BBK9 Finale: ಬಿಗ್​ ಬಾಸ್​ ಫಿನಾಲೆ ವಾರಕ್ಕೆ 6 ಮಂದಿ ಎಂಟ್ರಿ; ಶೀಘ್ರವೇ ನಡೆಯಲಿದೆ ಇನ್ನೊಂದು ಎಲಿಮಿನೇಷನ್​

| Updated By: ರಾಜೇಶ್ ದುಗ್ಗುಮನೆ

Updated on: Dec 26, 2022 | 7:30 AM

Bigg Boss Kannada Season 9: ಬಿಗ್​ ಬಾಸ್​ ಫಿನಾಲೆಗಾಗಿ ಸಕಲ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಅಂತಿಮವಾಗಿ ಟ್ರೋಫಿ ಪಡೆಯುವವರು ಯಾರು ಎಂಬುದನ್ನು ತಿಳಿಯುವ ಕೌತುಕ ಮೂಡಿದೆ.

BBK9 Finale: ಬಿಗ್​ ಬಾಸ್​ ಫಿನಾಲೆ ವಾರಕ್ಕೆ 6 ಮಂದಿ ಎಂಟ್ರಿ; ಶೀಘ್ರವೇ ನಡೆಯಲಿದೆ ಇನ್ನೊಂದು ಎಲಿಮಿನೇಷನ್​
ಬಿಗ್ ಬಾಸ್ ಫಿನಾಲೆ ವಾರಕ್ಕೆ 6 ಮಂದಿ
Follow us on

ಕಿರುತೆರೆಯ ಅತಿ ದೊಡ್ಡ ರಿಯಾಲಿಟಿ ಶೋ ಎಂದು ಖ್ಯಾತಿ ಪಡೆದಿರುವ ‘ಬಿಗ್​ ಬಾಗ್​’ (Bigg Boss) ಕಾರ್ಯಕ್ರಮ ಕನ್ನಡದಲ್ಲೂ ಜನಮೆಚ್ಚುಗೆ ಪಡೆದುಕೊಂಡಿದೆ. ‘ಕಲರ್ಸ್​ ಕನ್ನಡ’ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ ‘ಬಿಗ್​ ಬಾಸ್​ ಕನ್ನಡ ಸೀಸನ್​ 9’ ಶೋ (Bigg Boss Kannada Season 9) ಈಗ ಅಂತಿಮ ಹಂತಕ್ಕೆ ಬಂದಿದೆ. 93 ದಿನಗಳನ್ನು ಪೂರೈಸಿ ಕೊನೇ ವಾರಕ್ಕೆ ಕಾಲಿಟ್ಟಿರುವ ಈ ಕಾರ್ಯಕ್ರಮದಲ್ಲಿ ಈಗ 6 ಜನರು ಸ್ಪರ್ಧಿಸುತ್ತಿದ್ದಾರೆ. 13ನೇ ವಾರದಲ್ಲಿ ಅರುಣ್​ ಸಾಗರ್​ ಅವರು ಎಲಿಮಿನೇಟ್​ ಆದರು. ಆ ಮೂಲಕ ಇನ್ನುಳಿದ 6 ಸ್ಪರ್ಧಿಗಳು ಫಿನಾಲೆ (BBK9 Finale) ವಾರಕ್ಕೆ ಎಂಟ್ರಿ ಪಡೆದರು. ರೂಪೇಶ್​ ಶೆಟ್ಟಿ, ರಾಕೇಶ್​ ಅಡಿಗ, ರೂಪೇಶ್​ ರಾಜಣ್ಣ, ಆರ್ಯವರ್ಧನ್​ ಗುರೂಜಿ, ದೀಪಿಕಾ ದಾಸ್​, ದಿವ್ಯಾ ಉರುಡುಗ ನಡುವೆ ಸ್ಪರ್ಧೆ ಮುಂದುವರಿದಿದೆ.

ಕಿಚ್ಚ ಸುದೀಪ್​ ಅವರು ಬಹಳ ಲವಲವಿಕೆಯಿಂದ ‘ಬಿಗ್​ ಬಾಸ್​ ಕನ್ನಡ ಸೀಸನ್​ 9’ ಕಾರ್ಯಕ್ರಮ ನಡೆಸಿಕೊಡುತ್ತಿದ್ದಾರೆ. ಇನ್ನೇನು ಕೆಲವೇ ದಿನಗಳಲ್ಲಿ ಫಿನಾಲೆ ಸಂಚಿಕೆ ಪ್ರಸಾರ ಆಗಲಿದೆ. ಫಿನಾಲೆಯಲ್ಲಿ 5 ಜನರ ನಡುವೆ ಹಣಾಹಣಿ ನಡೆಯಲಿದೆ. ಅಂತಿಮವಾಗಿ ಒಬ್ಬರು ಟ್ರೋಫಿ ಎತ್ತಲಿದ್ದಾರೆ. ಸದ್ಯ ಮನೆಯಲ್ಲಿ ಇರುವ 6 ಜನರ ಪೈಕಿ ಒಬ್ಬರು ಮಿಡ್​ ವೀಕ್​ ಎಲಿಮಿನೇಷನ್​ನಲ್ಲಿ ಔಟ್​ ಆಗಲೇಬೇಕಿದೆ. ಆ ಎಲಿಮಿನೇಷನ್​ ತುಂಬ ಅಚ್ಚರಿಯಾಗಿ ಇರಲಿದೆ. ಅದಕ್ಕಾಗಿ ಪ್ರೇಕ್ಷಕರು ಕಾದಿದ್ದಾರೆ.

