AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

83ನೇ ವಯಸ್ಸಿನಲ್ಲೂ 24 ಗಂಟೆ ನಿರಂತರ ಕೆಲಸ ಮಾಡಿದ ನಟ ಅಮಿತಾಭ್ ಬಚ್ಚನ್

ತಮ್ಮ ಅಧಿಕೃತ ಬ್ಲಾಗ್‌ನಲ್ಲಿ ಈ ವಿಷಯವನ್ನು ಹಂಚಿಕೊಂಡಿರುವ ಅಮಿತಾಭ್ ಬಚ್ಚನ್ ಅವರು ಹಿಂದಿನ ದಿನ ಬೆಳಿಗ್ಗೆ 7 ಗಂಟೆಗೆ ಆರಂಭವಾದ ಕೆಲಸವನ್ನು ಇಂದು ಬೆಳಿಗ್ಗೆ 7 ಗಂಟೆಗೆ ಪೂರ್ಣಗೊಳಿಸಿರುವುದಾಗಿ ತಿಳಿಸಿದ್ದಾರೆ. ‘ಸಮಯಕ್ಕೆ ಸರಿಯಾಗಿ ಕೆಲಸ ಮುಗಿಸುವುದು ಅಗತ್ಯವಾಗಿತ್ತು. ಹೀಗಾಗಿ 24 ಗಂಟೆ ಸತತವಾಗಿ ಕೆಲಸ ಮಾಡಿ ಮುಗಿಸಿದ್ದೇನೆ’ ಎಂದು ಬರೆದುಕೊಂಡಿದ್ದಾರೆ.

83ನೇ ವಯಸ್ಸಿನಲ್ಲೂ 24 ಗಂಟೆ ನಿರಂತರ ಕೆಲಸ ಮಾಡಿದ ನಟ ಅಮಿತಾಭ್ ಬಚ್ಚನ್
Amitabh Bachchan Image Credit source: Sony Tv
ಮದನ್​ ಕುಮಾರ್​
|

Updated on: Aug 06, 2026 | 5:32 PM

Share

ಬಾಲಿವುಡ್‌ನ ಹಿರಿಯ ನಟ ಅಮಿತಾಭ್ ಬಚ್ಚನ್ (Amitabh Bachchan) ಅವರು 83ನೇ ವಯಸ್ಸಿನಲ್ಲೂ ಯುವ ನಟರಿಗೆ ಸವಾಲೆಸೆಯುವಂತಹ ಕಾರ್ಯವೈಖರಿ ಹಾಗೂ ನಿಷ್ಠೆಯನ್ನು ಮೆರೆಯುತ್ತಿದ್ದಾರೆ. ಇತ್ತೀಚೆಗೆ ಅವರು ಸತತ 24 ಗಂಟೆಗಳ ಕಾಲ ವಿಶ್ರಾಂತಿಯಿಲ್ಲದೆ ಕೆಲಸ ಮಾಡಿದ್ದು, ತಕ್ಷಣವೇ ತಮ್ಮ ಜನಪ್ರಿಯ ಕ್ವಿಜ್ ಶೋ ‘ಕೌನ್ ಬನೇಗಾ ಕರೋಡ್‌ಪತಿ’ (KBC) ಶೂಟಿಂಗ್‌ನಲ್ಲಿ ಪಾಲ್ಗೊಳ್ಳಲು ಸಜ್ಜಾಗಿದ್ದಾರೆ.

ಆಗಸ್ಟ್ 6ರಂದು ‘ಕೌನ್ ಬನೇಗಾ ಕರೋಡ್‌ಪತಿ’ ಶೂಟಿಂಗ್‌ಗೆ ತೆರಳಬೇಕಿರುವ ಬಗ್ಗೆ ಉಲ್ಲೇಖಿಸಿದ ಅಮಿತಾಭ್ ಬಚ್ಚನ್ ಅವರು, ‘ಸ್ವಲ್ಪ ಆಹಾರ ಸೇವಿಸಿ, ವಿಶ್ರಾಂತಿ ಪಡೆಯಬೇಕಿದೆ. ಆಗಸ್ಟ್ 6ರಂದು ಮತ್ತೆ ಬೆಳಿಗ್ಗೆಯೇ ಕೆಬಿಸಿ ಶೂಟಿಂಗ್ ಕರೆಯನ್ನು ಸ್ವೀಕರಿಸಬೇಕಿದೆ. ಪ್ರಸಾರದ ದಿನಾಂಕ ನಿಗದಿಯಾಗಿದೆ, ಈಗ ಶೂಟಿಂಗ್‌ಗೆ ಹೋಗದಿದ್ದರೆ ನನ್ನ ಜಾಗಕ್ಕೆ ಬೇರೆಯವರನ್ನು ಬದಲಾಯಿಸಿಬಿಡುತ್ತಾರೆ’ ಎಂದು ಹಾಸ್ಯದ ಧಾಟಿಯಲ್ಲಿ ತಮ್ಮ ಕಮಿಟ್‌ಮೆಂಟ್ ಬಗ್ಗೆ ಬರೆದಿದ್ದಾರೆ.

