ಪತ್ನಿಯ ತಂಟೆಗೆ ಬಂದ ಎಂಎಲ್ಎಗೆ ಪವನ್ ಕಲ್ಯಾಣ್ ಸ್ಟೈಲ್ನಲ್ಲಿ ಪಾಠ ಕಲಿಸಿದ ಗೌತಮ್ ದೀವಾನ್
'ಅಮೃತಧಾರೆ' ಧಾರಾವಾಹಿಯಲ್ಲಿ ಗೌತಮ್ ದೀವಾನ್ ಐದು ವರ್ಷಗಳ ನಂತರ ಮರಳಿ ಭೂಮಿಕಾಳನ್ನು ಹುಡುಕಿದ್ದಾನೆ. ಎಂಎಲ್ಎಯಿಂದ ಭೂಮಿಕಾಳಿಗೆ ತೊಂದರೆಯಾದಾಗ, ಗೌತಮ್ ಪವನ್ ಕಲ್ಯಾಣ್ ಶೈಲಿಯಲ್ಲಿ ಆತನಿಗೆ ಪಾಠ ಕಲಿಸಿದ್ದಾನೆ. ತನ್ನ ಪ್ರಭಾವ ಬಳಸಿಕೊಂಡು ಎಂಎಲ್ಎ ಹುದ್ದೆ ಕಳೆದುಕೊಳ್ಳುವಂತೆ ಮಾಡಿದ್ದಾನೆ. ಆ ಬಗ್ಗೆ ಇಲ್ಲಿದೆ ವಿವರ.

‘ಅಮೃತಧಾರೆ’ ಧಾರಾವಾಹಿಯಲ್ಲಿ ಗೌತಮ್ ದೀವಾನ್ ಮರಳಿ ಫಾರ್ಮ್ಗೆ ಮರಳಿದ್ದಾನೆ ಎನ್ನಬಹುದು. ಕಳೆದ ಐದು ವರ್ಷಗಳಿಂದ ತಲೆಮರಿಸಿಕೊಂಡು ಬಂದಿದ್ದ ಈತ ಈಗ ಭೂಮಿಕಾಳನ್ನು ಹುಡುಕಿದ್ದಾನೆ. ಆದರೆ, ಭೂಮಿಕಾ ಇವಳನ್ನು ಒಪ್ಪಿಕೊಳ್ಳಲು ರೆಡಿ ಇಲ್ಲ. ಹೀಗಿರುವಾಗಲೇ ಎಂಎಲ್ಎ ಒಬ್ಬವನು ಭೂಮಿಕಾ ಜೊತೆ ಕಿರಿಕ್ ಮಾಡಿಕೊಂಡಿದ್ದ. ಇದಕ್ಕೆ ಗೌತಮ್ ದೀವನ್, ಪವನ್ ಕಲ್ಯಾಣ್ ಸ್ಟೈಲ್ನಲ್ಲಿ ಉತ್ತರಿಸಿದ್ದಾನೆ.
ಪವನ್ ಕಲ್ಯಾಣ್ ಅವರು ‘ಅತ್ತಾರೆಂಟಿಕಿ ದಾರೀದಿ’ ಸಿನಿಮಾದಲ್ಲಿ ನಟಿಸಿದ್ದರು. ಈ ಸಿನಿಮಾದಲ್ಲಿ ಪವನ್ ಕಲ್ಯಾಣ್ ಶ್ರೀಮಂತನಾದರೂ ಕ್ಯಾಬ್ ಡ್ರೈವರ್ ಪಾತ್ರದಲ್ಲಿಯೇ ಕಾಣಿಸಿಕೊಂಡಿದ್ದರು. ಅವರ ಅತ್ತೆಗೆ ತೊಂದರೆ ಮಾಡುವ ವ್ಯಕ್ತಿಗೆ ಕ್ಯಾಬ್ ಡ್ರೈವರ್ ಆಗಿ ಬಂದು ಪವನ್ ಕಲ್ಯಾಣ್ ಪಾಠ ಕಲಿಸುತ್ತಾರೆ. ತಾವು ಎಂತಹ ಪ್ರಭಾವಿ ಎಂಬುದನ್ನು ದೂರುವಾಣಿ ಕರೆ ಮೂಲಕವೇ ತೋರಿಸುತ್ತಾರೆ.
