‘ಸೂಪರ್ ಸ್ಟಾರ್’ ಕೃಷ್ಣ ಪ್ರತಿಮೆ ಅನಾವರಣ ಮಾಡಿದ ಕಮಲ್ ಹಾಸನ್; ಧನ್ಯವಾದ ತಿಳಿಸಿದ ಮಹೇಶ್ ಬಾಬು
Actor Krishna Statue: ಕೃಷ್ಣ ಅವರ ಪ್ರತಿಮೆ ಅನಾವರಣ ಸಮಾರಂಭಕ್ಕೆ ಸ್ವತಃ ಮಹೇಶ್ ಬಾಬು ಅವರು ಗೈರಾಗಿದ್ದರು. ‘ಗುಂಟೂರು ಖಾರಂ’ ಸಿನಿಮಾದ ಚಿತ್ರೀಕರಣದಲ್ಲಿ ಅವರು ಬ್ಯುಸಿ ಆಗಿದ್ದಾರೆ. ಅದರ ಶೂಟಿಂಗ್ ಹೈದರಾಬಾದ್ನಲ್ಲಿ ನಡೆಯುತ್ತಿದೆ. ಆ ಕಾರಣದಿಂದ ಅವರು ತಂದೆಯ ಪ್ರತಿಮೆ ಅನಾವರಣ ಕಾರ್ಯಕ್ರಮಕ್ಕೆ ಹಾಜರಿ ಹಾಕಲು ಸಾಧ್ಯವಾಗಿಲ್ಲ.
ತೆಲುಗು ಚಿತ್ರರಂಗಕ್ಕೆ ಮಹೇಶ್ ಬಾಬು ಅವರ ತಂದೆ ಕೃಷ್ಣ (Superstar Krishna) ಅವರು ನೀಡಿದ ಕೊಡುಗೆ ಅಪಾರ. ಅಭಿಮಾನಿಗಳಿಂದ ಪ್ರೀತಿಯಿಂದ ‘ಸೂಪರ್ ಸ್ಟಾರ್’ ಎಂದು ಬಿರುದು ಪಡೆದ ಅವರು ಹಲವು ಬಗೆಯ ಸಿನಿಮಾಗಳನ್ನು ಮಾಡಿ ಗಮನ ಸೆಳೆದಿದ್ದರು. ಕಳೆದ ವರ್ಷ ಅವರು ಹೃದಯಾಘಾತದಿಂದ ನಿಧನರಾದರು. ಈಗ ಅವರಿಗೆ ಗೌರವ ಸಲ್ಲಿಸುವ ಸಲುವಾಗಿ ಪ್ರತಿಮೆ ನಿರ್ಮಾಣ ಮಾಡಲಾಗಿದೆ. ವಿಜಯವಾಡದಲ್ಲಿ ನಿರ್ಮಾಣ ಆಗಿರುವ ಈ ಪ್ರತಿಮೆಯನ್ನು ತಮಿಳಿನ ಖ್ಯಾತ ನಟ ಕಮಲ್ ಹಾಸನ್ (Kamal Haasan) ಅವರು ಅನಾವರಣ ಮಾಡಿದ್ದಾರೆ. ಈ ಮೂಲಕ ಅವರು ಗೌರವ ಸಲ್ಲಿಸಿದ್ದಾರೆ. ಕಮಲ್ ಹಾಸನ್ ಅವರಿಗೆ ಮಹೇಶ್ ಬಾಬು (Mahesh Babu) ಧನ್ಯವಾದ ತಿಳಿಸಿದ್ದಾರೆ. ಪ್ರತಿಮೆ ಅನಾವರಣದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಚಿತ್ರರಂಗದಲ್ಲಿ ಕಮಲ್ ಹಾಸನ್ ಅವರು ಬ್ಯುಸಿ ಆಗಿದ್ದಾರೆ. ‘ಇಂಡಿಯನ್ 2’, ‘ಥಗ್ ಲೈಫ್’, ‘ಕಲ್ಕಿ 2898 ಎಡಿ’ ಸಿನಿಮಾದ ಕೆಲಸಗಳಲ್ಲಿ ಅವರು ನಿರತರಾಗಿದ್ದಾರೆ. ಅಷ್ಟೆಲ್ಲ ಬ್ಯುಸಿ ಆಗಿದ್ದರೂ ಕೂಡ ಅವರು ಕೃಷ್ಣ ಮೇಲಿನ ಗೌರವಕ್ಕಾಗಿ ಪ್ರತಿಮೆ ಅನಾವರಣ ಕಾರ್ಯಕ್ರಮಕ್ಕೆ ಹಾಜರಿ ಹಾಕಿದ್ದಾರೆ. ಅಭಿಮಾನಿಗಳೇ ಸೇರಿ ಈ ಪ್ರತಿಮೆ ನಿರ್ಮಾಣ ಮಾಡಿದ್ದಾರೆ. ಕಮಲ್ ಹಾಸನ್ಗೂ ಅಭಿಮಾನಿಗಳೇ ಆಹ್ವಾನ ನೀಡಿದ್ದಾರೆ. ಫ್ಯಾನ್ಸ್ ನೀಡಿದ ಆಹ್ವಾನವನ್ನು ಸ್ವೀಕರಿಸಿ, ಕಮಲ್ ಹಾಸನ್ ಅವರು ಈ ಕಾರ್ಯಕ್ರಮಕ್ಕೆ ಹಾಜರಿ ಹಾಕಿದ್ದಾರೆ.
