AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಅಮೃತಧಾರೆ’: ಅವನ್ಯಾರು ಗೊತ್ತೇ ಇಲ್ಲ; ಮಗ ಜೆಡಿ ವಿರುದ್ಧ ತಿರುಗಿಬಿದ್ದ ಶಕುಂತಲ

ಅಮೃತಧಾರೆ ಧಾರಾವಾಹಿಯಲ್ಲಿ ಶಕುಂತಲಾ ಜೆಡಿ ವಿರುದ್ಧ ತಿರುಗಿಬಿದ್ದಿದ್ದಾಳೆ. ಮಗ ಜೆಡಿ ಅವಳನ್ನು ತ್ಯಜಿಸಿದಾಗ, ಮಲಮಗ ಗೌತಮ್ ಆಕೆಗೆ ಆಸರೆಯಾದ. ಗೌತಮ್‌ನ ಒಳ್ಳೆಯತನದಿಂದ ಪಾಠ ಕಲಿತ ಶಕುಂತಲಾ ಈಗ ಜೆಡಿಗೆ ಸಹಾಯ ಮಾಡಲು ನಿರಾಕರಿಸಿದ್ದಾಳೆ. ಈ ಮಹತ್ವದ ತಿರುವು ಧಾರಾವಾಹಿಯ ಅಂತ್ಯಕ್ಕೆ ಕಾರಣವಾಗಬಹುದೇ ಎಂಬ ಕುತೂಹಲ ಮೂಡಿಸಿದೆ.

‘ಅಮೃತಧಾರೆ’: ಅವನ್ಯಾರು ಗೊತ್ತೇ ಇಲ್ಲ; ಮಗ ಜೆಡಿ ವಿರುದ್ಧ ತಿರುಗಿಬಿದ್ದ ಶಕುಂತಲ
ಅಮೃತಧಾರೆ
TV9 Web
| Edited By: |

Updated on: May 09, 2026 | 8:17 AM

Share

‘ಅಮೃತಧಾರೆ’ ಧಾರಾವಾಹಿಯಲ್ಲಿ (Amruthadhaare Serial) ಈಗ ಒಂದು ದೊಡ್ಡ ಬದಲಾವಣೆ ಬಂದಿದೆ. ವಿಲನ್ ಜೆಡಿ ವಿರುದ್ಧವೇ ಶಕುಂತಲ ತಿರುಗಿ ಬಿದ್ದಿದ್ದಾಳೆ. ಮಗನಿಗೋಸ್ಕರ ಆಕೆ ಎದುರು ಹಾಕಿಕೊಳ್ಳದ ಜನರೇ ಇರಲಿಲ್ಲ. ಆದರೆ, ಈಗ ಎಲ್ಲವೂ ಬದಲಾಗಿದೆ. ಶಕುಂತಲ ವಿರುದ್ಧ ಮಗನೇ ತಿರುಗಿಬಿದ್ದ. ಆ ಸಂದರ್ಭದಲ್ಲಿ ಕಾಪಾಡಿದ್ದು ಮಲ ಮಗ. ಈ ಋಣವನ್ನು ತೀರಿಸುವ ಸಮಯ ಈಗ ಬಂದಿದೆ. ಈ ಕಾರಣದಿಂದ ಆಕೆ ಜೆಡಿ ವಿರುದ್ಧವೇ ತಿರುಗಿಬಿದ್ದಿದ್ದಾಳೆ.

ಪ್ರತಿ ಹಂತದಲ್ಲೂ ಶಕುಂತಲ ಮಲ ಮಗ ಗೌತಮ್ ಹಾಗೂ ಭೂಮಿಕಾಳನ್ನು ದೂರ ತಳ್ಳುತ್ತಾ, ಅವರಿಗೆ ಕೆಟ್ಟದನ್ನು ಮಾಡುತ್ತಲೇ ಬಂದಳು. ಈ ವೇಳೆ ಜಯದೇವ್ನ ಶಕುಂತಲ ಬೆಂಬಲಿಸಿದಳು. ಕೊನೆಗೆ ಆಗಿದ್ದೇಬೆರೆ. ಹಣ ಕೇಳಿದ್ದಕ್ಕೆ ಜಯದೇವ್ ತಾಯಿಯನ್ನೇ ಹೊರಹಾಕಿದ್ದಾನೆ. ಇದರಿಂದ ಆಕೆ ಪಾಠ ಕಲಿತಿದ್ದಾಳೆ.

