AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸೂರ್ಯ ನಟನೆಯ ‘ಸೀನ್’ ಟ್ರೇಲರ್ ಬಿಡುಗಡೆ; ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆ

ಫಹಾದ್ ಫಾಸಿಲ್ ನಟನೆಯ 2024ರ ಬ್ಲಾಕ್‌ಬಸ್ಟರ್ ‘ಆವೇಶಂ’ ಚಿತ್ರದ ನಂತರ ಜಿತು ಮಾಧವನ್ ನಿರ್ದೇಶಿಸಿರುವ ‘ಸೀನ್’ ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆ ಮೂಡಿದೆ. ರೊಮ್ಯಾನ್ಸ್, ಆ್ಯಕ್ಷನ್, ಥ್ರಿಲ್ಲರ್ ಹಾಗೂ ಹಾಸ್ಯದ ಮಿಶ್ರಣ ಹೊಂದಿರುವ ‘ಸೀನ್’ ಸಿನಿಮಾ ನವೆಂಬರ್ 6ರಂದು ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ ಅದ್ಧೂರಿಯಾಗಿ ತೆರೆಕಾಣಲಿದೆ.

ಸೂರ್ಯ ನಟನೆಯ ‘ಸೀನ್’ ಟ್ರೇಲರ್ ಬಿಡುಗಡೆ; ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆ
Suriya
ಮದನ್​ ಕುಮಾರ್​
|

Updated on: Nov 01, 2026 | 8:07 AM

Share

ಕಾಲಿವುಡ್ ನಟ ಸೂರ್ಯ ಅವರ ಅಭಿಮಾನಿಗಳಿಗೆ ಈ ವರ್ಷ ಸಂಭ್ರಮವೋ ಸಂಭ್ರಮ. ಈಗಾಗಲೇ ಬಿಡುಗಡೆಯಾಗಿ ಬಾಕ್ಸ್ ಆಫೀಸ್​ನಲ್ಲಿ ಧೂಳೆಬ್ಬಿಸಿದ ‘ಕರುಪ್ಪು’ ಹಾಗೂ ‘ವಿಶ್ವನಾಥ್ ಆ್ಯಂಡ್ ಸನ್ಸ್’ ಸಿನಿಮಾಗಳ ಭರ್ಜರಿ ಯಶಸ್ಸಿನ ನಂತರ, ಸೂರ್ಯ ಅವರ ಈ ವರ್ಷದ ಮೂರನೇ ಚಿತ್ರ ‘ಸೀನ್’ ಬಿಡುಗಡೆಗೆ ಸಿದ್ಧವಾಗಿದೆ. ತೀವ್ರ ಕುತೂಹಲ ಮೂಡಿಸಿದ್ದ ಈ ಚಿತ್ರದ ಟ್ರೇಲರ್ ಇದೀಗ ಬಿಡುಗಡೆಯಾಗಿದ್ದು, ಪ್ರೇಕ್ಷಕರಿಂದ ಮೆಚ್ಚುಗೆ ಪಡೆಯುತ್ತಿದೆ. ‘ಆವೇಶಂ’ ಖ್ಯಾತಿಯ ಜಿತು ಮಾಧವನ್ ನಿರ್ದೇಶನದ ಈ ಸಿನಿಮಾವು ಸಸ್ಪೆನ್ಸ್ ಮರ್ಡರ್ ಮಿಸ್ಟರಿ ಜೊತೆಗೆ ಭರಪೂರ ಕಾಮಿಡಿ ಮತ್ತು ಆ್ಯಕ್ಷನ್ ಒಳಗೊಂಡಿರುವ ಸಂಪೂರ್ಣ ಕಮರ್ಷಿಯಲ್ ಪ್ಯಾಕೇಜ್ ಆಗಿರಲಿದೆ.

ಟ್ರೇಲರ್ ಆರಂಭವಾಗುವುದೇ ಡಿಎಸ್‌ಪಿ ಇನ್ಬರಾಜ್ ಪಾತ್ರದಲ್ಲಿ ಸೂರ್ಯ ಅವರ ಎಂಟ್ರಿಯೊಂದಿಗೆ. ಸಾಂಪ್ರದಾಯಿಕ ಗಂಭೀರ ಪೊಲೀಸ್ ಅಧಿಕಾರಿಗಳಿಗಿಂತ ಭಿನ್ನವಾಗಿ, ಕೆಲಸಕ್ಕೆ ಹಿಂತಿರುಗಲು ಇಷ್ಟವಿಲ್ಲದೆ ‘ಕೆಲಸಕ್ಕೆ ರಾಜೀನಾಮೆ ನೀಡಿ ರಾಜಕೀಯ ಸೇರುತ್ತೇನೆ’ ಎಂದು ತಮಾಷೆ ಮಾಡುವ ವಿಭಿನ್ನ ಹಾಗೂ ಎನರ್ಜಿಟಿಕ್ ಅವತಾರದಲ್ಲಿ ಸೂರ್ಯ ಕಾಣಿಸಿಕೊಂಡಿದ್ದಾರೆ.

