ಆರ್ಯವರ್ಧನ್ ಗುರೂಜಿ (Aryavardhan Guruji) ಅವರು ‘ಬಿಗ್ ಬಾಸ್ ಕನ್ನಡ ಸೀಸನ್ 9’ರಲ್ಲಿ ಸಾಕಷ್ಟು ಗಮನ ಸೆಳೆಯುತ್ತಿದ್ದಾರೆ. ಒಟಿಟಿಯಲ್ಲಿ ಖ್ಯಾತಿ ಹೆಚ್ಚಿಸಿಕೊಂಡ ನಂತರದಲ್ಲಿ ಅವರು ಟಿವಿ ಸೀಸನ್ಗೆ ಕಾಲಿಟ್ಟಿದ್ದಾರೆ. ‘ನಾನು ಅಂದ್ರೆ ನಂಬರ್, ನಂಬರ್ ಅಂದ್ರೆ ನಾನು’ ಎಂದು ಹೇಳಿಕೊಂಡೇ ಫೇಮಸ್ ಆಗಿದ್ದರು ಗುರೂಜಿ. ಈಗ ಅವರು ತುಟಿ ನೋಡಿ ಶಾಸ್ತ್ರ ಹೇಳೋಕೆ ಶುರು ಮಾಡಿದ್ದಾರೆ. ಅಮೂಲ್ಯ ಎದುರು ಈ ವಿಚಾರವನ್ನು ಹೇಳಿಕೊಂಡಿದ್ದಾರೆ ಆರ್ಯವರ್ಧನ್. ಈ ಮಾತನ್ನು ಕೇಳಿ ಅಮೂಲ್ಯ (Amulya Gowda) ನಾಚಿ ನೀರಾಗಿದ್ದಾರೆ.
ಅಮೂಲ್ಯ ಗೌಡ, ರಾಕೇಶ್ ಹಾಗೂ ಆರ್ಯವರ್ಧನ್ ಗುರೂಜಿ ಒಟ್ಟಾಗಿ ಕುಳಿತಿದ್ದರು. ಈ ವೇಳೆ ಅಮೂಲ್ಯ ಬಿಳಿ ಬಣ್ಣದ ಬಟ್ಟೆ ಧರಿಸಿದ್ದರು. ತುಟಿಗೆ ಲಿಪ್ಸ್ಟಿಕ್ ಹಾಕಿದ್ದರು. ಇದನ್ನು ನೋಡಿದ ಆರ್ಯವರ್ಧನ್, ‘ನಿಮ್ಮ ತುಟಿ ನೋಡಿ ಭವಿಷ್ಯ ಹೇಳ್ತೀನಿ. ನಿಮ್ಮ ತುಟಿ ಚೂಪ ಇದೆ. ಹಾಗಿದ್ದರೆ ಅನೇಕರು ನಿಮ್ಮನ್ನು ಇಷ್ಟಪಡ್ತಾರೆ’ ಎಂದರು ಆರ್ಯವರ್ಧನ್ ಗುರೂಜಿ. ಈ ಮಾತನ್ನು ಕೇಳಿ ಅಮೂಲ್ಯ ನಾಚಿಕೊಂಡರು.
ಇದನ್ನು ಕೇಳಿ ರಾಕೇಶ್ ಅಡಿಗಗೆ ಕುತೂಹಲ ಹೆಚ್ಚಿತು. ‘ನನ್ನ ತುಟಿ ನೋಡಿ ಜ್ಯೋತಿಷ್ಯ ಹೇಳಿ’ ಎಂದು ಕೇಳಿದರು ರಾಕೇಶ್. ‘ನೀನು ಬೇರೆಯವರನ್ನ ಹೆಚ್ಚು ಇಷ್ಟಪಡ್ತೀಯ. ಆದರೆ, ನಿನ್ನನ್ನು ಬೇರೆಯವರು ಇಷ್ಟಪಡಲ್ಲ’ ಎಂದರು ಗುರೂಜಿ. ಈ ಮಾತು ಕೇಳುತ್ತಿದ್ದಂತೆ ಅನೇಕರು ಹೊಟ್ಟೆ ಹುಣ್ಣಾಗುವಂತೆ ನಕ್ಕರು. ರಾಕೇಶ್ ಕೂಡ ಸಾಕಷ್ಟು ನಕ್ಕರು.
ಈ ಮೊದಲ ಸೀಸನ್ಗಳಲ್ಲಿ ‘ಬಿಗ್ ಬಾಸ್’ ಮನೆಯಲ್ಲಿ ಲವ್ ವಿಚಾರ ಸಾಕಷ್ಟು ಚರ್ಚೆ ಹುಟ್ಟುಹಾಕಿತ್ತು. ಆದರೆ, ಈ ಬಾರಿ ಆ ರೀತಿಯ ವಿಚಾರಗಳು ಚರ್ಚೆಗೆ ಬರುತ್ತಿಲ್ಲ. ಸಾನ್ಯಾ ಐಯ್ಯರ್ ಹಾಗೂ ರಾಕೇಶ್ ಅಡಿಗ ಕ್ಲೋಸ್ ಆಗಿದ್ದಾರೆ. ಆದರೆ, ಇಬ್ಬರ ನಡುವೆ ಇರೋದು ಫ್ರೆಂಡ್ಶಿಪ್ ಮಾತ್ರ ಎಂದು ಇವರು ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: ‘ಹೊರಗಿದ್ದಾಗ ಎರಡೇ ಬಟ್ಟೆ ಇತ್ತು’; ‘ಬಿಗ್ ಬಾಸ್’ಗೆ ಬಂದ ನಂತರದಲ್ಲಿ ಬದಲಾಯ್ತು ನವಾಜ್ ಜೀವನ
ವಾರಾಂತ್ಯಕ್ಕೆ ಎಲಿಮಿನೇಷನ್
ಕಳೆದ ವಾರ ಐಶ್ವರ್ಯಾ ಪಿಸೆ ಅವರು ಬಿಗ್ ಬಾಸ್ನಿಂದ ಎಲಿಮಿನೇಟ್ ಆದರು. ಮೊದಲ ವಾರವೇ ಅವರು ಔಟ್ ಆದರು. ಈ ವಾರ ದರ್ಶ್ ಚಂದ್ರಪ್ಪ, ನವಾಜ್, ಮಯೂರಿ, ಅಮೂಲ್ಯ ಗೌಡ, ದೀಪಿಕಾ ದಾಸ್, ಪ್ರಶಾಂತ್ ಸಂಬರ್ಗಿ, ನೇಹಾ ಗೌಡ, ಆರ್ಯವರ್ಧನ್ ಗುರೂಜಿ, ರೂಪೇಶ್ ರಾಜಣ್ಣ ಮೇಲೆ ಎಲಿಮಿನೇಷನ್ ತೂಗುಗತ್ತಿ ಇದೆ.