View this post on Instagram

A post shared by Zee Kannada (@zeekannada)

ಜಯದೇವ್ ಹೊರಹಾಕುತ್ತಿದ್ದಂತೆ ಶಕುಂತಲಾಳನ್ನು ಸಾಲ ಕೊಟ್ಟವರು ಬಂದು ಹಿಡಿದುಕೊಂಡು ಹೋದರು. ಆಕೆಗೆ ಟಾರ್ಚರ್ ಕೊಡೋಕೆ ಆರಂಭಿಸಿದರು. ಕೊನೆಗೆ ಆಕೆಯ ಸಹಾಯಕ್ಕೆ ಬಂದಿದ್ದು ಗೌತಮ್. ಈ ವಿಷಯದಲ್ಲಿ ಆಕೆಯ ಸಹಾಯಕ್ಕೆ ಗೌತಮ್ ನಿಂತಿದ್ದು ನೋಡಿ ಆಕೆಯ ಮನಸ್ಸು ಕರಗಿ ಹೋಯಿತು. ಅಷ್ಟೆಲ್ಲ ಕೆಟ್ಟದನ್ನು ಮಾಡಿದರೂ ಮಲತಾಯಿಗೆ ಗೌತಮ್ ಒಳ್ಳೆಯದ್ದನ್ನೇ ಬಯಸಿದ್ದ. ಈ ಘಟನೆ ಆಕೆಯನ್ನು ಸಾಕಷ್ಟು ಬದಲಾವಣೆ ಮಾಡಿತು.

ಇದನ್ನೂ ಓದಿ: ‘ಅಮೃತಧಾರೆ’: ಮೋಸ ಮಾಡಿ ಕಾಲ್ಕಿತ್ತ ಜೆಡಿ ಪತ್ನಿ ದಿಯಾ; ಬೀದಿಗೆ ಬಂದ ಜಯದೇವ್

ಈಗ ಜಯದೇವ್ ಕಷ್ಟದಲ್ಲಿ ಇದ್ದಾನೆ. ಆದರೆ, ಈ ಸಂದರ್ಭದಲ್ಲಿ ಜಯದೇವ್ಗೆ ಸಹಾಯ ಮಾಡಲು ಶಕುಂತಲ ರೆಡಿ ಇಲ್ಲ. ಆತನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಈ ವೇಳೆ ‘ತಾಯಿಗೆ ಕರೆ ಮಾಡುವಂತೆ’ ಕೋರಿದ. ಆದರೆ, ಶಕುಂತಲ ಅವನ್ಯಾರು ಗೊತ್ತೇ ಇಲ್ಲ ಎಂದಿದ್ದಾಳೆ. ಇದರಿಂದ ಆತನಿಗೆ ಏಟು ಬಿದ್ದಿದೆ. ಶೀಘ್ರವೇ ಧಾರಾವಾಹಿ ಪೂರ್ಣಗೊಳ್ಳಲಿದೆಯೇ ಎಂಬ ಕುತೂಹಲ ಮೂಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
TV9 Web
TV9 Web

