AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಓದೋದರಲ್ಲಿ ಜ್ಯೋತಿಕಾ-ಸೂರ್ಯ ಮಗಳು ಜಾಣೆ; ಹೆಮ್ಮೆಯಿಂದ ಪೋಸ್ ನೀಡಿದ ಸ್ಟಾರ್ ಕಪಲ್

ಸ್ಟಾರ್ ದಂಪತಿ ಸೂರ್ಯ ಹಾಗೂ ಜ್ಯೋತಿಕಾ ಅವರ ಮಗಳು ದಿಯಾಗೆ ಈಗ 18 ವರ್ಷ ವಯಸ್ಸು. ಮಗಳು ಉತ್ತಮ ಅಂಕ ಪಡೆದಿರುವುದಕ್ಕೆ ಈ ದಂಪತಿ ಖುಷಿಪಟ್ಟಿದ್ದಾರೆ. ಹೆಮ್ಮೆಯಿಂದ ಪೋಸ್ ನೀಡಿದ್ದಾರೆ. ಜ್ಯೋತಿಕಾ-ಸೂರ್ಯ ದಂಪತಿಯ ಮಕ್ಕಳಾದ ದಿಯಾ ಮತ್ತು ದೇವ್ ಮುಂಬೈನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ.

ಓದೋದರಲ್ಲಿ ಜ್ಯೋತಿಕಾ-ಸೂರ್ಯ ಮಗಳು ಜಾಣೆ; ಹೆಮ್ಮೆಯಿಂದ ಪೋಸ್ ನೀಡಿದ ಸ್ಟಾರ್ ಕಪಲ್
Jyothika, Diya, Suriya
ಮದನ್​ ಕುಮಾರ್​
|

Updated on: May 30, 2025 | 8:16 PM

Share

ಕಾಲಿವುಡ್​ನಲ್ಲಿ ಜ್ಯೋತಿಕಾ ಮತ್ತು ಸೂರ್ಯ (Suriya) ಅವರು ಸ್ಟಾರ್ ಕಪಲ್. ಸಿನಿಮಾರಂಗದಲ್ಲಿ ಬ್ಯುಸಿ ಆಗಿರುವ ಅವರು ಫ್ಯಾಮಿಲಿ ಟೈಮ್ ಮಿಸ್ ಮಾಡಿಕೊಳ್ಳುವುದಿಲ್ಲ. ಮಕ್ಕಳಿಗಾಗಿ ಸೂರ್ಯ ಮತ್ತು ಜ್ಯೋತಿಕಾ ಅವರು ಸಮಯ ಮೀಸಲಿಡುತ್ತಾರೆ. ಈಗ ಜ್ಯೋತಿಕಾ ಅವರು ಹಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಮಗಳು ದಿಯಾ (Diya) ಜೊತೆ ಸೂರ್ಯ ಮತ್ತು ಜ್ಯೋತಿಕಾ ಅವರು ಖುಷಿಯಿಂದ ಪೋಸ್ ನೀಡಿದ್ದಾರೆ. ಯಾಕೆಂದರೆ, ವಿದ್ಯಾಭ್ಯಾಸದಲ್ಲಿ ದಿಯಾ ಉತ್ತಮ ಸಾಧನೆ ಮಾಡಿದ್ದಾರೆ. ದಿಯಾ ಅವರ ಹೈಸ್ಕೂಲ್ ಗ್ರ್ಯಾಜುಯೇಷನ್​ ದಿನ ಈ ಸ್ಟಾರ್ ದಂಪತಿ ಹೆಮ್ಮೆಯಿಂದ ಪೋಸ್ ಕೊಟ್ಟಿದ್ದಾರೆ.