ಆದರೆ ನಗರದಲ್ಲಿ ಸರಣಿ ಕೊಲೆಗಳನ್ನು ಮಾಡುತ್ತಿರುವ ಸೈಕೋ ಕಿಲರ್ ಕೇಸ್ ಕೈಗೆತ್ತಿಕೊಳ್ಳುತ್ತಿದ್ದಂತೆ ಕಥೆ ರೋಚಕ ತಿರುವು ಪಡೆದುಕೊಳ್ಳುತ್ತದೆ. ಸೂರ್ಯ ಜೊತೆಗೆ ನಜ್ರಿಯಾ ಅವರು ಮಾಯಾ ಎಂಬ ಪಾತ್ರದಲ್ಲಿ ನಟಿಸಿದ್ದು, ಆ್ಯಕ್ಷನ್ ದೃಶ್ಯಗಳಲ್ಲಿ ಮಿಂಚಿದ್ದಾರೆ. ಈ ಟ್ರೇಲರ್‌ನ ಪ್ರಮುಖ ಆಕರ್ಷಣೆ ಎಂದರೆ ಖಳನಾಯಕ ಈಶ್ವರನ್ ಪಾತ್ರದಲ್ಲಿ ನಟಿಸಿರುವ ನಸ್ಲೆನ್. ಅತ್ಯಂತ ಕ್ರೂರ, ಕರುಣೆಯಿಲ್ಲದ ಕ್ರಿಮಿನಲ್ ಆಗಿ ನಸ್ಲೆನ್ ಅವರು ಅಭಿನಯದ ಮೂಲಕ ಗಮನ ಸೆಳೆದಿದ್ದಾರೆ.

ಈ ಚಿತ್ರದಲ್ಲಿ ಆನಂದ್‌ರಾಜ್, ಲಾಲ್, ರಾಜ್ ಪ್ರಿಯನ್ ಸೇರಿದಂತೆ ದೊಡ್ಡ ತಾರಾಗಣವಿದೆ. ಈ ಚಿತ್ರದ ಮೂಲಕ ಖ್ಯಾತ ಸಂಗೀತ ನಿರ್ದೇಶಕ ಸುಶಿನ್ ಶ್ಯಾಮ್ ಅವರು ತಮಿಳು ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಿದ್ದು, ವಿನೀತ್ ಅಗಸ್ಟಿಯನ್ ಛಾಯಾಗ್ರಹಣ ನಿರ್ವಹಿಸಿದ್ದಾರೆ. ಸೂರ್ಯ ಮತ್ತು ಜ್ಯೋತಿಕಾ ಅವರು ತಮ್ಮ ‘2D ಎಂಟರ್‌ಟೈನ್‌ಮೆಂಟ್’ ಬ್ಯಾನರ್ ಅಡಿಯಲ್ಲಿ ಈ ಚಿತ್ರವನ್ನು ನಿರ್ಮಿಸಿದ್ದಾರೆ.