TV9 Kannada

Read More
ಸಮಯ ಪ್ರಜ್ಞೆ ಇಲ್ವೇನ್ರೀ: ಯತೀಂದ್ರ ಬಗ್ಗೆ ತನ್ವೀರ್ ಸೇಠ್ ಬಹಿರಂಗ ಅಸಮಾಧಾನ
ಸಮಯ ಪ್ರಜ್ಞೆ ಇಲ್ವೇನ್ರೀ: ಯತೀಂದ್ರ ಬಗ್ಗೆ ತನ್ವೀರ್ ಸೇಠ್ ಬಹಿರಂಗ ಅಸಮಾಧಾನ
ಬೆಂಗಳೂರಿನಲ್ಲಿ ಆನೆ ದಾಳಿಗೆ ವಾಕಿಂಗ್​ಗೆ ತೆರಳಿದ್ದ ವೃದ್ಧ ಬಲಿ!
ಬೆಂಗಳೂರಿನಲ್ಲಿ ಆನೆ ದಾಳಿಗೆ ವಾಕಿಂಗ್​ಗೆ ತೆರಳಿದ್ದ ವೃದ್ಧ ಬಲಿ!
ರಸ್ತೆ ಪರಿಶೀಲನೆ ವೇಳೆ ವ್ಯಕ್ತಿಗೆ ಕಪಾಳಮೋಕ್ಷ ಮಾಡಿದ ದೆಹಲಿ ಸಚಿವ ಪರ್ವೇಶ್
ರಸ್ತೆ ಪರಿಶೀಲನೆ ವೇಳೆ ವ್ಯಕ್ತಿಗೆ ಕಪಾಳಮೋಕ್ಷ ಮಾಡಿದ ದೆಹಲಿ ಸಚಿವ ಪರ್ವೇಶ್
ದಿನ ಭವಿಷ್ಯ: ರವಿ ಕನ್ಯಾ, ಚಂದ್ರ ಮೀನ ರಾಶಿಯ ರೇವತಿ ನಕ್ಷತ್ರದಲ್ಲಿ ಸಂಚಾರ
ದಿನ ಭವಿಷ್ಯ: ರವಿ ಕನ್ಯಾ, ಚಂದ್ರ ಮೀನ ರಾಶಿಯ ರೇವತಿ ನಕ್ಷತ್ರದಲ್ಲಿ ಸಂಚಾರ
ಹಿಂದೂಗಳು ಯಾರ ಮೇಲೂ ಮುಗಿಬೀಳಲ್ಲ, ತಂಟೆಗೆ ಬಂದ್ರೆ ಸುಮ್ನೆ ಬಿಡಲ್ಲ: ಸಿಂಹ
ಹಿಂದೂಗಳು ಯಾರ ಮೇಲೂ ಮುಗಿಬೀಳಲ್ಲ, ತಂಟೆಗೆ ಬಂದ್ರೆ ಸುಮ್ನೆ ಬಿಡಲ್ಲ: ಸಿಂಹ
ಮೆಗ್ಗಾನ್ ಆಸ್ಪತ್ರೆ ವೈದ್ಯರ ಯಡವಟ್ಟು: ವಿದ್ಯಾರ್ಥಿನಿ ದುರಂತ ಸಾವು
ಮೆಗ್ಗಾನ್ ಆಸ್ಪತ್ರೆ ವೈದ್ಯರ ಯಡವಟ್ಟು: ವಿದ್ಯಾರ್ಥಿನಿ ದುರಂತ ಸಾವು
ಫೇಕ್ ಸುದ್ದಿ ಹಬ್ಬಿಸುವರಿಗೆ ಖಡಕ್ ಎಚ್ಚರಿಕೆ ಕೊಟ್ಟ ಕೊಪ್ಪಳ ಎಸ್ಪಿ
ಫೇಕ್ ಸುದ್ದಿ ಹಬ್ಬಿಸುವರಿಗೆ ಖಡಕ್ ಎಚ್ಚರಿಕೆ ಕೊಟ್ಟ ಕೊಪ್ಪಳ ಎಸ್ಪಿ
ಕ್ಯಾಂಟೀನ್‌ನಲ್ಲಿ ಬಾಣಂತಿಗೆ ನೀಡಿದ್ದ ಕೇಸರಿಬಾತ್‌ನಲ್ಲಿ ಹಲ್ಲಿ ಪತ್ತೆ
ಕ್ಯಾಂಟೀನ್‌ನಲ್ಲಿ ಬಾಣಂತಿಗೆ ನೀಡಿದ್ದ ಕೇಸರಿಬಾತ್‌ನಲ್ಲಿ ಹಲ್ಲಿ ಪತ್ತೆ
ವೈಷ್ಣವಿಯ ಟ್ಯಾಲೆಂಟ್​ಗೆ ಮನಸೋತ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್
ವೈಷ್ಣವಿಯ ಟ್ಯಾಲೆಂಟ್​ಗೆ ಮನಸೋತ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್
ಭೂಮಿ ಹಿಂದಿರುಗಿಸಬೇಕೆಂದು ಆಂದೋಲನ ಘೋಷಿಸಿದ ಕುಮಾರಸ್ವಾಮಿ
ಭೂಮಿ ಹಿಂದಿರುಗಿಸಬೇಕೆಂದು ಆಂದೋಲನ ಘೋಷಿಸಿದ ಕುಮಾರಸ್ವಾಮಿ