ವರದಿಗಳ ಪ್ರಕಾರ, 12ನೇ ತರಗತಿಯಲ್ಲಿ ದಿಯಾ ಉತ್ತಮ ಅಂಕ ಗಳಿಸಿದ್ದಾರೆ. ಅವರ ಹೈಸ್ಕೂಲ್ ಗ್ರ್ಯಾಜುಯೇಷನ್ ಕಾರ್ಯಕ್ರಮ ಇತ್ತೀಚೆಗೆ ನಡೆದಿದೆ. ಮಗಳ ಸಾಧನೆಯನ್ನು ಸಂಭ್ರಮಿಸಲು ಸೂರ್ಯ ಮತ್ತು ಜ್ಯೋತಿಕಾ ಅವರು ಈ ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದಾರೆ. ಮಗಳ ಜೊತೆ ನಿಂತು ಹೆಮ್ಮೆಯಿಂದ ತೆಗೆಸಿಕೊಂಡಿರುವ ಫೋಟೋವನ್ನು ಅವರು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ.

ಹಲವು ವರ್ಷಗಳಿಂದ ಸೂರ್ಯ ಮತ್ತು ಜ್ಯೋತಿಕಾ ಅವರು ಚೆನ್ನೈನಲ್ಲಿ ವಾಸವಾಗಿದ್ದರು. ಆದರೆ ಇತ್ತೀಚಿನ ವರ್ಷಗಳಲ್ಲಿ ಅವರು ಮುಂಬೈಗೆ ಶಿಫ್ಟ್ ಆದರು. ಅದಕ್ಕೆ ಕಾರಣ ಕೂಡ ಮಕ್ಕಳ ವಿದ್ಯಾಭ್ಯಾಸ. ಹೌದು, ಈ ದಂತಿಯ ಮಕ್ಕಳಾದ ದಿಯಾ ಮತ್ತು ದೇವ್ ಮುಂಬೈನ ಶಾಲೆಗೆ ಸೇರಿದ್ದಾರೆ. ಅವರಿಗೆ ಅನುಕೂಲ ಆಗಲಿ ಎಂಬ ಕಾರಣಕ್ಕೆ ಜ್ಯೋತಿಕಾ ಮತ್ತು ಸೂರ್ಯ ಕೂಡ ಮುಂಬೈನಲ್ಲಿ ವಾಸಿಸಲು ಆರಂಭಿಸಿದರು.

ಇದನ್ನೂ ಓದಿ
Image
ಈಡೇರಲೇ ಇಲ್ಲ ಮುತ್ತಪ್ಪ ರೈ ಬಯೋಪಿಕ್ ಆಸೆ: ವಿವರಿಸಿದ ರವಿ ಶ್ರೀವತ್ಸ
Image
ಸೌರವ್ ಗಂಗೂಲಿ ಜೀವನ ಆಧರಿಸಿದ ಸಿನಿಮಾಕ್ಕೆ ಕೊನೆಗೂ ಸಿಕ್ಕ ನಾಯಕ
Image
ಬಹುನಿರೀಕ್ಷಿತ ಕ್ರಿಕೆಟಿಗನ ಬಯೋಪಿಕ್ ಘೋಷಣೆ, ಯಾರು ಆ ಆಟಗಾರ
Image
ಬರಲಿದೆ ರಜನಿಕಾಂತ್ ಬಯೋಪಿಕ್; ಬಾಲಿವುಡ್ ನಿರ್ಮಾಪಕನ ಬಂಡವಾಳ

12ನೇ ತರಗತಿಯಲ್ಲಿ ದಿಯಾ 600ಕ್ಕೆ 581 ಅಂಕ ಗಳಿಸಿದ್ದಾರೆ ಎನ್ನಲಾಗಿದೆ. ತಮಿಳಿನಲ್ಲಿ 96, ಇಂಗ್ಲಿಷ್​ನಲ್ಲಿ 97, ಅಕೌಂಟ್ಸ್​ನಲ್ಲಿ 94, ಭೌತಶಾಸ್ತ್ರದಲ್ಲಿ 99, ರಸಾಯನ ಶಾಸ್ತ್ರದಲ್ಲಿ 98 ಹಾಗೂ ಕಂಪ್ಯೂಟರ್ ಸೈನ್ಸ್​ನಲ್ಲಿ 97 ಅಂಕ ಪಡೆದಿದ್ದಾರೆ ಎಂದು ಕೆಲವು ಮಾಧ್ಯಮಗಳು ವರದಿ ಮಾಡಿವೆ. ಆದರೆ ಇದನ್ನು ದಿಯಾ ಅವರಾಗಲಿ, ಅವರ ಕುಟುಂಬದವರಾಗಲಿ ಖಚಿತಪಡಿಸಿಲ್ಲ.

