AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆಸ್ಕರ್ ಸ್ಪರ್ಧೆಯಲ್ಲಿ ಸುಧಾ ಕೊಂಗರ ನಿರ್ದೇಶನದ ತಮಿಳು ಸಿನಿಮಾ ‘ಸೂರರೈ ಪೊಟ್ರು’

Soorarai Pottru Joins OSCARS: 93ನೇ ಆಸ್ಕರ್ ಪ್ರಶಸ್ತಿ ಸ್ಪರ್ಧೆಯಲ್ಲಿ ಸೂರ್ಯ ನಾಯಕನಾಗಿರುವ ಸುಧಾ ಕೊಂಗರ ನಿರ್ದೇಶನದ ತಮಿಳು ಸಿನಿಮಾ 'ಸೂರರೈ ಪೊಟ್ರು' ಪ್ರವೇಶ ಗಿಟ್ಟಿಸಿಕೊಂಡಿದೆ.

ಆಸ್ಕರ್ ಸ್ಪರ್ಧೆಯಲ್ಲಿ ಸುಧಾ ಕೊಂಗರ ನಿರ್ದೇಶನದ ತಮಿಳು ಸಿನಿಮಾ 'ಸೂರರೈ ಪೊಟ್ರು'
ಸೂರರೈ ಪೊಟ್ರು
ರಶ್ಮಿ ಕಲ್ಲಕಟ್ಟ
|

Updated on:Feb 26, 2021 | 1:51 PM

Share

ದೆಹಲಿ: ಸೂರ್ಯ ನಾಯಕನಾಗಿರುವ ಸುಧಾ ಕೊಂಗರ ನಿರ್ದೇಶನದ ತಮಿಳು ಸಿನಿಮಾ ‘ಸೂರರೈ ಪೊಟ್ರು’ 93ನೇ ಆಸ್ಕರ್ ಪ್ರಶಸ್ತಿ ಸ್ಪರ್ಧೆಯಲ್ಲಿ ಭಾಗವಹಿಸಲು ಅರ್ಹತೆ ಗಿಟ್ಟಿಸಿಕೊಂಡಿದೆ ಎಂದು ಅಕಾಡೆಮಿ ಆಫ್ ಮೋಷನ್ ಪಿಕ್ಚರ್ ಆರ್ಟ್ಸ್ ಆಂಡ್ ಸಯನ್ಸ್ ಹೇಳಿದೆ. ಮಾರ್ಚ್ 5-10ರವರೆಗೆ ಅಕಾಡೆಮಿ ಮತದಾನ ನಡೆಯಲಿದ್ದು ಮಾರ್ಚ್ 15ರಂದು ಫಲಿತಾಂಶ ಪ್ರಕಟವಾಗಲಿದೆ.

ಕಡಿಮೆ ದರದಲ್ಲಿ ಸಾಮಾನ್ಯ ವ್ಯಕ್ತಿಗಳೂ ವಿಮಾನದಲ್ಲಿ ಸಂಚರಿಸಬೇಕು ಎಂದು ಕನಸು ಹೊತ್ತು ಏರ್ ಡೆಕ್ಕನ್ ವಿಮಾನಯಾನ ಸಂಸ್ಥೆ ಆರಂಭಿಸಿದ ಕನ್ನಡಿಗ ಗೋಪಿನಾಥ್​ ಜೀವನದ ಕಥೆ ಸೂರರೈ ಪೊಟ್ರು ಸಿನಿಮಾ ಅತ್ಯುತ್ತಮ ನಟ, ಅತ್ಯುತ್ತಮ ನಟಿ, ಅತ್ಯುತ್ತಮ ನಿರ್ದೇಶಕ, ಅತ್ಯುತ್ತಮ ಹಿನ್ನೆಲೆ ಸಂಗೀತ ಹಾಗೂ ಇತರ ವಿಭಾಗಗಳಲ್ಲಿ ಆಸ್ಕರ್​ ಸ್ಪರ್ಧೆಗೆ ಪ್ರವೇಶಿಸಿದೆ.

ಪ್ರಾಥಮಿಕ ಹಂತದಲ್ಲಿ ಆಯ್ಕೆಯಾದ 366 ಸಿನಿಮಾಗಳ ಪಟ್ಟಿಯಲ್ಲಿ ಸೂರರೈ ಪೊಟ್ರು ಸಿನಿಮಾ ಇದೆ. ಜನರಲ್ ಕೆಟಗರಿಯಲ್ಲಿ ಈ ಸಿನಿಮಾ ಸ್ಪರ್ಧಿಸುತ್ತಿದೆ ಎಂದು ಸಹ ನಿರ್ಮಾಪಕ ರಾಜಶೇಖರ್ ಪಾಂಡ್ಯ ಹೇಳಿದ್ದಾರೆ.

ಕೊರೊನಾ ವೈರಸ್​ ಹಿನ್ನೆಲೆಯಲ್ಲಿ ಸೂರರೈ ಪೊಟ್ರು ಅಮೆಜಾನ್​ ಪ್ರೈಮ್​ನಲ್ಲಿ ರಿಲೀಸ್​ ಆಗಿತ್ತು. ಒಟಿಟಿಯಲ್ಲಿ ರಿಲೀಸ್​ ಆಗಿದ್ದ ಈ ಸಿನಿಮಾ ದೊಡ್ಡ ಮಟ್ಟದಲ್ಲಿ ಹೆಸರು ಮಾಡಿತ್ತು. ಸೂರ್ಯ ಅವರ ಹೋಮ್ ಬ್ಯಾನರ್ 2ಡಿ ಎಂಟರ್ ಟೈನ್ ಮೆಂಟ್ ನಿರ್ಮಿಸಿದ ಈ ಚಿತ್ರದಲ್ಲಿ ಸೂರ್ಯ ಜತೆಗೆ ಪರೇಶ್​ ರಾವಲ್​, ಅಪರ್ಣಾ ಬಾಲಮುರಳಿ, ಊರ್ವಶಿ ಮೊದಲಾದವರು ಬಣ್ಣ ಹಚ್ಚಿದ್ದಾರೆ.

 ಇದನ್ನೂ ಓದಿ: ಆಸ್ಕರ್​ ರೇಸ್​ನಲ್ಲಿ ಕನ್ನಡಿಗ ಗೋಪಿನಾಥ್​ ಜೀವನದ ಕಥೆ!

Published On - 1:49 pm, Fri, 26 February 21

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್