50ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಂಡ ನಟ ಸೂರ್ಯ; ಹೆಚ್ಚಾಯ್ತು ಅಭಿಮಾನ
ನಟ ಸೂರ್ಯ ಅವರ ಅಭಿಮಾನಿಗಳು ಭರ್ಜರಿಯಾಗಿ ಹುಟ್ಟುಹಬ್ಬ ಸೆಲೆಬ್ರೇಟ್ ಮಾಡಿದ್ದಾರೆ. ಇದೇ ಖುಷಿಯಲ್ಲಿ ಸೂರ್ಯ ನಟನೆಯ ‘ಕರುಪ್ಪು’ ಸಿನಿಮಾದ ಟೀಸರ್ ಕೂಡ ಬಿಡುಗಡೆ ಆಗಿದೆ. ಐದು ಭಾಷೆಯಲ್ಲಿ ಈ ಟೀಸರ್ ಬಿಡುಗಡೆ ಮಾಡಲಾಗಿದೆ. ಇದನ್ನು ಕಂಡು ಸೂರ್ಯ ಮೇಲಿನ ಅಭಿಮಾನ ಜಾಸ್ತಿ ಆಗಿದೆ.

ಕಾಲಿವುಡ್ ನಟ ಸೂರ್ಯ (Suriya) ಅವರಿಗೆ ಜುಲೈ 23ರಂದು ಹುಟ್ಟುಹಬ್ಬದ ಸಂಭ್ರಮ. ಅಭಿಮಾನಿಗಳ ಜೊತೆ ಸೇರಿ ಅವರು ಬರ್ತ್ಡೇ ಆಚರಣೆ ಮಾಡಿಕೊಂಡಿದ್ದಾರೆ. ಸೂರ್ಯ ಅವರು 50ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಅವರ ಮನೆ ಮುಂದೆ ಅಭಿಮಾನಿಗಳು ಜಮಾಯಿಸಿದ್ದಾರೆ. ತಮ್ಮ ನೆಚ್ಚಿನ ನಟನಿಗೆ ಹುಟ್ಟುಹಬ್ಬದ ಶುಭಾಶಯ ತಿಳಿಸಿದ್ದಾರೆ. ತಮ್ಮನ್ನು ನೋಡಲು ಬಂದ ಅಭಿಮಾನಿಗಳತ್ತ ಸೂರ್ಯ ಕೈ ಬೀಸಿದ್ದಾರೆ. ಈ ವಿಡಿಯೋಗಳು ವೈರಲ್ ಆಗಿವೆ. ಸೋಶಿಯಲ್ ಮೀಡಿಯಾದಲ್ಲಿ ಕೂಡ ಅಭಿಮಾನಿಗಳು ಸೂರ್ಯ ಅವರಿಗೆ ಹುಟ್ಟುಹಬ್ಬದ (Suriya Birthday) ಶುಭಾಶಯ ತಿಳಿಸುತ್ತಿದ್ದಾರೆ.
ಸೂರ್ಯ ಅವರಿಗೆ 50 ವರ್ಷ ಆಯ್ತು ಎಂದರೆ ನಂಬುವುದೇ ಕಷ್ಟ. ಯಾಕೆಂದರೆ, ಈಗಲೂ ಅವರು ಹದಿಹರೆಯದ ಹುಡುಗನಂತೆ ಫಿಟ್ ಆಗಿದ್ದಾರೆ. ಆ್ಯಕ್ಷನ್ ಸಿನಿಮಾಗಳಲ್ಲಿ ಅಬ್ಬರಿಸುತ್ತಿದ್ದಾರೆ. ನಿರ್ಮಾಪಕನಾಗಿಯೂ ಸೂರ್ಯ ಅವರು ಯಶಸ್ಸು ಕಂಡಿದ್ದಾರೆ. ಅವರ ಸಿನಿಮಾ ಜರ್ನಿ ಇನ್ನಷ್ಟು ಚೆನ್ನಾಗಿ ಇರಲಿ ಎಂದು ಅಭಿಮಾನಿಗಳು ಹಾರೈಸುತ್ತಿದ್ದಾರೆ.