ಇದನ್ನೂ ಓದಿ: ನಟ ಸೂರ್ಯ ಬಗ್ಗೆ ಕೀಳು ಕಮೆಂಟ್ ನೋಡಿ ಕಿಸಿಕಿಸಿ ನಕ್ಕ ಪತ್ನಿ ಜ್ಯೋತಿಕಾ; ಬುದ್ಧಿ ಹೇಳಿದ ಜನ

ಚಿತ್ರರಂಗದಲ್ಲಿ ಬ್ಯುಸಿ ಇದ್ದರೂ ಕೂಡ ಸೂರ್ಯ ಮತ್ತು ಜ್ಯೋತಿಕಾ ಅವರು ಮಕ್ಕಳ ಬಗ್ಗೆ ಗಮನ ಹರಿಸುವುದನ್ನು ಕಡಿಮೆ ಮಾಡಿಲ್ಲ. ಮಕ್ಕಳ ಶಿಕ್ಷಣಕ್ಕಾಗಿ ಅವರು ಮುಂಬೈಗೆ ಶಿಫ್ಟ್ ಆಗಿದ್ದೇ ಈ ಮಾತಿಗೆ ಉದಾಹರಣೆ. ಈಗ ಮಗಳು ಉತ್ತಮ ಅಂಕ ಗಳಿಸಿದ್ದರಿಂದ ಸೂರ್ಯ ಹಾಗೂ ಜ್ಯೋತಿಕಾ ಸಖತ್ ಖುಷಿಪಡುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್
ಸ್ಮಶಾನ, ಕೆರೆ ಜಮೀನು ಕೃಷ್ಣಭೈರೇಗೌಡರ ಪಿತ್ರಾರ್ಜಿತ ಆಸ್ತಿಯಾ?
ಸ್ಮಶಾನ, ಕೆರೆ ಜಮೀನು ಕೃಷ್ಣಭೈರೇಗೌಡರ ಪಿತ್ರಾರ್ಜಿತ ಆಸ್ತಿಯಾ?
ಶಕ್ತಿ ಯೋಜನೆಗೆ 4 ಸಾವಿರ ಕೋಟಿ ಬಾಕಿ ಒಪ್ಪಿಕೊಂಡ ಸಾರಿಗೆ ಸಚಿವ
ಶಕ್ತಿ ಯೋಜನೆಗೆ 4 ಸಾವಿರ ಕೋಟಿ ಬಾಕಿ ಒಪ್ಪಿಕೊಂಡ ಸಾರಿಗೆ ಸಚಿವ
ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ಆ ಪತ್ರವೇ ಸಾಕ್ಷಿ! ರಾಜಣ್ಣ
ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ಆ ಪತ್ರವೇ ಸಾಕ್ಷಿ! ರಾಜಣ್ಣ
ಬಿಗ್ ಬಾಸ್ ಮುಗಿದ ಬಳಿಕ ಬರಲಿರೋ ಧಾರಾವಾಹಿ ಯಾವುದು? ಪ್ರೋಮೋ ರಿಲೀಸ್
ಬಿಗ್ ಬಾಸ್ ಮುಗಿದ ಬಳಿಕ ಬರಲಿರೋ ಧಾರಾವಾಹಿ ಯಾವುದು? ಪ್ರೋಮೋ ರಿಲೀಸ್