ಇದನ್ನೂ ಓದಿ: ಕರುಪ್ಪು ಸಿನಿಮಾಗಾಗಿ ಕೊನೆ ಕ್ಷಣದಲ್ಲಿ ಸಾಲ ಮಾಡಿದ್ದ ನಟ ಸೂರ್ಯ

ಈ ವರ್ಷ ಬಿಡುಗಡೆಯಾದ ‘ಕರುಪ್ಪು’ ಚಿತ್ರದಲ್ಲಿ ಸೂರ್ಯ, ಭ್ರಷ್ಟ ವಕೀಲ ಬೇಬಿ ಕಣ್ಣನ್ ವಿರುದ್ಧ ಮಾನವ ರೂಪದಲ್ಲಿ ಹೋರಾಡುವ ಕರುಪ್ಪುಸಾಮಿ ಎಂಬ ದೇವರ ಪಾತ್ರದಲ್ಲಿ ನಟಿಸಿ ಯಶಸ್ಸು ಕಂಡಿದ್ದರು. ವಕೀಲೆ ಪ್ರೀತಿ ಪಾತ್ರವೂ ಮೆಚ್ಚುಗೆ ಪಡೆದಿತ್ತು. ಅದರ ಬೆನ್ನಲ್ಲೇ ‘ವಿಶ್ವನಾಥ್ ಆ್ಯಂಡ್ ಸನ್ಸ್’ ಕೂಡ ಯಶಸ್ಸು ತಂದುಕೊಟ್ಟಿತ್ತು. ಇದೀಗ ‘ಸೀನ್’ ಮೂಲಕ ಸೂರ್ಯ ಈ ವರ್ಷ ಹ್ಯಾಟ್ರಿಕ್ ಯಶಸ್ಸು ಸಾಧಿಸುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ಮದನ್​ ಕುಮಾರ್​
ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
ಇಂದು ಈ ರಾಶಿಯವರಿಗೆ ಗಜಕೇಸರಿ ಯೋಗ!
ಇಂದು ಈ ರಾಶಿಯವರಿಗೆ ಗಜಕೇಸರಿ ಯೋಗ!
ಗಾಂಧಿ ಹತ್ಯೆಯ ನಾಟಕದ ವೇಳೆ ನಿರ್ದೇಶಕರಿಗೆ ಮಸಿ ಬಳಿದ ಕೈ ಕಾರ್ಯಕರ್ತರು
ಗಾಂಧಿ ಹತ್ಯೆಯ ನಾಟಕದ ವೇಳೆ ನಿರ್ದೇಶಕರಿಗೆ ಮಸಿ ಬಳಿದ ಕೈ ಕಾರ್ಯಕರ್ತರು
ಉತ್ತರ ಭಾರತದ ಮೊದಲ ಬುಲೆಟ್ ಟ್ರೈನ್ ಕಾರಿಡಾರ್‌ಗೆ ಪ್ರಧಾನಿ ಮೋದಿ ಒಪ್ಪಿಗೆ
ಉತ್ತರ ಭಾರತದ ಮೊದಲ ಬುಲೆಟ್ ಟ್ರೈನ್ ಕಾರಿಡಾರ್‌ಗೆ ಪ್ರಧಾನಿ ಮೋದಿ ಒಪ್ಪಿಗೆ
ಜಿಲ್ಲೆ ಜಿಲ್ಲೆಯಲ್ಲೂ ಕಬ್ಬು ಬೆಳೆಗಾರರ ಕಿಚ್ಚು: ರಾಜ್ಯಾದ್ಯಂತ ಹೋರಾಟ
ಜಿಲ್ಲೆ ಜಿಲ್ಲೆಯಲ್ಲೂ ಕಬ್ಬು ಬೆಳೆಗಾರರ ಕಿಚ್ಚು: ರಾಜ್ಯಾದ್ಯಂತ ಹೋರಾಟ
ಸರ್ದಾರ್ ವಲ್ಲಭಭಾಯಿ ಪಟೇಲ್ ಏಕತಾ ಪ್ರತಿಮೆಗೆ ಪ್ರಧಾನಿ ಮೋದಿ ಪುಷ್ಪ ನಮನ
ಸರ್ದಾರ್ ವಲ್ಲಭಭಾಯಿ ಪಟೇಲ್ ಏಕತಾ ಪ್ರತಿಮೆಗೆ ಪ್ರಧಾನಿ ಮೋದಿ ಪುಷ್ಪ ನಮನ
ಗುಜರಾತ್‌ನಲ್ಲಿ 400 ಕೋಟಿಗೂ ಅಧಿಕ ವೆಚ್ಚದ ಯೋಜನೆಗಳಿಗೆ ಮೋದಿ ಚಾಲನೆ
ಗುಜರಾತ್‌ನಲ್ಲಿ 400 ಕೋಟಿಗೂ ಅಧಿಕ ವೆಚ್ಚದ ಯೋಜನೆಗಳಿಗೆ ಮೋದಿ ಚಾಲನೆ
ದಾಖಲೆ ಇಲ್ಲದ ಜಮೀನಿಗೆ ಇ-ಸ್ವತ್ತು: ಗ್ರಾಮೀಣ ಭಾಗದ ಜನರಿಗೆ ಗುಡ್​ ನ್ಯೂಸ್
ದಾಖಲೆ ಇಲ್ಲದ ಜಮೀನಿಗೆ ಇ-ಸ್ವತ್ತು: ಗ್ರಾಮೀಣ ಭಾಗದ ಜನರಿಗೆ ಗುಡ್​ ನ್ಯೂಸ್
ಬೆನ್ನಹಿಂದೆ ಚಾಕು ಹಾಕಿದ ಯಶಸ್; ಸುದೀಪ್ ಎದುರೇ ಎದ್ದು ನಡೆದ ಸೌಂದರ್ಯಾ
ಬೆನ್ನಹಿಂದೆ ಚಾಕು ಹಾಕಿದ ಯಶಸ್; ಸುದೀಪ್ ಎದುರೇ ಎದ್ದು ನಡೆದ ಸೌಂದರ್ಯಾ
ನದಿ ತಿರುವು ವಿರೋಧಿಸಿ ಸಿಎಂ, ಪ್ರಧಾನಿಗೆ ಪತ್ರ ಬರೆದ ಶಿರಸಿಯ ಶಾಲಾ ಮಕ್ಕಳು
ನದಿ ತಿರುವು ವಿರೋಧಿಸಿ ಸಿಎಂ, ಪ್ರಧಾನಿಗೆ ಪತ್ರ ಬರೆದ ಶಿರಸಿಯ ಶಾಲಾ ಮಕ್ಕಳು
TV9 ಬಿಗ್ ಇಂಪ್ಯಾಕ್ಟ್;ಸೋರುತ್ತಿದ್ದ ಸರ್ಕಾರಿ ಶಾಲೆಗೆ ಬಂತು ಹೊಸ ಮೇಲ್ಛಾವಣಿ
TV9 ಬಿಗ್ ಇಂಪ್ಯಾಕ್ಟ್;ಸೋರುತ್ತಿದ್ದ ಸರ್ಕಾರಿ ಶಾಲೆಗೆ ಬಂತು ಹೊಸ ಮೇಲ್ಛಾವಣಿ