ಆಗಸ್ಟ್ 10ರಿಂದ ಕೆಬಿಸಿ ಸೀಸನ್ 18 ಪ್ರಸಾರ:

‘ಕೌನ್ ಬನೇಗಾ ಕರೋಡ್‌ಪತಿ ಸೀಸನ್ 18’ ಕಾರ್ಯಕ್ರಮವು ಆಗಸ್ಟ್ 10ರಿಂದ ಸೋನಿ ಎಂಟರ್‌ಟೇನ್‌ಮೆಂಟ್ ಟೆಲಿವಿಷನ್ ಮತ್ತು ಸೋನಿ ಲಿವ್​ನಲ್ಲಿ ರಾತ್ರಿ 9 ಗಂಟೆಗೆ ಪ್ರಸಾರವಾಗಲಿದೆ. ಈ ಬಾರಿ ಶೋ ‘ಸೋಚ್‌ನಾ ಪಡೇಗಾ’ (ಆಲೋಚಿಸಬೇಕಾಗುತ್ತದೆ) ಎಂಬ ವಿಶಿಷ್ಟ ಥೀಮ್‌ನೊಂದಿಗೆ ಬರಲಿದೆ. ಮಾಹಿತಿ ಎಲ್ಲರಿಗೂ ಸುಲಭವಾಗಿ ಸಿಗುವ ಈ ಕಾಲದಲ್ಲಿ, ವಿಷಯಗಳನ್ನು ಗ್ರಹಿಸುವ ಮತ್ತು ಅನ್ವಯಿಸುವ ಸಾಮರ್ಥ್ಯವೇ ಪ್ರಮುಖ ಸ್ಪರ್ಧೆಯಾಗಿದೆ ಎಂಬುದನ್ನು ಈ ಸೀಸನ್ ಬಿಂಬಿಸಲಿದೆ.

ಇದನ್ನೂ ಓದಿ: ನನಗೆ ಆಪರೇಷನ್ ಆಗಿಲ್ಲ, ನಾನು ಚೆನ್ನಾಗಿದ್ದೇನೆ; ವದಂತಿಗೆ ಬ್ರೇಕ್ ಹಾಕಿದ ಅಮಿತಾಭ್ ಬಚ್ಚನ್

ಬಿಗ್ ಬಿ ಮುಂದಿನ ಸಿನಿಮಾ:

