AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಬ್ರಹ್ಮದೇವ ಯಾಕಿಂಗೆ ಮಾಡಿದೆ, ಇನ್ನು ಈ ತಪ್ಪು ಮಾಡಲ್ಲ’; ನೆಲದಮೇಲೆ ಬಿದ್ದು ಬಿಕ್ಕಿ ಬಿಕ್ಕಿ ಅತ್ತ ಆರ್ಯವರ್ಧನ್

ನಿಯಮ ಮುರಿದಿದ್ದಕ್ಕೆ  ಬಿಗ್ ಬಾಸ್ ಶಿಕ್ಷೆ ನೀಡಿದ್ದಾರೆ. ಮನೆಯಲ್ಲಿರುವ ಎಲ್ಲಾ ಈರುಳ್ಳಿ, ಮೆಣಸು ಹಾಗೂ ಕೊತ್ತುಂಬರಿ ಸೊಪ್ಪನ್ನು ಬಿಗ್ ಬಾಸ್ ಮರಳಿ ಪಡೆದುಕೊಂಡಿದ್ದಾರೆ.

‘ಬ್ರಹ್ಮದೇವ ಯಾಕಿಂಗೆ ಮಾಡಿದೆ, ಇನ್ನು ಈ ತಪ್ಪು ಮಾಡಲ್ಲ’; ನೆಲದಮೇಲೆ ಬಿದ್ದು ಬಿಕ್ಕಿ ಬಿಕ್ಕಿ ಅತ್ತ ಆರ್ಯವರ್ಧನ್
ಆರ್ಯವರ್ಧನ್
TV9 Web
| Edited By: |

Updated on:Nov 08, 2022 | 10:53 PM

Share

ಆರ್ಯವರ್ಧನ್ (Aryvardhan Guruji) ಅವರು ಬಿಗ್ ಬಾಸ್ ಒಟಿಟಿಯಿಂದ ಟಿವಿ ಸೀಸನ್​ವರೆಗೆ ಸಾಕಷ್ಟು ಗಮನ ಸೆಳೆಯುತ್ತಾ ಬಂದಿದ್ದಾರೆ. ಅವರು ನಡೆದುಕೊಳ್ಳುವ ರೀತಿ ಕೆಲವರಿಗೆ ಇಷ್ಟ ಆಗುವುದಿಲ್ಲ. ಕೆಲವೊಮ್ಮೆ ಅವರು ಬಾಯಿಗೆ ಬಂದಂತೆ ಮಾತನಾಡಿದ್ದೂ ಇದೆ. ಈಗ ಆರ್ಯವರ್ಧನ್ ಅವರು ಬಿಗ್ ಬಾಸ್ ಮನೆಯಲ್ಲಿ ತಪ್ಪೊಂದನ್ನು ಮಾಡಿದ್ದರು. ಈ ತಪ್ಪಿನಿಂದ ಬಿಗ್ ಬಾಸ್ (Bigg Boss) ಮನೆಯ ಎಲ್ಲಾ ಸದಸ್ಯರಿಗೆ ಶಿಕ್ಷೆ ನೀಡಲಾಗಿದೆ. ಇದರಿಂದ ಆರ್ಯವರ್ಧನ್ ಅವರು ಸಾಕಷ್ಟು ನೊಂದುಕೊಂಡಿದ್ದಾರೆ.

ಕಳೆದ ವಾರ ಅನುಪಮಾ ಗೌಡ ಅವರು ಕಳಪೆ ಪಟ್ಟ ಪಡೆದು ಜೈಲಿನಲ್ಲಿದ್ದರು. ಬಿಗ್ ಬಾಸ್ ನಿಯಮಗಳ ಪ್ರಕಾರ ಜೈಲಿನಲ್ಲಿರುವ ವ್ಯಕ್ತಿಗಳೇ ಮನೆಯಲ್ಲಿ ತರಕಾರಿ ಕತ್ತರಿಸಬೇಕು. ಒಂದೊಮ್ಮೆ ನಿಯಮ ಮುರಿದು ಮನೆ ಮಂದಿ ತರಕಾರಿ ಕತ್ತರಿಸಿದರೆ ಅದಕ್ಕೆ ಶಿಕ್ಷೆ ನೀಡಲಾಗುತ್ತದೆ. ಅನುಪಮಾಗೆ ಈರುಳ್ಳಿ ಕತ್ತರಿಸಲು ಕೊಡದೆ ಆರ್ಯವರ್ಧನ್​ ಅವರೇ ಈ ಕೆಲಸ ಮಾಡಿದ್ದಾರೆ. ರೂಪೇಶ್ ರಾಜಣ್ಣಗೆ ಆಮ್ಲೆಟ್ ಮಾಡಿಕೊಡಲು ಆರ್ಯವರ್ಧನ್ ಈರುಳ್ಳಿ ಕತ್ತರಿಸಿದ್ದರು.