ವೈರಲ್ ವಿಡಿಯೋ:
Crazy crowd at his house 🔥#Karuppu #HappyBirthdaySuriya pic.twitter.com/3Na7FyH894
— Naveen (@NaveenSuriya_FC) July 23, 2025
ಚೈನ್ನೈನಲ್ಲಿ ಇರುವ ಸೂರ್ಯ ಅವರ ನಿವಾಸದ ಎದುರು ಸಾವಿರಾರು ಅಭಿಮಾನಿಗಳು ಬಂದಿದ್ದಾರೆ. ಸೂರ್ಯ ಸೂರ್ಯ ಸೂರ್ಯ ಎಂದು ಜೈಕಾರ ಕೂಗಿದ್ದಾರೆ. ಎಲ್ಲರತ್ತ ಕೈ ಬೀಸಿದ ಸೂರ್ಯ ಅವರು ಧನ್ಯವಾದ ತಿಳಿಸಿದ್ದಾರೆ. ಮನೆಯ ಬಾಲ್ಕನಿಯಲ್ಲಿ ನಿಂತ ಸೂರ್ಯ ಅವರು ಅಭಿಮಾನಿಗಳ ಜೊತೆ ಸೆಲ್ಫಿ ತೆಗೆದುಕೊಂಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಇದು ವೈರಲ್ ಆಗಿದೆ.
‘ಕರುಪ್ಪು’ ಸಿನಿಮಾದ ಟೀಸರ್:
ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಸೂರ್ಯ ಅವರು ನಟಿಸುತ್ತಿದ್ದಾರೆ. ಅವರು ನಟಿಸಿದ ‘ಕಂಗುವ’ ಮತ್ತು ‘ರೆಟ್ರೋ’ ಸಿನಿಮಾಗಳು ಅಂದುಕೊಂಡ ಮಟ್ಟದಲ್ಲಿ ಕಲೆಕ್ಷನ್ ಮಾಡಲಿಲ್ಲ. ಹಾಗಂತ ಜನರಿಗೆ ಅವರ ಮೇಲಿರುವ ಅಭಿಮಾನ ಕಡಿಮೆ ಆಗಿಲ್ಲ. ಈಗ ಸೂರ್ಯ ನಟನೆಯ ‘ಕರುಪ್ಪು’ ಸಿನಿಮಾದ ಮೇಲೆ ಅಭಿಮಾನಿಗಳಿಗೆ ಸಖತ್ ನಿರೀಕ್ಷೆ ಮೂಡಿದೆ.
ಇದನ್ನೂ ಓದಿ: ಓದೋದರಲ್ಲಿ ಜ್ಯೋತಿಕಾ-ಸೂರ್ಯ ಮಗಳು ಜಾಣೆ; ಹೆಮ್ಮೆಯಿಂದ ಪೋಸ್ ನೀಡಿದ ಸ್ಟಾರ್ ಕಪಲ್
ಸೂರ್ಯ ಅವರ ಹುಟ್ಟುಹಬ್ಬದ ಪ್ರಯುಕ್ತ ‘ಕರುಪ್ಪು’ ಸಿನಿಮಾದ ಟೀಸರ್ ಬಿಡುಗಡೆ ಆಗಿದೆ. ಇದರಲ್ಲಿ ಸೂರ್ಯ ಅವರ ಎರಡು ಗೆಟಪ್ ಕಾಣಿಸಿದೆ. ಆ್ಯಕ್ಷನ್ ದೃಶ್ಯಗಳು ಹೈಲೈಟ್ ಆಗಿವೆ. ತಮಿಳು ಮಾತ್ರವಲ್ಲದೇ ಕನ್ನಡ, ಮಲಯಾಳಂ, ತೆಲುಗು ಮತ್ತು ಹಿಂದಿಯಲ್ಲಿ ಕೂಡ ‘ಕರುಪ್ಪು’ ಟೀಸರ್ ರಿಲೀಸ್ ಮಾಡಲಾಗಿದೆ. ಕೆಲವೇ ಗಂಟೆಗಳಲ್ಲಿ ಮಿಲಿಯನ್ಗಟ್ಟಲೆ ಲೈಕ್ಸ್ ಪಡೆದುಕೊಂಡಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.