ಕೆಬಿಸಿ ಹೊರತಾಗಿ ಅಮಿತಾಭ್ ಬಚ್ಚನ್ ಅವರು ನಾಗ್ ಅಶ್ವಿನ್ ನಿರ್ದೇಶನದ ‘ಕಲ್ಕಿ 2898 AD’ ಸೀಕ್ವೆಲ್‌ನಲ್ಲೂ ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ಪ್ರಭಾಸ್ ಮತ್ತು ಕಮಲ್ ಹಾಸನ್ ಅವರು ತಮ್ಮ ಪಾತ್ರಗಳನ್ನು ಮುಂದುವರಿಸಲಿದ್ದಾರೆ. ಆದರೆ ಮೊದಲ ಭಾಗದಲ್ಲಿ ಪ್ರಮುಖ ಪಾತ್ರದಲ್ಲಿದ್ದ ದೀಪಿಕಾ ಪಡುಕೋಣೆ ಎರಡನೇ ಭಾಗದಲ್ಲಿ ಇರುವುದಿಲ್ಲ. ದೀಪಿಕಾ ಅವರೊಂದಿಗೆ ಚಿತ್ರತಂಡ ಪರಸ್ಪರ ಸಮ್ಮತಿಯಿಂದ ದೂರವಾಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ಅಧಿಕೃತವಾಗಿ ತಿಳಿಸಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ಮದನ್​ ಕುಮಾರ್​
ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
ನಾಳೆ ಮೀಸಲಾತಿ ಪಟ್ಟಿ ಪ್ರಕಟ:ಜಿಲ್ಲಾ-ತಾಲೂಕು ಪಂಚಾಯಿತಿ ಎಲೆಕ್ಷನ್ ಯಾವಾಗ?
ನಾಳೆ ಮೀಸಲಾತಿ ಪಟ್ಟಿ ಪ್ರಕಟ:ಜಿಲ್ಲಾ-ತಾಲೂಕು ಪಂಚಾಯಿತಿ ಎಲೆಕ್ಷನ್ ಯಾವಾಗ?
ಜಂತರ್ ಮಂತರ್ ಪ್ರತಿಭಟನೆ ವೇಳೆ ಮತ್ತೆ ರಾಹುಲ್ ಗಾಂಧಿ ಪೊಲೀಸ್ ವಶಕ್ಕೆ
ಜಂತರ್ ಮಂತರ್ ಪ್ರತಿಭಟನೆ ವೇಳೆ ಮತ್ತೆ ರಾಹುಲ್ ಗಾಂಧಿ ಪೊಲೀಸ್ ವಶಕ್ಕೆ
ಕೆಪಿಎಸ್​ಸಿ ಹಗರಣ:ಶಿವಶಂಕರಪ್ಪ ಸಾಹುಕಾರ್, ಗೀತಾ ಇಡಿ ಕಸ್ಟಡಿಗೆ
ಕೆಪಿಎಸ್​ಸಿ ಹಗರಣ:ಶಿವಶಂಕರಪ್ಪ ಸಾಹುಕಾರ್, ಗೀತಾ ಇಡಿ ಕಸ್ಟಡಿಗೆ
ಹೆಸರಿಗಷ್ಟೇ ಸರ್ಕಾರಿ ಆಸ್ಪತ್ರೆ, ಒಳಗಡೆ ಬರೀ ಅವ್ಯವಸ್ಥೆ
ಹೆಸರಿಗಷ್ಟೇ ಸರ್ಕಾರಿ ಆಸ್ಪತ್ರೆ, ಒಳಗಡೆ ಬರೀ ಅವ್ಯವಸ್ಥೆ
ಸೌಜನ್ಯ ಕೇಸ್ ತನಿಖಾಧಿಕಾರಿ ಖಡಕ್ ಆಫೀಸರ್ ಲೋಕೇಶ್ ಜಗಲ್ಸಾರ್ ಹಿನ್ನೆಲೆ
ಸೌಜನ್ಯ ಕೇಸ್ ತನಿಖಾಧಿಕಾರಿ ಖಡಕ್ ಆಫೀಸರ್ ಲೋಕೇಶ್ ಜಗಲ್ಸಾರ್ ಹಿನ್ನೆಲೆ
ಎಸ್‌ಐಆರ್ ವಿವಾದ; ಎಫ್‌ಐಆರ್‌ಗಳು ನನಗೆ ಪದಕಗಳಿದ್ದಂತೆ ಎಂದ ರಾಹುಲ್ ಗಾಂಧಿ
ಎಸ್‌ಐಆರ್ ವಿವಾದ; ಎಫ್‌ಐಆರ್‌ಗಳು ನನಗೆ ಪದಕಗಳಿದ್ದಂತೆ ಎಂದ ರಾಹುಲ್ ಗಾಂಧಿ
ಮುಸ್ಲಿಂ ಮತದಾರರ ಹೆಸರು ಡಿಲೀಟ್ ಆರೋಪ
ಮುಸ್ಲಿಂ ಮತದಾರರ ಹೆಸರು ಡಿಲೀಟ್ ಆರೋಪ
ಡೀಸೆಲ್​ ಟ್ಯಾಂಕರ್​​ನಲ್ಲಿ ತಾಂತ್ರಿಕ ದೋಷ, ಬಸ್​ ಸಂಚಾರ ಸ್ಥಗಿತ
ಡೀಸೆಲ್​ ಟ್ಯಾಂಕರ್​​ನಲ್ಲಿ ತಾಂತ್ರಿಕ ದೋಷ, ಬಸ್​ ಸಂಚಾರ ಸ್ಥಗಿತ
ಮಂತ್ರಿಗಳ ಮೇಲೆ ರಹಸ್ಯ ಕ್ಯಾಮೆರಾ ಕಣ್ಣು: ಸಚಿವರನ್ನ ಎಚ್ಚರಿಸಿದ ಡಿಕೆಶಿ
ಮಂತ್ರಿಗಳ ಮೇಲೆ ರಹಸ್ಯ ಕ್ಯಾಮೆರಾ ಕಣ್ಣು: ಸಚಿವರನ್ನ ಎಚ್ಚರಿಸಿದ ಡಿಕೆಶಿ
'ಸಿಎಂ ಆಗಲು ಸಿದ್ದರಾಮಯ್ಯ ವಿರುದ್ಧ ಡಿಕೆಶಿ ಸ್ಟಿಂಗ್ ಆಪರೇಷನ್ ಮಾಡಿದ್ದರು'
'ಸಿಎಂ ಆಗಲು ಸಿದ್ದರಾಮಯ್ಯ ವಿರುದ್ಧ ಡಿಕೆಶಿ ಸ್ಟಿಂಗ್ ಆಪರೇಷನ್ ಮಾಡಿದ್ದರು'