‘ಲೈಂಗಿಕತೆ ತಪ್ಪಾ?’ ನೇರವಾಗಿ ಪ್ರಶ್ನೆ ಮಾಡಿದ ತಮನ್ನಾ ಭಾಟಿಯಾ
2015ರ ಬಾಹುಬಲಿ ಚಿತ್ರದಲ್ಲಿನ ಇಂಟಿಮೇಟ್ ದೃಶ್ಯದ ಬಗ್ಗೆ ತಮನ್ನಾ ಭಾಟಿಯಾ ಅವರು ಇತ್ತೀಚೆಗೆ ಮೌನ ಮುರಿದಿದ್ದಾರೆ. ಲೈಂಗಿಕತೆಯನ್ನು ಒಂದು ಸುಂದರ ಅಂಶವಾಗಿ ನಿರ್ದೇಶಕರು ತೋರಿಸಲು ಪ್ರಯತ್ನಿಸಿದ್ದಾರೆ ಎಂದು ಅವರು ಹೇಳಿದ್ದಾರೆ. ಆದರೆ ಕೆಲವರು ಇದನ್ನು ಟೀಕಿಸಿರುವುದನ್ನು ಅವರು ಗಮನಿಸಿದ್ದಾರೆ ಮತ್ತು ಈ ಟೀಕೆಗಳನ್ನು ಅವರು ವ್ಯಕ್ತಿನಿಷ್ಠ ಅಭಿಪ್ರಾಯಗಳೆಂದು ಪರಿಗಣಿಸುತ್ತಾರೆ.

2015 ರಲ್ಲಿ ಬಿಡುಗಡೆಯಾದ ‘ಬಾಹುಬಲಿ: ದಿ ಬಿಗಿನಿಂಗ್’ ಚಿತ್ರದಲ್ಲಿ ನಟಿ ತಮನ್ನಾ ಭಾಟಿಯಾ (Tamannaah Bhatia) ಪ್ರಮುಖ ಪಾತ್ರ ವಹಿಸಿದ್ದರು. ನಟ ಪ್ರಭಾಸ್ ಚಿತ್ರದಲ್ಲಿ ಹೀರೋ ಆಗಿದ್ದರು. ಎಸ್ಎಸ್ ರಾಜಮೌಳಿ ಈ ಚಿತ್ರದ ನಿರ್ದೇಶಕರು. ಚಿತ್ರದಲ್ಲಿ ಪ್ರಭಾಸ್ ಮತ್ತು ತಮನ್ನಾ ಅವರ ಒಂದು ದೃಶ್ಯ ಇತ್ತು. ಹಾಡಿನಲ್ಲಿ ಇಬ್ಬರೂ ಇಂಟಿಮೇಟ್ ಆಗಿ ಕಾಣಿಸಿಕೊಂಡಿದ್ದರು. ‘ಅವಂತಿಕಾ ಮೇಲಿನ ಅತ್ಯಾಚಾರ’ ಎಂಬ ಲೇಖನವನ್ನು ಸಹ ಪ್ರಕಟಿಸಲಾಗಿದೆ. ಕೊನೆಗೆ, ನಟಿ ಈ ಬಗ್ಗೆ ಮೌನ ಮುರಿದಿದ್ದಾರೆ. ಪ್ರಸ್ತುತ, ನಟಿಯ ಹೇಳಿಕೆ ಎಲ್ಲೆಡೆ ಚರ್ಚೆಯಾಗುತ್ತಿದೆ.
ಇತ್ತೀಚಿನ ಸಂದರ್ಶನವೊಂದರಲ್ಲಿ, ತಮನ್ನಾ ವಿವಾದಾತ್ಮಕ ದೃಶ್ಯದ ಬಗ್ಗೆ ಮಾತನಾಡಿದ್ದಾರೆ. ‘ಜನರು ನಿಮ್ಮನ್ನು ನಿಯಂತ್ರಿಸಲು ಸಾಧ್ಯವಾಗದಿದ್ದಾಗ, ಅವರು ಬೇರೆ ತಂತ್ರವನ್ನು ಬಳಸುತ್ತಾರೆ. ಅವಮಾನ ಮಾಡುವುದು ಆ ತಂತ್ರ. ನೀವು ಏನು ಮಾಡುತ್ತಿದ್ದೀರಿ ಎಂಬುದರ ಬಗ್ಗೆ ನೀವು ನಾಚಿಕೆಪಡಬೇಕಾದ ರೀತಿ ಅವರು ಮಾಡುತ್ತಾರೆ. ನೀವು ನಾಚಿಕೆಪಡಲು ಪ್ರಾರಂಭಿಸಿದಾಗ, ಅಂತಹ ಜನರು ನಿಮ್ಮನ್ನು ನಿಯಂತ್ರಿಸಬಹುದು’ ಎಂದಿದ್ದಾರೆ ತಮನ್ನಾ.
