೇಲೆ ಒಂದನ್ನು ಮುಗಿಸಲಿದ್ದಾರಂತೆ.

ಇನ್ನು ‘ಸ್ಪಿರಿಟ್’ ಸಿನಿಮಾನಲ್ಲಿ ಪ್ರಭಾಸ್ ಸೈನ್ಯಾಧಿಕಾರಿ ಪಾತ್ರದಲ್ಲಿ ನಟಿಸಲಿದ್ದಾರಂತೆ. ಸಿನಿಮಾವನ್ನು ಸಂದೀಪ್ ರೆಡ್ಡಿ ವಂಗಾ ನಿರ್ದೇಶನ ಮಾಡುತ್ತಿದ್ದಾರೆ. ಸಿನಿಮಾದ ನಾಯಕಿ ತೃಪ್ತಿ ದಿಮ್ರಿ. ಸಿನಿಮಾದ ಪೋಸ್ಟರ್ ಒಂದು ಈಗಾಗಲೇ ಬಿಡುಗಡೆ ಆಗಿದ್ದು, ಸಖತ್ ವೈರಲ್ ಆಗಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 11:45 am, Thu, 18 June 26

Follow Us