Heartfelt gratitude to @ikamalhaasan Sir and @DevineniAvi Garu for gracing the inaugural event of Krishna garu’s statue in Vijayawada. Truly honoured to have them unveil Nanna garu’s statue, a homage to the legacy he left behind. Also, a big thank you to all the fans from the… pic.twitter.com/4YUOidCR8d
— Mahesh Babu (@urstrulyMahesh) November 10, 2023
ಕೃಷ್ಣ ಅವರ ಪ್ರತಿಮೆ ಅನಾವರಣದ ಸಮಯದಲ್ಲಿ ಯುವ ನಾಯಕ ದೇವಿನೇನಿ ಅವಿನಾಶ್ ಕೂಡ ಭಾಗಿ ಆಗಿದ್ದರು. ಅವರಿಗೂ ಮಹೇಶ್ ಬಾಬು ಧನ್ಯವಾದ ಅರ್ಪಿಸಿದ್ದಾರೆ. ‘ವಿಜಯವಾಡಲ್ಲಿ ಕೃಷ್ಣ ಅವರ ಪ್ರತಿಮೆಯನ್ನು ಅನಾವರಣ ಮಾಡಿದಕ್ಕೆ ಕಮಲ್ ಹಾಸನ್ ಸರ್ ಮತ್ತು ದೇವಿನೇನಿ ಅವಿನಾಶ್ ಅವರಿಗೆ ಧನ್ಯವಾದಗಳು. ಅವರು ನಮ್ಮ ತಂದೆಯ ಪ್ರತಿಮೆ ಅನಾವರಣ ಮಾಡಿದ್ದು ನಮಗೆ ಹೆಮ್ಮೆ ತಂದಿದೆ. ಇದನ್ನು ಸಾಧ್ಯವಾಗಿಸಿದ ಅಭಿಮಾನಿಗಳಿಗೆ ಧನ್ಯವಾದಗಳು’ ಎಂದು ಮಹೇಶ್ ಬಾಬು ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ: ‘ಸಿನಿಮಾ ನನ್ನ ರಕ್ತದಲ್ಲಿದೆ’ ಎಂದ ಮಹೇಶ್ ಬಾಬು ಪುತ್ರಿ ಸಿತಾರಾ ಘಟ್ಟಮನೇನಿ
ಅಂದಹಾಗೆ, ಈ ಸಮಾರಂಭಕ್ಕೆ ಸ್ವತಃ ಮಹೇಶ್ ಬಾಬು ಅವರು ಗೈರಾಗಿದ್ದರು. ‘ಗುಂಟೂರು ಖಾರಂ’ ಸಿನಿಮಾದ ಚಿತ್ರೀಕರಣದಲ್ಲಿ ಅವರು ಬ್ಯುಸಿ ಆಗಿದ್ದಾರೆ. ಅದರ ಶೂಟಿಂಗ್ ಹೈದರಾಬಾದ್ನಲ್ಲಿ ನಡೆಯುತ್ತಿದೆ. ಆ ಕಾರಣದಿಂದ ಅವರು ತಂದೆಯ ಪ್ರತಿಮೆ ಅನಾವರಣ ಕಾರ್ಯಕ್ರಮಕ್ಕೆ ಹಾಜರಿ ಹಾಕಲು ಸಾಧ್ಯವಾಗಿಲ್ಲ. 350ಕ್ಕೂ ಅಧಿಕ ಸಿನಿಮಾಗಳಲ್ಲಿ ಕೃಷ್ಣ ಅವರು ನಟಿಸಿದ್ದರು. ನಿರ್ಮಾಪಕನಾಗಿ, ನಿರ್ದೇಶಕನಾಗಿಯೂ ಅವರು ಸಕ್ರಿಯರಾಗಿದ್ದರು.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.