‘ಲೈಂಗಿಕತೆ ಕೆಟ್ಟದ್ದಾಗಿದ್ದರೆ, ನಾವು ಈ ಜಗತ್ತಿನಲ್ಲಿ ಇರುತ್ತಿರಲಿಲ್ಲ. ಜನರು ಯಾಕೆ ಇದನ್ನು ಅರ್ಥಮಾಡಿಕೊಳ್ಳುವುದಿಲ್ಲ ಎಂದು ನನಗೆ ಅರ್ಥವಾಗುತ್ತಿಲ್ಲ. ನಿರ್ದೇಶಕ ಏನನ್ನೋ ಸುಂದರವಾಗಿದ್ದನ್ನು ತೋರಿಸಲು ಇಷ್ಟಪಡುತ್ತಾನೆ. ಆದರೆ, ನೀವು ಅದನ್ನು ಬೇರೆ ರೀತಿಯಲ್ಲಿ ನೋಡುತ್ತೀರಿ ಎಂದಾದರೆ ಅದು ನಿಮ್ಮ ಆಲೋಚನೆ’ ಎಂದು ತಮನ್ನಾ ಹೇಳಿದರು.
ನಟಿ ತಮನ್ನಾ ಅವರು ಅವಂತಿಕಾ ಪಾತ್ರ ಮಾಡಿದ್ದರು. ಅವಂತಿಕಾ ಕಾಡಿನಲ್ಲಿ ವಾರಿಯರ್ ಆಗಿ ಇರುವವಳು. ಅವಳಿಗೆ ಸೌಂದರ್ಯದ ಬಗ್ಗೆ ಯಾವುದೇ ಆಸಕ್ತಿ ಇರೋದಿಲ್ಲ. ಆದರೆ, ಕಥಾ ನಾಯಕ ಆಕೆಗೂ ಸೌಂದರ್ಯ ಇದೆ ಎಂದು ತೋರಿಸುತ್ತಾನೆ. ಇಬ್ಬರು ಇಂಟಿಮೇಟ್ ಆಗುತ್ತಾರೆ. ಈ ರೀತಿಯಲ್ಲಿ ದೃಶ್ಯ ಮೂಡಿ ಬಂದಿತ್ತು. ಈ ದೃಶ್ಯವನ್ನು ಕೆಲವರು ಟೀಕೆ ಮಾಡಿದ್ದರು.
ಇದನ್ನೂ ಓದಿ: ‘ಆಜ್ ಕಿ ರಾತ್ ಹಾಡು ನೋಡಿದ್ರೆ ಮಾತ್ರ ಆ ಮಕ್ಕಳು ಊಟ ಮಾಡ್ತಾರೆ’; ತಮನ್ನಾ ಭಾಟಿಯಾ
ತಮನ್ನಾ ಭಾಟಿಯಾ ಅವರು ಹಲವು ಹಿಟ್ ಚಿತ್ರಗಳನ್ನು ನೀಡಿದ್ದಾರೆ. ಅವರು ಡ್ಯಾನ್ಸ್ ವಿಡಿಯೋಗಳಲ್ಲಿ ಕೂಡ ಕಾಣಿಸಿಕೊಳ್ಳುತ್ತಿದ್ದಾರೆ. ತಮನ್ನಾ ಭಾಟಿಯಾ ಅವರ ಮುಂಬರುವ ಚಿತ್ರಗಳ ಬಗ್ಗೆ ಹೇಳುವುದಾದರೆ, ನಟಿ ಶೀಘ್ರದಲ್ಲೇ ‘ವ್ಯಾನ್: ಫೋರ್ಸ್ ಆಫ್ ದಿ ಫಾರೆಸ್ಟ್’ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ನಟಿ ಇತರ ಪ್ರಾಜೆಕ್ಟ್ಗಳಲ್ಲಿಯೂ ಕೆಲಸ ಮಾಡುತ್ತಿದ್ದಾರೆ. ತಮನ್ನಾ ಸಾಮಾಜಿಕ ಮಾಧ್ಯಮದಲ್ಲಿ ಯಾವಾಗಲೂ ಸಕ್ರಿಯರಾಗಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ಅವರ ಅಭಿಮಾನಿಗಳ ಸಂಖ್ಯೆಯೂ ತುಂಬಾ ದೊಡ್ಡದಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.