ಇದನ್ನೂ ಓದಿ: BBK9: ಎಚ್ಚರಿಕೆ ನೀಡಲು ಬಂದ ಬಿಗ್​ ಬಾಸ್​ಗೆ ಆವಾಜ್​ ಹಾಕಿದ ಆರ್ಯವರ್ಧನ್​ ಗುರೂಜಿ; ಕಾದಿದೆ ಗ್ರಹಚಾರ

ಇದನ್ನೂ ಓದಿ
Bigg Boss Elimination: ಬಿಗ್​ ಬಾಸ್​ನಲ್ಲಿ ದರ್ಶ್​ ಆಟ ಅಂತ್ಯ; 3ನೇ ವಾರದ ಎಲಿಮಿನೇಷನ್​ನಲ್ಲಿ ಮಯೂರಿ ಸೇಫ್​
BBK9: ಬಿಗ್​ ಬಾಸ್​ ಮೇಲೆ ಮ್ಯಾಚ್​ ಫಿಕ್ಸಿಂಗ್​ ಆರೋಪ; ಗುರೂಜಿ ವಿರುದ್ಧ ಗುಡುಗಿದ ಸುದೀಪ್​
BBK9: ಬಿಗ್​ ಬಾಸ್​ 2ನೇ ವಾರ ನವಾಜ್​ ಎಲಿಮಿನೇಟ್​; ದೊಡ್ಮನೆಯಲ್ಲಿ ನಡೆಯಲಿಲ್ಲ ಪ್ರಾಸದ ಆಟ
BBK9: ಬಿಗ್​ ಬಾಸ್​ನಿಂದ ಐಶ್ವರ್ಯಾ ಪಿಸ್ಸೆ ಎಲಿಮಿನೇಟ್​; ಒಂದೇ ವಾರಕ್ಕೆ ಮುಗಿಯಿತು ದೊಡ್ಮನೆ ಆಟ

ನೂರು ದಿನಗಳನ್ನು ಪೂರೈಸಿ ಬಿಗ್​ ಬಾಸ್​ ಟ್ರೋಫಿ ಪಡೆಯಬೇಕು ಎಂಬುದು ಎಲ್ಲ ಸ್ಪರ್ಧಿಗಳ ಕನಸಾಗಿರುತ್ತದೆ. ಅದೇ ನಿಟ್ಟಿನಲ್ಲಿ ವಿವಿಧ ಟಾಸ್ಕ್​ಗಳಲ್ಲಿ ಹಣಾಹಣಿ ನಡೆಸಿರುತ್ತಾರೆ. ಆದರೆ ಅಂತಿಮವಾಗಿ ಗೆಲ್ಲುವುದು ಒಬ್ಬರು ಮಾತ್ರ. ಈ ಬಾರಿ ಯಾರಿಗೆ ವಿಜಯಲಕ್ಷ್ಮೀ ಒಲಿಯಲಿದ್ದಾಳೆ ಎಂಬುದನ್ನು ತಿಳಿಯುವ ಕೌತುಕ ಮನೆಮಾಡಿದೆ.

ಇದನ್ನೂ ಓದಿ: Arun Sagar: ಬಿಗ್​ ಬಾಸ್​ನಿಂದ ಅರುಣ್​ ಸಾಗರ್​ ಎಲಿಮಿನೇಟ್​; ಫಿನಾಲೆಯ ಸಮೀಪದಲ್ಲಿ ಮುಗ್ಗರಿಸಿದ ಕಲಾವಿದ

ಈಗ ಉಳಿದಿರುವ 6 ಸ್ಪರ್ಧಿಗಳ ಪೈಕಿ ಎಲ್ಲರೂ ಒಂದೊಂದು ವಿಚಾರದಲ್ಲಿ ಪ್ರಬಲರಾಗಿದ್ದಾರೆ. ತುಂಬ ಕೂಲ್​ ವ್ಯಕ್ತಿತ್ವದ ಕಾರಣದಿಂದ ರಾಕೇಶ್​ ಅಡಿಗ ಮತ್ತು ರೂಪೇಶ್​ ಶೆಟ್ಟಿ ಅವರು ಹೆಚ್ಚು ಜನರನ್ನು ಸೆಳೆದುಕೊಂಡಿದ್ದಾರೆ. ಕಾಮಿಡಿ ಮತ್ತು ಪ್ರಾಮಾಣಿಕತೆಯಲ್ಲಿ ಆರ್ಯವರ್ಧನ್​ ಗುರೂಜಿ ಗಮನ ಸೆಳೆಯುತ್ತಿದ್ದಾರೆ. ದಿವ್ಯಾ ಉರುಗಡ ಮತ್ತು ದೀಪಿಕಾ ದಾಸ್​ ಅವರು ಹಳೇ ಸೀಸನ್​ನ ಅನುಭವವನ್ನು ಈ ಬಾರಿ ಚೆನ್ನಾಗಿ ಬಳಸಿಕೊಳ್ಳುತ್ತಿದ್ದಾರೆ. ಹೊಸಬರಾದರೂ ರೂಪೇಶ್​ ರಾಜಣ್ಣ ನೇರ-ನಿಷ್ಠುರ ನಡೆಯಿಂದ ಗುರುತಿಸಿಕೊಂಡಿದ್ದಾರೆ.

ಬಿಗ್​ ಬಾಸ್​ ಫಿನಾಲೆಗಾಗಿ ಸಕಲ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಅದ್ದೂರಿ ವೇದಿಕೆಯಲ್ಲಿ ವಿವಿಧ ಮನರಂಜನಾ ಕಾರ್ಯಕ್ರಮಗಳ ನಡುವೆ ಕಿಚ್ಚ ಸುದೀಪ್​ ಅವರು ಫಿನಾಲೆ ಸಂಚಿಕೆಯನ್ನು ನಡೆಸಿಕೊಡಲಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.