ನಿಯಮ ಮುರಿದಿದ್ದಕ್ಕೆ  ಬಿಗ್ ಬಾಸ್ ಶಿಕ್ಷೆ ನೀಡಿದ್ದಾರೆ. ಮನೆಯಲ್ಲಿರುವ ಎಲ್ಲಾ ಈರುಳ್ಳಿ, ಮೆಣಸು ಹಾಗೂ ಕೊತ್ತುಂಬರಿ ಸೊಪ್ಪನ್ನು ಬಿಗ್ ಬಾಸ್ ಮರಳಿ ಪಡೆದುಕೊಂಡಿದ್ದಾರೆ. ಇದರಿಂದ ಈ ತರಕಾರಿ, ಸೊಪ್ಪು ಇಲ್ಲದೆ ಅಡುಗೆ ಮಾಡಬೇಕಾದ ಪರಿಸ್ಥಿತಿ ಬಂದೊದಗಿದೆ. ಇದು ಆರ್ಯವರ್ಧನ್​ಗೆ ಬೇಸರ ಮೂಡಿಸಿದೆ. ಅವರು ನಿರಂತರವಾಗಿ ಈರುಳ್ಳಿ ನೀಡಿ ಎಂದು ಕೋರುತ್ತಿದ್ದಾರೆ.

ಇದನ್ನೂ ಓದಿ
Image
Bigg Boss Elimination: ಬಿಗ್​ ಬಾಸ್​ನಲ್ಲಿ ದರ್ಶ್​ ಆಟ ಅಂತ್ಯ; 3ನೇ ವಾರದ ಎಲಿಮಿನೇಷನ್​ನಲ್ಲಿ ಮಯೂರಿ ಸೇಫ್​
Image
BBK9: ಬಿಗ್​ ಬಾಸ್​ ಮೇಲೆ ಮ್ಯಾಚ್​ ಫಿಕ್ಸಿಂಗ್​ ಆರೋಪ; ಗುರೂಜಿ ವಿರುದ್ಧ ಗುಡುಗಿದ ಸುದೀಪ್​
Image
BBK9: ಬಿಗ್​ ಬಾಸ್​ 2ನೇ ವಾರ ನವಾಜ್​ ಎಲಿಮಿನೇಟ್​; ದೊಡ್ಮನೆಯಲ್ಲಿ ನಡೆಯಲಿಲ್ಲ ಪ್ರಾಸದ ಆಟ
Image
BBK9: ಬಿಗ್​ ಬಾಸ್​ನಿಂದ ಐಶ್ವರ್ಯಾ ಪಿಸ್ಸೆ ಎಲಿಮಿನೇಟ್​; ಒಂದೇ ವಾರಕ್ಕೆ ಮುಗಿಯಿತು ದೊಡ್ಮನೆ ಆಟ

ಸೆಪ್ಟೆಂಬರ್ 8ರ ಎಪಿಸೋಡ್​ನಲ್ಲಿ ಮುಂಜಾನೆಯೇ ಆರ್ಯವರ್ಧನ್​ ಅವರು ಅಡುಗೆ ಮನೆಗೆ ಬಂದಿದ್ದರು. ನೆಲೆದ ಮೇಲೆ ಅವರು ಮಲಗಿದ್ದರು. ಈ ವೇಳೆ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ‘ಬ್ರಹ್ಮದೇವ ಯಾಕಿಂಗೆ ಮಾಡಿದೆ, ಇನ್ನು ಈ ತಪ್ಪು ಮಾಡಲ್ಲ. ದಯವಿಟ್ಟು ಈರುಳ್ಳಿ ಕೊತ್ತುಂಬರಿ ಸೊಪ್ಪು ಹಾಗೂ ಮೆಣಸು ಹಿಂದಿರುಗಿಸಿ. ಎಲ್ಲರಿಗೂ ತೊಂದರೆ ಆಗುತ್ತಿದೆ’ ಎಂದು ಕೋರಿದರು ಅವರು. ಈ ವೇಳೆ ನಿರಂತರವಾಗಿ ಕಣ್ಣೀರು ಬರುತ್ತಲೇ ಇತ್ತು.

ಇದನ್ನೂ ಓದಿ: ನಿಯಮ ಮುರಿದ ಆರ್ಯವರ್ಧನ್ ಗುರೂಜಿ; ಮನೆ ಮಂದಿಗೆ ಕಠಿಣ ಶಿಕ್ಷೆ ಕೊಟ್ಟ ಬಿಗ್ ಬಾಸ್

ಆರ್ಯವರ್ಧನ್ ಅವರು ಈ ವಾರ ಬಿಗ್ ಬಾಸ್​ ಮನೆಯಿಂದ ನಾಮಿನೇಟ್ ಆಗಿದ್ದಾರೆ. ಇವರ ಜತೆ ರೂಪೇಶ್ ರಾಜಣ್ಣ, ಅರುಣ್ ಸಾಗರ್, ಅನುಪಮಾ ಗೌಡ, ದೀಪಿಕಾ ದಾಸ್, ದಿವ್ಯಾ ಉರುಡುಗ, ಅಮೂಲ್ಯ ಗೌಡ ನಾಮಿನೇಟ್ ಆಗಿದ್ದಾರೆ.

Published On - 10:29 pm, Tue, 8 November 22