ಈಗ ‘ಅಮೃತಧಾರೆ’ ಧಾರಾವಾಹಿಯಲ್ಲೂ ಇದೇ ರೀತಿಯ ದೃಶ್ಯ ಬಂದಿದೆ ಎಂದರೂ ತಪ್ಪಾಗಲಾರದರು. ಭೂಮಿಕಾಳಿಗೆ ತೊಂದರೆ ಕೊಡಲು ಬಂದ ಎಂಎಲ್ಎಗೆ ಗೌತಮ್ ದೀವಾನ್ ಬಂದು ಪಾಠ ಕಲಿಸುತ್ತಾನೆ. ಕಮಿಷನರ್ಗೆ ಕರೆ ಮಾಡುವಂತೆ ಎಂಎಲ್ಎ ಗೌತಮ್ಗೆ ಹೇಳುತ್ತಾನೆ. ಅವರು ಗೌತಮ್ ಪರ ಮಾತನಾಡುತ್ತಾರೆ. ಆ ಬಳಿಕ ಹೈ ಕಮಿಷನರ್ಗೆ ಕರೆ ಮಾಡುತ್ತಾನೆ. ಅಲ್ಲಿಯೂ ಹಾಗೆಯೇ ಆಗುತ್ತದೆ. ನಂತರ ಬೇರೆ ದಾರಿ ಇಲ್ಲದೆ, ಹೈ ಕಮಾಂಡ್ಗೆ ಕರೆ ಹೋಗುತ್ತದೆ. ಎಲ್ಲ ಕಡೆಗಳಲ್ಲೂ ಎಂಎಲ್ಎಗೆ ಹಿನ್ನಡೆ ಆಗುತ್ತದೆ.
View this post on Instagram
ಕರೆ ಮಾಡಿದವರೆಲ್ಲರೂ ‘ಗೌತಮ್ ಸರ್’ ಎಂದು ಮಾತನಾಡಿಸುತ್ತಾರೆ. ಇದನ್ನು ನೋಡಿ ಎಂಎಲ್ಎ ಶಾಕ್ ಆಗುತ್ತಾನೆ. ಆ ಬಳಿಕ ಎಂಎಲ್ಎಯನ್ನು ಹುದ್ದೆಯಿಂದಲೇ ತೆಗೆದು ಹಾಕುವ ನಿರ್ಧಾರವನ್ನು ಹೈಕಮಾಂಡ್ ಮಾಡುತ್ತಾನೆ. ಸಿನಿಮೀಯ ಶೈಲಿಯಲ್ಲಿ ಧಾರಾವಾಹಿ ಮೂಡಿ ಬಂದಿದೆ ಎಂದು ಅನೇಕರು ಹೇಳಿದ್ದಾರೆ.
ಇದನ್ನೂ ಓದಿ: ವಿರೋಧದ ನಡುವೆಯೂ ‘ಕಾಂತಾರ’ ಪರ ನಿಂತ ಪವನ್ ಕಲ್ಯಾಣ್: ಹೇಳಿದ್ದೇನು?
ಸದ್ಯ ಭೂಮಿಕಾ ಕುಶಾಲನಗರವನ್ನೇ ಬಿಟ್ಟು ಹೋಗಿದ್ದಾಳೆ. ಈಗ ಆಕೆ ಎಲ್ಲಿ ಹೋಗಿದ್ದಾಳೆ ಎಂಬ ಗೊಂದಲದಲ್ಲಿ ಗೌತಮ್ ಇದ್ದಾನೆ. ಇವರು ಮತ್ತೆ ಮುಖಾಮುಖಿ ಆಗೋದು ಯಾವಾಗ ಎನ್ನುವ ಪ್ರಶ್ನೆ ಮೂಡಿದೆ. ಇವರು ಆದಷ್ಟು ಬೇಗ ಒಂದಾಗಬೇಕು ಎಂಬುದು ಅಭಿಮಾನಿಗಳ ಕೋರಿಕೆಯಾಗಿದೆ. ಆಕೆ ಮರಳಿ ಬೆಂಗಳೂರಿಗೆ ಬಂದಿದ್ದಾಳೆ. ಹೀಗಾಗಿ, ಮುಂದಿನ ದಿನಗಳಲ್ಲಿ ಬೆಂಗಳೂರಲ್ಲೇ ಕಥೆ ನಡೆಯಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 8:39 am, Fri, 3 October 25







